Costilest Player: ಒಂದೊಂದು ವಿಕೆಟ್ಗೂ ಕೋಟಿ ಕೋಟಿ ಸಂಭಾವನೆ ಪಡೆದ ಆಟಗಾರರು; ಇದರಲ್ಲಿ ಲೂಕಿ ಫರ್ಗ್ಯೂಸನ್ ಅತ್ಯಂತ ದುಬಾರಿ ಪ್ಲೇಯರ್
- ಐಪಿಎಲ್ 2023 ಸೀಸನ್ ಮುಗಿದಿದೆ. ಎಂದಿನಂತೆ ಕೋಟಿ ಕೋಟಿ ಪಡೆದ ಆಟಗಾರರು ಅಟ್ಟರ್ಫ್ಲಾಪ್ ಆಗಿದ್ದಾರೆ. ಅದರಲ್ಲೂ ಈ ಆಟಗಾರರು ತಾವು ಪಡೆದ ಕಬಳಿಸಿದ ಒಂದೊಂದು ವಿಕೆಟ್ಗೂ ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ.
- ಐಪಿಎಲ್ 2023 ಸೀಸನ್ ಮುಗಿದಿದೆ. ಎಂದಿನಂತೆ ಕೋಟಿ ಕೋಟಿ ಪಡೆದ ಆಟಗಾರರು ಅಟ್ಟರ್ಫ್ಲಾಪ್ ಆಗಿದ್ದಾರೆ. ಅದರಲ್ಲೂ ಈ ಆಟಗಾರರು ತಾವು ಪಡೆದ ಕಬಳಿಸಿದ ಒಂದೊಂದು ವಿಕೆಟ್ಗೂ ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದಾರೆ.
(1 / 9)
ಲೂಕಿ ಫರ್ಗ್ಯೂಸನ್: ಆಡಿದ್ದು 3 ಪಂದ್ಯ. ಪಡೆದಿದ್ದು 1 ವಿಕೆಟ್. ಲೂಕಿ ಫರ್ಗ್ಯೂಸನ್, ಈ ಐಪಿಎಲ್ ಅತ್ಯಂತ ದುಬಾರಿ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. 10 ಕೋಟಿಗೆ ಗುಜರಾತ್ ಟೈಟಾನ್ಸ್ನಿಂದ ಕೆಕೆಆರ್ ತಂಡಕ್ಕೆ ಟ್ರೇಡ್ ಆಗಿದ್ದರು. ಒಂದು ವಿಕೆಟ್‌ಗೆ 10 ಕೋಟಿ ಪಡೆದಿದ್ದಾರೆ.
(2 / 9)
ಜೋಫ್ರಾ ಆರ್ಚರ್: ಮುಂಬೈ ಇಂಡಿಯನ್ಸ್ ಆರ್ಚರ್ರನ್ನು 8 ಕೋಟಿಗೆ ಖರೀದಿಸಿತು. ಕಳೆದ ಆವೃತ್ತಿಯಲ್ಲಿ ಒಂದು ಪಂದ್ಯವನ್ನಾಡದ ಜೋಫ್ರಾ ಈ ಋತುವಿನಲ್ಲಿ 2 ವಿಕೆಟ್ ಪಡೆದಿದ್ದಾರೆ. 2 ಸೀಸನ್‌ಗಳಲ್ಲಿ ಒಟ್ಟು 16 ಕೋಟಿ ಪಡೆದ ಆರ್ಚರ್ ಒಂದು ವಿಕೆಟ್‌ಗೆ 8 ಕೋಟಿ ಪಡೆದಿದ್ದಾರೆ.
(3 / 9)
ಕಾರ್ತಿಕ್ ತ್ಯಾಗಿ: ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಕಾರ್ತಿಕ್ ತ್ಯಾಗಿ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ 4 ಕೋಟಿಗೆ ಖರೀದಿಸಿತ್ತು. ಈ ಋತುವಿನಲ್ಲಿ ಒಂದು ಪಂದ್ಯವನ್ನಾಡಿ ಒಂದು ವಿಕೆಟ್ ಪಡೆದಿದ್ದಾರೆ. ಪ್ರತಿ ವಿಕೆಟ್‌ಗೆ 4 ಕೋಟಿ ಎನ್ನುವಂತಾಗಿದೆ.
(4 / 9)
ಜೋಶ್ ಹೇಜಲ್‌ವುಡ್: ಈ ಬಾರಿ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆರ್‌ಸಿಬಿ 7.75 ಕೋಟಿಗೆ ಹೇಜಲ್‌ವುಡ್ ಅವರನ್ನು ಖರೀದಿಸಿದೆ. ಈ ಋತುವಿನಲ್ಲಿ 3 ವಿಕೆಟ್ ಪಡೆದಿರುವ ಹೇಜಲ್‌ವುಡ್, ಪ್ರತಿ ವಿಕೆಟ್‌ಗೆ 2.58 ಕೋಟಿ ಪಡೆದಿದ್ದಾರೆ.
(5 / 9)
ದೀಪಕ್ ಚಹರ್: ಸಿಎಸ್ಕೆ 14 ಕೋಟಿಗೆ ಖರೀದಿಸಿದೆ. ಗಾಯದ ಕಾರಣ 2022ರ ಐಪಿಎಲ್ಗೆ ದೂರವಾಗಿದ್ದ ಚಹರ್, ಈ ಬಾರಿ 13 ವಿಕೆಟ್ ಪಡೆದರು. ಮೊದಲ 4 ಪಂದ್ಯಗಳಲ್ಲಿ ವಿಕೆಟ್ ಪಡೆಯದ ದೀಪಕ್ ನಂತರದ 5 ಪಂದ್ಯಗಳಲ್ಲಿ 13 ವಿಕೆಟ್ ಪಡೆದರು. ದೀಪಕ್ ಪ್ರತಿ ವಿಕೆಟ್‌ಗೆ 1.07 ಕೋಟಿ ಪಡೆದಿದ್ದಾರೆ.
(6 / 9)
ಬೆನ್ಸ್ಟೋಕ್ಸ್: ಸಿಎಸ್ಕೆ ಬೆನ್ ಸ್ಟೋಕ್ಸ್ ಅವರನ್ನು 16.25 ಕೋಟಿಗೆ ಖರೀದಿಸಿತು. ಈ ಬಾರಿ 2 ಪಂದ್ಯಗಳನ್ನು ಆಡಿ 15 ರನ್ ಗಳಿಸಿದ್ದ ಸ್ಟೋಕ್ಸ್ ಬೌಲಿಂಗ್ನಲ್ಲಿ ವಿಕೆಟ್ ಪಡೆಯಲಿಲ್ಲ. ಸ್ಟೋಕ್ಸ್ ಐಪಿಎಲ್ 2023 ಸೀಸನ್‌ನಲ್ಲಿ ಗಳಿಸಿದ ಪ್ರತಿ ರನ್‌ಗೆ 1.25 ಕೋಟಿ.
(7 / 9)
ಆವೇಶ್ ಖಾನ್: ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಪ್ರಮುಖ ಬೌಲರ್ ಆಗಿದ್ದ ಅವೇಶ್ ಖಾನ್, ಐಪಿಎಲ್-2022 ಹರಾಜಿನಲ್ಲಿ 10 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾದರು. ಈ ಋತುವಿನಲ್ಲಿ 8 ವಿಕೆಟ್ ಪಡೆದ ಅವೇಶ್ ಖಾನ್, ಪ್ರತಿ ವಿಕೆಟ್‌ಗೆ ಪಡೆದಿರುವು 1.25 ಕೋಟಿ.
(8 / 9)
ಕಗಿಸೋ ರಬಾಡ: ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಕಗಿಸೊ ರಬಾಡರನ್ನು ಪಂಜಾಬ್ ಕಿಂಗ್ಸ್, 9.25 ಕೋಟಿ ರೂ.ಗೆ ಖರೀದಿಸಿತ್ತು. ಈ ಋತುವಿನಲ್ಲಿ 7 ವಿಕೆಟ್ ಪಡೆದಿದ್ದು, ಪ್ರತಿ ವಿಕೆಟ್‌ಗೆ 1.39 ಕೋಟಿ ಗಳಿಸಿದ್ದಾರೆ.
ಇತರ ಗ್ಯಾಲರಿಗಳು