ಮಾಸದ ನೋವು, ಮರೆಯದ ನೆನಪು; ಭಾರತದ ವಿಶ್ವಕಪ್‌ ಕನಸು ನುಚ್ಚುನೂರಾಗಿ ಇಂದಿಗೆ ಒಂದು ವರ್ಷ -ಚಿತ್ರಗಳ ಮೆಲುಕು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಾಸದ ನೋವು, ಮರೆಯದ ನೆನಪು; ಭಾರತದ ವಿಶ್ವಕಪ್‌ ಕನಸು ನುಚ್ಚುನೂರಾಗಿ ಇಂದಿಗೆ ಒಂದು ವರ್ಷ -ಚಿತ್ರಗಳ ಮೆಲುಕು

ಮಾಸದ ನೋವು, ಮರೆಯದ ನೆನಪು; ಭಾರತದ ವಿಶ್ವಕಪ್‌ ಕನಸು ನುಚ್ಚುನೂರಾಗಿ ಇಂದಿಗೆ ಒಂದು ವರ್ಷ -ಚಿತ್ರಗಳ ಮೆಲುಕು

  • ನವೆಂಬರ್‌ 19, 2023. ಈ ದಿನವನ್ನು ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಹೇಗೆ ತಾನೆ ಮರೆಯಲು ಸಾಧ್ಯ.‌ ತವರು ನೆಲದಲ್ಲಿ ಕ್ರಿಕೆಟ್‌ ವಿಶ್ವಕಪ್‌ ಗೆಲ್ಲುವ ತವಕದಲ್ಲಿದ್ದ ಭಾರತ ಕ್ರಿಕೆಟ್‌ ತಂಡಕ್ಕೆ ಭಾರಿ ನಿರಾಶೆ, ಆಘಾತವಾದ ದಿನವದು. ಇಂದಿಗೆ ಒಂದು ವರ್ಷ ಪೂರ್ಣವಾಗಿದೆ. ಭಾರತೀಯ ಅಭಿಮಾನಿಗಳಿಗೆ ಇದೊಂದು ಕಹಿ ನೆನಪು. ನೆನಪಿಸಿಕೊಂಡಷ್ಟು ಬೇಸರ, ಹೃದಯ ಭಾರ.

ಅಹ್ಮದಾಬಾದ್‌ನ ತುಂಬಿದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೇರಿದ್ದ ಸಾವಿರಾರು ಭಾರತೀಯ ಅಭಿಮಾನಿಗಳನ್ನು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಅಂದು ನಿರಾಶೆಗೊಳಿಸಿತು. ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಹಾಗೂ ಆತಿಥೇಯ ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 
icon

(1 / 9)

ಅಹ್ಮದಾಬಾದ್‌ನ ತುಂಬಿದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೇರಿದ್ದ ಸಾವಿರಾರು ಭಾರತೀಯ ಅಭಿಮಾನಿಗಳನ್ನು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಅಂದು ನಿರಾಶೆಗೊಳಿಸಿತು. ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಹಾಗೂ ಆತಿಥೇಯ ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. (PTI)

ಭಾರತದ ಐತಿಹಾಸಿಕ ಗೆಲುವನ್ನು ಕಣ್ತುಂಬಿಕೊಳ್ಳಲು ಬಂದಿದ್ದ 90000ಕ್ಕೂ ಹೆಚ್ಚು ಪ್ರೇಕ್ಷಕರು ಸಪ್ಪೆ ಮುಖದೊಂದಿಗೆ ಮನೆಗೆ ಮರಳಿದರು. ಟಿವಿ ಹಾಗೂ ಮೊಬೈಲ್‌ ಮೂಲಕ ಪಂದ್ಯ ವೀಕ್ಷಿಸಿ ಕೋಟ್ಯಾಂತರ ಭಾರತೀಯರು ಭಾರಿ ನೋವಿನಿಂದ ಮಂಕಾದರು.
icon

(2 / 9)

ಭಾರತದ ಐತಿಹಾಸಿಕ ಗೆಲುವನ್ನು ಕಣ್ತುಂಬಿಕೊಳ್ಳಲು ಬಂದಿದ್ದ 90000ಕ್ಕೂ ಹೆಚ್ಚು ಪ್ರೇಕ್ಷಕರು ಸಪ್ಪೆ ಮುಖದೊಂದಿಗೆ ಮನೆಗೆ ಮರಳಿದರು. ಟಿವಿ ಹಾಗೂ ಮೊಬೈಲ್‌ ಮೂಲಕ ಪಂದ್ಯ ವೀಕ್ಷಿಸಿ ಕೋಟ್ಯಾಂತರ ಭಾರತೀಯರು ಭಾರಿ ನೋವಿನಿಂದ ಮಂಕಾದರು.(REUTERS)

ಟೂರ್ನಿಯುದ್ದಕ್ಕೂ ಒಂದೇ ಒಂದು ಪಂದ್ಯವನ್ನೂ ಸೋಲದೆ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತ, ಮೂರನೇ ಬಾರಿಗೆ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ತವಕದಲ್ಲಿತ್ತು. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್‌ಗೆ ಇಳಿದ ಭಾರತವು ಪವರ್‌ಪ್ಲೇ ಲಾಭ ಪಡೆದುಕೊಂಡಿತು. ನಾಯಕ ರೋಹಿತ್ ಶರ್ಮಾ 31 ಎಸೆತಗಳಲ್ಲಿ 47 ರನ್ ಗಳಿಸಿ ಭಾರತವನ್ನು ಮೊದಲ 10 ಓವರ್ಗಳಲ್ಲಿ 80 ರನ್‌ಗಳಿಗೆ ಮುನ್ನಡೆಸಿದರು.
icon

(3 / 9)

ಟೂರ್ನಿಯುದ್ದಕ್ಕೂ ಒಂದೇ ಒಂದು ಪಂದ್ಯವನ್ನೂ ಸೋಲದೆ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದ ಭಾರತ, ಮೂರನೇ ಬಾರಿಗೆ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ತವಕದಲ್ಲಿತ್ತು. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್‌ಗೆ ಇಳಿದ ಭಾರತವು ಪವರ್‌ಪ್ಲೇ ಲಾಭ ಪಡೆದುಕೊಂಡಿತು. ನಾಯಕ ರೋಹಿತ್ ಶರ್ಮಾ 31 ಎಸೆತಗಳಲ್ಲಿ 47 ರನ್ ಗಳಿಸಿ ಭಾರತವನ್ನು ಮೊದಲ 10 ಓವರ್ಗಳಲ್ಲಿ 80 ರನ್‌ಗಳಿಗೆ ಮುನ್ನಡೆಸಿದರು.(AFP)

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬೌಲಿಂಗ್‌ನಲ್ಲಿ ಟ್ರಾವಿಸ್ ಹೆಡ್ ಹಿಡಿದ ಅದ್ಭುತ ಕ್ಯಾಚ್, ರೋಹತ್‌ ವಿಕೆಟ್‌ ಉರುಳುವಂತೆ ಮಾಡಿತ. ಅಲ್ಲಿಂದ ಭಾರತದ ರನ್‌ ಬರ ಮುಂದುವರೆಯಿತು. 765 ರನ್ ಗಳಿಸುವ ಮೂಲಕ ವಿಶ್ವಕಪ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಿಧಾನಗತಿಯ ಆಟಕ್ಕೆ ಕೈಹಾಕಿ ಎಚ್ಚರಿಕೆಯ ಆಟವಾಡಿದರು. ಇಬ್ಬರೂ ಅರ್ಧಶತಕ ಗಳಿಸಿದರು.
icon

(4 / 9)

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬೌಲಿಂಗ್‌ನಲ್ಲಿ ಟ್ರಾವಿಸ್ ಹೆಡ್ ಹಿಡಿದ ಅದ್ಭುತ ಕ್ಯಾಚ್, ರೋಹತ್‌ ವಿಕೆಟ್‌ ಉರುಳುವಂತೆ ಮಾಡಿತ. ಅಲ್ಲಿಂದ ಭಾರತದ ರನ್‌ ಬರ ಮುಂದುವರೆಯಿತು. 765 ರನ್ ಗಳಿಸುವ ಮೂಲಕ ವಿಶ್ವಕಪ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಿಧಾನಗತಿಯ ಆಟಕ್ಕೆ ಕೈಹಾಕಿ ಎಚ್ಚರಿಕೆಯ ಆಟವಾಡಿದರು. ಇಬ್ಬರೂ ಅರ್ಧಶತಕ ಗಳಿಸಿದರು.(PTI)

ಆದರೆ ಕಮಿನ್ಸ್ (34ಕ್ಕೆ 2) ಮತ್ತು ಮಿಚೆಲ್ ಸ್ಟಾರ್ಕ್ (55ಕ್ಕೆ 3) ಆಕ್ರಮಣಕ್ಕೆ ಭಾರತೀಯರ ಬ್ಯಾಟರ್‌ಗಳು ವೇಗವಾಗಿ ರನ್‌ ಗಳಿಸಲು ಸಾಧಯವಾಗಲಿಲ್ಲ. ಭಾರತದ ಪರ ಕನ್ನಡಿಗ ಕೆಎಲ್‌ ರಾಹುಲ್‌ ಗರಿಷ್ಠ ರನ್‌ ಕಲೆ ಹಾಕಿದರು. ಆದರೆ, ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ವ್ಯಾಪಕ ಟೀಕೆಗೊಳಗಾದರು. ಭಾರತದ ಇನ್ನಿಂಗ್ಸ್ ಕೇವಲ 240 ರನ್‌ಗಳಿಗೆ ಅಂತ್ಯವಾಯ್ತು.
icon

(5 / 9)

ಆದರೆ ಕಮಿನ್ಸ್ (34ಕ್ಕೆ 2) ಮತ್ತು ಮಿಚೆಲ್ ಸ್ಟಾರ್ಕ್ (55ಕ್ಕೆ 3) ಆಕ್ರಮಣಕ್ಕೆ ಭಾರತೀಯರ ಬ್ಯಾಟರ್‌ಗಳು ವೇಗವಾಗಿ ರನ್‌ ಗಳಿಸಲು ಸಾಧಯವಾಗಲಿಲ್ಲ. ಭಾರತದ ಪರ ಕನ್ನಡಿಗ ಕೆಎಲ್‌ ರಾಹುಲ್‌ ಗರಿಷ್ಠ ರನ್‌ ಕಲೆ ಹಾಕಿದರು. ಆದರೆ, ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ವ್ಯಾಪಕ ಟೀಕೆಗೊಳಗಾದರು. ಭಾರತದ ಇನ್ನಿಂಗ್ಸ್ ಕೇವಲ 240 ರನ್‌ಗಳಿಗೆ ಅಂತ್ಯವಾಯ್ತು.(AFP)

ಆಸೀಸ್‌ ಚೇಸಿಂಗ್‌ ವೇಳೆ ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಬೇಗನೆ ವಿಕೆಟ್‌ ಕಬಳಿಸಿದರು. ಶಮಿ ತಮ್ಮ ಮೊದಲ ಎಸೆತದಲ್ಲಿ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದರು. ಆಸ್ಟ್ರೇಲಿಯಾ ಮೊದಲ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತು. ಆಗ ಶುರುವಾಗಿದ್ದೇ ಟ್ರಾವಿಸ್‌ ಹೆಡ್‌ ಅಬ್ಬರ.
icon

(6 / 9)

ಆಸೀಸ್‌ ಚೇಸಿಂಗ್‌ ವೇಳೆ ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಬೇಗನೆ ವಿಕೆಟ್‌ ಕಬಳಿಸಿದರು. ಶಮಿ ತಮ್ಮ ಮೊದಲ ಎಸೆತದಲ್ಲಿ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿದರು. ಆಸ್ಟ್ರೇಲಿಯಾ ಮೊದಲ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತು. ಆಗ ಶುರುವಾಗಿದ್ದೇ ಟ್ರಾವಿಸ್‌ ಹೆಡ್‌ ಅಬ್ಬರ.(REUTERS)

ಹೆಡ್ ಮತ್ತು ಮಾರ್ನಸ್ ಲಾಬುಶೇನ್ ಬರೋಬ್ಬರಿ 192 ರನ್‌ಗಳ ಜೊತೆಯಾಟದ ಮೂಲಕ ಭಾರತದ ಬೌಲಿಂಗ್ ದಾಳಿಯನ್ನು ತಗ್ ಸಮರ್ಥವಾಗಿ ಎದುರಿಸಿದರು. ಆಕ್ರಮಣಕಾರಿ ಆಟಗಾವಡಿದ ಹೆಡ್ ಪ್ರೇಕ್ಷಕರನ್ನು ಮೌನಗೊಳಿಸಿದರು. ಆಕರ್ಷಕ ಶತಕದೊಂದಿಗೆ 120 ಎಸೆತಗಳಲ್ಲಿ 137 ರನ್ ಗಳಿಸಿದರು. ಇದು ವಿಶ್ವಕಪ್ ಫೈನಲ್ ಚೇಸಿಂಗ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್. 
icon

(7 / 9)

ಹೆಡ್ ಮತ್ತು ಮಾರ್ನಸ್ ಲಾಬುಶೇನ್ ಬರೋಬ್ಬರಿ 192 ರನ್‌ಗಳ ಜೊತೆಯಾಟದ ಮೂಲಕ ಭಾರತದ ಬೌಲಿಂಗ್ ದಾಳಿಯನ್ನು ತಗ್ ಸಮರ್ಥವಾಗಿ ಎದುರಿಸಿದರು. ಆಕ್ರಮಣಕಾರಿ ಆಟಗಾವಡಿದ ಹೆಡ್ ಪ್ರೇಕ್ಷಕರನ್ನು ಮೌನಗೊಳಿಸಿದರು. ಆಕರ್ಷಕ ಶತಕದೊಂದಿಗೆ 120 ಎಸೆತಗಳಲ್ಲಿ 137 ರನ್ ಗಳಿಸಿದರು. ಇದು ವಿಶ್ವಕಪ್ ಫೈನಲ್ ಚೇಸಿಂಗ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್. (AFP)

ಹೆಡ್ ಔಟಾದ ನಂತರ, ಗ್ಲೆನ್ ಮ್ಯಾಕ್ಸ್‌ವೆಲ್ ಗೆಲುವಿನ ರನ್ ಬಾರಿಸಿದರು. ಇನ್ನೂ ಏಳು ಓವರ್‌ಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾದ  ವಿಶ್ವಕಪ್‌ ಗೆದ್ದುಕೊಂಡಿತು. ಈ ನೆನಪು ಭಾರತೀಯ ಕ್ರಿಕೆಟ್‌ನಲ್ಲಿ ಕಹಿ ಅಧ್ಯಾಯವಾಗಿಯೇ ಉಳಿದಿದೆ.
icon

(8 / 9)

ಹೆಡ್ ಔಟಾದ ನಂತರ, ಗ್ಲೆನ್ ಮ್ಯಾಕ್ಸ್‌ವೆಲ್ ಗೆಲುವಿನ ರನ್ ಬಾರಿಸಿದರು. ಇನ್ನೂ ಏಳು ಓವರ್‌ಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾದ  ವಿಶ್ವಕಪ್‌ ಗೆದ್ದುಕೊಂಡಿತು. ಈ ನೆನಪು ಭಾರತೀಯ ಕ್ರಿಕೆಟ್‌ನಲ್ಲಿ ಕಹಿ ಅಧ್ಯಾಯವಾಗಿಯೇ ಉಳಿದಿದೆ.(AP)

ಆದರೆ, 2024ರ ಜೂನ್‌ 29ರಂದು ನಡೆದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಗೆಲುವಿನೊಂದಿಗೆ, ಅಭಿಮಾನಿಗಳ ದೊಡ್ಡ ಪ್ರಮಾಣದ ನೋವು ತುಸು ಕಡಿಮೆಯಾಯ್ತು.
icon

(9 / 9)

ಆದರೆ, 2024ರ ಜೂನ್‌ 29ರಂದು ನಡೆದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಗೆಲುವಿನೊಂದಿಗೆ, ಅಭಿಮಾನಿಗಳ ದೊಡ್ಡ ಪ್ರಮಾಣದ ನೋವು ತುಸು ಕಡಿಮೆಯಾಯ್ತು.(PTI)


ಇತರ ಗ್ಯಾಲರಿಗಳು