Annayya Serial: ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸಿಕೊಡು ಎಂದು ಕೇಳಿದ ಪಾರು; ಮಾತು ಕೇಳಿ ಕಂಗಾಲಾಗಿ ನಿಂತ ಶಿವು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸಿಕೊಡು ಎಂದು ಕೇಳಿದ ಪಾರು; ಮಾತು ಕೇಳಿ ಕಂಗಾಲಾಗಿ ನಿಂತ ಶಿವು

Annayya Serial: ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸಿಕೊಡು ಎಂದು ಕೇಳಿದ ಪಾರು; ಮಾತು ಕೇಳಿ ಕಂಗಾಲಾಗಿ ನಿಂತ ಶಿವು

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತುಂಬಾ ದುಃಖದಲ್ಲಿದ್ದಾಳೆ. ಅವಳ ನೋವನ್ನು ನೋಡಲಾಗದೇ ಶಿವು ಕೊರಗುತ್ತಿದ್ದಾನೆ. ಆದರೆ ತಂಗಿಯರಿಗೆ ಇದ್ಯಾವುದರ ಸುಳಿವೇ ಇಲ್ಲ. ಅವರಿಗೆ ಆಶ್ಚರ್ಯವಾಗಿದೆ. ಅಣ್ಣನನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸಿಕೊಡು ಎಂದು ಕೇಳಿದ ಪಾರು
ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸಿಕೊಡು ಎಂದು ಕೇಳಿದ ಪಾರು

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಈಗ ಎಲ್ಲ ಸತ್ಯ ಅರ್ಥವಾಗಿದೆ. ಸಿದ್ದಾರ್ಥ್‌ ತನಗೆ ಮೋಸ ಮಾಡಿದ್ದಾನೆ ಎಂದು ಅರಿತು ಅಳುತ್ತಿದ್ದಾಳೆ. ನನಗೆ ಇಲ್ಲಿ ಬದುಕಲು ಕಷ್ಟ ಆಗ್ತಿದೆ ಎಂದು ಹೇಳಿಕೊಂಡಿದ್ದಾಳೆ. ಮೆಡಿಕಲ್ ಕ್ಯಾಂಪ್‌ಗೆ ಎಂದು ಹೋಗಿ ಬರುವಾಗ ಅವಳಿಗೆ ಎಲ್ಲ ಸತ್ಯದ ಅರಿವಾಗಿದೆ ಎಂದು ಮನೆಯಲ್ಲಿರುವ ಅಣ್ಣಯ್ಯನ ತಂಗಿಯರಿಗೆ ತಿಳಿದಿರುವುದಿಲ್ಲ. ಅವರು ಅಣ್ಣ ಹಾಗೂ ಅತ್ತಿಗೆ ಬಂದ ತಕ್ಷಣ “ಎಲ್ಲಿಗ್ ಹೋಗಿದ್ರೀ?” ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ಆ ಪ್ರಶ್ನೆಗೆ ಉತ್ತರ ನೀಡದೇ ಪಾರು ಒಳಗಡೆ ಹೋಗುತ್ತಾಳೆ.

ಪಾರು ನಿರ್ಧಾರಕ್ಕೆ ಒಪ್ಪಿಗೆ ಸಿಗುತ್ತಾ?

ಅವಳ ಹಿಂದಿನಿಂದ ಶಿವು ಹೋಗುತ್ತಾನೆ. ಆದರೆ ಅವಳು ತಂಗಿಯರ ಮುಂದೆ ಅಳುವುದಿಲ್ಲ. ಕೋಣೆಗೆ ಹೋದ ತಕ್ಷಣ ಅವಳ ಅಳು ಆರಂಭವಾಗುತ್ತದೆ. ಅವಳು ತುಂಬಾ ನೊಂದುಕೊಂಡು ಮಾತಾಡುತ್ತಾಳೆ. ನನಗೆ ಇದೆಲ್ಲವನ್ನೂ ಅರಿಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. “ನನ್ನ ಬದುಕು ಹೇಗಾಯ್ತು ಅಂತ ನೋಡ್ದ್ಯಲ್ಲ ಮಾವ” ಎಂದು ಹೇಳುತ್ತಾ ದೊಡ್ಡದಾಗಿ ಅಳುತ್ತಾಳೆ. ಆದರೆ ಅವನಿಗೆ ಯಾವ ರೀತಿ ಸಮಾಧಾನ ಮಾಡಬೇಕು ಎಂದೂ ತಿಳಿಯೋದಿಲ್ಲ.

ನಾನು ಹೈಯರ್ ಸ್ಟಡೀಸ್‌ಗಾಗಿ ಫಾರಿನ್‌ಗೆ ಹೋಗುತ್ತೇನೆ. ನನ್ನ ಕಳಿಸಿಕೊಡು ಎಂದು ಹೇಳುತ್ತಾಳೆ. ಕಳಿಸಿಕೊಡ್ತೀನಿ ಅಂತ ಪ್ರಮಾಣ ಮಾಡು ಎಂದು ಕೇಳುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner