Shikhar Dhawan: ಗಬ್ಬರ್ ಅಬ್ಬರಕ್ಕೆ ರೆಕಾರ್ಡ್ಸ್ ಧೂಳೀಪಟ; ನಿವೃತ್ತಿ ಘೋಷಿಸಿದ ಶಿಖರ್ ಧವನ್ ಕ್ರಿಕೆಟ್ ದಾಖಲೆಗಳ ನೋಟ
- Shikhar Dhawan Records: ಕಳೆದ ಎರಡು ವರ್ಷಗಳಿಂದ ಭಾರತ ತಂಡದಲ್ಲಿ ಅವಕಾಶ ಪಡೆಯಲು ಪರದಾಟ ನಡೆಸುತ್ತಿದ್ದ 38 ವರ್ಷದ ಶಿಖರ್ ಧವನ್ ಅವರು ಆಗಸ್ಟ್ 24ರ ಶನಿವಾರ ಬೆಳ್ಳಂಬೆಳಗ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
- Shikhar Dhawan Records: ಕಳೆದ ಎರಡು ವರ್ಷಗಳಿಂದ ಭಾರತ ತಂಡದಲ್ಲಿ ಅವಕಾಶ ಪಡೆಯಲು ಪರದಾಟ ನಡೆಸುತ್ತಿದ್ದ 38 ವರ್ಷದ ಶಿಖರ್ ಧವನ್ ಅವರು ಆಗಸ್ಟ್ 24ರ ಶನಿವಾರ ಬೆಳ್ಳಂಬೆಳಗ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
(1 / 11)
2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿದ್ದ ಧವನ್, 13 ವರ್ಷಗಳ ನಂತರ ವಿದಾಯ ಘೋಷಿಸಿದ್ದಾರೆ. ಇದೇ ವೇಳೆ ದೇಶೀಯ ಕ್ರಿಕೆಟ್ಗೂ ನಿವೃತ್ತಿ ಹೇಳಿದ್ದಾರೆ. ಈ ಹಿನ್ನೆಲೆ ಅವರ ದಾಖಲೆಗಳ ನೋಟ ಹೀಗಿದೆ ನೋಡಿ.
(2 / 11)
1. ಟೆಸ್ಟ್ ಚೊಚ್ಚಲ ಪಂದ್ಯದಲ್ಲೇ ಅತಿವೇಗದ ಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಧವನ್ ಪಾತ್ರರಾಗಿದ್ದಾರೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ವೃತ್ತಿಜೀವನ ಆರಂಭಿಸಿದ್ದ ಧವನ್, ಕೇವಲ 85 ಎಸೆತಗಳಲ್ಲೇ ಶತಕ ಸಿಡಿಸಿದ್ದರು. ಅವರು ಈ ಟೆಸ್ಟ್‌ನಲ್ಲಿ 187 ರನ್‌ಗಳೊಂದಿಗೆ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
(3 / 11)
2. 100ನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಭಾರತದ ಏಕೈಕ ಕ್ರಿಕೆಟಿಗ ಎಂಬ ದಾಖಲೆ ಧವನ್ ಹೆಸರಿನಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ 10 ಮಂದಿ ಮಾತ್ರ ಈ ಸಾಧನೆ ಮಾಡಿದ್ದಾರೆ. ಅವರಲ್ಲಿ ಧವನ್ ಕೂಡ ಒಬ್ಬರು.
(4 / 11)
3. ಟಿ20 ಕ್ರಿಕೆಟ್‌ನಲ್ಲಿ ಡಕೌಟ್ ಆಗದೆಯೇ 61 ಇನ್ನಿಂಗ್ಸ್ ಆಡಿದ್ದಾರೆ ಧವನ್. ಮಾಜಿ ನಾಯಕ ಎಂಎಸ್ ಧೋನಿ (84 ಇನ್ನಿಂಗ್ಸ್) ನಂತರ ಈ ಸಾಧನೆಗೈದ ಭಾರತದ ಎರಡನೇ ಆಟಗಾರ ಎನಿಸಿದ್ದಾರೆ.
(5 / 11)
4. ಒಂದೇ ಪಂದ್ಯದಲ್ಲಿ 4 ಕ್ಯಾಚ್ ಪಡೆದ ಭಾರತದ ನಾಲ್ಕನೇ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮೊದಲ 3 ಸ್ಥಾನ ಪಡೆದಿದ್ದಾರೆ.
(6 / 11)
5. ಟೆಸ್ಟ್ ಕ್ರಿಕೆಟ್ನ ಒಂದೇ ಪಂದ್ಯದಲ್ಲಿ ಒಂದು ಇನ್ನಿಂಗ್ಸ್ನಲ್ಲಿ ಡಕ್ ಮತ್ತು ಮತ್ತೊಂದು ಇನ್ನಿಂಗ್ಸ್ನಲ್ಲಿ ಶತಕ ಗಳಿಸಿದ ದಾಖಲೆಯೂ ಧವನ್ ಹೆಸರಿನಲ್ಲಿದೆ.
(7 / 11)
6. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 90+ (ನೈಂಟೀಸ್) ರನ್ ಗಳಿಸಿ ಔಟಾದ ಮೂರನೇ ಆಟಗಾರ ಎನಿಸಿದ್ದಾರೆ ಧವನ್. ಸಚಿನ್ ತೆಂಡೂಲ್ಕರ್ (28) ಮತ್ತು ದ್ರಾವಿಡ್ (14) , ಧವನ್ (11 ಬಾರಿ) ಮೊದಲ ಮೂರು ಸ್ಥಾನದಲ್ಲಿದ್ದಾರೆ.
(8 / 11)
7. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ವೇಗದ 1,000 ರನ್ (ಜಂಟಿ ವೇಗದ), 2,000 ಮತ್ತು 3,000 ರನ್ ದಾಖಲಿಸಿದ ದಾಖಲೆಯನ್ನು ಧವನ್ ಹೊಂದಿದ್ದಾರೆ.
(9 / 11)
8. ಐಸಿಸಿ ಟೂರ್ನಿಗಳಲ್ಲಿ 1000 ರನ್ ತಲುಪಿದ (50 ಓವರ್ಗಳ ಟೂರ್ನಮೆಂಟ್) ವೇಗದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಅದು ಕೂಡ 65+ ಬ್ಯಾಟಿಂಗ್ ಸರಾಸರಿಯಲ್ಲಿ.
(10 / 11)
9. 2013ರ ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಧವನ್ ಲೀಡಿಂಗ್ ಸ್ಕೋರರ್ ಆಗಿದ್ದರು. 2015ರ ಏಕದಿನ ವಿಶ್ವಕಪ್ನಲ್ಲಿ 412 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯನಾಗಿದ್ದರು.
ಇತರ ಗ್ಯಾಲರಿಗಳು