ಮಾನಸಿಕ, ದೇಹದ ಆರೋಗ್ಯಕ್ಕಾಗಿ ಈ 6 ಸರಳ ಯೋಗಾಸನಗಳು ಪರಿಣಾಮಕಾರಿ: ನೀವೂ ಪ್ರಯತ್ನಿಸಿ-health 6 yoga poses that improve your mental health best yoga poses for beginners try yourself prk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಾನಸಿಕ, ದೇಹದ ಆರೋಗ್ಯಕ್ಕಾಗಿ ಈ 6 ಸರಳ ಯೋಗಾಸನಗಳು ಪರಿಣಾಮಕಾರಿ: ನೀವೂ ಪ್ರಯತ್ನಿಸಿ

ಮಾನಸಿಕ, ದೇಹದ ಆರೋಗ್ಯಕ್ಕಾಗಿ ಈ 6 ಸರಳ ಯೋಗಾಸನಗಳು ಪರಿಣಾಮಕಾರಿ: ನೀವೂ ಪ್ರಯತ್ನಿಸಿ

ಪ್ರತಿದಿನ ಯೋಗಾಸನವನ್ನು ಅಭ್ಯಾಸ ಮಾಡುವುದರಿಂದ ಹಲವು ಆರೋಗ್ಯ ಪ್ರಯೋಜನಗಳು ದೊರಕುತ್ತವೆ. ದಿನನಿತ್ಯ ಯೋಗಾಸನವನ್ನು ಮಾಡುವುದರಿಂದ ದೇಹ ಮತ್ತು ಮನಸ್ಸಿಗೆ ಪ್ರಯೋಜನಕಾರಿಯಾಗಿದೆ. ಮಾನಸಿಕ ಹಾಗೂ ದೇಹದ ಆರೋಗ್ಯಕ್ಕಾಗಿ ಈ ಏಳು ಯೋಗಾಸನಗಳು ಪರಿಣಾಮಕಾರಿ.

ಆರೋಗ್ಯವಾಗಿರಲು 6 ಯೋಗಾಸನಗಳು: ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮತ್ತು ಯೋಗ ಮಾಡುವುದು ಬಹಳ ಮುಖ್ಯ. ಯೋಗಾಸನ ಅಭ್ಯಾಸ ಮಾಡುವುದರಿಂದ ದಿನವಿಡೀ ಕ್ರಿಯಾಶೀಲವಾಗಿರಿಸಲು ಸಹಾಯ ಮಾಡುತ್ತದೆ. ಈ ಏಳು ಸರಳ ಯೋಗಾಸನಗಳನ್ನು ಅಭ್ಯಾಸ ಮಾಡಿ.
icon

(1 / 7)

ಸುಖಾಸನ: ಇದು ಸಂಸ್ಕೃತ ಪದವಾಗಿದ್ದು, ಸುಖ ಮತ್ತು ಆಸನ ಎಂಬ ಎರಡು ಪದಗಳಿಂದ ಕೂಡಿದೆ. ಈ ಆಸನವನ್ನು ಮಾಡುವುದರಿಂದ, ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ದೇಹವನ್ನು ಯಾವುದೇ ರೀತಿಯ ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. 
icon

(2 / 7)

ಸುಖಾಸನ: ಇದು ಸಂಸ್ಕೃತ ಪದವಾಗಿದ್ದು, ಸುಖ ಮತ್ತು ಆಸನ ಎಂಬ ಎರಡು ಪದಗಳಿಂದ ಕೂಡಿದೆ. ಈ ಆಸನವನ್ನು ಮಾಡುವುದರಿಂದ, ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ದೇಹವನ್ನು ಯಾವುದೇ ರೀತಿಯ ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. (freepik)

ಪರ್ವತ ಭಂಗಿ ಅಥವಾ ತಾಡಾಸನ: ಆರಂಭಿಕರಾಗಿದ್ದರೆ ಈ ಆಸನವನ್ನು ಮಾಡಬಹುದು. ಇದು ಬಹಳ ಸರಳವಾದ ಭಂಗಿಯಾಗಿದ್ದು, ಇದು ದೇಹವನ್ನು ಸಮತೋಲನಗೊಳಿಸಲು ಮತ್ತು ಸಮತೋಲನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
icon

(3 / 7)

ಪರ್ವತ ಭಂಗಿ ಅಥವಾ ತಾಡಾಸನ: ಆರಂಭಿಕರಾಗಿದ್ದರೆ ಈ ಆಸನವನ್ನು ಮಾಡಬಹುದು. ಇದು ಬಹಳ ಸರಳವಾದ ಭಂಗಿಯಾಗಿದ್ದು, ಇದು ದೇಹವನ್ನು ಸಮತೋಲನಗೊಳಿಸಲು ಮತ್ತು ಸಮತೋಲನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸೂರ್ಯ ನಮಸ್ಕಾರ: ಸೂರ್ಯ ನಮಸ್ಕಾರ ಮಾಡುತ್ತಾ ದಿನವನ್ನು ಪ್ರಾರಂಭಿಸುವುದು ಉತ್ತಮ ಮಾರ್ಗವಾಗಿದೆ. ದೇಹವನ್ನು ಸಮತೋಲನಗೊಳಿಸಲು, ಕಾಲುಗಳು ಮತ್ತು ಪಾದಗಳ ಒಟ್ಟಾರೆ ಶಕ್ತಿಯನ್ನು ಹೆಚ್ಚಿಸಲು ಈ ಆಸನ ಉತ್ತಮವಾಗಿದೆ. ಒಂದೇ ಕಾಲಿನ ಮೇಲೆ ನಿಲ್ಲುವುದು, ಸೂರ್ಯನಿಗೆ ನಮಸ್ಕರಿಸಲು ಕೈಗಳನ್ನು ನೇರಗೊಳಿಸುವುದು ಸೇರಿದಂತೆ ಮುಂತಾದ ವಿವಿಧ ಭಂಗಿಗಳಿಂದ ಇದನ್ನು ನಿರ್ವಹಿಸಬೇಕು.
icon

(4 / 7)

ಸೂರ್ಯ ನಮಸ್ಕಾರ: ಸೂರ್ಯ ನಮಸ್ಕಾರ ಮಾಡುತ್ತಾ ದಿನವನ್ನು ಪ್ರಾರಂಭಿಸುವುದು ಉತ್ತಮ ಮಾರ್ಗವಾಗಿದೆ. ದೇಹವನ್ನು ಸಮತೋಲನಗೊಳಿಸಲು, ಕಾಲುಗಳು ಮತ್ತು ಪಾದಗಳ ಒಟ್ಟಾರೆ ಶಕ್ತಿಯನ್ನು ಹೆಚ್ಚಿಸಲು ಈ ಆಸನ ಉತ್ತಮವಾಗಿದೆ. ಒಂದೇ ಕಾಲಿನ ಮೇಲೆ ನಿಲ್ಲುವುದು, ಸೂರ್ಯನಿಗೆ ನಮಸ್ಕರಿಸಲು ಕೈಗಳನ್ನು ನೇರಗೊಳಿಸುವುದು ಸೇರಿದಂತೆ ಮುಂತಾದ ವಿವಿಧ ಭಂಗಿಗಳಿಂದ ಇದನ್ನು ನಿರ್ವಹಿಸಬೇಕು.(Unsplash)

ವೃಕ್ಷಾಸನ: ಮರದ ಭಂಗಿ ಅಥವಾ ವೃಕ್ಷಾಸನವು ನಿಂತಿರುವ ಯೋಗ ಭಂಗಿಯಾಗಿದ್ದು, ಇದು ಕಾಲುಗಳು ಮತ್ತು ಹೊಟ್ಟೆಯಲ್ಲಿ ಬಲವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಸಮತೋಲನ ಕಾಪಾಡಲು ಮತ್ತು ಸಾವಧಾನತೆಯನ್ನು ಸುಧಾರಿಸಲು ಈ ಭಂಗಿಯು ಅತ್ಯುತ್ತಮವಾಗಿದೆ. 
icon

(5 / 7)

ವೃಕ್ಷಾಸನ: ಮರದ ಭಂಗಿ ಅಥವಾ ವೃಕ್ಷಾಸನವು ನಿಂತಿರುವ ಯೋಗ ಭಂಗಿಯಾಗಿದ್ದು, ಇದು ಕಾಲುಗಳು ಮತ್ತು ಹೊಟ್ಟೆಯಲ್ಲಿ ಬಲವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಸಮತೋಲನ ಕಾಪಾಡಲು ಮತ್ತು ಸಾವಧಾನತೆಯನ್ನು ಸುಧಾರಿಸಲು ಈ ಭಂಗಿಯು ಅತ್ಯುತ್ತಮವಾಗಿದೆ. (Unsplash )

ಬೆಕ್ಕು ಮತ್ತು ಹಸು ಭಂಗಿ: ಆರಂಭಿಕರಿಗಾಗಿ ಇದೊಂದು ಪರಿಣಾಮಕಾರಿ ಆಸನವಾಗಿದೆ. ಈ ಆಸನವು ಬೆನ್ನು ನೋವು ಅಥವಾ ಇತರ ಬೆನ್ನುಮೂಳೆಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಗಮನ ಮತ್ತು ಒತ್ತಡವನ್ನು ಸುಧಾರಿಸಲು ಸಹ ಪರಿಣಾಮಕಾರಿಯಾಗಿದೆ.
icon

(6 / 7)

ಬೆಕ್ಕು ಮತ್ತು ಹಸು ಭಂಗಿ: ಆರಂಭಿಕರಿಗಾಗಿ ಇದೊಂದು ಪರಿಣಾಮಕಾರಿ ಆಸನವಾಗಿದೆ. ಈ ಆಸನವು ಬೆನ್ನು ನೋವು ಅಥವಾ ಇತರ ಬೆನ್ನುಮೂಳೆಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಗಮನ ಮತ್ತು ಒತ್ತಡವನ್ನು ಸುಧಾರಿಸಲು ಸಹ ಪರಿಣಾಮಕಾರಿಯಾಗಿದೆ.(Twitter)

ಶವಾಸನ: ನಿರಂತರವಾಗಿ ವ್ಯಾಯಾಮಗಳನ್ನು ಮಾಡಿದ ನಂತರ ದೇಹಕ್ಕೆ ವಿಶ್ರಾಂತಿ ನೀಡುವುದು ಅತ್ಯಗತ್ಯ. ಹೀಗಾಗಿ ಯೋಗಾಸನದ ಕೊನೆಯಲ್ಲಿ ಈ ಭಂಗಿಯನ್ನು ಅಭ್ಯಾಸ ಮಾಡಬಹುದು. ದೇಹವನ್ನು ವಿಶ್ರಾಂತಿ ಮಾಡಲು ಮತ್ತು ಹೃದಯ ಬಡಿತವನ್ನು ಸಾಮಾನ್ಯಗೊಳಿಸಲು ಶವಾಸನ ಪ್ರಮುಖ ಪಾತ್ರ ವಹಿಸುತ್ತದೆ. ಸ್ನಾಯುಗಳನ್ನು ಸಡಿಲಗೊಳಿಸಲು ಮತ್ತು ಮನಸ್ಸನ್ನು ವಿಶ್ರಾಂತಿ ಮಾಡಲು ಸಹಕಾರಿ.
icon

(7 / 7)

ಇತರ ಗ್ಯಾಲರಿಗಳು