Basavanna Tourism: ಬಸವಣ್ಣನ ಪ್ರವಾಸ ತಾಣಗಳು, ಜನ್ಮ ಸ್ಥಳ ಬಸವನ ಬಾಗೇವಾಡಿಯ ಸ್ಮಾರಕ, ವಸ್ತು ಸಂಗ್ರಹಾಲಯ ಹೇಗಿವೆ ನೋಡಿ
- Vishwaguru Basavanna ಕರ್ನಾಟಕದಲ್ಲಿ ವಿಶ್ವಗುರು ಬಸವಣ್ಣನವರ ನಂಟು ಇರುವ ಹಲವು ಊರುಗಳಿವೆ. ಇದರಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ( Basavana Bagewadi) ಪ್ರಮುಖವಾದದ್ದು. ಇಲ್ಲಿ ರೂಪಿಸಿರುವ ಸ್ಮಾರಕ ಬಸವಣ್ಣನವರ ಹುಟ್ಟು ಬದುಕಿನ ಚಿತ್ರಣ ಕಟ್ಟಿಕೊಡುತ್ತದೆ. ಅದರ ಚಿತ್ರ ನೋಟ ಹೀಗಿದೆ.

(1 / 8)
ವಿಜಯಪುರದಿಂದ 40 ಕಿ.ಮಿ ದೂರದಲ್ಲಿರುವ ಬಸವನಬಾಗೇವಾಡಿ ಬಸವಣ್ಣನವರ ಜನ್ಮಸ್ಥಳ. ಅಲ್ಲಿನ ಸ್ಮಾರಕ ಆಕರ್ಷಕ. ಇಲ್ಲಿಗೆ ಬಸ್ ಹಾಗೂ ರೈಲಿನ ವ್ಯವಸ್ಥೆಯೂ ಇದೆ.
(2 / 8)
ಹಲವಾರು ವರ್ಷಗಳ ಹಿಂದೆಯೇ ಇಲ್ಲಿ ಬಸವ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಕಟ್ಟಡದ ಒಳ ಹೊಕ್ಕರೆ ಬಸವಣ್ಣನವರ ಜೀವನ ಗಾಥೆಯನ್ನು ಕಲೆಯಲ್ಲಿ ವೀಕ್ಷಿಸಬಹುದು.
(4 / 8)
ತಾಯಿ ಮಾದಲಾಂಬಿಕಾ ತನ್ನ ತಂದೆ ಮಾದಿರಾಜನ ಸನ್ನಿಧಿಯಲ್ಲಿ ಶಿಶು ಬಸವನನ್ನು ತಮ್ಮ ಕುಟುಂಬದ ಗುರುಗಳಿಗೆ ತೋರಿಸುತ್ತಾ, ಈ ಸ್ಥಳದಲ್ಲಿ ಅಸ್ತಿತ್ವದಲ್ಲಿದ್ದ ತಮ್ಮ ಮನೆಯಲ್ಲಿ ನವಜಾತ ಶಿಶುವನ್ನು ಆಶೀರ್ವದಿಸುತ್ತಿರುವುದನ್ನು ಕಾಣಬಹುದು.
(5 / 8)
ಬಾಲಕ ಬಸವಣ್ಣನಿಗೆ ಸಂಗಮೇಶ್ವರ ದೇಗುಲದಲ್ಲಿ ಗುರುಗಳಾದ ಜಟದೇವ ,ಮುನಿಗಳು ಧಾರ್ಮಿಕ ಪಾಠವನ್ನ ಹೇಳಿಕೊಡುವ ಸನ್ನಿವೇಶ.
(6 / 8)
ಬಸವಣ್ಣ ಜನಿಸಿದ್ದು ಅಕ್ಷಯ ತೃತೀಯದಂದು. ಇದನ್ನು ಬಿಂಬಿಸುವ ವಿಶಿಷ್ಟ ಕಲೆಯನ್ನು ಬಸವ ಸ್ಮಾರಕದಲ್ಲಿ ರೂಪಿಸಿರುವುದು ವಿಶೇಷ.
(7 / 8)
ಬಾಲಕ ಬಸವಣ್ಣ ಉಪನಯನ ಮಾಡಿಸಿಕೊಳ್ಳಲು ನಯವಾಗಿ ತಿರಸ್ಕರಿಸಿ ಅಕ್ಕ ನಾಗಮ್ಮ ಹಾಗೂ ಭಾವ ಶಿವದೇವನೊಂದಿಗೆ ಹೊರಡುವ ಸನ್ನಿವೇಶ ಚಿತ್ರಣ.
ಇತರ ಗ್ಯಾಲರಿಗಳು