ಕನ್ನಡ ಸುದ್ದಿ  /  Photo Gallery  /  Kannada Small Screen News Actress Manvita Kamath Has Played A Cameo Role In Anna Thangi Serial On Uday Tv Mnk

Manvita Harish Kamath: ಅಣ್ಣ ತಂಗಿ ಧಾರಾವಾಹಿಯಲ್ಲಿ ಮಾನ್ವಿತಾ ಕಾಮತ್;‌ ಸಿನಿಮಾ ಬಿಟ್ಟು ಕಿರುತೆರೆಗೆ ಬಂದ್ರಾ ಟಗರು ಪುಟ್ಟಿ?

  • Manvita Harish Kamath: ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ಸದ್ಯ ಕೆಲ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಸೀರಿಯಲ್‌ಗಳತ್ತಲೂ ಅವರು ದೃಷ್ಟಿ ನೆಟ್ಟಿದ್ದಾರೆ. ಹಾಗಂತ ಇದೇ ಮೊದಲ ಬಾರಿ ಅವರು ಕಿರುತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಕಳೆದ ಎರಡು ವರ್ಷದ ಹಿಂದೆ ಕನ್ನಡತಿ ಧಾರಾವಾಹಿಯಲ್ಲಿ ಗೆಸ್ಟ್‌ ರೋಲ್‌ ಮಾಡಿದ್ದರು.

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣ ತಂಗಿ ಧಾರಾವಾಹಿಯಲ್ಲಿ ಇದೀಗ ರೋಚಕ ತಿರುವು ಘಟಿಸುತ್ತಿದೆ. ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ಸೀರಿಯಲ್‌ಗೆ ಎಂಟ್ರಿಯಾಗುತ್ತಿದ್ದಾರೆ. 
icon

(1 / 5)

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣ ತಂಗಿ ಧಾರಾವಾಹಿಯಲ್ಲಿ ಇದೀಗ ರೋಚಕ ತಿರುವು ಘಟಿಸುತ್ತಿದೆ. ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ಸೀರಿಯಲ್‌ಗೆ ಎಂಟ್ರಿಯಾಗುತ್ತಿದ್ದಾರೆ. ((Instagram/ Manvita Harish Kamath))

ಉದಯ ಟಿವಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಅಣ್ಣ ತಂಗಿ ಸೀರಿಯಲ್‌ ಕಥೆ ಕುತೂಹಲದ ಘಟ್ಟ ತಲುಪುತ್ತಿದೆ. ಹೀಗಿರುವಾಗಲೇ ನಟಿ ಮಾನ್ವಿತಾ ಕಾಮತ್‌ ಸಹ ಅತಿಥಿ ಪಾತ್ರದಲ್ಲಿ ಇದೇ ಧಾರಾವಾಹಿಯಲ್ಲಿ ಜೂನ್‌ 12ರಿಂದ ಕಾಣಿಸಿಕೊಳ್ಳಲಿದ್ದಾರೆ. 
icon

(2 / 5)

ಉದಯ ಟಿವಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಅಣ್ಣ ತಂಗಿ ಸೀರಿಯಲ್‌ ಕಥೆ ಕುತೂಹಲದ ಘಟ್ಟ ತಲುಪುತ್ತಿದೆ. ಹೀಗಿರುವಾಗಲೇ ನಟಿ ಮಾನ್ವಿತಾ ಕಾಮತ್‌ ಸಹ ಅತಿಥಿ ಪಾತ್ರದಲ್ಲಿ ಇದೇ ಧಾರಾವಾಹಿಯಲ್ಲಿ ಜೂನ್‌ 12ರಿಂದ ಕಾಣಿಸಿಕೊಳ್ಳಲಿದ್ದಾರೆ. ((Instagram/ Manvita Harish Kamath))

ʻಅಣ್ಣ ತಂಗಿʼಯ ಶಿವಣ್ಣನಿಗೆ ತಹಶೀಲ್ದಾರ್ ಸಂಧ್ಯಾ ಮೇಲೆ ಪ್ರೀತಿ. ಆದರೆ ಸೋದರ ಮಾವನ ಮಾತಿಗೆ ಕಟ್ಟುಬಿದ್ದು ಅವನ ಮಗಳು ಜ್ಯೋತಿಗೆ ತಾಳಿಕಟ್ಟಲು ಮುಂದಾಗಿದ್ದಾನೆ. ಅಣ್ಣನ ಪ್ರೀತಿಯ ವಿಷಯ ತಿಳಿದ ತಂಗಿ ತುಳಸಿ ಹೇಗಾದರೂ ಮಾಡಿ ಸಂಧ್ಯಾ ಜೊತೆಗೇ ಮದುವೆ ಮಾಡಿಸಲು ಶಪಥ ತೊಟ್ಟಿದ್ದಾಳೆ. 
icon

(3 / 5)

ʻಅಣ್ಣ ತಂಗಿʼಯ ಶಿವಣ್ಣನಿಗೆ ತಹಶೀಲ್ದಾರ್ ಸಂಧ್ಯಾ ಮೇಲೆ ಪ್ರೀತಿ. ಆದರೆ ಸೋದರ ಮಾವನ ಮಾತಿಗೆ ಕಟ್ಟುಬಿದ್ದು ಅವನ ಮಗಳು ಜ್ಯೋತಿಗೆ ತಾಳಿಕಟ್ಟಲು ಮುಂದಾಗಿದ್ದಾನೆ. ಅಣ್ಣನ ಪ್ರೀತಿಯ ವಿಷಯ ತಿಳಿದ ತಂಗಿ ತುಳಸಿ ಹೇಗಾದರೂ ಮಾಡಿ ಸಂಧ್ಯಾ ಜೊತೆಗೇ ಮದುವೆ ಮಾಡಿಸಲು ಶಪಥ ತೊಟ್ಟಿದ್ದಾಳೆ. ((Instagram/ Manvita Harish Kamath))

ಸೆಲಿಬ್ರಿಟಿಯಾಗಿ ಮದುವೆಗೆ ಬರುವ ಮಾನ್ವಿತಾ ಇಲ್ಲಿ ಎಲ್ಲ ಸರಿ ಇಲ್ಲ ಎನ್ನುವದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಶಿವಣ್ಣ ಅವನಿಷ್ಟದ ಹುಡುಗಿ ಜೊತೆ ಮದುವೆಯಾಗಲು ಮಾನ್ವಿತಾ ಹೇಗೆ ಸಹಾಯ ಮಾಡುತ್ತಾರೆ? ಎನ್ನುವುದು ಕಥಾಹಂದರ.
icon

(4 / 5)

ಸೆಲಿಬ್ರಿಟಿಯಾಗಿ ಮದುವೆಗೆ ಬರುವ ಮಾನ್ವಿತಾ ಇಲ್ಲಿ ಎಲ್ಲ ಸರಿ ಇಲ್ಲ ಎನ್ನುವದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಶಿವಣ್ಣ ಅವನಿಷ್ಟದ ಹುಡುಗಿ ಜೊತೆ ಮದುವೆಯಾಗಲು ಮಾನ್ವಿತಾ ಹೇಗೆ ಸಹಾಯ ಮಾಡುತ್ತಾರೆ? ಎನ್ನುವುದು ಕಥಾಹಂದರ.((Instagram/ Manvita Harish Kamath))

ಕಥೆಯಷ್ಟೇ ಅಲ್ಲದೆ ವೈಭವದ ಸೆಟ್, ಮಾನ್ವಿತಾ ಡಾನ್ಸ್- ಗೇಮ್‌ಗಳೂ ವೀಕ್ಷಕರ ಮನಸೂರೆಗೊಳ್ಳಲಿದೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. 
icon

(5 / 5)

ಕಥೆಯಷ್ಟೇ ಅಲ್ಲದೆ ವೈಭವದ ಸೆಟ್, ಮಾನ್ವಿತಾ ಡಾನ್ಸ್- ಗೇಮ್‌ಗಳೂ ವೀಕ್ಷಕರ ಮನಸೂರೆಗೊಳ್ಳಲಿದೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ((Instagram/ Manvita Harish Kamath))

ಇತರ ಗ್ಯಾಲರಿಗಳು