ಕನ್ನಡ ಸುದ್ದಿ  /  Photo Gallery  /  Sandalwood Actress Manvita Kamath Performed Her Mother S Last Rites Mnk

Manvita kamath: ಮಗನ ಸ್ಥಾನದಲ್ಲಿ ನಿಂತು ಶಾಸ್ತ್ರೋಕ್ತವಾಗಿ ಅಮ್ಮನ ತಿಥಿ ಕಾರ್ಯ ನೆರವೇರಿಸಿದ ಮಾನ್ವಿತಾ

  • Manvita kamath: ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ಅವರ ತಾಯಿ ಸುಜಾತಾ ಇದೇ ಏ. 15ರಂದು ನಿಧನರಾಗಿದ್ದರು. ಬಹುಕಾಲದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗಿತ್ತಾದರೂ, ಅದು ಕೈಗೂಡಲಿಲ್ಲ. ಇದೀಗ ಮಗನ ಸ್ಥಾನದಲ್ಲಿ ನಿಂತು ಅಮ್ಮನ ತಿಥಿ ಕಾರ್ಯದ ವಿಧಿ ವಿಧಾನಗಳನ್ನು ಮಾನ್ವಿತಾ ನೆರವೇರಿಸಿದ್ದಾರೆ.

ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ಇದೀಗ ಮಗನ ಸ್ಥಾನದಲ್ಲಿ ನಿಂತು ತಾಯಿಯ ಕೊನೇ ಕಾರ್ಯ ನೆರವೇರಿಸಿದ್ದಾರೆ. (Instagram/ Manvita Kamath)
icon

(1 / 8)

ಏ. 15ರಂದು ಮಾನ್ವಿತಾ ಅವರ ತಾಯಿ ಸುಜಾತಾ ಕೊನೆಯುಸಿರೆಳೆದಿದ್ದರು. ಆ ನಿಮಿತ್ತ ಇದೀಗ 13ನೇ ದಿನದ ತಿಥಿ ಕಾರ್ಯ ಮಾಡಿ ಮುಗಿಸಿದ್ದಾರೆ. (Instagram/ Manvita Kamath)
icon

(2 / 8)

ಕಳೆದ ಕೆಲ ತಿಂಗಳಿಂದ ಕಿಡ್ನಿ ವೈಫಲ್ಯದಿಂದ ಸುಜಾತಾ ಬಳಲುತ್ತಿದ್ದರು. ಅಮ್ಮನನ್ನು ಉಳಿಸಿಕೊಳ್ಳಲು ಮಾನ್ವಿತಾ ಸಹ ಸಾಕಷ್ಟು ಕಷ್ಟಪಟ್ಟಿದ್ದರು. (Instagram/ Manvita Kamath)
icon

(3 / 8)

ಸೂಕ್ತ ಚಿಕಿತ್ಸೆಗೂ ಏರ್ಪಾಡು ಮಾಡಿದ್ದರು. ಸೋನು ಸೂದ್‌ ಫೌಂಡೇಷನ್‌ ಸಹ ಇವರ ನೆರವಿಗೆ ಬಂದಿತ್ತು. (Instagram/ Manvita Kamath)
icon

(4 / 8)

ಆದರೆ, ಚಿಕಿತ್ಸೆ ಫಲಿಸದೇ ಏ. 15ರಂದು ಸುಜಾತಾ ನಿಧನರಾಗಿದ್ದರು. ಅಮ್ಮನ ಅಂತಿಮ ಕ್ರಿಯೆಯನ್ನು ನೆರವೇರಿಸಿದ್ದ ಮಾನ್ವಿತಾ ಇದೀಗ     13ನೇ ದಿನದ ತಿಥಿ ಕಾರ್ಯ ನೆರವೇರಿಸಿದ್ದಾರೆ. (Instagram/ Manvita Kamath)
icon

(5 / 8)

ದೇವಸ್ಥಾನವೊಂದರಲ್ಲಿ ತಿಥಿ ಕಾರ್ಯ ನೆರವೇರಿಸಿ, ಪಿಂಡ ಪ್ರಧಾನ ಮಾಡಿದ್ದಾರೆ. (Instagram/ Manvita Kamath)
icon

(6 / 8)

ಬಳಿಕ ಸಮುದ್ರದಲ್ಲಿ ತಾಯಿಯ ಅಸ್ಥಿಯನ್ನು ವಿಸರ್ಜಿಸಿದ್ದಾರೆ. (Instagram/ Manvita Kamath)
icon

(7 / 8)

ಈ ಎಲ್ಲ ವಿಧಿ ವಿಧಾನದ ವಿಡಿಯೋ ಮತ್ತು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡು, ಅಮ್ಮನ ಬಗ್ಗೆ ಕವಿತೆಯೊಂದನ್ನು ಬರೆದುಕೊಂಡಿದ್ದಾರೆ. (Instagram/ Manvita Kamath)
icon

(8 / 8)

ಇತರ ಗ್ಯಾಲರಿಗಳು