ಆತನೊಂದಿಗೆ ಎಂಗೇಜ್‌ಮೆಂಟ್‌ ಈತನೊಂದಿಗೆ ಮದುವೆ; ಮಗನ ಸಮ್ಮುಖದಲ್ಲಿ ಬಾಯ್‌ಫ್ರೆಂಡ್‌ ಕೈ ಹಿಡಿದ ವಿಲನ್‌ ಸಿನಿಮಾ ನಟಿ ಆಮಿ ಜಾಕ್ಸನ್‌-sandalwood news the villain kannada movie actress amy jackson married 2nd boy friend ed westwick in italy rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆತನೊಂದಿಗೆ ಎಂಗೇಜ್‌ಮೆಂಟ್‌ ಈತನೊಂದಿಗೆ ಮದುವೆ; ಮಗನ ಸಮ್ಮುಖದಲ್ಲಿ ಬಾಯ್‌ಫ್ರೆಂಡ್‌ ಕೈ ಹಿಡಿದ ವಿಲನ್‌ ಸಿನಿಮಾ ನಟಿ ಆಮಿ ಜಾಕ್ಸನ್‌

ಆತನೊಂದಿಗೆ ಎಂಗೇಜ್‌ಮೆಂಟ್‌ ಈತನೊಂದಿಗೆ ಮದುವೆ; ಮಗನ ಸಮ್ಮುಖದಲ್ಲಿ ಬಾಯ್‌ಫ್ರೆಂಡ್‌ ಕೈ ಹಿಡಿದ ವಿಲನ್‌ ಸಿನಿಮಾ ನಟಿ ಆಮಿ ಜಾಕ್ಸನ್‌

ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ ಮದುವೆ ಸಂಜೆ ಡಿವೋರ್ಸ್‌ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ಮನಸ್ಸುಗಳು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಏನೋ ಒಂದು ಮನಸ್ತಾಪದಿಂದ ದೂರಾಗಿಬಿಡುತ್ತಾರೆ.

 ಸಿನಿಮಾರಂಗದಲ್ಲಿ ಕೂಡಾ ಇಂಥಹ ವಿಚಾರಗಳೇ ಹೆಚ್ಚು ಸದ್ದು ಮಾಡುತ್ತಿವೆ. ನಿನ್ನನ್ನು ಒಂದು ಕ್ಷಣವೂ ಬಿಟ್ಟಿರಲಾರೆ ಎಂದು ಕೈ ಕೈ ಹಿಡಿದು ಸುತ್ತಾಡುವ ಜೋಡಿಗಳೇ ಡಿವೋರ್ಸ್‌ ಅನೌನ್ಸ್‌ ಮಾಡುತ್ತಿದ್ದಾರೆ. 
icon

(1 / 10)

 ಸಿನಿಮಾರಂಗದಲ್ಲಿ ಕೂಡಾ ಇಂಥಹ ವಿಚಾರಗಳೇ ಹೆಚ್ಚು ಸದ್ದು ಮಾಡುತ್ತಿವೆ. ನಿನ್ನನ್ನು ಒಂದು ಕ್ಷಣವೂ ಬಿಟ್ಟಿರಲಾರೆ ಎಂದು ಕೈ ಕೈ ಹಿಡಿದು ಸುತ್ತಾಡುವ ಜೋಡಿಗಳೇ ಡಿವೋರ್ಸ್‌ ಅನೌನ್ಸ್‌ ಮಾಡುತ್ತಿದ್ದಾರೆ. ( )

ಇತ್ತೀಚೆಗೆ ಮೊದಲ ಬಾಯ್‌ಫ್ರೆಂಡ್‌ನಿಂದ ದೂರವಾಗಿದ್ದ ದಿ ವಿಲನ್‌ ಸಿನಿಮಾ ನಟಿ ಈಗ 2ನೇ ಬಾಯ್‌ಫ್ರೆಂಡ್‌ ಕೈ ಹಿಡಿದಿದ್ದಾರೆ. ಮದುವೆ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(2 / 10)

ಪ್ರಿಯತಮ ಈದ್‌ ವೆಸ್ಟ್‌ವಿಕ್‌ ಜೊತೆಗಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆತ ಕೂಡಾ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದು ಮದುವೆ ಆಗೋಣ ಬಾ ಚೆಲುವೆ ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. 
icon

(3 / 10)

ಆಮಿ ಜಾಕ್ಸನ್‌ ಮೂಲತ: ಬ್ರಿಟನ್‌ ಮೂಲದ ಮಾಡೆಲ್‌. 2010 ರಲ್ಲಿ ಈ ಬ್ಯೂಟಿ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. 
icon

(4 / 10)

ಜಾರ್ಜ್‌ ಪನಿಯೊಟು ಜೊತೆ ಡೇಟಿಂಗ್‌ನಲ್ಲಿದ್ದ ಆಮಿ ಜಾಕ್ಸನ್‌ ಮದುವೆಗೂ ಮುನ್ನ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದರು. ಮಗು ಜನಿಸಿದ ಬಳಿಕ ನಿಶ್ಚಿತಾರ್ಥ ಮಾಡಿಕೊಂಡರು. 
icon

(5 / 10)

ಕೆಲವು ದಿನಗಳಿಂದ ಹಾಲಿವುಡ್‌ ನಟ ಈದ್‌ ವೆಸ್ಟ್‌ವಿಕ್‌ ಜೊತೆ ಪ್ರೀತಿಯಲ್ಲಿದ್ದ ಆಮಿ ಜಾಕ್ಸನ್‌ ಈಗ ಆತನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
icon

(6 / 10)

ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಮೊದಲ ಬಾಯ್‌ ಫ್ರೆಂಡ್‌ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಆಮಿ ಜಾಕ್ಸನ್‌, ಈಗ ಮತ್ತೆ ಮಗನ ಸಮ್ಮುಖದಲ್ಲಿ ಎರಡನೇ ಬಾಯ್‌ಫ್ರೆಂಡ್‌ ಮದುವೆ ಆಗಿದ್ದಾರೆ. 
icon

(7 / 10)

ಇಟಲಿಯ ಚರ್ಚ್‌ವೊಂದರಲ್ಲಿ ಮದುವೆ ಆಗಿರುವ ಆಮಿ ಜಾಕ್ಸನ್‌, ನಂತರ ರೆಸ್ಟೊರೆಂಟ್‌ನಲ್ಲಿ ಆತ್ಮೀಯರಿಗಾಗಿ ಪಾರ್ಟಿ ಏರ್ಪಡಿಸಿದ್ದಾರೆ. 
icon

(8 / 10)

ಮೆಚ್ಚಿನ ನಟಿಯ ಮದುವೆಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. 
icon

(9 / 10)

ಮೆಚ್ಚಿನ ನಟಿಯ ಮದುವೆಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. 

ಮಗ ಆಂಡ್ರಿಯಾಸ್‌ ಜೊತೆ ನಟಿ ಆಮಿ ಜಾಕ್ಸನ್‌
icon

(10 / 10)

ಮಗ ಆಂಡ್ರಿಯಾಸ್‌ ಜೊತೆ ನಟಿ ಆಮಿ ಜಾಕ್ಸನ್‌

ಇತರ ಗ್ಯಾಲರಿಗಳು