Cricketers Divorce: ಹಾರ್ದಿಕ್ ಪಾಂಡ್ಯಗೂ ಮುನ್ನ ವಿವಾಹ ವಿಚ್ಛೇದನ ಪಡೆದಿರುವ ಭಾರತೀಯ ಕ್ರಿಕೆಟಿಗರ ಪಟ್ಟಿ
- Hardik Pandya: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರು ವಿಚ್ಛೇದನ ಪಡೆಯುವುದಕ್ಕೂ ಮುನ್ನ ಐವರು ಸ್ಟಾರ್ ಕ್ರಿಕೆಟಿಗರು ದಾಂಪತ್ಯ ಜೀವನದಲ್ಲಿ ವಿಚ್ಛೇದನದ ಆಘಾತ ಎದುರಿಸಿದ್ದಾರೆ.
- Hardik Pandya: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರು ವಿಚ್ಛೇದನ ಪಡೆಯುವುದಕ್ಕೂ ಮುನ್ನ ಐವರು ಸ್ಟಾರ್ ಕ್ರಿಕೆಟಿಗರು ದಾಂಪತ್ಯ ಜೀವನದಲ್ಲಿ ವಿಚ್ಛೇದನದ ಆಘಾತ ಎದುರಿಸಿದ್ದಾರೆ.
(1 / 6)
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಜುಲೈ 18ರಂದು ಅಧಿಕೃತವಾಗಿ ವಿಚ್ಛೇದನ ಪಡೆದರು. ಆ ಮೂಲಕ 4 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದರು. ಆದರೆ, ಹಾರ್ದಿಕ್-ನತಾಶಾಗೂ ಮುನ್ನ ಕ್ರಿಕೆಟ್ ಕ್ಷೇತ್ರದಲ್ಲಿ ಪ್ರಮುಖ ಕ್ರಿಕೆಟರ್ಸ್ ತಮ್ಮ ಪತ್ನಿಯರಿಂದ ವಿಚ್ಛೇದನ ಪಡೆದಿದ್ದಾರೆ. ಯಾರೆಲ್ಲಾ ಡಿವೋರ್ಸ್ ಪಡೆದಿದ್ದರು ಎಂಬುದರ ಪಟ್ಟಿಯನ್ನೊಮ್ಮೆ ನೋಡೋಣ.
(2 / 6)
ಸಚಿನ್ ತೆಂಡೂಲ್ಕರ್ ಆಪ್ತ ಸ್ನೇಹಿತನಾಗಿದ್ದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರು ತಮ್ಮ ಬಾಲ್ಯದ ಗೆಳತಿ ನೋಯೆಲ್ಲಾ ಲೂಯಿಸ್ ಎಂಬವರನ್ನು 1998ರಲ್ಲಿ ವಿವಾಹವಾದರು. ಆದರೆ, ಕೆಲವೇ ವರ್ಷಗಳಲ್ಲಿ ಪತ್ನಿಯಿಂದ ನಿಂದನೆಯ ಆರೋಪಕ್ಕೆ ಗುರಿಯಾದರು. ಬಳಿಕ ಇಬ್ಬರ ನಡುವೆ ಮನಸ್ತಾಪ ಹೆಚ್ಚಾದ ಕಾರಣ ಬೇರ್ಪಟ್ಟರು.
(3 / 6)
ದಿನೇಶ್ ಕಾರ್ತಿಕ್ ತನ್ನ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು 2007ರಲ್ಲಿ ಅಂದರೆ 21ನೇ ವಯಸ್ಸಿನಲ್ಲಿ ವಿವಾಹವಾದರು. 5 ವರ್ಷಗಳ ನಂತರ ಇವರಿಬ್ಬರ ದಾಂಪತ್ಯ ಜೀವನ ಮುರಿದು ಬಿತ್ತು. ಕ್ರಿಕೆಟಿಗ ಮುರಳಿ ವಿಜಯ್, ಕಾರ್ತಿಕ್ ಅವರ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದರು. ವಿಷಯ ತಿಳಿದ ಡಿಕೆ ನಿಕಿತಾಗೆ ವಿಚ್ಛೇದನ ನೀಡಿದ್ದರು. ಬಳಿಕ ಡಿಕೆ, 2015ರಲ್ಲಿ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ಪ್ರೀತಿಸಿ ವಿವಾಹವಾದರು.
(4 / 6)
ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ವಿಚ್ಛೇದನ ಪಡೆದಿದ್ದಾರೆ. ತನಗಿಂತ 10 ವರ್ಷಗಳ ದೊಡ್ಡವರಾದ ಆಯೇಷಾ ಮುಖರ್ಜಿ ಅವರನ್ನು 2012ರಲ್ಲಿ ಧವನ್ ವಿವಾಹವಾಗಿದ್ದರು. ಆದರೆ, 11 ವರ್ಷಗಳ ದಾಂಪತ್ಯ ಜೀವನ ನಡೆಸಿದ ಈ ಜೋಡಿ 2023ರಲ್ಲಿ ಪ್ರತ್ಯೇಕಗೊಂಡರು.
(5 / 6)
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ 2014ರಲ್ಲಿ ಹಸಿನ್ ಜಾನ್ರನ್ನು ವರಿಸಿದರು. ಆದರೆ 4 ವರ್ಷಗಳ ನಂತರ ಹಸಿನ್ ವಿಚ್ಛೇದನ ನೀಡಿದರು. ಹಸಿನ್ ಅವರು ಶಮಿ ವಿರುದ್ಧ ಅಕ್ರಮ ಸಂಬಂಧ ಹಾಗೂ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ.
ಇತರ ಗ್ಯಾಲರಿಗಳು