16 ರೂಪಾಯಿಗೆ ಕುಸಿಯುತ್ತಾ ಯೆಸ್ ಬ್ಯಾಂಕ್‌ ಷೇರು ಮೌಲ್ಯ?; ಮಾರಿ ಬಿಡಿ ಎನ್ನುತ್ತಿವೆ ಬ್ರೋಕರೇಜ್‌ ಸಂಸ್ಥೆಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  16 ರೂಪಾಯಿಗೆ ಕುಸಿಯುತ್ತಾ ಯೆಸ್ ಬ್ಯಾಂಕ್‌ ಷೇರು ಮೌಲ್ಯ?; ಮಾರಿ ಬಿಡಿ ಎನ್ನುತ್ತಿವೆ ಬ್ರೋಕರೇಜ್‌ ಸಂಸ್ಥೆಗಳು

16 ರೂಪಾಯಿಗೆ ಕುಸಿಯುತ್ತಾ ಯೆಸ್ ಬ್ಯಾಂಕ್‌ ಷೇರು ಮೌಲ್ಯ?; ಮಾರಿ ಬಿಡಿ ಎನ್ನುತ್ತಿವೆ ಬ್ರೋಕರೇಜ್‌ ಸಂಸ್ಥೆಗಳು

ಷೇರುಪೇಟೆಯಲ್ಲಿ ಕರಡಿ ಕುಣಿತದ ಕೋಲಾಹಲ ಮುಂದುವರಿದಿರುವಾಗಲೇ ಖಾಸಗಿ ವಲಯದ ಯೆಸ್‌ ಬ್ಯಾಂಕ್‌ ಷೇರು ಕೂಡ ಕುಸಿಯತೊಡಗಿದೆ. ಬ್ಯಾಂಕ್‌ ಸ್ಟಾಕ್‌ಗಳ ಮಾರಾಟಕ್ಕೆ ಎಂಕೆ(Emkay) ಬ್ರೋಕರೇಜ್‌ ಸಂಸ್ಥೆ ಸಲಹೆ ನೀಡಿದ ಸಂದರ್ಭದಲ್ಲೇ ಈ ಕುಸಿತ ಗಮನಸೆಳೆದಿದೆ. ಹಾಗಾದರೆ ಯೆಸ್‌ ಬ್ಯಾಂಕ್ ಷೇರು ಮೌಲ್ಯ 16 ರೂಪಾಯಿಗೆ ಕುಸಿಯುತ್ತಾ? ಬ್ರೋಕರೇಜ್ ಸಂಸ್ಥೆ ಹೇಳಿರುವುದೇನು?

ಷೇರುಪೇಟೆ ಸದ್ಯ ಕುಸಿತದ ಹಾದಿಯಲ್ಲಿದೆ. ಇದರ ನಡುವೆ ಬ್ಯಾಂಕ್‌ ಷೇರುಗಳು ಕೂಡ ಇದರ ಪ್ರಭಾವಕ್ಕೆ ಒಳಗಾಗಿದ್ದು, ಬ್ಯಾಂಕು ಷೇರುಗಳನ್ನು ಇಟ್ಟುಕೊಂಡಿರುವವರು ಸ್ಟಾಪ್ ಲಾಸ್ ಟಾರ್ಗೆಟ್ ನೋಡಿಕೊಂಡು ಮಾರಾಟ ಮಾಡುವಂತೆ ಬ್ರೋಕರೇಜ್ ಸಂಸ್ಥೆಗಳು ಸಲಹೆ ನೀಡಿವೆ. ಈ ಪೈಕಿ ಎಂಕೆ (Emkay) ಬ್ರೋಕರೇಜ್‌ ಸಂಸ್ಥೆ ಯೆಸ್‌ ಬ್ಯಾಂಕ್ ಷೇರುಗಳ ಬಗ್ಗೆ ಹೇಳಿರುವ ಅಂಶ ಗಮನಸೆಳೆದಿದೆ.
icon

(1 / 7)

ಷೇರುಪೇಟೆ ಸದ್ಯ ಕುಸಿತದ ಹಾದಿಯಲ್ಲಿದೆ. ಇದರ ನಡುವೆ ಬ್ಯಾಂಕ್‌ ಷೇರುಗಳು ಕೂಡ ಇದರ ಪ್ರಭಾವಕ್ಕೆ ಒಳಗಾಗಿದ್ದು, ಬ್ಯಾಂಕು ಷೇರುಗಳನ್ನು ಇಟ್ಟುಕೊಂಡಿರುವವರು ಸ್ಟಾಪ್ ಲಾಸ್ ಟಾರ್ಗೆಟ್ ನೋಡಿಕೊಂಡು ಮಾರಾಟ ಮಾಡುವಂತೆ ಬ್ರೋಕರೇಜ್ ಸಂಸ್ಥೆಗಳು ಸಲಹೆ ನೀಡಿವೆ. ಈ ಪೈಕಿ ಎಂಕೆ (Emkay) ಬ್ರೋಕರೇಜ್‌ ಸಂಸ್ಥೆ ಯೆಸ್‌ ಬ್ಯಾಂಕ್ ಷೇರುಗಳ ಬಗ್ಗೆ ಹೇಳಿರುವ ಅಂಶ ಗಮನಸೆಳೆದಿದೆ.(LH)

ಯೆಸ್ ಬ್ಯಾಂಕ್ ಇತ್ತೀಚೆಗೆ ತನ್ನ ವಹಿವಾಟುಗಳ ಮಾಹಿತಿಯನ್ನು ಅಪ್ಡೇಟ್ ಮಾಡಿದೆ. ಇದರಂತೆ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಠೇವಣಿಗಳು ಶೇಕಡ 18.3 ರಷ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ, ಸಾಲದಲ್ಲೂ ವರ್ಷದಿಂದ ವರ್ಷಕ್ಕೆ (YoY) 13.1 ಶೇಕಡಾ ಹೆಚ್ಚಳ ಕಂಡುಬಂದಿದೆ. ಆದಾಗ್ಯೂ, ಯೆಸ್ ಬ್ಯಾಂಕ್‌ನ ಲಿಕ್ವಿಡಿಟಿ ಕವರೇಜ್ ಅನುಪಾತವು ತ್ರೈಮಾಸಿಕ ಆಧಾರದ ಮೇಲೆ ಕುಸಿದಿದೆ
icon

(2 / 7)

ಯೆಸ್ ಬ್ಯಾಂಕ್ ತನ್ನ ಸಾಲ ಮತ್ತು ಮುಂಗಡಗಳು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 2,36,512 ಕೋಟಿ ರೂ. ಮತ್ತು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 2,09,106 ಕೋಟಿ ರೂಪಾಯಿ ಇತ್ತು ಎಂದು ಹೇಳಿದೆ. ಬ್ಯಾಂಕಿನ ಠೇವಣಿ ಮೊತ್ತವು ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 2,34,360 ಕೋಟಿಗಳಿಂದ 2,77,173 ಕೋಟಿ ರೂ.ಗೆ ವರ್ಷದಿಂದ ವರ್ಷಕ್ಕೆ 18.3 ರಷ್ಟು ಹೆಚ್ಚಾಗಿದೆ.
icon

(3 / 7)

ಯೆಸ್ ಬ್ಯಾಂಕಿನ ಸಿಎಎಸ್‌ಎ ಅನುಪಾತವು ಜೂನ್ ತ್ರೈಮಾಸಿಕದಲ್ಲಿ ಶೇಕಡ 32 ರಷ್ಟಿತ್ತು, ಜೂನ್‌ನಲ್ಲಿ 30.8 ಶೇಕಡಾ ಮತ್ತು ವರ್ಷದ ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 29.4 ರಷ್ಟಿತ್ತು. ಲಿಕ್ವಿಡಿಟಿ ಕವರೇಜ್ ಅನುಪಾತವು ಜೂನ್‌ನಲ್ಲಿ 137.8 ಪ್ರತಿಶತಕ್ಕೆ ಹೋಲಿಸಿದರೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 131.9 ಶೇಕಡಾಕ್ಕೆ ಇಳಿದಿದೆ
icon

(4 / 7)

ಗುರುವಾರದ ವಹಿವಾಟಿನ ಅಂತ್ಯಕ್ಕೆ ಯೆಸ್ ಬ್ಯಾಂಕ್ ಷೇರುಗಳು 21.88 ರೂ. ಹಿಂದಿನ ದಿನಕ್ಕೆ ಹೋಲಿಸಿದರೆ ಶೇರು 2.41 ರಷ್ಟು ಕುಸಿದಿದೆ. ವಹಿವಾಟಿನ ವೇಳೆ ಬ್ಯಾಂಕ್‌ನ ಷೇರು ಬೆಲೆ 21.80 ರೂ.ಗೆ ತಲುಪಿತ್ತು
icon

(5 / 7)

ಬ್ಯುಸಿನೆಸ್ ಟುಡೆಯ ಸುದ್ದಿಯ ಪ್ರಕಾರ, ಎಂಕೆ (Emkay) ಬ್ರೋಕರೇಜ್ ಸಂಸ್ಥೆಯು ಇತ್ತೀಚೆಗೆ ಯೆಸ್ ಬ್ಯಾಂಕ್ ಷೇರುಗಳ ಟಾರ್ಗೆಟ್ ಮತ್ತು ಸ್ಟಾಪ್‌ ಲಾಸ್‌ ಗುರಿಯನ್ನು ನಿಗದಿ ಪಡಿಸಿ ಹೂಡಿಕೆದಾರರಿಗೆ ಸಲಹೆ ನೀಡಿತ್ತು. ಯೆಸ್ ಬ್ಯಾಂಕ್ ಷೇರುಗಳಲ್ಲಿ ದೊಡ್ಡ ಕುಸಿತವನ್ನು ಬ್ರೋಕರೇಜ್ ಭವಿಷ್ಯ ನುಡಿದಿದೆ. ಇದರ ಪ್ರಕಾರ ಯೆಸ್ ಬ್ಯಾಂಕ್ ಷೇರಿನ ಬೆಲೆ 16 ರೂ.ಗೆ ಕುಸಿಯಬಹುದು. ಇದರೊಂದಿಗೆ ಷೇರುಗಳನ್ನು ಮಾರಾಟ ಮಾಡಲು ಬ್ರೋಕರೇಜ್ ಸಲಹೆ ನೀಡಿತ್ತು.
icon

(6 / 7)

ಗಮನಿಸಿ: ಮೇಲಿರುವ ಅಭಿಪ್ರಾಯಗಳು ಮತ್ತು ಶಿಫಾರಸುಗಳು ವಿಶ್ಲೇಷಕರು ಅಥವಾ ಬ್ರೋಕಿಂಗ್ ಕಂಪನಿಗಳ ವೈಯಕ್ತಿಕವಾಗಿದ್ದು, ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್ ತಾಣದ್ದಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ಮಾಡುವ ಮೊದಲು ಪ್ರಮಾಣೀಕೃತ ತಜ್ಞರೊಂದಿಗೆ ಪರಿಶೀಲಿಸಬೇಕು ಎಂದು ನಾವು ಹೂಡಿಕೆದಾರರಿಗೆ ಸಲಹೆ ನೀಡುತ್ತೇವೆ.
icon

(7 / 7)

ಇತರ ಗ್ಯಾಲರಿಗಳು