ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎಸ್ಆರ್​ಹೆಚ್​ ವಿರುದ್ಧದ ಐಪಿಎಲ್ ಫೈನಲ್​ಗೆ​ ಕೆಕೆಆರ್​​ ಸಿದ್ಧ; ಹಸಿರು ಅಖಾಡದಲ್ಲಿ ಅಬ್ಬರಿಸಲಿರುವ 11 ರಣಕಲಿಗಳು ಇವರೇ

ಎಸ್ಆರ್​ಹೆಚ್​ ವಿರುದ್ಧದ ಐಪಿಎಲ್ ಫೈನಲ್​ಗೆ​ ಕೆಕೆಆರ್​​ ಸಿದ್ಧ; ಹಸಿರು ಅಖಾಡದಲ್ಲಿ ಅಬ್ಬರಿಸಲಿರುವ 11 ರಣಕಲಿಗಳು ಇವರೇ

  • KKR Playing 11 vs SRH IPL 2024 Final: 17ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಸೆಣಸಾಟಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ XI ಹೀಗಿದೆ ನೋಡಿ.

ಲೀಗ್​ ಅಂಕಪಟ್ಟಿಯಲ್ಲಿ ಅಗ್ರ ಎರಡು ತಂಡಗಳಾದ ಕೆಕೆಆರ್ ಮತ್ತು ಎಸ್‌ಆರ್‌ಹೆಚ್, ಐಪಿಎಲ್ 2024 ರ ಫೈನಲ್‌ನಲ್ಲಿ ಮೇ 24ರ ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ.
icon

(1 / 7)

ಲೀಗ್​ ಅಂಕಪಟ್ಟಿಯಲ್ಲಿ ಅಗ್ರ ಎರಡು ತಂಡಗಳಾದ ಕೆಕೆಆರ್ ಮತ್ತು ಎಸ್‌ಆರ್‌ಹೆಚ್, ಐಪಿಎಲ್ 2024 ರ ಫೈನಲ್‌ನಲ್ಲಿ ಮೇ 24ರ ಭಾನುವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ.(PTI)

ಅಹ್ಮದಾಬಾದ್​ನಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಎಸ್​ಆರ್​ಹೆಚ್ ವಿರುದ್ಧ ಜಯಿಸಿದ ಕೆಕೆಆರ್ ಫೈನಲ್ ತಲುಪಿತ್ತು. ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದ ಸನ್​ರೈಸರ್ಸ್ ಹೈದರಾಬಾದ್ ಅಂತಿಮ ಸುತ್ತಿಗೆ ಲಗ್ಗೆ ಹಾಕಿತು.
icon

(2 / 7)

ಅಹ್ಮದಾಬಾದ್​ನಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಎಸ್​ಆರ್​ಹೆಚ್ ವಿರುದ್ಧ ಜಯಿಸಿದ ಕೆಕೆಆರ್ ಫೈನಲ್ ತಲುಪಿತ್ತು. ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದ ಸನ್​ರೈಸರ್ಸ್ ಹೈದರಾಬಾದ್ ಅಂತಿಮ ಸುತ್ತಿಗೆ ಲಗ್ಗೆ ಹಾಕಿತು.(PTI)

ಶ್ರೇಯಸ್ ಅಯ್ಯರ್ ಪಡೆ ನಾಲ್ಕನೇ ಹಾಗೂ ಪ್ಯಾಟ್ ಕಮಿನ್ಸ್ ಸೇನೆ 3ನೇ ಬಾರಿಗೆ ಫೈನಲ್​​ಗೆ ಅರ್ಹತೆ ಪಡೆದಿವೆ. ಆದರೆ ಉಭಯ ತಂಡಗಳು ಅಂತಿಮ ಹಣಾಹಣಿಯಲ್ಲಿ ಮೊದಲ ಬಾರಿಗೆ ಸೆಣಸಾಟ ನಡೆಸುತ್ತಿವೆ.
icon

(3 / 7)

ಶ್ರೇಯಸ್ ಅಯ್ಯರ್ ಪಡೆ ನಾಲ್ಕನೇ ಹಾಗೂ ಪ್ಯಾಟ್ ಕಮಿನ್ಸ್ ಸೇನೆ 3ನೇ ಬಾರಿಗೆ ಫೈನಲ್​​ಗೆ ಅರ್ಹತೆ ಪಡೆದಿವೆ. ಆದರೆ ಉಭಯ ತಂಡಗಳು ಅಂತಿಮ ಹಣಾಹಣಿಯಲ್ಲಿ ಮೊದಲ ಬಾರಿಗೆ ಸೆಣಸಾಟ ನಡೆಸುತ್ತಿವೆ.(PTI)

ಕೆಕೆಆರ್​ ಗೆದ್ದರೆ ತನ್ನ ಪಾಲಿಗೆ ಇದು 3ನೇ ಪ್ರಶಸ್ತಿಯಾಗಲಿದೆ. ಎಸ್​​​ಆರ್​​ಹೆಚ್​ ಜಯಿಸಿದರೆ, 2ನೇ ಟ್ರೋಫಿಗೆ ಮುತ್ತಿಕ್ಕಲಿದೆ. 2 ತಂಡಗಳು ಲೀಗ್​ನಲ್ಲಿ​ ಮುಖಾಮುಖಿಯಾದ ಮೊದಲ ಪಂದ್ಯದಲ್ಲಿ, ಕ್ವಾಲಿಫೈಯರ್​​ 1ರಲ್ಲಿ ಎಸ್​ಆರ್​​ಹೆಚ್ ವಿರುದ್ಧ ಕೆಕೆಆರ್ ಗೆದ್ದು ಮೇಲುಗೈ ಸಾಧಿಸಿದೆ.
icon

(4 / 7)

ಕೆಕೆಆರ್​ ಗೆದ್ದರೆ ತನ್ನ ಪಾಲಿಗೆ ಇದು 3ನೇ ಪ್ರಶಸ್ತಿಯಾಗಲಿದೆ. ಎಸ್​​​ಆರ್​​ಹೆಚ್​ ಜಯಿಸಿದರೆ, 2ನೇ ಟ್ರೋಫಿಗೆ ಮುತ್ತಿಕ್ಕಲಿದೆ. 2 ತಂಡಗಳು ಲೀಗ್​ನಲ್ಲಿ​ ಮುಖಾಮುಖಿಯಾದ ಮೊದಲ ಪಂದ್ಯದಲ್ಲಿ, ಕ್ವಾಲಿಫೈಯರ್​​ 1ರಲ್ಲಿ ಎಸ್​ಆರ್​​ಹೆಚ್ ವಿರುದ್ಧ ಕೆಕೆಆರ್ ಗೆದ್ದು ಮೇಲುಗೈ ಸಾಧಿಸಿದೆ.

ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷೆ ಮಾಡಲಾಗಿಲ್ಲ. ಕಳೆದ 5 ಪಂದ್ಯಗಳಿಂದ ಅಜೇಯವಾಗಿರುವ ಕೆಕೆಆರ್​, ಅದೇ ಸಂಯೋಜನೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ನಿತೀಶ್ ರಾಣಾ ಇಂಪ್ಯಾಕ್ಟ್ ಪ್ಲೇಯರ್ ಆಗಬಹುದು.
icon

(5 / 7)

ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷೆ ಮಾಡಲಾಗಿಲ್ಲ. ಕಳೆದ 5 ಪಂದ್ಯಗಳಿಂದ ಅಜೇಯವಾಗಿರುವ ಕೆಕೆಆರ್​, ಅದೇ ಸಂಯೋಜನೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ನಿತೀಶ್ ರಾಣಾ ಇಂಪ್ಯಾಕ್ಟ್ ಪ್ಲೇಯರ್ ಆಗಬಹುದು.(PTI)

ವೇಗಿಗಳಾದ ಹರ್ಷಿತ್ ರಾಣಾ, ವೈಭವ್ ಅರೋರಾ, ಆಂಡ್ರೆ ರಸೆಲ್ ಜತೆಗೆ ಮಿಚೆಲ್ ಸ್ಟಾರ್ಕ್ ವಿಕೆಟ್ ಪಡೆಯುವ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಪ್ರಶಸ್ತಿ ಭರವಸೆ ಹೆಚ್ಚಿಸಿದೆ. ಮಧ್ಯಮ ಓವರ್‌ಗಳಲ್ಲಿ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಮ್ಯಾಜಿಕ್ ಮಾಡಲಿದ್ದಾರೆ.
icon

(6 / 7)

ವೇಗಿಗಳಾದ ಹರ್ಷಿತ್ ರಾಣಾ, ವೈಭವ್ ಅರೋರಾ, ಆಂಡ್ರೆ ರಸೆಲ್ ಜತೆಗೆ ಮಿಚೆಲ್ ಸ್ಟಾರ್ಕ್ ವಿಕೆಟ್ ಪಡೆಯುವ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಪ್ರಶಸ್ತಿ ಭರವಸೆ ಹೆಚ್ಚಿಸಿದೆ. ಮಧ್ಯಮ ಓವರ್‌ಗಳಲ್ಲಿ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಮ್ಯಾಜಿಕ್ ಮಾಡಲಿದ್ದಾರೆ.(PTI)

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್​), ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.
icon

(7 / 7)

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್​), ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.(PTI)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು