ಮಹಿಳಾ ಕ್ರಿಕೆಟ್ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಿದ ಸ್ಮೃತಿ ಮಂಧಾನ, ಕಳೆದ 5 ವರ್ಷಗಳಲ್ಲಿ 3 ಬಾರಿ ಸಾಧನೆ!
- Smriti Mandhana: 2024ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಹೊಸ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಉಪನಾಯಕಿ 91 ರನ್ ಗಳಿಸಿ ಈ ದಾಖಲೆ ಬರೆದಿದ್ದಾರೆ.
- Smriti Mandhana: 2024ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ಹೊಸ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಉಪನಾಯಕಿ 91 ರನ್ ಗಳಿಸಿ ಈ ದಾಖಲೆ ಬರೆದಿದ್ದಾರೆ.
(1 / 8)
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 91 ರನ್ ಸಿಡಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.(PTI)
(2 / 8)
ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ಮೃತಿ ಮಂಧಾನ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.(PTI)
(3 / 8)
2024ರ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ದಾಖಲೆಯೊಂದಿಗೆ ಕೊನೆಗೊಳ್ಳಲಿದ್ದಾರೆ. ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ ಹತ್ತಿರದಲ್ಲಿದ್ದರೂ ಈ ವರ್ಷ ಅವರಿಗೆ ಯಾವುದೇ ಪಂದ್ಯಗಳು ಇಲ್ಲದ ಕಾರಣ ಮಂಧಾನ ಹಿಂದಿಕ್ಕುವುದು ಕಷ್ಟವಾಗಿದೆ.(PTI)
(4 / 8)
ಪ್ರಸ್ತುತ, ಅವರು ಈ ವರ್ಷ ಎಲ್ಲಾ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 1602 ರನ್ ಗಳಿಸಿದ್ದಾರೆ. ಟೀಮ್ ಇಂಡಿಯಾಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ಇನ್ನೂ 2 ಏಕದಿನ ಪಂದ್ಯಗಳು ಉಳಿದಿದ್ದು, ಈ ಸ್ಕೋರ್ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.(BCCI-X)
(5 / 8)
ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಕಳೆದ 5 ಕ್ಯಾಲೆಂಡರ್ ವರ್ಷಗಳಲ್ಲಿ (2018 ಮತ್ತು 2024ರ ನಡುವೆ) ಹೆಚ್ಚು ಸಲ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಸ್ಮೃತಿ ಮಂಧಾನ 3 ಸಲ ಈ ಸಾಧನೆ ಮಾಡಿದ್ದಾರೆ. ಇದು ಅಪರೂಪದ ದಾಖಲೆಯಾಗಿದೆ.(PTI)
(6 / 8)
ವೆಸ್ಟ್ ಇಂಡೀಸ್ ವಿರುದ್ಧ 91 ರನ್ ಗಳಿಸಿದ ನಂತರ, ಸ್ಮೃತಿ 2024 ರಲ್ಲಿ ಇಲ್ಲಿಯವರೆಗೆ 1602 ರನ್ ಗಳಿಸಿದ್ದಾರೆ. ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಕ್ರಿಕೆಟಿಗರೊಬ್ಬರು ಗಳಿಸಿದ ಅತ್ಯಧಿಕ ಸ್ಕೋರ್ ಇದಾಗಿದ್ದು, ಅಗ್ರಸ್ಥಾನ ಪಡೆದಿದ್ದಾರೆ.
(7 / 8)
ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ ಈ ವರ್ಷ 1593 ರನ್ ಗಳಿಸಿದ್ದು, ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ ಒಟ್ಟಾರೆ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ನ ನಟಾಲಿ ಸೀವರ್ ಬ್ರಂಟ್ 2022 ರಲ್ಲಿ 1,346 ರನ್ ಗಳಿಸಿದ್ದು, ಇದು ಕ್ಯಾಲೆಂಡರ್ ವರ್ಷದಲ್ಲಿ ಗಳಿಸಿದ್ದ 3ನೇ ಅತಿ ಅತಿ ಹೆಚ್ಚು ಮೊತ್ತವಾಗಿದೆ.(PTI)
ಇತರ ಗ್ಯಾಲರಿಗಳು