ಪ್ರೊ ಕಬಡ್ಡಿ ಲೀಗ್‌ನ ಸಾರ್ವಕಾಲಿಕ ಅತ್ಯುತ್ತಮ ಪ್ಲೇಯಿಂಗ್ 7; ಬೆಂಗಳೂರು ಬುಲ್ಸ್ ಆಟಗಾರರೇ ಹೆಚ್ಚು
- ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಈವರೆಗೆ 10 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದೆ. ಈ ತಿಂಗಳು 11ನೇ ಸೀಸನ್ ಪಿಕೆಎಲ್ ಆರಂಭವಾಗಲಿದೆ. ಕಳೆದ ಒಂದು ದಶಕದಲ್ಲಿ ಹಲವಾರು ಪ್ರತಿಭಾವಂತ ಆಟಗಾರರು ಈ ಟೂರ್ನಿಯಿಂದ ಹೊರಹೊಮ್ಮಿದ್ದಾರೆ. ಈ ಬಾರಿಯ ಟೂರ್ನಿ ಆರಂಭಕ್ಕೂ ಮುನ್ನ ಕಬಡ್ಡಿ ಲೀಗ್‌ನ ಸಾರ್ವಕಾಲಿಕ ಪ್ಲೇಯಿಂಗ್ 7 ಹೇಗಿದೆ ನೋಡೋಣ.
- ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಈವರೆಗೆ 10 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದೆ. ಈ ತಿಂಗಳು 11ನೇ ಸೀಸನ್ ಪಿಕೆಎಲ್ ಆರಂಭವಾಗಲಿದೆ. ಕಳೆದ ಒಂದು ದಶಕದಲ್ಲಿ ಹಲವಾರು ಪ್ರತಿಭಾವಂತ ಆಟಗಾರರು ಈ ಟೂರ್ನಿಯಿಂದ ಹೊರಹೊಮ್ಮಿದ್ದಾರೆ. ಈ ಬಾರಿಯ ಟೂರ್ನಿ ಆರಂಭಕ್ಕೂ ಮುನ್ನ ಕಬಡ್ಡಿ ಲೀಗ್‌ನ ಸಾರ್ವಕಾಲಿಕ ಪ್ಲೇಯಿಂಗ್ 7 ಹೇಗಿದೆ ನೋಡೋಣ.
(1 / 8)
ಈ ಪಟ್ಟಿಯಲ್ಲಿ ಭಾರತೀಯ ಆಟಗಾರರನ್ನು ಮಾತ್ರವೇ ಹೆಸರಿಸಲಾಗಿದೆ. ತಂಡ ಎಂಬ ಲೆಕ್ಕಾಚಾವಿಲ್ಲದೆ ಒಟ್ಟಾರೆ ಪ್ರದರ್ಶನದ ಆಧಾರದ ಮೇಲೆ ಈ ಪಟ್ಟಿ ಮಾಡಲಾಗಿದೆ.
(2 / 8)
ಪರ್ದೀಪ್ ನರ್ವಾಲ್ (ರೈಡರ್): ಈ ಬಾರಿ ಬೆಂಗಳೂರು ಬುಲ್ಸ್ ಪರ ಆಡುತ್ತಿರುವ ಪರ್ದೀಪ್ ನರ್ವಾಲ್ ಈ ಪಟ್ಟಿಯಲ್ಲಿ ಇಲ್ಲದಿರಲು ಸಾಧಯಿಲ್ಲ. ಪಿಕೆಎಲ್‌ನ ಅತ್ಯಂತ ಯಶಸ್ವಿ ರೈಡರ್ ಇವರು. ಆಡಿದ 170 ಪಂದ್ಯಗಳಲ್ಲಿ ಬರೋಬ್ಬರಿ 1,690 ಪಾಯಿಂಟ್‌ಗಳೊಂದಿಗೆ ಅತಿ ಹೆಚ್ಚು ರೇಡ್ ಪಾಯಿಂಟ್ ಗಳಿಸಿದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.
(3 / 8)
ಮಣಿಂದರ್ ಸಿಂಗ್ (ರೈಡರ್): ಮಣಿಂದರ್ ಸಿಂಗ್ ಅವರ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರ. ಉದ್ಘಾಟನಾ ಋತುವಿನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ನೊಂದಿಗೆ ಆಡಿದ್ದ ಸಿಂಗ್, ನಂತರದ ಆವೃತ್ತಿಗಳಲ್ಲಿ ಬೇರೆ ತಂಡಗಳ ಪರ ಬಲಿಷ್ಠ ರೈಡರ್ ಆಗಿ ಕಣಕ್ಕಿಳಿದಿದ್ದಾರೆ.
(4 / 8)
ಪವನ್ ಸೆಹ್ರಾವತ್ (ರೈಡರ್): ಚಾಣಾಕ್ಷ ರೈಡಿಂಗ್ ಮಾಡುವ ಪವನ್, ಬುಲ್ಸ್ ತಂಡದ ಮಾಜಿ ಆಟಗಾರ. ಇದೇ ತಂಡದ ಪರ ಪಿಕೆಎಲ್ ವೃತ್ತಿಜೀವನ ಪ್ರಾರಂಭಿಸಿ ಯಶಸ್ವಿಯಾದವರು.
(5 / 8)
ದೀಪಕ್ ನಿವಾಸ್ ಹೂಡಾ (ಆಲ್-ರೌಂಡರ್): ದೀಪಕ್ ಹೂಡಾ ಪಿಕೆಎಲ್ ಕಂಡ ಅತ್ಯಂತ ಬಹುಮುಖ ಪ್ರತಿಭೆಯ ಆಟಗಾರರಲ್ಲಿ ಒಬ್ಬರು. ರೈಡರ್ ಹಾಗೂ ಡಿಫೆಂಡರ್ ಎರಡರಲ್ಲೂ ನಿಪುಣರು. ತಮ್ಮ ವೃತ್ತಿಜೀವನದಲ್ಲಿ, ದೀಪಕ್ ಪ್ರಭಾವಶಾಲಿ 1,020 ರೇಡ್ ಪಾಯಿಂಟ್‌ಗಳನ್ನು ಸಂಗ್ರಹಿಸಿದ್ದಾರೆ.
(6 / 8)
ಮಂಜೀತ್ ಛಿಲ್ಲರ್ (ಆಲ್ ರೌಂಡರ್): ಪಿಕೆಎಲ್ ಇತಿಹಾಸದ ಅತ್ಯುತ್ತಮ ಆಲ್ ರೌಂಡರ್‌ಗಳಲ್ಲಿ ಮಂಜೀತ್ ಕೂಡ ಒಬ್ಬರು. ಆರಂಭಿಕ ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್ ತಂಡದ ಯಶಸ್ಸಿನಲ್ಲಿ ಇವರ ಪಾತ್ರ ದೊಡ್ಡದು. ಇವರು 391 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ.
(7 / 8)
ಸುರ್ಜೀತ್ ಸಿಂಗ್ (ಡಿಫೆಂಡರ್): ಸುರ್ಜೀತ್ ಅವರು ಪಿಕೆಎಲ್ ಕಂಡ ಅತ್ಯಂತ ವಿಶ್ವಾಸಾರ್ಹ ಡಿಫೆಂಡರ್‌ಗಳಲ್ಲಿ ಒಬ್ಬರು. ಕವರ್ ಸ್ಥಾನದಲ್ಲಿ ಇವರಿಗೆ ಸರಿಸಾಟಿ ಬೇರೆ ಯಾರೂ ಇಲ್ಲ. 148 ಪಂದ್ಯಗಳಲ್ಲಿ ಬರೋಬ್ಬರಿ 404 ಟ್ಯಾಕಲ್ ಪಾಯಿಂಟ್ ಕಲೆ ಹಾಕಿದ್ದಾರೆ.
ಇತರ ಗ್ಯಾಲರಿಗಳು