Rashmika Birthday: ನ್ಯಾಷನಲ್ ಕ್ರಶ್‌ಗೆ ಇಷ್ಟು ವಯಸ್ಸಾಯ್ತ? ಇಂದು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ
- Rashmika Mandanna Birthday: ಜನಪ್ರಿಯ ನಟಿ ರಶ್ಮಿಕಾ ಮಂದಣ್ಣರಿಗೆ ಏಪ್ರಿಲ್ 5 ಹುಟ್ಟುಹಬ್ಬದ ಸಂಭ್ರಮ. ಇವರ ಡೇಟ್ ಆಫ್ ಬರ್ತ್ ಯಾವುದು? ಇವರಿಗೆ ಈಗ ಎಷ್ಟು ವಯಸ್ಸು ಎಂಬ ಪ್ರಶ್ನೆ ಸಾಕಷ್ಟು ಜನರಿಗೆ ಇರಬಹುದು. ಇದಕ್ಕೆ ಉತ್ತರ ಕಂಡುಕೊಳ್ಳೋಣ.
- Rashmika Mandanna Birthday: ಜನಪ್ರಿಯ ನಟಿ ರಶ್ಮಿಕಾ ಮಂದಣ್ಣರಿಗೆ ಏಪ್ರಿಲ್ 5 ಹುಟ್ಟುಹಬ್ಬದ ಸಂಭ್ರಮ. ಇವರ ಡೇಟ್ ಆಫ್ ಬರ್ತ್ ಯಾವುದು? ಇವರಿಗೆ ಈಗ ಎಷ್ಟು ವಯಸ್ಸು ಎಂಬ ಪ್ರಶ್ನೆ ಸಾಕಷ್ಟು ಜನರಿಗೆ ಇರಬಹುದು. ಇದಕ್ಕೆ ಉತ್ತರ ಕಂಡುಕೊಳ್ಳೋಣ.
(1 / 11)
ರಶ್ಮಿಕಾ ಮಂದಣ್ಣ ತನ್ನ ಹುಟ್ಟುಹಬ್ಬವನ್ನು ಅಬುದಾಬಿಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಇವರು ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ನಾಳೆ ವಿಜಯ ದೇವರಕೊಂಡ ನಟನೆಯ ಫ್ಯಾಮಿಲಿ ಸ್ಟಾರ್ ಸಿನಿಮಾ ಇದೇ ಏಪ್ರಿಲ್ 5ರಂದು ರಿಲೀಸ್ ಆಗುತ್ತಿದೆ. ಇದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬವೂ ಬಂದಿದೆ. ಇವರಿಬ್ಬರೂ ನಾಳೆ ಅಬುದಾಬಿಯಲ್ಲಿ ಬರ್ತ್‌ಡೇ ಸೆಲೆಬ್ರೆಷನ್‌ನಲ್ಲಿರುತ್ತಾರ ಎಂಬ ಸಂಶಯವೂ ಅಭಿಮಾನಿಗಳಲ್ಲಿದೆ.
(2 / 11)
ರಶ್ಮಿಕಾ ಮಂದಣ್ಣ ತನ್ನ ಹುಟ್ಟುಹಬ್ಬವನ್ನು ಅಬುದಾಬಿಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಇವರು ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ನಾಳೆ ವಿಜಯ ದೇವರಕೊಂಡ ನಟನೆಯ ಫ್ಯಾಮಿಲಿ ಸ್ಟಾರ್ ಸಿನಿಮಾ ಇದೇ ಏಪ್ರಿಲ್ 5ರಂದು ರಿಲೀಸ್ ಆಗುತ್ತಿದೆ.
(3 / 11)
ಇದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬವೂ ಬಂದಿದೆ. ಇವರಿಬ್ಬರೂ ನಾಳೆ ಅಬುದಾಬಿಯಲ್ಲಿ ಬರ್ತ್‌ಡೇ ಸೆಲೆಬ್ರೆಷನ್‌ನಲ್ಲಿರುತ್ತಾರ ಎಂಬ ಸಂಶಯವೂ ಅಭಿಮಾನಿಗಳಲ್ಲಿದೆ.
(4 / 11)
ಇನ್ನು ಕೆಲವು ವರದಿಗಳ ಪ್ರಕಾರ ನಾಳೆ ಇವರಿಬ್ಬರು ಉಂಗುರ ಬದಲಾಯಿಸಿಕೊಂಡರೂ ಅಚ್ಚರಿಯಿಲ್ಲ. ಆದರೆ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ತಮ್ಮ ಸಂಬಂಧದ ಕುರಿತು ಇಲ್ಲಿಯವರೆಗೆ ಸಾರ್ವಜನಿಕವಾಗಿ ಹೇಳಿಕೊಂಡಿಲ್ಲ. ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅನ್ನೋ ರೀತಿ ಪ್ರತಿಕ್ರಿಯೆ ನೀಡುತ್ತಾರೆ.
(5 / 11)
ಹಾಲಿಡೇ ಸೀಸನ್ ಆಗಿರುವ ಕಾರಣ ಫ್ಯಾಮಿಲಿ ಸ್ಟಾರ್ ಸಿನಿಮಾವನ್ನು ಏಪ್ರಿಲ್ 5ರಂದು ಬಿಡುಗಡೆ ಮಾಡಿರುವುದಾಗಿ ವಿಜಯ್ ದೇವರಕೊಂಡ ಹೇಳಿದ್ದಾರೆ. ಇದೇ ದಿನ ರಶ್ಮಿಕಾ ಬರ್ತ್‌ಡೇ ಬಂದಿರುವುದು ಕಾಕತಾಳೀಯ ಮತ್ತು ಅದೃಷ್ಟ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
(6 / 11)
ಏಪ್ರಿಲ್ 5ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣರಿಗೆ ಎಷ್ಟು ವರ್ಷ ವಯಸ್ಸಾಗಿದೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇರಬಹುದು. ನೋಡಲು ಇನ್ನೂ ಹದಿನೆಂಟರ ತರುಣಿಯಂತೆ ಕಾಣಿಸುವ ಇವರಿಗೆ ಈಗ 27ನೇ ಹುಟ್ಟುಹಬ್ಬದ ಸಂಭ್ರಮ.
(7 / 11)
ರಶ್ಮಿಕಾ ಮಂದಣ್ಣ ಅವರು 1996ರ ಏಪ್ರಿಲ್ 5ರಂದು ಜನಿಸಿದರು. ತೆಲುಗು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದಿರುವ ಇವರು ಕರ್ನಾಟಕದ ಕೊಡಗಿನಲ್ಲಿ ಜನಿಸಿದರು.
(8 / 11)
ನಾಲ್ಕು ಸೈಮಾ ಪ್ರಶಸ್ತಿ, ಒಂದು ಫಿಲ್ಮ್ ಫೇರ್ ಸೌತ್ ಅವಾರ್ಡ್ ಪಡೆದಿರುವ ಇವರು ಈ ವರ್ಷ ಫೋರ್ಬ್ಸ್ ಇಂಡಿಯಾದ 30 ವರ್ಷದೊಳಗಿನ ಟಾಪ್ 30 ನಟಿಯರಲ್ಲಿ ಸ್ಥಾನ ಪಡೆದಿದ್ದರು.
(9 / 11)
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಇವರು ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಚಲೋ ಎನ್ನುವುದು ಇವರ ಮೊದಲ ತೆಲುಗು ಸಿನಿಮಾ. ಗೀತಾ ಗೋವಿದಂ ಸಿನಿಮಾದ ಮೂಲಕ ಇವರು ಎಲ್ಲರ ಗಮನ ಸೆಳೆದರು. ದೇವದಾಸ್, ಸರಿಲೇರು ನೀಕೆವರು ಮುಂತಾದ ಸಿನಿಮಾಗಳಲ್ಲಿ ನಟಿಸಿದ ಬಳಿಕ ಇವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು.
(10 / 11)
2021ರಲ್ಲಿ ಸುಲ್ತಾನ್ ಸಿನಿಮಾದ ಮೂಲಕ ಕಾಲಿವುಡ್ ಪ್ರವೇಶಿಸಿದರು. ಪುಷ್ಪಾ ದಿ ರೈಸ್ ಸಿನಿಮಾದ ಬಳಿಕ ಇವರು ನ್ಯಾಷನಲ್ ಕ್ರಶ್ ಆದರು. ಇದೀಗ ಪುಷ್ಪಾ 2 ಸಿನಿಮಾ ಶೂಟಿಂಗ್ ಹಂತದಲ್ಲಿದ್ದು, ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.
ಇತರ ಗ್ಯಾಲರಿಗಳು