ಭಾರತೀಯ ನ್ಯಾಯ ಸಂಹಿತೆ ಸೇರಿ 3 ಹೊಸ ಅಪರಾಧ ಕಾನೂನು ಇಂದಿನಿಂದ ಜಾರಿ, ಗಮನಸೆಳೆದ 10 ಅಂಶಗಳು ಹೀಗಿವೆ
ಭಾರತದ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವಂತಹ ಭಾರತೀಯ ನ್ಯಾಯ ಸಂಹಿತೆ ಸೇರಿ 3 ಹೊಸ ಅಪರಾಧ ಕಾನೂನು ಇಂದಿನಿಂದ ಜಾರಿಯಾಗಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕುರಿತು ಮಾತನಾಡಿದ್ದು, ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಹೊಸ ಅಪರಾಧ ಕಾನೂನುಗಳಿಗೆ ಸಂಬಂಧಿಸಿದಂತೆ ಗಮನಸೆಳೆದ 10 ಅಂಶಗಳು ಹೀಗಿವೆ.
(1 / 11)
ಭಾರತದಲ್ಲಿ ಇಂದಿನಿಂದ (ಜುಲೈ 1) ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೊಂಡಿವೆ. ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ಉಂಟುಮಾಡಿದ್ದು, ವಸಾಹತುಶಾಹಿ ಯುಗದ ಕಾನೂನುಗಳ ಜಾಗವನ್ನು ತುಂಬಿವೆ.
(2 / 11)
ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳು ಅನುಕ್ರಮವಾಗಿ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳ ಜಾಗವನ್ನು ತುಂಬಿವೆ.
(3 / 11)
ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಉಂಟಾಗುತ್ತಿರುವ ಅಪರಾಧಗಳ ಹೊಸ ರೂಪಗಳೊಂದಿಗೆ ಹೊಂದಿಕೊಳ್ಳುವ ಮತ್ತು ಕ್ಷಿಪ್ರ ನ್ಯಾಯವನ್ನು ಖಚಿತಪಡಿಸುವ ಕಾನೂನುಗಳಿವು ಎಂದು ಸರ್ಕಾರ ಹೇಳಿದೆ. ಹೊಸ ಅಪರಾಧ ಕಾನೂನುಗಳ ಪ್ರಕಾರ, 60 ದಿನಗಳ ಹಿಯರಿಂಗ್ ಆದ ಕೂಡಲೇ ದೋಷಾರೋಪ ಪಟ್ಟಿ ರಚಿಸಬೇಕು. ವಿಚಾರಣೆ ಪೂರ್ಣಗೊಳಿಸಿದ 45 ದಿನಗಳ ಒಳಗೆ ತೀರ್ಪು ನೀಡಬೇಕು.
(4 / 11)
ಹೊಸ ಅಪರಾಧ ಕಾನೂನುಗಳು ಯಾವುದೇ ವ್ಯಕ್ತಿಗೆ ಅಧಿಕಾರ ವ್ಯಾಪ್ತಿಯನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ಶೂನ್ಯ ಎಫ್‌ಐಆರ್ ದಾಖಲಿಸಲು ಅವಕಾಶ ನೀಡುತ್ತದೆ. ಇದು ಪೊಲೀಸ್ ದೂರುಗಳ ಆನ್‌ಲೈನ್ ನೋಂದಣಿ ಮತ್ತು ಸಮನ್ಸ್‌ಗಳ ಎಲೆಕ್ಟ್ರಾನಿಕ್ ಸೇವೆಯನ್ನು ಅನುಮತಿಸುತ್ತದೆ.
(5 / 11)
ಹೊಸ ಅಪರಾಧ ಕಾನೂನುಗಳು ಎಲ್ಲಾ ಘೋರ ಅಪರಾಧಗಳಿಗೆ ಅಪರಾಧ ದೃಶ್ಯಗಳ ವಿಡಿಯೋಗ್ರಫಿ ಕಡ್ಡಾಯವಾಗಿದೆ. ಸಮನ್ಸ್‌ಗಳನ್ನು ವಿದ್ಯುನ್ಮಾನವಾಗಿ ರವಾನಿಸಬಹುದು, ಕಾನೂನು ಪ್ರಕ್ರಿಯೆಗಳನ್ನು ತ್ವರಿತಗೊಳಿಸಬಹುದು.
(6 / 11)
ಎಲ್ಲರಿಗೂ ತ್ವರಿತ ನ್ಯಾಯ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಈ ಬದಲಾವಣೆ ಮಾಡಲಾಗಿದೆ. ಈ ಕಾನೂನುಗಳ ಸರಿಯಾದ ಅನುಷ್ಠಾನಕ್ಕೆ ತರಬೇತಿ ಮತ್ತು ಫೋರೆನ್ಸಿಕ್ ತಂಡಗಳ ಅಗತ್ಯವಿರುತ್ತದೆ, ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ಹೊಂದಿರುವ ಅಪರಾಧಗಳಿಗೆ ಅವರ ಭೇಟಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
(7 / 11)
ಸಾಮೂಹಿಕ ಅತ್ಯಾಚಾರ, ಜನಸಮೂಹದಿಂದ ಹತ್ಯೆ, ಮದುವೆಯ ಸುಳ್ಳು ಭರವಸೆ ಮತ್ತು ಇತರೆ ಅಪರಾಧಗಳ ದೃಷ್ಟಯಿಂದ ಹೊಸ ನಿಬಂಧನೆಗಳನ್ನು ಹೊಸ ಅಪರಾಧ ಕಾನೂನುಗಳಲ್ಲಿ ಸೇರಿಸಲಾಗಿದೆ. ಇದು ದೇಶಾದ್ಯಂತ ಫೋರೆನ್ಸಿಕ್ ತಜ್ಞರ ಬೇಡಿಕೆಯನ್ನು ಹೆಚ್ಚಿಸುತ್ತದೆ, ಇದನ್ನು ಎನ್‌ಎಫ್‌ಎಸ್‌ಯು (ನ್ಯಾಷನಲ್ ಫೊರೆನ್ಸಿಕ್ ಸೈನ್ಸ್ ಯೂನಿವರ್ಸಿಟಿ) ಪೂರೈಸುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.(Canva)
(8 / 11)
ಹೊಸ ಕಾನೂನುಗಳನ್ನು ರೂಪಿಸುತ್ತಿದ್ದಂತೆ ನ್ಯಾಷನಲ್ ಫೊರೆನ್ಸಿಕ್ ಸೈನ್ಸ್ ಯೂನಿವರ್ಸಿಟಿಗೆ ಸಂಬಂಧಿಸಿದ ವಿಚಾರಗಳಿಗೆ ಆದ್ಯತೆ ನೀಡಲಾಗಿದೆ.ಈ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳನ್ನು 9 ರಾಜ್ಯಗಳಲ್ಲಿ ತೆರೆಯಲಾಗಿದ್ದು, ಇದನ್ನು 16 ರಾಜ್ಯಗಳಿಗೆ ವಿಸ್ತರಿಸಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ.
(9 / 11)
ಜುಲೈ 1 ರಿಂದ ಹೊಸ ಅಪರಾಧ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಸರ್ಕಾರ ತರಾತುರಿಯಲ್ಲಿ ತೆಗೆದುಕೊಂಡಿದೆ. ಅವುಗಳನ್ನು ಜಾರಿಗೊಳಿಸುವ ಮೊದಲು ಹೆಚ್ಚಿನ ಸಮಾಲೋಚನೆ ಅಗತ್ಯವಿದೆ ಎಂದು ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳು ಹೇಳಿವೆ.
(10 / 11)
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು "ತರಾತುರಿಯಲ್ಲಿ ಅಂಗೀಕರಿಸಿದ" ಕಾನೂನುಗಳ ಅನುಷ್ಠಾನವನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಸಂಸತ್ತು, ನಂತರ ಅವುಗಳನ್ನು ಹೊಸದಾಗಿ ಪರಿಶೀಲಿಸಬಹುದು ಎಂದು ಅವರು ಹೇಳಿದರು. ಈ ಕುರಿತು ಪ್ರಧಾನಿಗೆ ಅವರು ಪತ್ರವನ್ನೂ ಬರೆದಿದ್ದಾರೆ.
ಇತರ ಗ್ಯಾಲರಿಗಳು