ಮೈಸೂರು ದಸರಾ ದೀಪಾಲಂಕಾರ ಸೌಂದರ್ಯ ಕಣ್ತುಂಬಿಸಲು ಡಬಲ್ ಡೆಕ್ಕರ್ ಬಸ್ ಅಣಿ, ಈ ಬಾರಿ ವಿಶೇಷ ಏನು photos
- ಮೈಸೂರು ದಸರಾದ ದೀಪಾಲಂಕಾರದ ಸೊಬಗು ಸವಿಯಲು ಕರ್ನಾಟಕ ಪ್ರವಾಸೋದ್ಯಮ ನಿಗಮವು ವಿಶೇಷ ಅಂಬಾರಿ ಡಬ್ಬಲ್ ಡೆಕ್ಕರ್ ಬಸ್ ಅನ್ನು ಅಣಿಗೊಳಿಸಿದೆ. ಈ ವರ್ಷವೂ ಅಂಬಾರಿ ಸೇವೆ ಪ್ರವಾಸಿಗರಿಗೆ ಇರಲಿದೆ. ಇದರ ವಿವರ ಇಲ್ಲಿದೆ.
- ಮೈಸೂರು ದಸರಾದ ದೀಪಾಲಂಕಾರದ ಸೊಬಗು ಸವಿಯಲು ಕರ್ನಾಟಕ ಪ್ರವಾಸೋದ್ಯಮ ನಿಗಮವು ವಿಶೇಷ ಅಂಬಾರಿ ಡಬ್ಬಲ್ ಡೆಕ್ಕರ್ ಬಸ್ ಅನ್ನು ಅಣಿಗೊಳಿಸಿದೆ. ಈ ವರ್ಷವೂ ಅಂಬಾರಿ ಸೇವೆ ಪ್ರವಾಸಿಗರಿಗೆ ಇರಲಿದೆ. ಇದರ ವಿವರ ಇಲ್ಲಿದೆ.
(1 / 6)
ಕರ್ನಾಟಕ ಪ್ರವಾಸೋದ್ಯಮ ನಿಗಮವು ಸತತ ನಾಲ್ಕು ವರ್ಷದಿಂದ ಅಂಬಾರಿ ಬಸ್ ಸೇವೆಯನ್ನು ಮೈಸೂರು ದಸರಾ ವೇಳೆ ನೀಡುತ್ತಾ ಬಂದಿದೆ. ಈ ಬಾರಿಯೂ ಅಂಬಾರಿ ಸೇವೆ ದಸರಾ ವೇಳೆ ಶುರುವಾಗಲಿದೆ.
(2 / 6)
ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ಕೆಎಸ್‌ಟಿಡಿಸಿಯು ದಸರಾ ಅಂಬಾರಿ ವಿಶೇಷ ಬಸ್ ಸೇವೆ ಒದಗಿಸುತ್ತಿದ್ದು ಡಬಲ್ ಡೆಕ್ಕರ್ ಬಸ್ ನಲ್ಲಿ ಪ್ರಯಾಣಿಸುವ ಮೂಲಕ ದಸರಾ ವೇಳೆ ಮೈಸೂರನ್ನ ಕಣ್ತುಂಬಿಕೊಳ್ಳಲು ಅವಕಾಶವಿದೆ.
(3 / 6)
ಈ ಬಾರಿಯೂ ಮಯೂರ ಯಾತ್ರಿ ಹೊಟೇಲ್‌ನಿಂದಲೇ ಬಸ್ ಹೊರಡಲಿದೆ. ಅಂಬಾರಿ ಡಬಲ್ ಡೆಕ್ಕರ್ ಬಸ್ ನಲ್ಲಿ ಪ್ರಯಾಣಿಸಲು ದರ ನಿಗದಿ ಮಾಡಲಾಗಿದೆ. ಮೇಲೆ ಕೂತು ಪ್ರಯಾಣಿಸಲು 500 ರೂ. ಕೆಳಗಡೆ ಕೂತು ಪ್ರಯಾಣಿಸಲು 250 ರೂ ನಿಗದಿಪಡಿಸಲಾಗಿದೆ. ಪ್ರಯಾಣದ ಅವಧಿ 1 ಗಂಟೆಯಾಗಿದ್ದು ಸಂಜೆ 6 ಗಂಟೆ , 8 ಗಂಟೆ ಮತ್ತು 9.30ಕ್ಕೆ ಈ ಬಸ್ ಗಳು ಸಂಚರಿಸಲಿವೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಬಹುದು.
(4 / 6)
ಮೈಸೂರು ದಸರಾದ ದೀಪಾಲಂಕಾರವೂ ವಿಶೇಷ ಆಕರ್ಷಣೆ, ಒಂದು ಗಂಟೆ ಕಾಲ ಮೈಸೂರಿನ ಪ್ರಮುಖ ರಸ್ತೆ,ವೃತ್ತಗಳಲ್ಲಿನ ದೀಪಾಲಂಕಾರ, ದಸರಾ ಸೌಂದರ್ಯವನ್ನು ಬಸ್‌ನಲ್ಲಿ ಕುಳಿತು ಸವಿಯಬಹುದು.
(5 / 6)
ಸಿಎಂ ಸಿದ್ದರಾಮಯ್ಯ ಅವರೂ ಕೂಡ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಂಬಾರಿ ಬಸ್ ನಲ್ಲಿ ಕುಳಿತು, ಮೈಸೂರು ನಗರದಲ್ಲಿ ದಸರಾ ಪ್ರಯುಕ್ತ ವಿಶೇಷವಾಗಿ ಅಳವಡಿಸಿರುವ ವಿದ್ಯುತ್ ದೀಪಾಲಂಕಾರವನ್ನು ಸಚಿವರು ಹಾಗೂ ಶಾಸಕರೊಂದಿಗೆ ಹಿಂದಿನ ವರ್ಷ ವೀಕ್ಷಿಸಿದ್ದರು
(6 / 6)
ಹೋಟೆಲ್ ಮಯೂರ ಹೊಯ್ಸಳದಿಂದ ಬಸ್ ಗಳು ಹೊರಡಲಿದ್ದು ಹಳೇ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ಓರಿಯೆಂಲ್ ಸೆಂಟ್ರಲ್ ಲೈಬ್ರರಿ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲಾ, ಅರಮನೆ ದಕ್ಷಿಣ ದ್ವಾರ, ಜಯ ಮಾರ್ತಾಂಡ ಸರ್ಕಲ್ ಗೇಟ್ , ಹಾರ್ಡಿಂಹ್ ಸರ್ಕಲ್, ಕೆಆರ್ ವೃತ್ತ, ಸೈಯಾಜಿ ರಾವ್ ರಸ್ತೆ , ಆಯುರ್ವೇದ ವೈದ್ಯಕೀಯ ಕಾಲೇಜು ರೈಲೆ ನಿಲ್ದಾಣದ ಮೂಲಕ ಮೈಸೂರು ಹೊಯ್ಸಳ ಹೋಟೆಲ್ ಆವರಣಕ್ಕೆ ಆಗಮಿಸಲಿವೆ.
ಇತರ ಗ್ಯಾಲರಿಗಳು