Joe Biden At UNGA: ಪುಟಿನ್ ಪರಮಾಣು ಬೆದರಿಕೆ ಕಡೆಗಣಿಸಲಾಗದು: ಬೈಡನ್!
- ವಿಶ್ವಸಂಸ್ಥೆ: ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಡೀ ಯುರೋಪ್‌ಗೆ ಪರಮಾಣು ಬೆದರಿಕೆಯೊಡ್ಡಿದ್ದಾರೆ. ಪುಟಿನ್ ಅವರ ಈ ಬೆದರಿಕೆಯನ್ನು ನಾವು ಹಗರುವಾಗಿ ಪರಿಗಣಿಸಬಾರದು, ಉಕ್ರೇನ್‌ನನ್ನು ನುಂಗಲು ಯತ್ನಿಸುತ್ತಿರುವ ಪುಟಿನ್, ಸುಳ್ಳು ಜನಾಭಿಪ್ರಾಯ ಮೂಡಿಸಲು ಹೊರಟಿರುವುದು ಖಂಡನೀಯ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕಿಡಿಕಾರಿದ್ದಾರೆ. ಬೈಡನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದರು. ಬೈಡನ್ ಭಾಷಣದ ಸಾರಾಂಶ ಇಲ್ಲಿದೆ..

(1 / 5)
ಉಕ್ರೇನ್ ವಿರುದ್ಧ ಯುದ್ಧದಲ್ಲಿ ನಿರತವಾಗಿರುವ ರಷ್ಯಾ, ಈ ಯುದ್ಧಕ್ಕಾಗಿ ಭಾರೀ ಪ್ರಮಾಣದಲ್ಲಿ ಸೈನಿಕರಬನ್ನು ಕ್ರೂಢೀಕರಿಸುತ್ತಿದೆ. ಉಕ್ರೇನ್‌ನ ಕೆಲವು ಭಾಗಗಳನ್ನು ನುಂಗಲು, ಕ್ರೆಮ್ಲಿನ್ ಸುಳ್ಳು ಜನಾಭಿಪ್ರಾಯ ಸಂಗ್ರಹವನ್ನು ಆಯೋಜಿಸುತ್ತಿದೆ ಎಂದು ಜೋ ಬೈಡನ್ ಆರೋಪಿಸಿದರು.(ANI)
(2 / 5)
ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ ಪ್ರಮುಖ ಸದಸ್ಯ ರಾಷ್ಟ್ರವಾಗಿರುವ ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಮಾಡಿದೆ. ವಿಶ್ವ ಭೂಪಟದಿಂದ ಸಾರ್ವಭೌಮ ರಾಷ್ಟ್ರವೊಂದನ್ನು ಅಳಿಸಿ ಹಾಕುವ ರಷ್ಯಾದ ಈ ಪ್ರಯತ್ನವನ್ನು ನಾವೆಲ್ಲಾ ಒಕ್ಕೊರಲಿನಿಂದ ಖಂಡಿಸಬೇಕು. ವಿಶ್ವಸಂಸ್ಥೆಯ ಮೂಲ ತತ್ವಗಳನ್ನು ರಷ್ಯಾ ನಾಚಿಕೆಯಿಲ್ಲದೆ ಉಲ್ಲಂಘಿಸುತ್ತಿರುವುದು ಖಂಡನೀಯ ಎಂಧು ಕೋ ಬೈಡನ್ ಗುಡಿಗಿದರು.(ANI)
(3 / 5)
ಈ ಯುದ್ಧವು ಒಂದು ರಾಷ್ಟ್ರವಾಗಿ ಉಕ್ರೇನ್‌ನ ಅಸ್ತಿತ್ವವನ್ನು ನಿರಾಕರಿಸುತ್ತಿದೆ. ಈ ಯುದ್ಧದಿಂದ ಉಂಟಾಗಿರು ವಿನಾಶ ಊಹಿಸಲೂ ಅಆಧ್ಯವಾಗಿದೆ. ನಮ್ಮ ಉಕ್ರೇನ್ ಸಹೋದರ-ಸಹೋದರಿಯರು ಸಂಕಷ್ಟದಲ್ಲಿದ್ದಾರೆ. ನಾವು ಅವರಿಗಾಗಿ ಧ್ವನಿ ಎತ್ತಲೇಬೇಕಿದೆ. ಜನರಲ್ ಅಸೆಂಬ್ಲಿಯಲ್ಲಿ 141 ರಾಷ್ಟ್ರಗಳು ಒಗ್ಗೂಡಿ ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾದ ನಡೆಯನ್ನು ಖಂಡಿಸಿರುವುದು ಸ್ವಾಗತಾರ್ಹ ಎಂದು ಬೈಡನ್ ಹೇಳಿದರು..(ANI)
(4 / 5)
ಈ ಯುದ್ಧವು ಕೇವಲ ನಿಯಮಗಳ ಆಧಾರದ ನಮೇಲೆ ಕೊನೆಗೊಳ್ಳಬೇಕು ಎಂದು ಅಮೆರಿಕ ಬಯಸುತ್ತದೆ. ನಾವೆಲ್ಲರೂ ಸಹಿ ಹಾಕಿದ ನಿಯಮಗಳ ಆಧಾರದ ಮೇಲೆಯೇ ರಷ್ಯಾವನ್ನು ಈ ಯುದ್ಧಕ್ಕಾಗಿ ಹೊಣೆಗಾರನನ್ನಾಗಿ ಮಾಡಬೇಕು. ಯಾವುದೇ ಸಾರ್ವಭೌಮ ರಾಷ್ಟ್ರದ ಪ್ರದೇಶವನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೈಡನ್ ರಷ್ಯಾ ವಿರುದಧ ತೀವ್ರ ಆಕ್ರೋಶ ಹೊರಹಾಕಿದರು.(ANI)
ಇತರ ಗ್ಯಾಲರಿಗಳು