Deepavali: ದೀಪಾವಳಿಗೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವ ವೈಶಿಷ್ಟ್ಯ ತಿಳಿದಿದೆಯೇ? ಶ್ರೀರಾಮನಿಗೂ ಇದೆ ನಂಟು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Deepavali: ದೀಪಾವಳಿಗೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವ ವೈಶಿಷ್ಟ್ಯ ತಿಳಿದಿದೆಯೇ? ಶ್ರೀರಾಮನಿಗೂ ಇದೆ ನಂಟು

Deepavali: ದೀಪಾವಳಿಗೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವ ವೈಶಿಷ್ಟ್ಯ ತಿಳಿದಿದೆಯೇ? ಶ್ರೀರಾಮನಿಗೂ ಇದೆ ನಂಟು

  • Earthen lamps on Diwali: ವರ್ಷಗಟ್ಟಲೆ ಕಷ್ಟಪಟ್ಟು ಕುಂಬಾರ ಮಡಕೆ-ಹಣತೆಗಳನ್ನು ತಯಾರಿಸುತ್ತಾನೆ. ಆದರೆ ಆಧುನಿಕತೆಗೆ ಒಡ್ಡಿಕೊಳ್ಳುತ್ತಿರುವ ನಾವು ದೀಪಾವಳಿ ಬಂತೆಂದರೆ ಪಿಂಗಾಣಿ, ಪ್ಲಾಸ್ಟಿಕ್​ ಹಣತೆ ಕೊಳ್ಳುತ್ತೇವೆ. ಒಂದು ಸಮುದಾಯದ ಜೀವನ ರೂಪಿಸುವ ಮಣ್ಣಿನ ಹಣತೆಗಳಲ್ಲಿ ದೀಪಾವಳಿಗೆ ಏಕೆ ದೀಪ ಹಚ್ಚಬೇಕು? ಶ್ರೀರಾಮನಿಗೂ ಇದರ ನಂಟಿದೆ. ಅದರ ವೈಶಿಷ್ಟ್ಯ ಹೀಗಿದೆ..

ಎಲ್ಲರೂ ದೀಪಾವಳಿ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ಹೀಗಾಗಿ ದೀಪಗಳು ಈ ಹಬ್ಬದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಿಂದಿನಿಂದಲೂ ದೀಪಾವಳಿ ಹಬ್ಬಕ್ಕೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುತ್ತಾ ಬರಲಾಗಿದೆ. ಆದರೆ ಕೆಲ ವರ್ಷಗಳಿಂದ ಎಲ್ಲರೂ ಪಿಂಗಾಣಿ, ಪ್ಲಾಸ್ಟಿಕ್​ ಹಣತೆಗಳಿಗೆ ಮಾರು ಹೋಗಿದ್ದಾರೆ. ಇದು ಕುಂಬಾರಿಕೆ ವೃತ್ತಿ ಮಾಡುವವರ ಆದಾಯಕ್ಕೆ ಹೊಡೆತ ಮಾತ್ರವಲ್ಲ ಪರಿಸರಕ್ಕೆ ಮಾರಕ ಕೂಡ. ಇವನ್ನು ಖರೀದಿಸುವ ಮುನ್ನ ಮಣ್ಣಿನ ಹಣತೆಯ ಪ್ರಾಮುಖ್ಯತೆ ತಿಳಿದುಕೊಳ್ಳೋಣ. ದೀಪಾವಳಿಗೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುವ ವೈಶಿಷ್ಟ್ಯ ಏನು ತಿಳಿಯೋಣ ಬನ್ನಿ..  
icon

(1 / 5)

ಅಶ್ವಿನಿ ಮಾಸದಲ್ಲಿ ಬರುವ ದೀಪಾವಳಿ ಅಮಾವಾಸ್ಯೆಯಂದು ಭಗವಾನ್ ರಾಮನು ತನ್ನ ಪತ್ನಿ ಸೀತೆ ಮತ್ತು ಕಿರಿಯ ಸಹೋದರ ಲಕ್ಷ್ಮಣನೊಂದಿಗೆ 14 ವರ್ಷಗಳ ವನವಾಸವನ್ನು ಮುಗಿಸಿದ ನಂತರ ಅಯೋಧ್ಯೆಗೆ ಮರಳಿದನು ಎಂದು ನಂಬಲಾಗಿದೆ. ರಾಮನ ಸಾಮ್ರಾಜ್ಯದ ನಿವಾಸಿಗಳು ಅವರ ಹಿಂದಿರುಗುವಿಕೆಯಿಂದ ತುಂಬಾ ಸಂತೋಷಪಟ್ಟರು, ಸುತ್ತಮುತ್ತಲಿನ ಪ್ರದೇಶವನ್ನು ಮಣ್ಣಿನ ದೀಪಗಳಿಂದ ಬೆಳಗಿಸಿದರು. ಆ ಘೋರ ಕತ್ತಲೆಯ ಅಮಾವಾಸ್ಯೆ ರಾತ್ರಿಯಂದು ಅಯೋಧ್ಯೆಯು ಮಣ್ಣಿನ ದೀಪಗಳಿಂದ ಕಂಗೊಳಿಸಿತ್ತು, ಆಕಾಶ ಬೆಳಗಿತ್ತು ಎಂದು ನಂಬಲಾಗಿದೆ. ಹೀಗಾಗಿ ದೀಪಾವಳಿಯಲ್ಲಿ ಬೆಳಗುವ ಮಣ್ಣಿನ ಹಣತೆಗಳು ಪುರಾಣದ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿದೆ.  
icon

(2 / 5)

ಮಣ್ಣಿನ ದೀಪವನ್ನು ಬೆಳಗಿಸುವುದು ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ಗಾಳಿ, ಆಕಾಶವನ್ನು ಪ್ರತಿನಿಧಿಸುತ್ತದೆ. ಹಣತೆಗೆ ಬಳಸುವ ಬತ್ತಿ ಭೂಮಿಯನ್ನು, ದೀಪದ ಬೆಂಕಿಯು ಅಗ್ನಿಯನ್ನು, ಅದರ ಬೆಳಕು ಆಕಾಶವನ್ನು, ಅದರ ಹೊಗೆಯು ಗಾಳಿಯನ್ನು, ಅದಕ್ಕೆ ಬಳಸುವ ಎಣ್ಣೆಯು ನೀರನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಮಣ್ಣಿನ ಹಣತೆಯಿಂದ ದೀಪ ಬೆಳಗಿಸುವುದು ಸಾಂಕೇತಿಕವಾಗಿ ನಮ್ಮ ಮನೆ ಬಾಗಿಲಲ್ಲಿ  ಪಂಚಭೂತಗಳನ್ನು ಬೆಳಗಿದಂತಾಗುತ್ತದೆ. 
icon

(3 / 5)

ದೀಪಗಳು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಮಹತ್ವದ ಭಾಗವಾಗಿದೆ. ಮಣ್ಣಿನಿಂದ ತಯಾರಿಸಿದ ಹಣತೆಗಳನ್ನು ಹಬ್ಬ-ಹರಿದಿನಗಳಲ್ಲಿ ಬೆಳಗಿಸಲಾಗುತ್ತದೆ.  ಅವುಗಳಿಂದ ಹೊರಸೂಸುವ ಬೆಚ್ಚಗಿನ, ಪ್ರಕಾಶಮಾನವಾದ ಕಿರಣಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. 
icon

(4 / 5)

ಮಣ್ಣಿನ ಹಣತೆಯಿಂದ ಹೊರಸೂಸುವ ಬೆಳಕು ಸಮೃದ್ಧಿ, ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತವೆ. ವಿಜಯದ ಸಂಕೇತವನ್ನು ಸೂಚಿಸುತ್ತದೆ. ಕತ್ತಲೆಯಿಂದ ಬೆಳಕಿನೆಡೆ, ಅಜ್ಞಾನದಿಂಧ ಜ್ಞಾನದೆಡೆ ಹೋಗುವುದನ್ನು ಸೂಚಿಸುತ್ತದೆ. ಮಣ್ಣಿನ ಹಣತೆಯಿಂದ ದೀಪ ಬೆಳಗಿಸುವುದು ಕೋಪ, ದುರಾಸೆ ಮತ್ತು ಇತರ ದುರ್ಗುಣಗಳನ್ನು ಹೋಗಲಾಡಿಸುತ್ತದೆ. 
icon

(5 / 5)

ಇತರ ಗ್ಯಾಲರಿಗಳು