IND vs WI: ವಿಂಡೀಸ್ ವಿರುದ್ಧ ಅಬ್ಬರಿಸಿದ ಭಾರತ; ರೋಹಿತ್, ಜೈಸ್ವಾಲ್, ಕೊಹ್ಲಿ ಸೊಗಸಾದ ಆಟ; ಪಂದ್ಯದ ಪೂರ್ಣ ಚಿತ್ರಣವನ್ನು ಚಿತ್ರಗಳಲ್ಲಿ ನೋಡಿ
India vs West Indies 2nd Test Day 1: ವೆಸ್ಟ್ ಇಂಡೀಸ್ ಎದುರಿನ 2ನೇ ಟೆಸ್ಟ್ನ ಮೊದಲ ದಿನದಾಟದಲ್ಲಿ ವಿರಾಟ್ ಕೊಹ್ಲಿ 87 ರನ್ ಗಳಿಸಿ ಅಜೇಯರಾಗಿ ಉಳಿದರು. ರವೀಂದ್ರ ಜಡೇಜಾ ಅಜೇಯ 36 ರನ್ ಗಳಿಸಿದರು. ಅವರ ಜೊತೆಯಾಟವು ಭಾರತದ 4 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿ ಗಮನಾರ್ಹ ಮೊತ್ತ ಕಲೆ ಹಾಕಿದೆ.
(1 / 16)
ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯವು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐತಿಹಾಸಿಕ 100ನೇ ಟೆಸ್ಟ್ ಪಂದ್ಯವಾಗಿದೆ. ಹಾಗಾಗಿ ಅದರ ಸ್ಮರಣಾರ್ಥ ವಿಂಡೀಸ್ ಲೆಜೆಂಡರಿ ಕ್ರಿಕೆಟಿಗ ಬ್ರಿಯಾನ್ ಲಾರಾ, ಅವರು ಭಾರತೀಯ ನಾಯಕ ರೋಹಿತ್ ಶರ್ಮಾ ಅವರಿಗೆ ಸ್ಮರಣಾರ್ಥ ಫಲಕ ನೀಡಿದರು.(BCCI Twitter)
(2 / 16)
ಯಶಸ್ವಿ ಜೈಸ್ವಾಲ್ ಎರಡನೇ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 74 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 57 ರನ್ ಚಚ್ಚಿದರು.(BCCI Twitter)
(3 / 16)
ಅರ್ಧಶತಕ ಸಿಡಿಸಿ ಮಿನುಗುತ್ತಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದಾಗ ಸಂಭ್ರಮಿಸಿದ ವೆಸ್ಟ್ ಇಂಡೀಸ್ ವೇಗಿ ಜೇಸನ್ ಹೋಲ್ಡರ್. ಆ ಮೂಲಕ ಆರಂಭಿಕರ ಜೊತೆಯಾಟವನ್ನು (139) ಮುರಿದರು.(AFP)
(4 / 16)
ಎರಡನೇ ಟೆಸ್ಟ್ ಪಂದ್ಯದಲ್ಲೂ ಶುಭ್ಮನ್ ಗಿಲ್ ನಿರಾಸೆ ಮೂಡಿಸಿದರು. ಕೇವಲ 10 ರನ್ ಗಳಿಸಿ ಔಟಾದರು. ಕೆಮರ್ ರೋಚ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.(AP)
(8 / 16)
ಜೊಮೆಲ್ ವಾರಿಕನ್ ಅವರ ಬೌಲಿಂಗ್ನಲ್ಲಿ ರೋಹಿತ್ ಶರ್ಮಾ ಔಟಾದಾಗ ವೆಸ್ಟ್ ಇಂಡೀಸ್ ತಂಡದ ಆಟಗಾರರು ಸಂಭ್ರಮಿಸಿದ ಕ್ಷಣಗಳು.(AP)
(10 / 16)
ಟೀಮ್ ಇಂಡಿಯಾ ವೈಸ್ ಕ್ಯಾಪ್ಟನ್ ರಹಾನೆ ವಿಕೆಟ್ ಕಬಳಿಸಿದಾಗ ಶಾನನ್ ಗೇಬ್ರಿಯಲ್ ಸಂಭ್ರಮಿಸಿದ ರೋಚಕ ಕ್ಷಣ.(AFP)
(11 / 16)
ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ದಿನದಂದು ರವೀಂದ್ರ ಜಡೇಜಾ ಮತ್ತು ವಿರಾಟ್ ಕೊಹ್ಲಿ ಅವರು 100 ರನ್ಗಳ ಜೊತೆಯಾಟ ಆಡಿದರು.(AFP)
ಇತರ ಗ್ಯಾಲರಿಗಳು