ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೀರ್ತಿನಾ ನೀವು ಮಿಸ್ ಮಾಡಿಕೊಳ್ತೀದ್ದೀರಾ? ಈಗ ಅವರೇನು ಮಾಡ್ತಿದ್ದಾರೆ ನೋಡಿ
- ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೀರ್ತಿಯನ್ನು ತುಂಬಾ ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅವರ ಪಾತ್ರ ಇಲ್ಲದಂತಾದಾಗ ಜನ ಕೀರ್ತಿ ಇಲ್ಲದಿದ್ದರೆ ನೋಡೋಕೆ ಬೋರ್ ಆಗುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದರು.
- ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೀರ್ತಿಯನ್ನು ತುಂಬಾ ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅವರ ಪಾತ್ರ ಇಲ್ಲದಂತಾದಾಗ ಜನ ಕೀರ್ತಿ ಇಲ್ಲದಿದ್ದರೆ ನೋಡೋಕೆ ಬೋರ್ ಆಗುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದರು.
(1 / 9)
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರದಲ್ಲಿ ಅಭಿನಯಿಸಿದ ತನ್ವಿ ರಾವ್ ಎಲ್ಲರ ಮನ ಗೆದ್ದಿದ್ದರು. ಅವರ ಅಭಿನಯವನ್ನು ಹಲವರು ಮೆಚ್ಚಿಕೊಂಡಿದ್ದರು.
(2 / 9)
ಹೀಗಿರುವಾಗ ಕಥೆ ತಿರುವು ಪಡೆದುಕೊಂಡು ಕೀರ್ತಿ ಸಾಯುತ್ತಾಳೆ. ಹೀಗಾದಾಗ ತನ್ವಿ ಅವರೂ ಸಹ ಸೀರಿಯಲ್ನಿಂದ ದೂರ ಸರಿಯಬೇಕಾಗುತ್ತದೆ. ಆದರೂ ಜನ ಈಗ ತನ್ವಿ ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಕಾತರದಿಂದಿದ್ದಾರೆ.
(3 / 9)
ತನ್ವಿ ರಾವ್ ಅವರು ಈ ಹಿಂದೆ 'ರಾಧೆ ಶ್ಯಾಮ' ಧಾರಾವಾಹಿಯಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದರು. ಅದಾದ ನಂತರದಲ್ಲಿ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅಭಿನಯಿಸಿದ್ರು.
(4 / 9)
ಅವರು ಲಕ್ಷ್ಮೀ ಪಾತ್ರಕ್ಕೆ ಆಡಿಷನ್ ನೀಡಿದ್ದರಂತೆ ಅದರೆ ಅವರ ಕಣ್ಣಿನ ಕಾರಣದಿಂದ ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡಿದ್ದರಂತೆ. ಈ ಹಿಂದೆ ರಾಧೆ ಶ್ಯಾಮ ಮಾಡುವಾಗ ಲೆನ್ಸ್ ಹಾಕುತ್ತಿದ್ದರಂತೆ.
(5 / 9)
ಕಾಜುಗಣ್ಣು ಇರುವುದು ನನಗೆ ವರವೂ ಹೌದು, ಶಾಪವೂ ಹೌದು ಎಂದು ಅವರು ಹೇಳುತ್ತಾರೆ. ಇನ್ನು ಅವರು ಮೊದಲಿನಿಂದಲೂ ನೃತ್ಯ ಹಾಗೂ ಅಭಿನಯ ಎರಡರಲ್ಲೂ ಪರಿಣಿತರು.
(6 / 9)
ತನ್ವಿ ಅವರು ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯ ಹಾಗೂ ಇತರ ಪ್ರಕಾರದ ನೃತ್ಯಗಳನ್ನು ಮಾಡಿ ಸೈ ಎನಿಸಿಕೊಂಡವರು. ಅವರ ಅಭಿನಯ ಇಷ್ಟು ಸೊಗಸಾಗಿರಲೂ ನೃತ್ಯಾಭ್ಯಾಸ ಕೂಡ ಒಂದು ಮುಖ್ಯ ಕಾರಣ.
(7 / 9)
ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಬಾಲಿವುಡ್ ಚಲನಚಿತ್ರ ‘ ಗುಲಾಬಿ ಗ್ಯಾಂಗ್’ ನಲ್ಲಿ ಅವರು ಮೊದಲು ನಟನೆ ಮಾಡಿದ್ದರು.
(8 / 9)
ಅವರು ಈಗ ಪ್ರಸ್ತುತ ನಾಟ್ಯದ ಬಗ್ಗೆ ಮತ್ತೆ ಹೆಚ್ಚಿನ ಗಮನಕೊಡುತ್ತಿದ್ದಾರೆ. ಡಾನ್ಸ್ ವಿಡಿಯೋಗಳನ್ನು ಹೆಚ್ಚಾಗಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ಕಟೀಲು ದೇವಸ್ಥಾನದಲ್ಲಿ ಭರತನಾಟ್ಯ ಮಾಡಿದ್ದಾರೆ.
ಇತರ ಗ್ಯಾಲರಿಗಳು