ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  India Vs West India: ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದ ಭಾರತ; ಇಂಗ್ಲೆಂಡ್‌ನ ಬಝ್‌ಬಾಲ್ ಶೈಲಿ ನೆನಪಿಸಿದ ರೋಹಿತ್, ಜೈಸ್ವಾಲ್, ಕಿಶನ್

India vs West India: ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದ ಭಾರತ; ಇಂಗ್ಲೆಂಡ್‌ನ ಬಝ್‌ಬಾಲ್ ಶೈಲಿ ನೆನಪಿಸಿದ ರೋಹಿತ್, ಜೈಸ್ವಾಲ್, ಕಿಶನ್

India vs West India: ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾವು ಆಟದಲ್ಲಿ ಬಝ್‌ಬಾಲ್‌ ಶೈಲಿಯನ್ನು ಅಳವಡಿಸಿಕೊಂಡಿತು. ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಮಳೆಯಿಂದಾಗಿ ಅಡ್ಡಿಯಾದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಜೈಸ್ವಾಲ್ ಆಕ್ರಮಣಕಾರಿಯಾಗಿ ಆಡಿದರು. ಇಂದು ಇಂಗ್ಲೆಂಡ್‌ ತಂಡದ ವೇಗದ ಆಟದ ಶೈಲಿಯಾದ ಬಝ್‌ಬಾಲ್‌ ನೆನಪಿಸಿದೆ.

ಐದು ವಿಕೆಟ್‌ಗಳನ್ನು ಪಡೆದು ಮಿಂಚಿದ ಸಿರಾಜ್‌, ವೆಸ್ಟ್ ಇಂಡೀಸ್ ತಂಡವನ್ನು ಅಂತಿಮವಾಗಿ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 255 ರನ್‌ಗಳಿಗೆ ಆಲೌಟ್ ಮಾಡಿದರು. ಸಿರಾಜ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್‌ ಅಂಕಿಅಂಶಗಳನ್ನು ದಾಖಲಿಸಿದರು.
icon

(1 / 16)

ಐದು ವಿಕೆಟ್‌ಗಳನ್ನು ಪಡೆದು ಮಿಂಚಿದ ಸಿರಾಜ್‌, ವೆಸ್ಟ್ ಇಂಡೀಸ್ ತಂಡವನ್ನು ಅಂತಿಮವಾಗಿ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 255 ರನ್‌ಗಳಿಗೆ ಆಲೌಟ್ ಮಾಡಿದರು. ಸಿರಾಜ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್‌ ಅಂಕಿಅಂಶಗಳನ್ನು ದಾಖಲಿಸಿದರು.(AFP)

ಮೊದಲ ಇನಿಂಗ್ಸ್‌ನಲ್ಲಿ 183 ರನ್‌ಗಳ ಬೃಹತ್ ಮುನ್ನಡೆ ಗಳಿಸಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಅಬ್ಬರದ ಬ್ಯಾಟಿಂಗ್‌ಗೆ ಮುಂದಾಯಿತು. ಟೆಸ್ಟ್‌ನಲ್ಲಿಯೂ ಟಿ20ಯಂತೆ ಬ್ಯಾಟ್‌ ಬೀಸಿದ ಭಾರತೀಯರು, ಕೇವಲ 24 ಓವರ್‌ ಮಾತ್ರ ಬ್ಯಾಟ್‌ ಬೀಸಿ ಎರಡು ವಿಕೆಟ್‌ ನಷ್ಟಕ್ಕೆ 181 ರನ್ ಗಳಿಸಿದರು.
icon

(2 / 16)

ಮೊದಲ ಇನಿಂಗ್ಸ್‌ನಲ್ಲಿ 183 ರನ್‌ಗಳ ಬೃಹತ್ ಮುನ್ನಡೆ ಗಳಿಸಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಅಬ್ಬರದ ಬ್ಯಾಟಿಂಗ್‌ಗೆ ಮುಂದಾಯಿತು. ಟೆಸ್ಟ್‌ನಲ್ಲಿಯೂ ಟಿ20ಯಂತೆ ಬ್ಯಾಟ್‌ ಬೀಸಿದ ಭಾರತೀಯರು, ಕೇವಲ 24 ಓವರ್‌ ಮಾತ್ರ ಬ್ಯಾಟ್‌ ಬೀಸಿ ಎರಡು ವಿಕೆಟ್‌ ನಷ್ಟಕ್ಕೆ 181 ರನ್ ಗಳಿಸಿದರು.(AP)

ಮೊಹಮ್ಮದ್‌ ಸಿರಾಜ್‌ 6 ಮೇಡನ್‌ ಓವರ್‌ಗಳೊಂದಿಗೆ ಐದು ವಿಕೆಟ್‌ ಕಬಳಿಸಿದರು.
icon

(3 / 16)

ಮೊಹಮ್ಮದ್‌ ಸಿರಾಜ್‌ 6 ಮೇಡನ್‌ ಓವರ್‌ಗಳೊಂದಿಗೆ ಐದು ವಿಕೆಟ್‌ ಕಬಳಿಸಿದರು.(BCCI Twitter)

ನಾಲ್ಕನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 32 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ ನಾಯಕ ಕ್ರೈಗ್ ಬ್ರಾಥ್ ವೈಟ್ 28 ರನ್‌ ಗಳಿಸ ಔಟಾದರೆ, ಕಿರ್ಕ್ ಮೆಕೆಂಜಿ ಖಾತೆ ತೆರೆಯದೆ ಸ್ಪಿನ್ನರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. 
icon

(4 / 16)

ನಾಲ್ಕನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 32 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ ನಾಯಕ ಕ್ರೈಗ್ ಬ್ರಾಥ್ ವೈಟ್ 28 ರನ್‌ ಗಳಿಸ ಔಟಾದರೆ, ಕಿರ್ಕ್ ಮೆಕೆಂಜಿ ಖಾತೆ ತೆರೆಯದೆ ಸ್ಪಿನ್ನರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. (AP)

ನಾಲ್ಕನೇ ದಿನದಾಟದ ಬಹುತೇಕ ಅವಧಿಯಲ್ಲಿ ಮಳೆ ಕಾಡಿತು. ಮಧ್ಯಾಹ್ನದ ಅವಧಿಯಲ್ಲಿ ಕೇವಲ ಮೂರು ಓವರ್‌ಗಳನ್ನಷ್ಟೇ ಬೌಲ್ ಮಾಡಲು ಸಾಧ್ಯವಾಯಿತು. ರೋಚಕ ಹಂತಕ್ಕೆ ಬಂದಿರುವ ಐದನೇ ದಿನದಾಟದಲ್ಲೂ ಮಳೆ ಬರುವ ಸಾಧ್ಯತೆ ಇದೆ.  
icon

(5 / 16)

ನಾಲ್ಕನೇ ದಿನದಾಟದ ಬಹುತೇಕ ಅವಧಿಯಲ್ಲಿ ಮಳೆ ಕಾಡಿತು. ಮಧ್ಯಾಹ್ನದ ಅವಧಿಯಲ್ಲಿ ಕೇವಲ ಮೂರು ಓವರ್‌ಗಳನ್ನಷ್ಟೇ ಬೌಲ್ ಮಾಡಲು ಸಾಧ್ಯವಾಯಿತು. ರೋಚಕ ಹಂತಕ್ಕೆ ಬಂದಿರುವ ಐದನೇ ದಿನದಾಟದಲ್ಲೂ ಮಳೆ ಬರುವ ಸಾಧ್ಯತೆ ಇದೆ.  (BCCI Twitter)

ನಾಲ್ಕನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 32 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ.
icon

(6 / 16)

ನಾಲ್ಕನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 32 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ.(AFP)

ನಾಯಕ ರೋಹಿತ್‌ ಮತ್ತು ಜೈಸ್ವಾಲ್‌ ಮೊದಲ ವಿಕೆಟ್‌ಗೆ 98 ರನ್‌ಗಳ ಜೊತೆಯಾಟವಾಡಿದರು.  ಭಾರತವು ಕೇವಲ 12.2 ಓವರ್‌ಗಳಲ್ಲಿ 100 ರನ್ ಪೇರಿಸಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದರ ವೇಗದ ಶತಕವಾಗಿದೆ.
icon

(7 / 16)

ನಾಯಕ ರೋಹಿತ್‌ ಮತ್ತು ಜೈಸ್ವಾಲ್‌ ಮೊದಲ ವಿಕೆಟ್‌ಗೆ 98 ರನ್‌ಗಳ ಜೊತೆಯಾಟವಾಡಿದರು.  ಭಾರತವು ಕೇವಲ 12.2 ಓವರ್‌ಗಳಲ್ಲಿ 100 ರನ್ ಪೇರಿಸಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದರ ವೇಗದ ಶತಕವಾಗಿದೆ.(AP)

ನಾಯಕ ರೋಹಿತ್‌ ಶರ್ಮಾ ವೇಗದ ಆಟಕ್ಕೆ ಮುಂದಾದರು. ಕೇವಲ 44 ಎಸೆತಗಳಲ್ಲಿ 57 ರನ್‌ ಸಿಡಿಸಿ ಔಟಾದರು. ಈ ವೇಳೆ 5 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಸಿದರು.
icon

(8 / 16)

ನಾಯಕ ರೋಹಿತ್‌ ಶರ್ಮಾ ವೇಗದ ಆಟಕ್ಕೆ ಮುಂದಾದರು. ಕೇವಲ 44 ಎಸೆತಗಳಲ್ಲಿ 57 ರನ್‌ ಸಿಡಿಸಿ ಔಟಾದರು. ಈ ವೇಳೆ 5 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಸಿದರು.(BCCI Twitter)

ಚೊಚ್ಚಲ ಟೆಸ್ಟ್‌ ಇನ್ನಿಂಗ್ಸ್‌ನಲ್ಲೇ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್‌ 38 ರನ್‌ ಗಳಿಸಿದರು. ಎರಡನೇ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಒಂದು ಸಿಕ್ಸರ್‌ ಹಾಗೂ ಬೌಂಡರಿ ಸಹಿತ  11 ರನ್‌ ಗಳಿಸಿದರು.
icon

(9 / 16)

ಚೊಚ್ಚಲ ಟೆಸ್ಟ್‌ ಇನ್ನಿಂಗ್ಸ್‌ನಲ್ಲೇ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್‌ 38 ರನ್‌ ಗಳಿಸಿದರು. ಎರಡನೇ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಒಂದು ಸಿಕ್ಸರ್‌ ಹಾಗೂ ಬೌಂಡರಿ ಸಹಿತ  11 ರನ್‌ ಗಳಿಸಿದರು.(AFP)

ಇಶಾನ್ ಕಿಶನ್ ಕೂಡ ವೇಗದ ಆಟಕ್ಕೆ ಮುನ್ನುಗ್ಗಿದರು. 34 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು. ಇವರಿಬ್ಬರೂ ಅಜೇಯ 79 ರನ್‌ಗಳ ಜೊತೆಯಾಟವಾಡಿದರು.
icon

(10 / 16)

ಇಶಾನ್ ಕಿಶನ್ ಕೂಡ ವೇಗದ ಆಟಕ್ಕೆ ಮುನ್ನುಗ್ಗಿದರು. 34 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು. ಇವರಿಬ್ಬರೂ ಅಜೇಯ 79 ರನ್‌ಗಳ ಜೊತೆಯಾಟವಾಡಿದರು.(AP)

ಯಶಸ್ವಿ ಜೈಸ್ವಾಲ್ ತಮ್ಮ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್‌ ಸಿಡಿಸಿದರು.
icon

(11 / 16)

ಯಶಸ್ವಿ ಜೈಸ್ವಾಲ್ ತಮ್ಮ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್‌ ಸಿಡಿಸಿದರು.(AP)

ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಬಂದ ಕಿಶನ್ ನಾಲ್ಕು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ ಸಹಿತ ಅಬ್ಬರಿಸಿದರು.
icon

(12 / 16)

ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬದಲಿಗೆ ಬಂದ ಕಿಶನ್ ನಾಲ್ಕು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ ಸಹಿತ ಅಬ್ಬರಿಸಿದರು.(AFP)

ಇಶಾನ್‌ ಕಿಶನ್‌ ಅಜೇಯ ಅರ್ಧ ಶತಕ ಸಿಡಿಸಿದಾಗ ಭಾರತ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.
icon

(13 / 16)

ಇಶಾನ್‌ ಕಿಶನ್‌ ಅಜೇಯ ಅರ್ಧ ಶತಕ ಸಿಡಿಸಿದಾಗ ಭಾರತ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.(AFP)

ಶುಬ್ಮನ್‌ ಗಿಲ್‌ ತುಸು ನಿಧಾನವಾಗಿ ಬ್ಯಾಟ್‌ ಬೀಸಿ 37 ಎಸೆತಗಳಿಂದ ಅಜೇಯ 29 ರನ್‌ ಗಳಿಸಿದರು.
icon

(14 / 16)

ಶುಬ್ಮನ್‌ ಗಿಲ್‌ ತುಸು ನಿಧಾನವಾಗಿ ಬ್ಯಾಟ್‌ ಬೀಸಿ 37 ಎಸೆತಗಳಿಂದ ಅಜೇಯ 29 ರನ್‌ ಗಳಿಸಿದರು.(AP)

ಎರಡನೇ ಇನ್ನಿಂಗ್ಸ್‌ ಆರಂಭಿಸಿದ ವೆಸ್ಟ್‌ ಇಂಡೀಸ್‌ ಪರ,  ಕ್ರೈಗ್ ಬ್ರಾಥ್ ವೈಟ್ 28 ರನ್‌ ಗಳಿಸ ಔಟಾದರೆ, ಕಿರ್ಕ್ ಮೆಕೆಂಜಿ ಖಾತೆ ತೆರೆಯದೆ ಸ್ಪಿನ್ನರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.
icon

(15 / 16)

ಎರಡನೇ ಇನ್ನಿಂಗ್ಸ್‌ ಆರಂಭಿಸಿದ ವೆಸ್ಟ್‌ ಇಂಡೀಸ್‌ ಪರ,  ಕ್ರೈಗ್ ಬ್ರಾಥ್ ವೈಟ್ 28 ರನ್‌ ಗಳಿಸ ಔಟಾದರೆ, ಕಿರ್ಕ್ ಮೆಕೆಂಜಿ ಖಾತೆ ತೆರೆಯದೆ ಸ್ಪಿನ್ನರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.(AFP)

ಸದ್ಯ ನಾಲ್ಕನೇ ದಿನದಾಟ ರೋಚಕ ಹಂತಕ್ಕೆ ಬಂದಿದೆ. ಭಾರತಕ್ಕೆ ಗೆಲ್ಲಲು 8 ವಿಕೆಟ್‌ಗಳ ಅಗತ್ಯವಿದ್ದರೆ, ವೆಸ್ಟ್‌ ಇಂಡೀಸ್‌ ಗೆಲುವಿಗೆ 289 ರನ್‌ ಅಗತ್ಯವಿದೆ.
icon

(16 / 16)

ಸದ್ಯ ನಾಲ್ಕನೇ ದಿನದಾಟ ರೋಚಕ ಹಂತಕ್ಕೆ ಬಂದಿದೆ. ಭಾರತಕ್ಕೆ ಗೆಲ್ಲಲು 8 ವಿಕೆಟ್‌ಗಳ ಅಗತ್ಯವಿದ್ದರೆ, ವೆಸ್ಟ್‌ ಇಂಡೀಸ್‌ ಗೆಲುವಿಗೆ 289 ರನ್‌ ಅಗತ್ಯವಿದೆ.(AP)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು