Best honeymoon destination places: ಹನಿಮೂನ್ ಪ್ಲಾನ್ ಮಾಡ್ತಿದ್ದೀರಾ..ಈ ಸ್ಥಳಗಳು ನಿಮಗೆ ಇಷ್ಟವಾಗಬಹುದು ನೋಡಿ
- ಹನಿಮೂನ್‌ಗಾಗಿ ನೀವು ವಿದೇಶಕ್ಕೆ ಹೋಗಲು ಪ್ಲಾನ್ ಮಾಡಿದ್ದರೆ ನಿಮಗಾಗಿ ಇಲ್ಲಿ ಬಜೆಟ್‌ಗೆ ಹೊಂದುವ ಕೆಲವೊಂದು ಸ್ಥಳಗಳನ್ನು ಸೂಚಿಸಲಾಗಿದೆ. ಒಮ್ಮೆ ಪರಿಶೀಲಿಸಿ.
- ಹನಿಮೂನ್‌ಗಾಗಿ ನೀವು ವಿದೇಶಕ್ಕೆ ಹೋಗಲು ಪ್ಲಾನ್ ಮಾಡಿದ್ದರೆ ನಿಮಗಾಗಿ ಇಲ್ಲಿ ಬಜೆಟ್‌ಗೆ ಹೊಂದುವ ಕೆಲವೊಂದು ಸ್ಥಳಗಳನ್ನು ಸೂಚಿಸಲಾಗಿದೆ. ಒಮ್ಮೆ ಪರಿಶೀಲಿಸಿ.
(1 / 9)
ಈಗಷ್ಟೇ ಮದುವೆಯಾಗಿದ್ದೀರಾ..? ನಿಮ್ಮ ಸಂಗಾತಿಯೊಂದಿಗೆ ವಿದೇಶದಲ್ಲಿ ಹನಿಮೂನ್‌ಗೆ ಹೋಗಲು ಬಯಸಿದರೆ, ಕೈಗೆಟುಕುವ ದರದಲ್ಲಿ ಈ ಸುಂದರ ಹನಿಮೂನ್ ತಾಣಗಳಿಗೆ ಹೋಗಿ ಎಂಜಾಯ್ ಮಾಡಬಹುದು. (PC: Pixaby)
(2 / 9)
ಮಾಲ್ಡೀವ್ಸ್ ಅನೇಕ ನವ ವಿವಾಹಿತರ ಕನಸಿನ ತಾಣವಾಗಿದೆ. ಪ್ರಪಂಚಾದ್ಯಂತ ಜನರು ಹನಿಮೂನ್, ಬೀಚ್ ವಿಹಾರ ಅಥವಾ ವಿಶ್ರಾಂತಿಗಾಗಿ ಈ ದ್ವೀಪ ರಾಷ್ಟ್ರಕ್ಕೆ ಬರುತ್ತಾರೆ.
(3 / 9)
ಮಲೇಷ್ಯಾ ಒಂದು ರೋಮ್ಯಾಂಟಿಕ್ ದೇಶ. ಆಧುನಿಕ ಮೂಲ ಸೌಕರ್ಯ, ನೈಸರ್ಗಿಕ ಸೌಂದರ್ಯ, ವನ್ಯಜೀವಿಗಳು, ಸಂಸ್ಕೃತಿ ಮತ್ತು ಆಹಾರ ಎಲ್ಲವೂ ಇಲ್ಲಿ ಬೆಸ್ಟ್.
(4 / 9)
ಸಿಷೆಲ್ಸ್ ತನ್ನ ಸೌಂದರ್ಯ ಮತ್ತು ವೈಭೋಗಕ್ಕೆ ಹೆಸರುವಾಸಿಯಾಗಿದೆ. ಈ ಸ್ಥಳವು ನಿಧಾನವಾಗಿ ಅತ್ಯುತ್ತಮ ಹನಿಮೂನ್ ತಾಣವಾಗಿ ಖ್ಯಾತಿ ಗಳಿಸುತ್ತಿದೆ. ವಿಶೇಷವಾಗಿ ಭಾರತೀಯ ದಂಪತಿಗಳಿಗೆ, ಇಲ್ಲಿರುವ ಬಿಳಿ ಮರಳು, ಐಷಾರಾಮಿ ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳು ನಿಮ್ಮ ಮಧುಚಂದ್ರವನ್ನು ವಿಶೇಷವಾಗಿಸುತ್ತದೆ.
(5 / 9)
ಇಂಡೋನೇಷ್ಯಾವು ಆಗ್ನೇಯ ಏಷ್ಯಾದಿಂದ ಓಷಿಯಾನಿಯಾದವರೆಗೆ 17,800 ದ್ವೀಪಗಳನ್ನು ಒಳಗೊಂಡಿದೆ. ಬಾಲಿ ಈ ದೇಶದ ಶಾಂತ ದ್ವೀಪವಾಗಿದ್ದು, ಮಧುಚಂದ್ರಕ್ಕೆ ಅತ್ಯುತ್ತಮವಾಗಿದೆ.
(6 / 9)
ಸಿಂಗಪೂರ್ ಕೂಡಾ ನವವಿವಾಹಿತರಿಗೆ ಏಷ್ಯಾದ ಅತ್ಯುತ್ತಮ ಹನಿಮೂನ್ ತಾಣವಾಗಿದೆ. ಶಾಪಿಂಗ್, ಪಾರ್ಟಿಗಳು ಮತ್ತು ದೃಶ್ಯವೀಕ್ಷಣೆಯ ಹೊರತಾಗಿ, ನೀವು ಇಲ್ಲಿ ಅನೇಕ ವಿಷಯಗಳನ್ನು ಆನಂದಿಸಬಹುದು.
(7 / 9)
ಫಿಲಿಪೈನ್ಸ್, ಸುಮಾರು 7000 ಕ್ಕೂ ಹೆಚ್ಚು ದ್ವೀಪಗಳಲ್ಲಿ ಹರಡಿದೆ. ಮದುವೆಯ ನಂತರ ಹನಿಮೂನ್ ಆನಂದಿಸಲು ಫಿಲಿಪೈನ್ಸ್ ಅತ್ಯುತ್ತಮ ಸ್ಥಳವಾಗಿದೆ.
(8 / 9)
ಥಾಯ್ಲೆಂಡ್ ಕೂಡಾ ಬಹಳ ಆಕರ್ಷಕವಾದ ಸ್ಥಳ. ಇಲ್ಲಿ ನೀವು ಒಂದು ಕಡೆ ಪ್ರಾಚೀನ ಕಡಲತೀರಗಳನ್ನು ಮತ್ತು ಇನ್ನೊಂದು ಕಡೆ ದಟ್ಟವಾದ ಕಾಡುಗಳನ್ನು ಕಾಣಬಹುದು. ಹಸಿರು ಬೆಟ್ಟಗಳ ನಡುವೆ ನೀವು ಮಧುಚಂದ್ರವನ್ನು ಎಂಜಾಯ್ ಮಾಡಬಹುದು.
ಇತರ ಗ್ಯಾಲರಿಗಳು