ಸಾವಿರ ಕೋಟಿ ಸುರಿದ್ರೂ ಬಾಕ್ಸ್ ಆಫೀಸಲ್ಲಿ ಮುಗ್ಗರಿಸಿದ ಜಾನ್ ಕಾರ್ಟರ್; ಚಿತ್ರ ಬಿಡುಗಡೆ ನಂತರ ನಿರ್ದೇಶಕ, ನಾಯಕಿ ಇಬ್ಬರೂ ನಾಪತ್ತೆ
ಕೋಟಿ ಕೋಟಿ ದುಡ್ಡು ಸುರಿದು ತಯಾರಾದ ಎಷ್ಟೋ ಸಿನಿಮಾಗಳು ನೆಲ ಕಚ್ಚಿವೆ. ಬಾಕ್ಸ್ ಆಫೀಸಿನಲ್ಲಿ ಲಾಭ ಇರಲಿ, ಖರ್ಚು ಮಾಡಿದ ಹಣವನ್ನು ಕೂಡಾ ವಾಪಸ್ ತುಂಬಿ ಕೊಡುವಲ್ಲಿಯೂ ಹಿಂದೆ ಸರಿದಿವೆ. ಭಾರತೀಯ ಸಿನಿಮಾಗಳು ಮಾತ್ರವಲ್ಲ, ಹಾಲಿವುಡ್ ಚಿತ್ರಗಳು ಕೂಡಾ ಇದಕ್ಕೆ ಹೊರತಾಗಿಲ್ಲ.
(1 / 7)
2012 ರಲ್ಲಿ ತೆರೆ ಕಂಡ ಆಂಡ್ರ್ಯೂ ಸ್ಟಾಂಟನ್ ನಿರ್ದೇಶನದ ಸೈನ್ಸ್ ಫಿಕ್ಷನ್ ಸಿನಿಮಾ ಜಾನ್ ಕಾರ್ಟರ್ ಚಿತ್ರಕ್ಕೆ 263 ಮಿಲಿಯನ್ ಡಾಲರ್ ಖರ್ಚು ಮಾಡಲಾಯ್ತು. ಚಿತ್ರಮಂದಿರಗಳಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಬಾಕ್ಸ್ ಆಫೀಸಿನಲ್ಲಿ ಲಾಭ ಗಳಿಸುವಲ್ಲಿ ಹಿಂದೆ ಉಳಿಯಿತು. ಈ ಸಿನಿಮಾ ಗಳಿಸಿದ್ದು 220 ಮಿಲಿಯನ್ ಡಾಲರ್‌ಗಿಂತಲೂ ಕಡಿಮೆ.(PC: Twitter)
(2 / 7)
ಜಾನ್ ಕಾರ್ಟರ್, ಅಡ್ವೆಂಚರ್ ಚಿತ್ರವಾಗಿದ್ದು ಎಡ್ಗರ್ ರೈಸ್ ಬರೋಸ್ ಅವರ ಕೃತಿಯೊಂದರ ಆಧಾರದ ಮೇಲೆ ತಯಾರಾದ ಸಿನಿಮಾವಾಗಿದೆ. ಮಂಗಳ ಗ್ರಹದಲ್ಲಿ ದೈತ್ಯ ಜೀವಿಗಳೊಂದಿಗೆ ಹೋರಾಡಿ ರಾಜಕುಮಾರಿಯನ್ನು ರಕ್ಷಿಸುವ ನಾಯಕನ ಕಥೆಯಾಗಿದೆ.
(3 / 7)
ಸಿನಿಮಾ ಬಿಡುಗಡೆ ಆದಾಗ ಚಿತ್ರಮಂದಿರದಲ್ಲಿ ನೋಡಿದ ಜನರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ತೋರಿಸಿದ ಅದ್ಭುತ ಪಾತ್ರಗಳು, ಪರಿಕಲ್ಪನೆಯನ್ನು ಮೆಚ್ಚಿದ್ದರು.
(4 / 7)
ಹಾಲಿವುಡ್ ಸಿನಿಮಾ ಇತಿಹಾಸದಲ್ಲಿ ಜಾನ್ ಕಾರ್ಟರ್, ದೊಡ್ಡ ಸೋಲು ಕಂಡ ಪ್ರಮುಖ ಸಿನಿಮಾ. ಜಿಮ್ ಮಾರೊಸ್, ಕೊಲಿನ್ ವಿಲ್ಸನ್, ಲಿಂಡ್ಸೆ ಕೊಲಿನ್ಸ್ ಮೂವರೂ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
(5 / 7)
ಈ ಸಿನಿಮಾ ಸೋಲು ನಿರ್ದೇಶಕ ಆಂಡ್ಯ್ರೂ ಸ್ಟೌಂಟನ್ ಮೇಲೆ ಬಹಳ ಪ್ರಭಾವ ಬೀರಿತ್ತು. ಚಿತ್ರದ ವೈಫಲ್ಯವನ್ನು ಅರಗಿಸಿಕೊಳ್ಳದ ಆತ ಅಂದಿನಿಂದ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ.
(6 / 7)
ಅಷ್ಟೇ ಅಲ್ಲ, ಈ ಸಿನಿಮಾ ಬಿಡುಗಡೆ ನಂತರ ನಾಯಕ 5-6 ಸಿನಿಮಾಗಳಲ್ಲಿ ನಟಿಸಿದರೂ ನಾಯಕಿ ಲಿನ್ ಕಾಲಿನ್ಸ್ ಕೂಡಾ ಸಿನಿಮಾಗಳಿಂದ ದೂರ ಇದ್ದಾರೆ. ಅಂದಿನಿಂದ ಆಕೆಗೆ ಸಿನಿಮಾಗಳಲ್ಲಿ ಹೇಳಿಕೊಳ್ಳುವಂತ ಅವಕಾಶ ದೊರೆತಿಲ್ಲ.
ಇತರ ಗ್ಯಾಲರಿಗಳು