ಜಗಮಗಿಸುವ ದೀಪಾಲಂಕಾರಕ್ಕೆ ಮನಸೋತ ಸಿದ್ದರಾಮಯ್ಯ; ಅಂಬಾರಿ ಬಸ್ನಲ್ಲಿ ಮೈಸೂರು ಸುತ್ತುತ್ತಾ ಸಚಿವರಿಗೆ ವಿವರಿಸಿದ ಸಿಎಂ
- Siddaramaiah: ಜಗಮಗಿಸುವ ದೀಪಾಲಂಕಾರಕ್ಕೆ ಮನಸೋತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬಾರಿ ಬಸ್ನಲ್ಲಿ ಮೈಸೂರು ಸುತ್ತುತ್ತಾ ತನ್ನ ಜೊತೆಗಿದ್ದ ಸಚಿವರಿಗೆ ಅರಮನೆ, ಮಾರ್ಗಮಧ್ಯೆ ಸಿಕ್ಕಂತಹ ಸ್ಥಳಗಳ ಬಗ್ಗೆ ವಿವರಿಸಿದರು.
- Siddaramaiah: ಜಗಮಗಿಸುವ ದೀಪಾಲಂಕಾರಕ್ಕೆ ಮನಸೋತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬಾರಿ ಬಸ್ನಲ್ಲಿ ಮೈಸೂರು ಸುತ್ತುತ್ತಾ ತನ್ನ ಜೊತೆಗಿದ್ದ ಸಚಿವರಿಗೆ ಅರಮನೆ, ಮಾರ್ಗಮಧ್ಯೆ ಸಿಕ್ಕಂತಹ ಸ್ಥಳಗಳ ಬಗ್ಗೆ ವಿವರಿಸಿದರು.
(2 / 15)
ವಿಶ್ವ ವಿಖ್ಯಾತ ಮೈಸೂರು ದಸರಾದ ವಿಜಯದಶಮಿ ದಿನದ ರಾತ್ರಿ ಸಿಎಂ ಸಿದ್ದರಾಮಯ್ಯ ಮೈಸೂರಿನ ಆಯ್ದ ಭಾಗಗಳ ದೀಪಾಲಂಕರ ವೀಕ್ಷಿಸಿ ಅಲ್ಲಿನ ಅದ್ಭುತ ದೃಶ್ಯಗಳಿಗೆ ಮನಸೋತರು.
(4 / 15)
ಅಂಬಾರಿ ಬಸ್ನಲ್ಲಿಯೇ ಕುಳಿತು ಬನ್ನಿಮಂಟಪದಲ್ಲಿ ನಡೆಯುತ್ತಿರುವ ಡ್ರೋನ್ ಶೋ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
(5 / 15)
ರಾಮಸ್ವಾಮಿ ವೃತ್ತದಿಂದ ಆರಂಭವಾದ ದೀಪಾಲಂಕಾರ ವೀಕ್ಷಣೆಯು ಬಸವೇಶ್ವರ ವೃತ್ತ, ವಿದ್ಯಾಪೀಠ ವೃತ್ತ, ಹಾರ್ಡಿಂಜ್ ಸರ್ಕಲ್, ಕೆಆರ್ ಸರ್ಕಲ್, ಆಯುರ್ವೇದಿಕ್ ವೃತ್ತ, ಹೈವೇ ವೃತ್ತದ ಮೂಲಕ ಸಾಗಿ ಎಲ್ಐಸಿ ವೃತ್ತದಲ್ಲಿ ಮುಕ್ತಾಯಗೊಂಡಿತು.
(6 / 15)
ಲೈಟಿಂಗ್ಸ್ ನೋಡಲು ತಮ್ಮ ಜೊತೆ ಆಗಮಿಸಿದಂತಹ ಸಚಿವರಿಗೆ ಮೈಸೂರಿನ ಅರಮನೆ ಹಾಗೂ ಮಾರ್ಗ ಮಧ್ಯದಲ್ಲಿ ಬರುವಂತಹ ಸ್ಥಳಗಳ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ವಿವರಿಸಿ, ಅದರ ಹಿನ್ನೆಲೆ ಹಾಗೂ ಮಹತ್ವವನ್ನು ತಿಳಿಸಿಕೊಟ್ಟರು.
(7 / 15)
ಸಚಿವರಾದ ಕೆಜೆ ಜಾರ್ಜ್, ಡಾ.ಎಚ್ಸಿ ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಎಂಸಿ ಸುಧಾಕರ್, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತದ ಅಧ್ಯಕ್ಷರಾದ ಎಬಿ ರಮೇಶ್ ಬಂಡಿಸಿದ್ದೇಗೌಡ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್ ಪ್ರಸಾದ್, ಮುಡಾ ಅಧ್ಯಕ್ಷ ಮರಿಗೌಡ ಸೇರಿದಂತೆ ಅಧಿಕಾರಿಗಳೊಂದಿಗೆ ಮೈಸೂರಿನ ಸುಂದರ ದೀಪಾಲಂಕಾರದ ದೃಶ್ಯವನ್ನು ಕಣ್ತುಂಬಿಕೊಂಡರು.
ಇತರ ಗ್ಯಾಲರಿಗಳು