ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬ: ಟೀಮ್ ಇಂಡಿಯಾ ಆಲ್‌ರೌಂಡರ್ ಫಿಟ್‌ನೆಸ್ ಸೀಕ್ರೆಟ್ ಏನು, ಕ್ರಿಕೆಟಿಗನ ಆಹಾರಕ್ರಮವೇ ಭಿನ್ನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬ: ಟೀಮ್ ಇಂಡಿಯಾ ಆಲ್‌ರೌಂಡರ್ ಫಿಟ್‌ನೆಸ್ ಸೀಕ್ರೆಟ್ ಏನು, ಕ್ರಿಕೆಟಿಗನ ಆಹಾರಕ್ರಮವೇ ಭಿನ್ನ

ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬ: ಟೀಮ್ ಇಂಡಿಯಾ ಆಲ್‌ರೌಂಡರ್ ಫಿಟ್‌ನೆಸ್ ಸೀಕ್ರೆಟ್ ಏನು, ಕ್ರಿಕೆಟಿಗನ ಆಹಾರಕ್ರಮವೇ ಭಿನ್ನ

  • Hardik Pandya Birthday: ಭಾರತೀಯ ಕ್ರಿಕೆಟ್‌ ತಂಡದ ಫಿಟ್‌ ಆಟಗಾರರ ಪೈಕಿ ಹಾರ್ದಿಕ್ ಪಾಂಡ್ಯ ಕೂಡಾ ಒಬ್ಬರು. ಪ್ರಮುಖ ಆಲ್‌ರೌಂಡರ್‌ ಹಾರ್ದಿಕ್, ಇಂದು 31ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ತಮ್ಮನ್ನು ತಾವು ಸದೃಢವಾಗಿಡಲು ಪಾಂಡ್ಯ ಏನು ಮಾಡುತ್ತಾರೆ? ಅವರ ಫಿಟ್‌ನೆಸ್‌ ಸೀಕ್ರೆಟ್‌ ಏನು ಎಂಬುದನ್ನು ನೋಡೋಣ.

ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಟಿ20 ವಿಶ್ವಕಪ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾರ್ದಿಕ್, ಪ್ರಸ್ತುತ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.
icon

(1 / 9)

ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಟಿ20 ವಿಶ್ವಕಪ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾರ್ದಿಕ್, ಪ್ರಸ್ತುತ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ.(instagram)

ಪಾದದ ಗಾಯದಿಂದಾಗಿ 2023ರ ಏಕದಿನ ವಿಶ್ವಕಪ್‌ನ ಹೆಚ್ಚಿನ ಭಾಗದಿಂದ ಹೊರಗುಳಿದಿದ್ದ ಹಾರ್ದಿಕ್‌ ಪಾಂಡ್ಯ, ಆ ನಂತರ ಸುದೀರ್ಘ ವಿಶ್ರಾಂತಿ ಪಡೆದಿದ್ದರು. ಆಗಾಗ ಫಿಟ್‌ನೆಸ್‌ ಸಾಬೀತುಪಡಿಸಲು ವಿಫಲರಾಗಿದ್ದ ಹಾರ್ದಿಕ್,‌ ಸದ್ಯ ಸಕ್ರಿಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 
icon

(2 / 9)

ಏಕದಿನ ವಿಶ್ವಕಪ್‌ ಗಾಯದ ಬಳಿಕ ಸುದೀಘ ಅವಧಿಗೆ ಅವರು ಮೈದಾನಕ್ಕೆ ಇಳಿದಿರಲಿಲ್ಲ. ಕೊನೆಗೆ ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಸಂಪೂರ್ಣ ಫಿಟ್ ಆಗಿ ಮರಳಿದರು. ಹಾರ್ದಿಕ್‌ ಅವರ ಆಹಾರಕ್ರಮ ಏನು? ಫಿಟ್‌ನೆಸ್‌ಗಾಗಿ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ತಿಳಿಯೋಣ.
icon

(3 / 9)

ನಿತ್ಯವೂ ವ್ಯಾಯಾಮ ಮಾಡುವುದರ ಹೊರತಾಗಿ, ಹಾರ್ದಿಕ್ ತಮ್ಮ ಆಹಾರದ ಬಗ್ಗೆಯೂ ತುಂಬಾ ಕಾಳಜಿ ವಹಿಸುತ್ತಾರೆ. ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುತ್ತಾರೆ.‌
icon

(4 / 9)

ತಮ್ಮ ಆಹಾರದಲ್ಲಿ ತರಕಾರಿಗಳು ಮತ್ತು ಹಣ್ಣುಗಳ ಜೊತೆಗೆ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ಆರೋಗ್ಯಕರ ಕೊಬ್ಬುಗಳನ್ನು ಸಹ ತಿನ್ನುತ್ತಾರೆ. ಬೇಯಿಸಿದ ಮೊಟ್ಟೆ, ಚಿಕನ್, ಬೇಯಿಸಿದ ತರಕಾರಿಗಳು, ಮೊಸರು ಅನ್ನ, ಬೆಂಡೆಕಾಯಿ ತಿನ್ನುತ್ತಾರೆ. ಬೆಳಗ್ಗೆ ಎಳನೀರನ್ನು ಸಹ ಕುಡಿಯುತ್ತಾರೆ.
icon

(5 / 9)

ಫಿಟ್ ಆಗಿರಲು ವ್ಯಾಯಾಮ ಮತ್ತು ಕಠಿಣ ವರ್ಕೌಟ್ ಮಾಡುತ್ತಾರೆ. ತೂಕ ಎತ್ತುವುದು, ಓಡುವುದು ಮತ್ತು ಕಾರ್ಡಿಯೋ ಮಾಡುತ್ತಾರೆ. ಡೆಡ್ ಲಿಫ್ಟ್, ಪುಷಪ್ ಮತ್ತು ಪುಲ್ ಅಪ್ ಕೂಡಾ ಮಾಡಲು ಇಷ್ಟಪಡುತ್ತಾರೆ.
icon

(6 / 9)

ಹಾರ್ದಿಕ್ ತೆಳ್ಳಗಿನ ಮೈಕಟ್ಟು ಕಾಯ್ದುಕೊಳ್ಳುತ್ತಾರೆ. ಹೀಗಾಗಿ ಬೆಳಗಿನ ಉಪಾಹಾರಕ್ಕೆ ಅವರು ಹೆಚ್ಚು ಉಪಹಾರ ಸೇವಿಸುವುದಿಲ್ಲ. ಅನಾನಸ್, ಬಾಳೆಹಣ್ಣು, ಕಿತ್ತಳೆ, ಆವಕಾಡೊ ಮತ್ತು ಒಣ ಹಣ್ಣುಗಳನ್ನು  ತಿನ್ನುತ್ತಾರೆ. ಕೆನೆ ತೆಗೆದ ಹಾಲು ಮತ್ತು ಕಾರ್ನ್‌ಫ್ಲೇಕ್‌ಗಳು ಅಥವಾ ಓಟ್ಸ್‌ ತಿನ್ನುತ್ತಾರೆ. ಕಡಿಮೆ-ಕೊಬ್ಬಿನ ಚೀಸ್ ಮತ್ತು ಬೇಯಿಸಿದ ಮೊಟ್ಟೆಗಳೊಂದಿಗೆ ಮಲ್ಟಿಗ್ರೇನ್ ಅಥವಾ ಬ್ರೌನ್ ಬ್ರೆಡ್ ಜೊತೆಗೆ ಸೇವಿಸುತ್ತಾರೆ.
icon

(7 / 9)

ಮಧ್ಯಾಹ್ನದ ಊಟಕ್ಕೆ ತರಕಾರಿ ಸೂಪ್, ಕಾರ್ನ್, ರೋಟಿಯೊಂದಿಗೆ ಸಲಾಡ್, ನಾನ್ ಮತ್ತು ಅನ್ನವನ್ನು ಸೇವಿಸುತ್ತಾರೆ. ವಾರಕ್ಕೊಮ್ಮೆ ವಿವಿಧ ರೀತಿಯ ಸಲಾಡ್‌ಗಳೊಂದಿಗೆ ಚಿಕನ್ ಕಬಾಬ್ ಮತ್ತು ಚಿಕನ್ ಮಂಚೂರಿಯನ್ ತಿನ್ನುತ್ತಾರೆ. ಮಧ್ಯಾಹ್ನದ ಊಟಕ್ಕೆ ಮೊಸರು ಮತ್ತು ಎಳನೀರು ಕುಡಿಯುತ್ತಾರೆ.
icon

(8 / 9)

ಮಧ್ಯಾಹ್ನದ ಊಟಕ್ಕೆ ತರಕಾರಿ ಸೂಪ್, ಕಾರ್ನ್, ರೋಟಿಯೊಂದಿಗೆ ಸಲಾಡ್, ನಾನ್ ಮತ್ತು ಅನ್ನವನ್ನು ಸೇವಿಸುತ್ತಾರೆ. ವಾರಕ್ಕೊಮ್ಮೆ ವಿವಿಧ ರೀತಿಯ ಸಲಾಡ್‌ಗಳೊಂದಿಗೆ ಚಿಕನ್ ಕಬಾಬ್ ಮತ್ತು ಚಿಕನ್ ಮಂಚೂರಿಯನ್ ತಿನ್ನುತ್ತಾರೆ. ಮಧ್ಯಾಹ್ನದ ಊಟಕ್ಕೆ ಮೊಸರು ಮತ್ತು ಎಳನೀರು ಕುಡಿಯುತ್ತಾರೆ.(PTI)

ರಾತ್ರಿಯ ಭೋಜನಕ್ಕೆ ತರಕಾರಿ ಸೂಪ್, ಹಣ್ಣುಗಳ ಸಲಾಡ್, ಅನ್ನದೊಂದಿಗೆ ಸ್ಮೂಥಿ ಮತ್ತು ಹಳದಿ ದಾಲ್, ರೊಟ್ಟಿ ಮತ್ತು ಚಿಕನ್ ಮಖಾನಿ ತಿನ್ನುತ್ತಾರೆ.
icon

(9 / 9)

ರಾತ್ರಿಯ ಭೋಜನಕ್ಕೆ ತರಕಾರಿ ಸೂಪ್, ಹಣ್ಣುಗಳ ಸಲಾಡ್, ಅನ್ನದೊಂದಿಗೆ ಸ್ಮೂಥಿ ಮತ್ತು ಹಳದಿ ದಾಲ್, ರೊಟ್ಟಿ ಮತ್ತು ಚಿಕನ್ ಮಖಾನಿ ತಿನ್ನುತ್ತಾರೆ.(PTI)

ಇತರ ಗ್ಯಾಲರಿಗಳು