ವಾಟರ್ಬಾಯ್ ಆದ ಎರಡು ಐಸಿಸಿ ಟ್ರೋಫಿ ಗೆದ್ದ ಪ್ಯಾಟ್ ಕಮಿನ್ಸ್; ಕೊಹ್ಲಿ, ಸಚಿನ್ ಸೇರಿ ದಿಗ್ಗಜರೇ ಮಾಡಿದ್ರು ಈ ಸೇವೆ!
- Pat Cummins: ಟಿ20 ವಿಶ್ವಕಪ್ 2024ರಲ್ಲಿ ಓಮನ್ ವಿರುದ್ಧದ ಆಸ್ಟ್ರೇಲಿಯಾ ಪ್ಲೇಯಿಂಗ್ XIನಲ್ಲಿ ಅವಕಾಶ ಪಡೆಯದ ಪ್ಯಾಟ್ ಕಮಿನ್ಸ್ ವಾಟರ್ಬಾಯ್ ಆಗಿ ಸೇವೆ ಸಲ್ಲಿಸಿದರು. ವಿಶ್ವ ಕ್ರಿಕೆಟ್ನಲ್ಲಿ ವಾಟರ್ಬಾಯ್ ಆಗಿದ್ದ ದಿಗ್ಗಜ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.
- Pat Cummins: ಟಿ20 ವಿಶ್ವಕಪ್ 2024ರಲ್ಲಿ ಓಮನ್ ವಿರುದ್ಧದ ಆಸ್ಟ್ರೇಲಿಯಾ ಪ್ಲೇಯಿಂಗ್ XIನಲ್ಲಿ ಅವಕಾಶ ಪಡೆಯದ ಪ್ಯಾಟ್ ಕಮಿನ್ಸ್ ವಾಟರ್ಬಾಯ್ ಆಗಿ ಸೇವೆ ಸಲ್ಲಿಸಿದರು. ವಿಶ್ವ ಕ್ರಿಕೆಟ್ನಲ್ಲಿ ವಾಟರ್ಬಾಯ್ ಆಗಿದ್ದ ದಿಗ್ಗಜ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.
(1 / 9)
ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರು. 2023ರಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿ ಮತ್ತು ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಆಸೀಸ್ ನಾಯಕ ಕಮಿನ್ಸ್ ಅವರು ಪ್ರಸ್ತುತ ಟಿ20 ವಿಶ್ವಕಪ್ನಲ್ಲಿ ವಾಟರ್ ಬಾಯ್ ಆಗಿದ್ದಾರೆ. ಮಿಚೆಲ್ ಮಾರ್ಷ್ ಟಿ20 ವಿಶ್ವಕಪ್ನಲ್ಲಿ ಆಸೀಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಓಮನ್ ವಿರುದ್ಧದ ಕಮಿನ್ಸ್ ಅವರಿಗೆ ಅವಕಾಶ ನೀಡಿರಲಿಲ್ಲ.
(2 / 9)
ಓಮನ್ ವಿರುದ್ಧದ ಪಂದ್ಯದಲ್ಲಿ ಕಮಿನ್ಸ್ ಬದಲಿಗೆ ನಾಥನ್ ಎಲ್ಲಿಸ್ಗೆ ಅವಕಾಶ ನೀಡಲಾಗಿತ್ತು. ಹೀಗಾಗಿ, ಪಂದ್ಯದ ಅವಧಿಯಲ್ಲಿ ಕಮಿನ್ಸ್ ವಾಟರ್ಬಾಯ್ ಆಗಿ ಸೇವೆ ಸಲ್ಲಿಸಿದರು. ಈ ಚಿತ್ರಗಳು ಸಾಮಾಜಿಕ ಜಾಲಯಾಣಗಳಲ್ಲಿ ವೈರಲ್ ಆಗುತ್ತಿವೆ. ಕಮಿನ್ಸ್ ಮಾತ್ರವಲ್ಲ, ಡಾನ್ ಬ್ರಾಡ್ಮನ್ ಅವರಿಂದ ಸಚಿನ್ ತೆಂಡೂಲ್ಕರ್ವರಗೆ ಹಾಗೂ ಎಂಎಸ್ ಧೋನಿಯಿಂದ ವಿರಾಟ್ ಕೊಹ್ಲಿವರೆಗೂ ವಾಟರ್ಬಾಯ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ಚಿತ್ರಗಳು ಈ ಮುಂದಿನಂತಿವೆ.
(3 / 9)
ವಿಶ್ವಕಪ್ ವಿಜೇತ ನಾಯಕ ವಾಟರ್ಬಾಯ್ ಆಗಿ ಕಾಣಿಸಿಕೊಂಡಿದ್ದು ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಯಿತು. ಕಮಿನ್ಸ್ಗೆ ಅವಕಾಶ ನೀಡದ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಕ್ರಿಕೆಟ್ ಪ್ರಿಯರು ಕಿಡಿಕಾರಿದರೆ, ಕಮಿನ್ಸ್ ಸರಳತೆ ಮತ್ತು ನಡೆಗೆ ಶ್ಲಾಘನೆಯೂ ವ್ಯಕ್ತವಾಯಿತು. ಇರ್ಫಾನ್ ಪಠಾಣ್ ಕೂಡ ಕಮಿನ್ಸ್ ನಡೆಯನ್ನು ಶ್ಲಾಘಿಸಿದ್ದಾರೆ.
(4 / 9)
ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ 2023ರ ಏಕದಿನ ವಿಶ್ವಕಪ್ ಗೆದ್ದಿತ್ತು. ಅದಕ್ಕೂ ಮೊದಲು ಕಮಿನ್ಸ್ ನಾಯಕತ್ವದಲ್ಲಿ ಆಸೀಸ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದಿತ್ತು. ಆಸ್ಟ್ರೇಲಿಯಾಕ್ಕಾಗಿ ಸತತ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ನಾಯಕನಿಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿದೆ.
(5 / 9)
ಭಾರತೀಯ ಕ್ರಿಕೆಟ್ನಲ್ಲಿ ಇಂತಹ ಸಂಸ್ಕೃತಿ ಅಪರೂಪವಲ್ಲ. ವೆಸ್ಟ್ ಇಂಡೀಸ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕೂಡ ತಮ್ಮ ಸಹ ಆಟಗಾರರಿಗೆ ವಾಟರ್ಬಾಯ್ ಆಗಿದ್ದರು. ವಿಶ್ವ ಕ್ರಿಕೆಟ್ ಸೂಪರ್ಸ್ಟಾರ್ ಬ್ಯಾಟರ್ ವಿರಾಟ್, ವಾಟರ್ಬಾಯ್ ಆಗುವ ಮೂಲಕ ಸರಳತೆಯನ್ನು ತೋರಿದ್ದರು.
(6 / 9)
ಕೊಹ್ಲಿ ಮಾತ್ರವಲ್ಲ, ಎಂಎಸ್ ಧೋನಿ ಕೂಡ ಈ ಹಿಂದೆ ಸಹ ಆಟಗಾರರಿಗೆ ನೀರು ಮತ್ತು ಕಿಟ್ ಬ್ಯಾಗ್ಗಳೊಂದಿಗೆ ಮೈದಾನಕ್ಕೆ ಪ್ರವೇಶಿಸಿದ್ದರು. ಧೋನಿ ಇದನ್ನು ಹಲವಾರು ಬಾರಿ ಮಾಡಿದ್ದಾರೆ. ಧೋನಿ 2012ರ ಸರಣಿಯಲ್ಲಿ, ನಂತರ ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಪಂದ್ಯ ಮತ್ತು 2018 ರಲ್ಲಿ ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದ ಸಮಯದಲ್ಲಿ ವಾಟರ್ಬಾಯ್ ಆಗಿದ್ದರು.
(7 / 9)
ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕೂಡ ಮೈದಾನಕ್ಕೆ ವಾಟರ್ಬಾಟಲ್ಗಳನ್ನು ಸಹ ಆಟಗಾರರಿಗೆ ತೆಗೆದುಕೊಂಡು ಹೋಗಿದ್ದರು. 2005ರಲ್ಲಿ ವಿಶ್ವ ಇಲೆವೆನ್ ಮತ್ತು ಏಷ್ಯಾ ಇಲೆವೆನ್ ನಡುವಿನ ಪಂದ್ಯದ ಸಮಯದಲ್ಲಿ, ಸಚಿನ್ ವಾಟರ್ಬಾಯ್ ಆಗಿದ್ದರು. ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾತ್ ಮತ್ತು ಶೇನ್ ವಾರ್ನ್ ಕೂಡ ಈ ಸೇವೆ ಸಲ್ಲಿಸಿದ್ದರು.
(8 / 9)
ವಿಶ್ವಕಪ್ ವಿಜೇತ ನಾಯಕ ರಿಕಿ ಪಾಂಟಿಂಗ್ ನಿಂದ ಹಿಡಿದು ದಂತಕಥೆ ಡಾನ್ ಬ್ರಾಡ್ಮನ್ವರೆಗೆ ಅನೇಕರು ತಂಡದ ಸಹ ಆಟಗಾರರಿಗಾಗಿ ವಾಟರ್ಬಾಟಲ್ ಹೊತ್ತು ಮೈದಾನ ಪ್ರವೇಶಿಸಿದ್ದಾರೆ.
ಇತರ ಗ್ಯಾಲರಿಗಳು