MS Dhoni World Record: ನಿವೃತ್ತಿಯ ಅಂಚಿನಲ್ಲೂ ಟಿ20 ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದ ಸಿಎಸ್ಕೆ ಕ್ಯಾಪ್ಟನ್ ಎಂಎಸ್ ಧೋನಿ
- MS Dhoni World Record: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ನಿವೃತ್ತಿಯ ಅಂಚಿನಲ್ಲಿದ್ದಾರೆ. ಆದರೂ ದಿನಕ್ಕೊಂದು ದಾಖಲೆ ನಿರ್ಮಿಸುತ್ತಿದ್ದಾರೆ. ಇದೀಗ ಸನ್ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ವಿಕೆಟ್ ಹಿಂದೆ ನಿಂತು ನೂತನ ವಿಶ್ವ ದಾಖಲೆ ಬರೆದಿದ್ದಾರೆ.

(1 / 6)
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 16ನೇ ಆವೃತ್ತಿಯ ಐಪಿಎಲ್ನ 29ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಟೂರ್ನಿಯಲ್ಲಿ 4ನೇ ಜಯ ಸಾಧಿಸಿತು.(PTI)
(2 / 6)
ಸನ್ರೈಸರ್ಸ್ ನೀಡಿದ್ದ 135 ರನ್ಗಳ ಗುರಿಯನ್ನು 18.4 ಓವರ್ಗಳಲ್ಲಿ ಚೆನ್ನೈ ಚೇಸ್ ಮಾಡಿತು. ಡೆವೋನ್ ಕಾನ್ವೆ 57 ಎಸೆತಗಳಲ್ಲಿ ಅಜೇಯ 77 ರನ್ಗಳಿಸಿ ಗೆಲುವಿನ ರೂವಾರಿಯಾದರು.(PTI)
(3 / 6)
ಚೆನ್ನೈ ಸೂಪರ್ ಕಿಂಗ್ಸ್ ಪರ ಆಲ್ರೌಂಡರ್ ರವೀಂದ್ರ ಜಡೇಜಾ 3 ವಿಕೆಟ್ ಪಡೆದು ಮಿಂಚಿದರು. ಪರಿಣಾಮ ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.(PTI)
(4 / 6)
ಬ್ಯಾಟಿಂಗ್ ಇಳಿಯದಿದ್ದರೂ, ಈ ಪಂದ್ಯದಲ್ಲಿ ಸಿಎಸ್ಕೆ ನಾಯಕ MS ಧೋನಿ ವಿಕೆಟ್ ಹಿಂದೆ ನಿಂತು ಅದ್ಭುತ ಪ್ರದರ್ಶನ ತೋರಿದರು. ಒಂದು ಕ್ಯಾಚ್, ಒಂದು ರನೌಟ್ ಮತ್ತು ಸ್ಟಂಪ್ ಔಟ್ ಮಾಡಿ ವಿಕೆಟ್ ಹಿಂಭಾಗದಲ್ಲಿ ನೂತನ ವಿಶ್ವದಾಖಲೆ ಬರೆದಿದ್ದಾರೆ.
(5 / 6)
ಟಿ20 ಕ್ರಿಕೆಟ್ನಲ್ಲಿ ಅಧಿಕ ಕ್ಯಾಚ್ಗಳನ್ನು ಪಡೆದ ವಿಕೆಟ್ ಕೀಪರ್ ಎಂಬ ದಾಖಲೆಯನ್ನು 41 ವರ್ಷದ ಧೋನಿ ತನ್ನದಾಗಿಸಿಕೊಂಡಿದ್ದಾರೆ. ಆ ಮೂಲಕ ಸೌತ್ ಆಫ್ರಿಕಾ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ದಾಖಲೆ ಮುರಿದಿದ್ದಾರೆ.
ಇತರ ಗ್ಯಾಲರಿಗಳು