KRS Reservoir: ತುಂಬಿದ ಕೆಆರ್‌ಎಸ್ ಜಲಾಶಯಕ್ಕೆ ಸಿದ್ದರಾಮಯ್ಯ ತಂಡದ ಬಾಗಿನ, ಭಕ್ತಿ ಭಾವ ಸಮರ್ಪಣೆ
- KRS Dam ಎರಡು ವರ್ಷದ ನಂತರ ತುಂಬಿರುವ ಕೆಆರ್‌ಎಸ್ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ತಂಡದೊಂದಿಗೆ ಪೂಜೆ ಸಲ್ಲಿಸಿದರು.
- KRS Dam ಎರಡು ವರ್ಷದ ನಂತರ ತುಂಬಿರುವ ಕೆಆರ್‌ಎಸ್ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ತಂಡದೊಂದಿಗೆ ಪೂಜೆ ಸಲ್ಲಿಸಿದರು.
(1 / 9)
ಕೃಷ್ಣರಾಜ ಸಾಗರ ಜಲಾಶಯ ಇಂದಿನ ಕಾರ್ಯಕ್ರಮಕ್ಕೆ ಸಿಂಗಾರಗೊಂಡಿದ್ದು ಹೀಗೆ. ಕಾವೇರಿ ಮಾತೆ ವಿಗ್ರಹ ಹಾಗೂ ಎದುರಿನ ಕಾರಂಜಿ.
(2 / 9)
ಕೃಷ್ಣರಾಜ ಸಾಗರ ಜಲಾಶಯದ ಪ್ರಮುಖ ಭಾಗಗಳಲ್ಲಿ ಒಂದಾದ ಕಾವೇರಿ ಮಾತೆಯ ವಿಗ್ರಹ ಇರುವ ಕಡೆಗೆ ಹೂವಿನ ಅಲಂಕಾರ ಗಮನ ಸೆಳೆಯಿತು.
(3 / 9)
ಕೃಷ್ಣರಾಜ ಸಾಗರಕ್ಕೆ ಬಾಗಿನ ಸಲ್ಲಿಸುವ ಕಾರ್ಯಕ್ರಮದಲ್ಲಿ ಕಾವೇರಿ ಮಾತೆ ವಿಗ್ರಹದ ಬಳಿಯಲ್ಲಿ ರಾಜವಂಶಸ್ಥರಾದ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಅವರ ಹೂವಿನ ದ್ವಾರಗಳು ಗಮನ ಸಳೆದವು.
(4 / 9)
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಾಗಿನ ಸಲ್ಲಿಸಲು ಆಗಮಿಸುವಾಗ ಸ್ವಾಗತಸಿಲು ಕನ್ನಡಮಯ ವಾತಾವರಣ ಸೇತುವೆ ಮೇಲೆ ನಿರ್ಮಾಣಗೊಂಡಿತ್ತು.
(5 / 9)
ಮೈಸೂರಿನಿಂದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಮಹದೇವಪ್ಪ, ಚಲುವರಾಯಸ್ವಾಮಿ ಹಾಗೂ ಶಾಸಕರು ಒಂದೇ ಬಸ್‌ನಲ್ಲಿ ಕೆಆರ್‌ಎಸ್ ಕಡೆಗೆ ಪ್ರಯಾಣ ಬೆಳೆಸಿದರು.
(6 / 9)
ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಘೂ ಇತರರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.
(7 / 9)
ತುಂಬಿರುವ ಕೃಷ್ಣರಾಜಸಾಗರ ಜಲಾಶಯ ಹಾಗೂ ಕಾವೇರಿ ಮಾತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯಸ್ವಾಮಿ ಮತ್ತಿತರರು ಬಾಗಿನ ಅರ್ಪಿಸಿದರು.
(8 / 9)
ಕೃಷ್ಣರಾಜ ಸಾಗರದ ಕಾವೇರಿ ಮಾತೆಯ ಪ್ರತಿಮೆ ಬಳಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮತ್ತಿತರರು ಪೂಜೆ ಸಲ್ಲಿಸಿದರು.ತು
ಇತರ ಗ್ಯಾಲರಿಗಳು