Lakshmi Baramma Serial: ಓಡಿ ಬಂದು ಲಕ್ಷ್ಮೀಯನ್ನು ತಬ್ಬಿಕೊಂಡ ಕೀರ್ತಿ; ಕಾವೇರಿಗೆ ಗುಟ್ಟಾಗಿ ಮಾಹಿತಿ ನೀಡಿದ ಚಿಂಗಾರಿ
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma Serial: ಓಡಿ ಬಂದು ಲಕ್ಷ್ಮೀಯನ್ನು ತಬ್ಬಿಕೊಂಡ ಕೀರ್ತಿ; ಕಾವೇರಿಗೆ ಗುಟ್ಟಾಗಿ ಮಾಹಿತಿ ನೀಡಿದ ಚಿಂಗಾರಿ

Lakshmi Baramma Serial: ಓಡಿ ಬಂದು ಲಕ್ಷ್ಮೀಯನ್ನು ತಬ್ಬಿಕೊಂಡ ಕೀರ್ತಿ; ಕಾವೇರಿಗೆ ಗುಟ್ಟಾಗಿ ಮಾಹಿತಿ ನೀಡಿದ ಚಿಂಗಾರಿ

Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ, ವೈಷ್ಣವ್ ಮತ್ತು ಕೀರ್ತಿ ಮೂರೂ ಜನ ಈಗ ಮೊದಲಿನದೇ ಪರಿಸ್ಥಿತಿ ಎದುರಿಸುತ್ತಾ ಇದ್ದಾರೆ. ಕೀರ್ತಿಯನ್ನು ಕಾರಿನಲ್ಲಿ ವೈಷ್ಣವ್ ಕರೆದುಕೊಂಡು ಹೋಗಿರ್ತಾನೆ.

ಓಡಿ ಬಂದು ಲಕ್ಷ್ಮೀಯನ್ನು ತಬ್ಬಿಕೊಂಡ ಕೀರ್ತಿ
ಓಡಿ ಬಂದು ಲಕ್ಷ್ಮೀಯನ್ನು ತಬ್ಬಿಕೊಂಡ ಕೀರ್ತಿ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಕೀರ್ತಿ ಇಬ್ಬರೂ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿರ್ತಾರೆ. ಆದರೆ ಮನೆಯಲ್ಲಿ ಎಲ್ಲರಿಗೂ ಕೀರ್ತಿ ಎಲ್ಲಿಗೆ ಹೋಗಿದ್ದಾಳೆ ಎಂದು ತೋಚದೆ ತುಂಬಾ ಗಾಬರಿ ಆಗಿರುತ್ತದೆ. ಹೀಗಿರುವಾಗ ಕೀರ್ತಿ ಅಮ್ಮ ಹಾಗೂ ಸುಪ್ರಿತಾ ತುಂಬಾ ತಲೆ ಕೆಡಿಸಿಕೊಂಡು ಅವಳನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ಲಕ್ಷ್ಮೀಗೆ ಈ ಬಗ್ಗೆ ವಿಷಯ ಗೊತ್ತಾಗಿ ಅವಳೂ ಸಹ ಹುಡುಕಲು ಬರುತ್ತಾಳೆ. ಅವಳು ಹುಡುಕಲು ಬಂದು ನೋಡಿದಾಗ ವೈಷ್ಣವ್ ಕಾರಿನಿಂದ ಕೀರ್ತಿ ಇಳಿದು ಬರುತ್ತಾಳೆ.

ವೈಷ್ಣವ್‌ಗೆ ಒಮ್ಮೆ ಯಾಕೆ ಹೀಗೆಲ್ಲ ಆಗ್ತಾ ಇದೆ ಎಂದು ಅರ್ಥಾನೇ ಆಗೋದಿಲ್ಲ. ಯಾಕೆಂದರೆ ಕೀರ್ತಿ ಓಡಿ ಬಂದು ಲಕ್ಷ್ಮೀಯನ್ನು ತಬ್ಬಿಕೊಳ್ಳುತ್ತಾಳೆ. ಅವಳಿಗೆ ಇತ್ತೀಚಿನ ದಿನದಲ್ಲಿ ಲಕ್ಷ್ಮೀ ಎಂದರೆ ತುಂಬಾ ಅಚ್ಚುಮೆಚ್ಚು. ಸುಪ್ರಿತಾ ಇವರಿಬ್ಬರ ಮೇಲೆ ಯಾರದೋ ದೃಷ್ಟಿ ಇದೆ ಎಂದು ಹೇಳುತ್ತಿರುತ್ತಾಳೆ. ಅಷ್ಟರಲ್ಲೇ ಚಿಂಗಾರಿ ದೂರದಲ್ಲಿ ನಿಂತು ಇಲ್ಲಿ ಏನಾಗುತ್ತಿದೆ ಎಂಬುದನ್ನೆಲ್ಲ ವೀಕ್ಷಿಸುತ್ತಾ ಇರುತ್ತಾಳೆ. ಅವಳಿಗೆ ಸಾಕಷ್ಟು ವಿಚಾರಗಳು ತಿಳಿಯುತ್ತದೆ. ಯಾರೋ ಕೀರ್ತಿಯನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ಅನಿಸುತ್ತದೆ.

ಚಿಂಗಾರಿಯಿಂದ ಕಾವೇರಿಗೆ ಮಾಹಿತಿ
ಚಿಂಗಾರಿ ಇದೆಲ್ಲವನ್ನು ನೋಡಿಕೊಂಡು ಹೋಗಿ ಜೈಲಿನಲ್ಲಿರುವ ಕಾವೇರಿಗೆ ವರದಿ ಒಪ್ಪಿಸುತ್ತಾಳೆ. ವೈಷ್ಣವ್, ಲಕ್ಷ್ಮೀ ಹಾಗೂ ಕೀರ್ತಿ ಕಂಡ ವಿಚಾರವನ್ನು ಹೇಳುತ್ತಾಳೆ. ಈ ವಿಷಯವನ್ನು ತಿಳಿದುಕೊಂಡ ಕಾವೇರಿ. “ಕಾವೇರಿ ಎಲ್ಲಿದ್ದಾಳೋ ಅಲ್ಲಿಂದಲೇ ಗೇಮ್‌ ಸ್ಟಾರ್ಟ್‌” ಎಂದು ಹೇಳುತ್ತಾಳೆ. ಯಾರಿಗೂ ಯಾವ ಸುಳಿವೂ ಸಿಗದಂತೆ ಕಾವೇರಿ ಎಲ್ಲ ಮಾಹಿತಿಯನ್ನು ಕಲೆ ಹಾಕುತ್ತಾಳೆ. ಆ ನಂತರ ತನ್ನ ಆಟವನ್ನು ಆರಂಭಿಸುತ್ತಾಳೆ.

ಈ ಪ್ರೋಮೋ ಬಿಡುಗಡೆಯಾದ ನಂತರ ವೀಕ್ಷಕರು ಈ ಧಾರಾವಾಹಿ ಮತ್ತೆ ಮೊದಲಿನಂತೆ ಆಗುತ್ತದೆ. ಕಾವೇರಿ ಮತ್ತೆ ತನ್ನ ಬುದ್ದಿಯನ್ನು ಉಪಯೋಗಿಸಿ ಮನೆ ನೆಮ್ಮದಿ ಹಾಳು ಮಾಡುತ್ತಾಳೆ ಎಂದಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

Whats_app_banner