ಈ ರೈಲಿನಿಂದ ಬಂದ ವಾರ್ಷಿಕ ಆದಾಯ 176 ಕೋಟಿ ರೂಪಾಯಿ; ಶತಾಬ್ದಿ ಅಥವಾ ವಂದೇ ಭಾರತ್ ಅಲ್ಲವೇ ಅಲ್ಲ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ರೈಲಿನಿಂದ ಬಂದ ವಾರ್ಷಿಕ ಆದಾಯ 176 ಕೋಟಿ ರೂಪಾಯಿ; ಶತಾಬ್ದಿ ಅಥವಾ ವಂದೇ ಭಾರತ್ ಅಲ್ಲವೇ ಅಲ್ಲ!

ಈ ರೈಲಿನಿಂದ ಬಂದ ವಾರ್ಷಿಕ ಆದಾಯ 176 ಕೋಟಿ ರೂಪಾಯಿ; ಶತಾಬ್ದಿ ಅಥವಾ ವಂದೇ ಭಾರತ್ ಅಲ್ಲವೇ ಅಲ್ಲ!

  • Indias Most Profitable Trains: 2022 ಮತ್ತು 2023ರ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೇನಲ್ಲಿ ಅತಿಹೆಚ್ಚು ಆದಾಯ ತಂದುಕೊಟ್ಟ ರೈಲು ಯಾವುದು? ಆದರೆ ಎಲ್ಲರಿಗೂ ಚಿರಪರಿಚಿತವಾಗಿರುವ ಶತಾಬ್ದಿ ಮತ್ತು ವಂದೇ ಭಾರತ್ ಅಲ್ಲವೇ ಅಲ್ಲ. ಹಾಗಿದ್ದರೆ ಯಾವುದು? ಇಲ್ಲಿದೆ ಉತ್ತರ.

ದೇಶದಲ್ಲಿ ರೈಲು ಸೇವೆ ವಿಶಾಲವಾಗಿದೆ. ರೈಲಿನ ಮೂಲಕ ಪ್ರಯಾಣ ಬೆಳೆಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರೈಲುಗಳಿಗೆ ಬೇಡಿಕೆ ಅಧಿಕವಾಗುತ್ತಿದ್ದು, ರೈಲ್ವೆ ಮಂಡಳಿಯ ಆದಾಯವೂ ದುಪ್ಪಟ್ಟಾಗುತ್ತಿದೆ. ಇದು ದೇಶದ ಆರ್ಥಿಕತೆಯ ಮೇಲೂ ಪ್ರಮುಖ ಪಾತ್ರವಹಿಸುತ್ತಿದೆ.
icon

(1 / 8)

ರಾಜಧಾನಿ, ಶತಾಬ್ದಿ, ದುರಂತೋ ಮತ್ತು ವಂದೇ ಭಾರತ್ ಸೇರಿದಂತೆ ಎಕ್ಸ್​​ಪ್ರೆಸ್ ಮತ್ತು ಪ್ಯಾಸೆಂಜರ್​ ರೈಲುಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಜನರ ಓಡಾಟ ಹೆಚ್ಚಿದ್ದು, ದೂರದ ಮತ್ತು ಅಂತಾರಾಜ್ಯ ಪ್ರಯಾಣ ಬೆಳೆಸುವವರು ತಿಂಗಳ ಮೊದಲೇ ಟಿಕೆಟ್ ಬುಕ್ ಮಾಡಿಡುವಂತಾಗಿದೆ.
icon

(2 / 8)

ಈ ಪಾಟಿ ಬೇಡಿಕೆ ಹೆಚ್ಚಾಗಿರುವ ಕಾರಣ ಭಾರತೀಯ ರೈಲ್ವೆಯಲ್ಲಿ ಯಾವ ಹೆಚ್ಚು ಆದಾಯ ಗಳಿಸಿದ ರೈಲು ಯಾವುದು? ಎಲ್ಲರೂ ಊಹಿಸಿರುವುದು ಒಂದೇ ಒಂದು ಅದೇ ವಂದೇ ಭಾರತ್ ರೈಲು. ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿರುವ ಕಾರಣ ವಂದೇ ಭಾರತ್ ಆದಾಯ ಹೆಚ್ಚು ಪಡೆಯುತ್ತಿದೆ ಎನ್ನಲಾಗಿದೆ. ಆದರೆ, ಅದು ತಪ್ಪು.
icon

(3 / 8)

ಭಾರತೀಯ ರೈಲ್ವೆಗೆ ಹೆಚ್ಚು ಲಾಭದಾಯಕ ರೈಲುಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅಥವಾ ಶತಾಬ್ದಿ ಎಕ್ಸ್‌ಪ್ರೆಸ್ ಮೊದಲ ಸ್ಥಾನಗಳಲ್ಲಿ ಸ್ಥಾನ ಪಡೆದಿಲ್ಲ. ರಾಜಧಾನಿ ರೈಲುಗಳಿಂದ ಉತ್ಪತ್ತಿಯಾಗುವ ಆದಾಯವು ಅಗ್ರಸ್ಥಾನದಲ್ಲಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ಗಳಿಕೆಯ ವಿಷಯದಲ್ಲಿ ಅಗ್ರ ಸ್ಥಾನವನ್ನು ಹೊಂದಿದೆ.
icon

(4 / 8)

ವರದಿಯ ಪ್ರಕಾರ, ರೈಲು ಸಂಖ್ಯೆ-22692 ಹಜರತ್ ನಿಜಾಮುದ್ದೀನ್​​ನಿಂದ ಕೆಎಸ್‌ಆರ್ ಬೆಂಗಳೂರಿಗೆ ಪ್ರಯಾಣಿಸುವ ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ಉನ್ನತ ಆದಾಯ ಗಳಿಸಿದೆ. 2022-23ರ ಆರ್ಥಿಕ ವರ್ಷದಲ್ಲಿ ಈ ರೈಲು 509,510 ಪ್ರಯಾಣಿಕರನ್ನು ಸಾಗಿಸಿದೆ. ರೈಲ್ವೆಗೆ ಅಂದಾಜು 1,76,06,66,339 ರೂಪಾಯಿ ಆದಾಯ ಗಳಿಸಿದೆ. ಅಂದರೆ 176+ ಕೋಟಿ ರೂಪಾಯಿ ಆದಾಯ ಬಂದಿದೆ.
icon

(5 / 8)

ವರದಿಯ ಪ್ರಕಾರ, ರೈಲು ಸಂಖ್ಯೆ-22692 ಹಜರತ್ ನಿಜಾಮುದ್ದೀನ್​​ನಿಂದ ಕೆಎಸ್‌ಆರ್ ಬೆಂಗಳೂರಿಗೆ ಪ್ರಯಾಣಿಸುವ ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ಉನ್ನತ ಆದಾಯ ಗಳಿಸಿದೆ. 2022-23ರ ಆರ್ಥಿಕ ವರ್ಷದಲ್ಲಿ ಈ ರೈಲು 509,510 ಪ್ರಯಾಣಿಕರನ್ನು ಸಾಗಿಸಿದೆ. ರೈಲ್ವೆಗೆ ಅಂದಾಜು 1,76,06,66,339 ರೂಪಾಯಿ ಆದಾಯ ಗಳಿಸಿದೆ. ಅಂದರೆ 176+ ಕೋಟಿ ರೂಪಾಯಿ ಆದಾಯ ಬಂದಿದೆ.(indiarailinfo.com )

ಭಾರತೀಯ ರೈಲ್ವೆಗೆ ಎರಡನೇ ಅತ್ಯಂತ ಲಾಭದಾಯಕ ರೈಲು ಸೀಲ್ದಾ ರಾಜಧಾನಿ ಎಕ್ಸ್‌ಪ್ರೆಸ್ ಆಗಿದೆ. ಇದು ಕೋಲ್ಕತ್ತಾ ಮತ್ತು ನವದೆಹಲಿ ಸಂಪರ್ಕಿಸುತ್ತದೆ. ರೈಲು ಸಂಖ್ಯೆ 12314. ಸೀಲ್ದಾ ರಾಜಧಾನಿ ಎಕ್ಸ್‌ಪ್ರೆಸ್, 2022-23ರ ಆರ್ಥಿಕ ವರ್ಷದಲ್ಲಿ 509,164 ಪ್ರಯಾಣಿಕರನ್ನು ಸಾಗಿಸಿದೆ. ಅಂದಾಜು 1,28,81,69,274 ರೂಪಾಯಿ ಆದಾಯವನ್ನು ಗಳಿಸಿದೆ.
icon

(6 / 8)

ಆದರೆ, ಇದು ಆಯಾ ರೈಲುಗಳ 2022 ಮತ್ತು 2023ರ ಆರ್ಥಿಕ ವರ್ಷದ ಆದಾಯವಷ್ಟೆ. ಒಟ್ಟಾರೆ ಭಾರತದ ರೈಲ್ವೆಯಲ್ಲಿ ವಾರ್ಷಿಕ 2.40 ಲಕ್ಷ ಕೋಟಿ ಆದಾಯ ಬಂದಿದೆ. 2023-24 ಆರ್ಥಿಕ ವರ್ಷದಲ್ಲಿ ಈ ಆದಾಯ ಬಂದಿದೆ. ಅಂದರೆ ಇದು 2023ರ ಮಾರ್ಚ್​​ 15 ರಿಂದ 2024ರ ಮಾರ್ಚ್ 15ರ ತನಕದ ಲೆಕ್ಕ.
icon

(7 / 8)

ಭಾರತವು ವಿಶ್ವದಲ್ಲಿ 4ನೇ ಅತಿದೊಡ್ಡ ರೈಲ್ವೆ ಜಾಲನ್ನು ಹೊಂದಿದೆ, ಪ್ರತಿದಿನ 2 ಕೋಟಿ ಜನರು ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಬೆಳೆಸುತ್ತಾರೆ. ದೇಶದ ಹಳಿಗಳಾದ್ಯಂತ ಪ್ರತಿದಿನ 13,452 ಕ್ಕೂ ಹೆಚ್ಚು ರೈಲುಗಳು ಕಾರ್ಯನಿರ್ವಹಿಸುತ್ತವೆ.
icon

(8 / 8)

ಇತರ ಗ್ಯಾಲರಿಗಳು