ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vijya Devarakonda: ಮಮಿತಾ ಬೈಜು ವರ್ಸಸ್‌ ಭಾಗ್ಯಶ್ರೀ ಬೋರ್ಸೆ- ವಿಜಯ ದೇವರಕೊಂಡ ಮುಂದಿನ ಸಿನಿಮಾಕ್ಕೆ ಯಾರು ಹೀರೋಯಿನ್‌

Vijya Devarakonda: ಮಮಿತಾ ಬೈಜು ವರ್ಸಸ್‌ ಭಾಗ್ಯಶ್ರೀ ಬೋರ್ಸೆ- ವಿಜಯ ದೇವರಕೊಂಡ ಮುಂದಿನ ಸಿನಿಮಾಕ್ಕೆ ಯಾರು ಹೀರೋಯಿನ್‌

Vijya Devarakonda next movie: ಫ್ಯಾಮಿಲಿಸ್ಟಾರ್‌ ಬಳಿಕ ವಿಜಯ ದೇವರಕೊಂಡ ತಮ್ಮ ಮುಂದಿನ ಸಿನಿಮಾದ ಶೂಟಿಂಗ್‌ಗೆ ಸಜ್ಜಾಗುತ್ತಿದ್ದಾರೆ. ವಿಜಯ ದೇವರಕೊಂಡರ ಮುಂದಿನ ಸಿನಿಮಾದಿಂದ ಶ್ರೀಲೀಲಾ ಹೊರಬಂದಿದ್ದಾರೆ. ಈ ಸಿನಿಮಾಕ್ಕೆ ಪ್ರೇಮಲು ಖ್ಯಾತಿಯ ಮಮಿತಾ ಬೈಜು ಆಯ್ಕೆಯಾಗಲಿದ್ದಾರೆಯೇ? ಅಥವಾ ಭಾಗ್ಯಶ್ರೀ ಬೋರ್ಸೆ ಆಯ್ಕೆಯಾಗುತ್ತಾರ? ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ವಿಜಯ್‌ ದೇವರಕೊಂಡ ಮುಂದಿನ ಸಿನಿಮಾಕ್ಕೆ ನಾಯಕಿ ಯಾರು ಎಂಬ ಚರ್ಚೆ ಆರಂಭವಾಗಿದೆ. ಆರಂಭದಲ್ಲಿ ವಿಜಯ್ ದೇವರಕೊಂಡ ಮತ್ತು ಗೌತಮ್ ತಿನ್ನನುರಿ ಅವರ ನಾಯಕಿಯಾಗಿ ಶ್ರೀಲೀಲಾ ಅವರನ್ನು ಆಯ್ಕೆ ಮಾಡಲಾಯಿತು. ಚಿತ್ರದ ಬಿಡುಗಡೆ ಸಮಾರಂಭದಲ್ಲಿ ಶ್ರೀಲೀಲಾ ಭಾಗವಹಿಸಿದ್ದರು. 
icon

(1 / 6)

ವಿಡಿ 12 ಚಿತ್ರದಿಂದ ಶ್ರೀಲೀಲಾ ಹಿಂದೆ ಸರಿದಿದ್ದು, ಅವರ ಬದಲಿಗೆ ಪ್ರೇಮಲು ಖ್ಯಾತಿಯ ಮಮತಾ ಬೈಜು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
icon

(2 / 6)

ಪ್ರೇಮಲು ಚಿತ್ರದ ಮೂಲಕ ಮಮತಾ ಬೈಜು ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ಈ ಮಲಯಾಳಂ ಚಿತ್ರ ತೆಲುಗಿಗೆ ಡಬ್ ಆಗಿ ವಾಣಿಜ್ಯಿಕವಾಗಿ ಯಶಸ್ವಿಯಾಗಿದೆ. ಇದೀಗ ಈ ಸಿನಿಮಾದ ನಾಯಕಿಯನ್ನೇ ವಿಜಯ್‌ ದೇವರಕೊಂಡ ಸಿನಿಮಾಕ್ಕೆ ಆಯ್ಕೆ ಮಾಡುವ ಕುರಿತು ಆಲೋಚಿಸಲಾಗುತ್ತಿದೆಯಂತೆ.
icon

(3 / 6)

ಪ್ರೇಮಲು ಚಿತ್ರ ತೆಲುಗಿನಲ್ಲಿ ಬಿಡುಗಡೆಯಾದ ಬಳಿಕ ಮಮಿತಾ ಬೈಜು ಅವರ ಅಭಿಮಾನಿ ಬಳಗ ಹೆಚ್ಚಾಗಿದೆ. ಇತರ ಕೆಲವು ತೆಲುಗು ಅವಕಾಶಗಳು ಈ ಮಲಯಾಳಂ ಸುಂದರಿಗೆ ಬಂದಿವೆ ಎಂದು ವರದಿಗಳು ತಿಳಿಸಿವೆ.
icon

(4 / 6)

ವಿಜಯ್ ದೇವರಕೊಂಡ ಅವರ ಮುಂದಿನ ಚಿತ್ರದಲ್ಲಿ ಮಮತಾ ಬೈಜು ಮತ್ತು ಮಿಸ್ಟರ್ ಬಚ್ಚನ್ ಖ್ಯಾತಿಯ ಭಾಗ್ಯಶ್ರೀ ಬೊರ್ಸೆ ನಡುವೆ ನಾಯಕಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಚಿತ್ರತಂಡ ಈ ಕುರಿತು ಇನ್ನೂ ಅಧಿಕೃತವಾಗಿ ಯಾವುದೇ ವಿವರ ನೀಡಿಲ್ಲ.
icon

(5 / 6)

ಇತ್ತೀಚೆಗೆ ಬಿಡುಗಡೆಯಾದ ಪ್ರೇಮಲು ಸಿನಿಮಾ ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಕೇರಳ ಮಾತ್ರವಲ್ಲದೆ ಹೊರರಾಜ್ಯಗಳಲ್ಲೂ ಮಮಿತಾ ಬೈಜುಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಇಂತಹ ಸಮಯದಲ್ಲಿ ಟಾಲಿವುಡ್‌ನಿಂದ ಇವರಿಗೆ ಅವಕಾಶ ದೊರಕುವ ಸಾಧ್ಯತೆ ಇದೆ ಎನ್ನಲಾಗಿದೆ. 
icon

(6 / 6)

IPL_Entry_Point

ಇತರ ಗ್ಯಾಲರಿಗಳು