Amruthadhaare: ಸುಧಾಳ ಮೇಲೆ ವಜ್ರದ ಹಾರ ಕಳ್ಳತನ ಆರೋಪ, ನಂಬಿಕೆದ್ರೋಹ ಅಸ್ತ್ರ ಎತ್ತಿಕೊಂಡ ಶಕುಂತಲಾ- ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ
- Amruthadhaare serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ತಮ್ಮ ಮನೆಯ ಕೆಲಸದವಳೇ ಸುಧಾ, ಗೌತಮ್ ತಂಗಿ ಎಂಬ ಸತ್ಯ ಶಕುಂತಲಾದೇವಿಗೆ ಗೊತ್ತಾಗಿದೆ. ಈಕೆಯ ಮೇಲೆ ವಜ್ರದ ಹಾರ ಕಳ್ಳತನ ಆರೋಪ ಹೊರಿಸಲು ಶಕುಂತಲಾದೇವಿ ಮುಂದಾಗಿದ್ದಾರೆ. ಇದೇ ಸಮಯದಲ್ಲಿ ರಾಜೇಂದ್ರ ಭೂಪತಿ ಕೂಡ ಸುಧಾಳನ್ನು ತನ್ನ ಆಟಕ್ಕೆ ಬಳಸಿಕೊಳ್ಳುತ್ತಿದ್ದಾನೆ.
- Amruthadhaare serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ತಮ್ಮ ಮನೆಯ ಕೆಲಸದವಳೇ ಸುಧಾ, ಗೌತಮ್ ತಂಗಿ ಎಂಬ ಸತ್ಯ ಶಕುಂತಲಾದೇವಿಗೆ ಗೊತ್ತಾಗಿದೆ. ಈಕೆಯ ಮೇಲೆ ವಜ್ರದ ಹಾರ ಕಳ್ಳತನ ಆರೋಪ ಹೊರಿಸಲು ಶಕುಂತಲಾದೇವಿ ಮುಂದಾಗಿದ್ದಾರೆ. ಇದೇ ಸಮಯದಲ್ಲಿ ರಾಜೇಂದ್ರ ಭೂಪತಿ ಕೂಡ ಸುಧಾಳನ್ನು ತನ್ನ ಆಟಕ್ಕೆ ಬಳಸಿಕೊಳ್ಳುತ್ತಿದ್ದಾನೆ.
(1 / 7)
Amruthadhaare serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಶಕುಂತಲಾದೇವಿಯು ಸುಧಾಳ ಮೇಲೆ ಕಳ್ಳತನದ ಆರೋಪ ಹೊರೆಸಲು ಸಿದ್ಧವಾಗುತ್ತಿದ್ದಾಳೆ. ಈ ಮೂಲಕ ಗೌತಮ್‌ಗೆ ಈಕೆಯ ಮೇಲೆ ದ್ವೇಷ ಉಂಟಾಗುವಂತೆ ಮಾಡುವ ಯೋಜನೆ ಅವಳದ್ದು. ಗೌತಮ್‌ಗೆ ನಂಬಿಕೆದ್ರೋಹ ಆಗೋದಿಲ್ಲ. ಹೀಗಾಗಿ, ಸುಧಾಳ ಮೇಲೆ ಈ ಮನೆಯಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಲು ಯತ್ನಿಸುತ್ತಾಳೆ.
(2 / 7)
ಇದೇ ಸಮಯದಲ್ಲಿ ಸುಧಾಳಿಗೆ ರಾಜೇಂದ್ರ ಭೂಪತಿ ಬೇರೆ ಕೆಲಸ ಹೇಳುತ್ತಾನೆ. ಗೌತಮ್ ದಿವಾನ್‌ನ ಫೈಲ್‌ವೊಂದರ ಮಾಹಿತಿ ಪಡೆಯಲು ಹೇಳುತ್ತಾನೆ. ಸುಧಾ ಇದೇ ರೀತಿ ಡ್ರಾಯರ್ ತೆರೆಯುವ ಮಾಹಿತಿ ಇಂದಿನ ಪ್ರಮೋದಲ್ಲಿ ಗೊತ್ತಾಗಿದೆ. ಒಟ್ಟಾರೆ, ಸುಧಾಳ ಮೇಲೆ ಎಲ್ಲರೂ ಟಾರ್ಗೆಟ್ ಆಗುವ ಸಾಧ್ಯತೆ ಇದೆ.
(3 / 7)
ಅಮೃತಧಾರೆಯಲ್ಲಿ ಗೌತಮ್‌ಗೆ ಮನೆಯ ಕೆಲಸದವಳೇ ತನ್ನ ತಂಗಿ ಎಂದು ತಿಳಿಯಲು ಇನ್ನೂ ಸಾಕಷ್ಟು ಸಮಯ ಬೇಕಾಗಬಹುದು. ಯಾಕೆಂದರೆ, ಈಗ ರಾಜೇಂದ್ರ ಭೂಪತಿ ಎಂಟ್ರಿಯಾಗಿದ್ದು, ಸೀರಿಯಲ್‌ನಲ್ಲಿ ಅವರ ಕಥೆಯೇ ಇರಲಿದೆ.
(4 / 7)
ಶಕುಂತಲಾದೇವಿಗೆ ಹಿಂದಿನ ಸಂಚಿಕೆಯಲ್ಲಿ ತಮ್ಮ ಮನೆಯ ಕೆಲಸದವಳೇ ಸುಧಾ ಎಂಬ ಮಾಹಿತಿ ಗೊತ್ತಾಗಿತ್ತು. ಆಕೆಯ ಫೋಟೋವನ್ನು ಮನೆಗೆ ಕಳುಹಿಸಿದ್ದಾರೆ. ಆ ಫೋಟೋ ಇರುವ ಪೋಸ್ಟ್ ಭೂಮಿಕಾಳಿಗೆ ದೊರಕಿದೆ. ಆಕೆ ತೆರೆದು ನೋಡುವ ಮುನ್ನ ಆ ಕವರ್ ಅನ್ನು ಶಕುಂತಲಾದೇವಿ ಪಡೆದುಕೊಂಡಿದ್ದಾರೆ. ಆ ಕವರ್ ತೆಗೆದುನೋಡಿದಾಗ ಅಲ್ಲಿ ಸುಧಾಳ ಫೋಟೋ ನೋಡುತ್ತಾಳೆ. "ನಮ್ಮ ಕೆಲಸದವಳ ಫೋಟೋ ಕಳುಹಿಸಿದ್ದಾರೆ" ಎಂದು ಅಚ್ಚರಿ ಪಡುತ್ತಾರೆ. "ಅವತ್ತು ಆ ಮನೆ ಸುಟ್ಟು ಹೋಗಿದ್ದಾಗ ಆ ಮನೆಯಲ್ಲಿ ಇದ್ದವಳು ಇವಳೇ. ಅವಳಿಗೆ ಒಬ್ಬಳು ಅಮ್ಮ ಇದ್ದಾಳೆ. ಮಗಳೂ ಇದ್ದಾಳೆ" ಎಂದು ಫೋಟೋ ಕಳುಹಿಸಿದವರು ಮಾಹಿತಿ ನೀಡುತ್ತಾಳೆ. "ಸುಧಾ ಗೌತಮ್ ತಂಗಿನಾ" ಎಂದು ಶಕುಂತಲಾ ಅಚ್ಚರಿಪಡುತ್ತಾರೆ.
(5 / 7)
ಸುಧಾ ಕೆಲಸ ಮಾಡುತ್ತಿದ್ದಾಳೆ. ಅಲ್ಲಿಗೆ ಶಕುಂತಲಾ ಬರುತ್ತಾರೆ. "ನಿನ್ನಲ್ಲಿ ಸರಿ ಮಾತನಾಡಲು ಆಗಿಲ್ಲ. ಇದಕ್ಕೂ ಮೊದಲು ಎಲ್ಲಿ ಕೆಲಸ ಮಾಡ್ತಾ ಇದ್ದೆ" ಎಂದು ಶಕುಂತಲಾ ಕೇಳುತ್ತಾರೆ. "ಆನಂದ್ ಮನೆಯಲ್ಲಿ ಇದ್ದೆ. ನಮ್ಮ ಮನೆ ಉತ್ತರಹಳ್ಳಿ ಸ್ಲಮ್‌ನಲ್ಲಿ ಇರೋದು" ಎಂದು ಹೇಳುತ್ತಾಳೆ. "ಮನೆ ಇದೆ ತಾನೇ, ಇಲ್ಲಿ ಯಾಕೆ ಬಂದೆ" ಎಂದು ಕೇಳುತ್ತಾರೆ.
(6 / 7)
"ಮನೆ ಇತ್ತು, ಕರೆಂಟ್ ಸಮಸ್ಯೆಯಾಗಿ ಮೊನ್ನೆ ಸುಟ್ಟು ಹೋಯ್ತು. ಅದಕ್ಕೆ ಅತ್ತಿಗೆ ಕ್ವಾಟರ್ಸ್‌ನಲ್ಲಿ ಇರಿ ಅಂದ್ರು" ಎಂದು ಹೇಳುತ್ತಾಳೆ. "ನಿನ್ನ ಅಮ್ಮ ಎಲ್ಲೂ ಕಾಣಿಸುವುದಿಲ್ಲ" ಎಂದು ಶಕುಂತಲಾದೇವಿ ಕೇಳುತ್ತಾರೆ. ಹೀಗೆ ಸಾಕಷ್ಟು ಪ್ರಶ್ನೆ ಕೇಳಿ ತಿಳಿದುಕೊಳ್ಳುತ್ತಾರೆ. ಈ ಮೂಲಕ ಶಕುಂತಾಳಗೆ ಈಕೆ ಗೌತಮ್ ತಂಗಿ ಎನ್ನುವುದು ಕನ್‌ಫರ್ಮ್ ಆಗುತ್ತದೆ. "ಬಲಿ ಆಗುವ ಕುರಿಯನ್ನು ಮನೆಯಲ್ಲಿಟ್ಟುಕೊಂಡು ಎಲ್ಲೆಲ್ಲೂ ಹುಡುಕುತ್ತಾ ಇದ್ದೇವೆ" ಎಂದು ಲಕ್ಷ್ಮಿಕಾಂತ್‌ನ ಬಳಿ ಶಕುಂತಲಾ ಹೇಳುತ್ತಾರೆ. ಆದಷ್ಟು ಬೇಗ ಇವರನ್ನು ಮುಗಿಸಬೇಕು ಎಂದು ಮಾತನಾಡುತ್ತಾರೆ.
ಇತರ ಗ್ಯಾಲರಿಗಳು