ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಿರತೆ ದಾಳಿಯಿಂದ ಜಿಂಬಾಬ್ವೆ ಕ್ರಿಕೆಟಿಗನನ್ನು ರಕ್ಷಿಸಿದ ಸಾಕು ನಾಯಿ ಚಿಕರಾ; ಈ ಹಿಂದೆ ಮಂಚದ ಕೆಳಗೆ ಮಲಗಿತ್ತು ಮೊಸಳೆ!

ಚಿರತೆ ದಾಳಿಯಿಂದ ಜಿಂಬಾಬ್ವೆ ಕ್ರಿಕೆಟಿಗನನ್ನು ರಕ್ಷಿಸಿದ ಸಾಕು ನಾಯಿ ಚಿಕರಾ; ಈ ಹಿಂದೆ ಮಂಚದ ಕೆಳಗೆ ಮಲಗಿತ್ತು ಮೊಸಳೆ!

  • Guy Whittall : ಚಿರತೆ ದಾಳಿಯಿಂದ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಗೈ ವಿಟ್ಟಾಲ್ ಅವರನ್ನು ತನ್ನ ಸಾಕು ನಾಯಿ ಚಿಕಾರಾ ರಕ್ಷಿಸಿದೆ. ವಿಟ್ಟಾಲ್ ರಕ್ತಸಿಕ್ತನಾಗಿರುವ ಫೋಟೋಗಳು ವೈರಲ್ ಆಗಿವೆ.

ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಗೈ ವಿಟ್ಟಾಲ್ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಡೈಲಿ ಮೇಲ್​ನ ವರದಿಯ ಪ್ರಕಾರ, ಹುಮಾನಿ ಪ್ರದೇಶದಲ್ಲಿ ಚಾರಣ ಮಾಡುವಾಗ ಚಿರತೆ ಅವರ ಮೇಲೆ ದಾಳಿ ಮಾಡಿದೆ. ಆದಾಗ್ಯೂ, ವಿಟ್ಟಾಲ್ ತನ್ನ ಸಾಕು ನಾಯಿಯ ಸಹಾಯದಿಂದ ಹೇಗೋ ಬದುಕುಳಿದಿದ್ದಾರೆ.
icon

(1 / 5)

ಚಿಕಾರಾ ಎಂಬ ಸಾಕು ನಾಯಿ ಚಿರತೆಯೊಂದಿಗೆ ಹೋರಾಡುವ ಮೂಲಕ 51 ವರ್ಷದ ವಿಟ್ಟಾಲ್ ಅವರನ್ನು ರಕ್ಷಿಸಿದೆ. ಶ್ವಾನವನ್ನೂ ಚಿರತೆ ತೀವ್ರ ಗಾಯಗೊಳಿಸಿದೆ. ವಿಟ್ಟಾಲ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
icon

(2 / 5)

ವಿಟ್ಟಾಲ್ ಅವರ ಪತ್ನಿ ಹನ್ನಾ ಅವರ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್​ ಹಂಚಿಕೊಂಡಿದ್ದಾರೆ.​ ರಕ್ತಸಿಕ್ತ ವಿಟ್ಟಾಲ್​ನ ಫೋಟೋವನ್ನು ಹನ್ನಾ ಪೋಸ್ಟ್ ಮಾಡಿದ್ದಾರೆ. ಮಾಜಿ ಆಲ್​​ರೌಂಡರ್​​ ಗಂಭೀರವಾಗಿ ಗಾಯಗೊಂಡ ನಂತರ ಶಸ್ತ್ರಚಿಕಿತ್ಸೆಗೆ ಹರಾರೆಗೆ ವಿಮಾನದಲ್ಲಿ ಕರೆದೊಯ್ಯಲಾಯಿತು. ವಿಟ್ಟಾಲ್ ತಲೆಗೆ ಬ್ಯಾಂಡೇಜ್ ಹಾಕಿರುವ ಚಿತ್ರಗಳು ಸಹ ವೈರಲ್ ಆಗಿವೆ.
icon

(3 / 5)

ಅವರು (ವಿಟ್ಟಾಲ್) ನಿಜವಾಗಿಯೂ ಅದೃಷ್ಟಶಾಲಿ ವ್ಯಕ್ತಿ ಎಂದು ಹನ್ನಾ ಡೈಲಿ ಮೇಲ್​ಗೆ ತಿಳಿಸಿದ್ದಾರೆ. ಚಿಕಾರ ಅವರೊಂದಿಗೆ ಇದ್ದದ್ದು ಅವರ ಅದೃಷ್ಟ. ಅವರಿಗೆ ಸಾಕಷ್ಟು ಸಹಾಯ ಮಾಡಿ ಚಿರತೆಯಿಂದ ಉಳಿಸಿತು. ಇಲ್ಲದಿದ್ದರೆ ಏನಾಗುತ್ತಿತ್ತೋ ಯಾರಿಗೆ ಗೊತ್ತು. ವಿಟ್ಟಾಲ್ ಅವರು ನಮ್ಮಿಂದ ದೂರವಾಗುತ್ತಿದ್ದರು. ಸದ್ಯಕ್ಕೆ ವಿಟ್ಟಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಕು ನಾಯಿಯನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹನ್ನಾ ಮಾಹಿತಿ ನೀಡಿದ್ದಾರೆ,
icon

(4 / 5)

2013ರಲ್ಲಿ ವಿಟ್ಟಾಲ್​ಗೆ ಹೆಚ್ಚು ವಿಚಿತ್ರ ಸಂಗತಿಯೊಂದು ಸಂಭವಿಸಿತ್ತು. 8 ಅಡಿ ಉದ್ದದ ಕಾಡು ಮೊಸಳೆಯೊಂದು ಇಡೀ ರಾತ್ರಿ ಅವರ ಮನೆಯ ಹಾಸಿಗೆಯ ಕೆಳಗೆ ಮಲಗಿತ್ತು. ವಿಟ್ಟಾಲ್ ಬೆಳಿಗ್ಗೆ ಎಚ್ಚರಗೊಂಡು ಮೊಸಳೆ ಇರುವಿಕೆಯನ್ನು ಗಮನಿಸಿ ಅದರ ಚಿತ್ರವನ್ನು ತೆಗೆದುಕೊಂಡಿದ್ದರು,
icon

(5 / 5)

IPL_Entry_Point

ಇತರ ಗ್ಯಾಲರಿಗಳು