Tirupati Tourism: ತಿರುಪತಿಯಲ್ಲಿ ಮಿಸ್ ಮಾಡದೇ ನೋಡಬೇಕಾದ 9 ಪ್ರವಾಸಿ ಆಕರ್ಷಣೆಗಳಿವು - ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tirupati Tourism: ತಿರುಪತಿಯಲ್ಲಿ ಮಿಸ್ ಮಾಡದೇ ನೋಡಬೇಕಾದ 9 ಪ್ರವಾಸಿ ಆಕರ್ಷಣೆಗಳಿವು - ಚಿತ್ರನೋಟ

Tirupati Tourism: ತಿರುಪತಿಯಲ್ಲಿ ಮಿಸ್ ಮಾಡದೇ ನೋಡಬೇಕಾದ 9 ಪ್ರವಾಸಿ ಆಕರ್ಷಣೆಗಳಿವು - ಚಿತ್ರನೋಟ

Tirupati Tourism: ತಿರುಮಲ ತಿರುಪತಿ ದೇವಸ್ಥಾನಗಳು ಜಗತ್ತಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ, ಅಲ್ಲಿ ಗಮನಿಸಲೇ ಬೇಕಾದ ಅನೇಕ ವಿಚಾರಗಳಿವೆ. ನೋಡಲೇ ಬೇಕಾದ ಅನೇಕ ಸ್ಥಳಗಳೂ ಇವೆ. ತಿರುಪತಿಯಲ್ಲಿ ಮಿಸ್ ಮಾಡದೇ ನೋಡಬೇಕಾದ 9 ಪ್ರವಾಸಿ ಆಕರ್ಷಣೆಗಳಿವು - ಫೋಟೋಸ್‌ ಮತ್ತು ವಿವರ ಇಲ್ಲಿದೆ ಗಮನಿಸಿ.

ಜಗತ್ತಿನ ಅತಿಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾಗಿರುವ ತಿರುಮಲ ತಿರುಪತಿ ದೇವಸ್ಥಾನಗಳು ಧಾರ್ಮಿಕ ಪ್ರವಾಸೋದ್ಯಮದ ಬಹುದೊಡ್ಡ ಶಕ್ತಿಕೇಂದ್ರ. ನಿತ್ಯವೂ ಇಲ್ಲಿ  50,000 ದಿಂದ 1 ಲಕ್ಷದ ಆಸುಪಾಸಿನಲ್ಲಿ ಭಕ್ತರು ಬಂದು ದೇವರ ದರ್ಶನ ಮಾಡುತ್ತಾರೆ. ಹೀಗೆ ತಿರುಪತಿಗೆ ಬಂದವರು ತಪ್ಪಿಸಿಕೊಳ್ಳದೇ ನೋಡಬೇಕಾದ ಒಂಬತ್ತು ಪ್ರವಾಸಿ ಆಕರ್ಷಣೆಗಳಿವೆ. ಅವುಗಳ ವಿವರ ಇಲ್ಲಿದೆ ನೋಡಿ.
icon

(1 / 10)

ಚಿನ್ನದ ಶಿಖರವನ್ನು ಹೊಂದಿದ ಗರ್ಭಗುಡಿ ಹೊಂದಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ. ಇದುವೇ ತಿರುಮಲ ತಿರುಪತಿಯ ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರ. ಇಲ್ಲಿಗೆ ನಿತ್ಯವೂ 1 ಲಕ್ಷದಷ್ಟು ಭಕ್ತರು ಆಗಮಿಸುತ್ತಾರೆ. ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಈ ದೇವಸ್ಥಾನದ ಆಡಳಿತ ಮಂಡಳಿ. ಅಕ್ಟೋಬರ್ ತಿಂಗಳಲ್ಲಿ ಬ್ರಹ್ಮೋತ್ಸವ ಎಂಬ ವಾರ್ಷಿಕ ಉತ್ಸವ ನಡೆಯುವ ಸಂದರ್ಭ ಭಕ್ತರು ಹೆಚ್ಚಾಗಿರುತ್ತಾರೆ. ದರ್ಶನಕ್ಕೆ ಇಲ್ಲಿ ಮೊದಲೇ ಟಿಕೆಟ್ ಕಾಯ್ದಿರಿಸಬೇಕು. 
icon

(2 / 10)

ತಿರುಪತಿಯ ಹನ್ನೆರಡನೇ ಶತಮಾನದ ಗೋವಿಂದ ರಾಜಸ್ವಾಮಿ ದೇವಸ್ಥಾನ, ರೈಲ್ವೆ ನಿಲ್ದಾಣದ ಸಮೀಪ ಇದೆ. 50 ಮೀಟರ್ ಎತ್ತರ ಏಳು ಅಂತಸ್ತಿನ ಗೋಪುರ ಇಲ್ಲಿ ವಿಶೇಷ ಆಕರ್ಷಣೆ. ರಾಮಾಯಣದ ಚಿತ್ರಗಳು ಸೇರಿ ಇನ್ನೂ ಕೆಲವು ಆಕರ್ಷಣೆಗಳು ಇಲ್ಲಿವೆ.
icon

(3 / 10)

ತಿರುಮಲದಿಂದ 5 ಕಿ.ಮೀ. ಅಂತರದಲ್ಲಿರುವ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನ ಇನ್ನೊಂದು ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರ. 
icon

(4 / 10)

ತಿರುಪತಿಯಲ್ಲೇ ಇರುವಂತಹ ಶ್ರೀ ಕಪಿಲೇಶ್ವರ ಸ್ವಾಮಿ ದೇವಸ್ಥಾನ ಕೂಡ ಗಮನಿಸಬೇಕಾದ ಕ್ಷೇತ್ರ. ಇಲ್ಲಿ ತಿಳಿದುಕೊಳ್ಳುವುದಕ್ಕೆ ಕಪಿಲಾ ತೀರ್ಥ ಸೇರಿ ಹಲವು ವಿಷಯಗಳಿವೆ.
icon

(5 / 10)

ತಿರುಮಲ ಬೆಟ್ಟಗಳ ವ್ಯಾಪ್ತಿಯಲ್ಲಿ ಶೇಷಾಚಲಂ ಬೆಟ್ಟಕ್ಕೆ ಸಮೀಪದಲ್ಲೇ 353 ಚದರ ಕಿ.ಮೀ. ವ್ಯಾಪ್ತಿಯಲ್ಲಿದೆ ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನ. ಇಲ್ಲಿ ನಿತ್ಯಹರಿದ್ವರ್ಣದ ಕಾಡು, ವನ್ಯಜೀವಿ ಸಂಕುಲ ವಿಶೇಷ. 200ಕ್ಕೂ ಹೆಚ್ಚು ಪ್ರಾಣಿ, ಪಕ್ಷಿ ಪ್ರಬೇಧಗಳಿವೆ.
icon

(6 / 10)

ತಿರುಪತಿಯ ಯಾದಾದ್ರಿ ಬೆಟ್ಟ ಪ್ರದೇಶದ ಸಮೀಪ 5,533 ಎಕರೆ ಪ್ರದೇಶದಲ್ಲಿದೆ ಈ ಶ್ರೀ ವೆಂಕಟೇಶ್ವರ ಜೈವಿಕ ಉದ್ಯಾನ. ಇದನ್ನು ನೆಹರೂ ಜೈವಿಕ ಉದ್ಯಾನದ ಮಾದರಿಯಲ್ಲೇ ನಿರ್ಮಿಸಲಾಗಿದೆ. ಇಲ್ಲಿ ಸಾರಂಗ, ಕಾಂಗರೂ, ಝೀಬ್ರಾ ಸೇರಿ ಹಲವು ವನ್ಯ ಮೃಗಗಳಿದ್ದು, ಪ್ರವಾಸಿ ಆಕರ್ಷಣೆಯ ಭಾಗವಾಗಿದೆ. ಡೈನೋಸಾರ್ ಪಾರ್ಕ್‌ ಕೂಡ ಇದೆ. ಅದನ್ನು ನೋಡಲು ಮರೆಯಬೇಡಿ.
icon

(7 / 10)

ತಿರುಪತಿಯ ಇನ್ನೊಂದು ಆಕರ್ಷಣೆ 460 ಎಕರೆ ಪ್ರದೇಶದಲ್ಲಿರುವ ಟಿಟಿಡಿ ಉದ್ಯಾನ. ಇದು ಯೆರ್ಪೇಡು ಕಣಿವೆ ಹೊರಭಾಗದಲ್ಲಿದೆ. ಬೊಟಾನಿಕಲ್ ಗಾರ್ಡನ್ ಆಗಿ ಗೂಪುಗೊಂಡಿರುವ ಉದ್ಯಾನದಿಂದಲೇ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವರ ಅಲಂಕಾರಕ್ಕೆ ಹೂವುಗಳನ್ನು ಕೊಂಡೊಯ್ಯಲಾಗುತ್ತದೆ. ಇಲ್ಲಿ ಭಾರತ ಮತ್ತು ವಿದೇಶಗಳ ಹೂವುಗಳ ತಳಿಗಳನ್ನು ಬೆಳೆಸಲಾಗಿದೆ.
icon

(8 / 10)

ತಿರುಪತಿಯ ಇನ್ನೊಂದು ಪ್ರಮುಖ ಆಕರ್ಷಣೆ ಅಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರ. ಇದು 2012ರಲ್ಲಿ ಉದ್ಘಾಟನೆಗೊಂಡಿದ್ದು, 6 ಎಕರೆ ಪ್ರದೇಶದಲ್ಲಿದೆ. ಅತ್ಯಾಧುನಿಕ ವೈಜ್ಞಾನಿಕ ಪಾರ್ಕ್ ಇದಾಗಿದ್ದು, ಹ್ಯುಮನಾಯ್ಡ್‌ ಗ್ಯಾಲರಿ, 3ಡಿ ಶೋ ಸೇರಿ ವಿಜ್ಙಾನದ ಕುತೂಹಲ ತಣಿಸುವ ಅನೇಕ ವಿಷಯಗಳಿವೆ.
icon

(9 / 10)

ಇಷ್ಟೆಲ್ಲ ನೋಡಿದ ಬಳಿಕ ಈ ಕೋಟೆ ಮಿಸ್‌  ಮಾಡಿಕೊಳ್ಳುವುದಕ್ಕಾಗಲ್ಲ. ಚಂದ್ರಗಿರಿ ಕೋಟೆ ಇದು. ಚಂದ್ರಗಿರಿ ಕೋಟೆಯು ತಿರುಪತಿಯ ಚಂದ್ರಗಿರಿ ಉಪನಗರದಲ್ಲಿರುವ ಒಂದು ಐತಿಹಾಸಿಕ ಕೋಟೆ. ವಿಜಯನಗರ ಚಕ್ರವರ್ತಿಗಳಿಗೆ ಸಂಬಂಧಿಸಿದ ಕೋಟೆ ಇದಾಗಿದ್ದು, 1460ರಲ್ಲಿ ಓದ್ರ ಗಜಪತಿ ಕಪಿಲೇಂದ್ರ ದೇವ್ ಚಂದ್ರಗಿರಿ ಕೋಟೆಯನ್ನು ವಶಪಡಿಸಿಕೊಂಡರು ಎಂಬ ಉಲ್ಲೇಖವಿದೆ. 
icon

(10 / 10)

ಇತರ ಗ್ಯಾಲರಿಗಳು