Bharat Jodo Yatra : ಹಿಮದಲ್ಲಿ ಆಟ ಆಡುತ್ತಾ ಕಾಲ ಕಳೆದ ಅಣ್ಣ-ತಂಗಿ: ಹೀಗಿತ್ತು ರಾಹುಲ್-ಪ್ರಿಯಾಂಕಾ 'ಸ್ನೋಬಾಲ್ ಫೈಟ್'
- ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಪಕ್ಷವು ಅದ್ಧೂರಿ ಸಮಾರೋಪ ಸಮಾರಂಭ ಏರ್ಪಡಿಸಿದೆ. ಆದರೆ ಶ್ರೀನಗರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೆಲಕಾಲ ಹಿಮದಲ್ಲಿ ಆಟವಾಡಿದರು. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

(1 / 6)
ಭಾರತ್ ಜೋಡಾ ಯಾತ್ರೆಯ ಬಿಡುವಿನ ವೇಳೆಯಲ್ಲಿ, ಶ್ರೀನಗರದಲ್ಲಿ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ಹಿಮದಲ್ಲಿ ಆಟವಾಡಿದರು. ಪರಸ್ಪರರ ಮೇಲೆ ಹಿಮದ ಚೆಂಡನ್ನು ಎಸೆಯುತ್ತಾ ರಾಹುಲ್ ಹಾಗೂ ಪ್ರಿಯಾಂಕಾ ಕಾಲ ಕಳೆದರು.(Bharat Jodo Yatra twitter)
(2 / 6)
ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಅವರ 'ಸ್ನೋಬಾಲ್ ಫೈಟ್' ನೆರೆದವರನ್ನು ರಂಜಿಸಿತು. ಅವರೂ ಈ ಆಟದಲ್ಲಿ ಭಾಗಿಯಾದರು.(Bharat Jodo Yatra Twitter)
(3 / 6)
ತಮ್ಮತ್ತ ಹಿಮದ ಚೆಂಡನ್ನು ಎಸೆದ ರಾಹುಲ್ ಗಾಂಧಿಯವರತ್ತ ಪ್ರತಿಯಾಗಿ ಪ್ರಿಯಾಂಕಾ ಗಾಂಧಿ ಕೂಡ ಹಿಮದ ಚೆಂಡು ಎಸೆದರು.(Bharat Jodo Yatra Twitter)
(4 / 6)
ಇದಕ್ಕೂ ಮೊದಲು ಶ್ರೀನಗರದ ಕಾಂಗ್ರೆಸ್ ಕಷೇರಿಯಲ್ಲಿ, ರಾಹುಲ್ ಗಾಂಧಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.(Bharat Jodo Yatra Twitter)
(5 / 6)
ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಶ್ರೀನಗರದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.(Bharat Jodo Yatra twitter)
ಇತರ ಗ್ಯಾಲರಿಗಳು