ತಂಡದ ಮೀಟಿಂಗ್ಗೆ ತಡವಾಗಿ ಬಂದ ಇಶಾನ್ ಕಿಶನ್; ಕಠಿಣ ಶಿಕ್ಷೆ ವಿಧಿಸಿದ ಮುಂಬೈ ಇಂಡಿಯನ್ಸ್, ವಿಡಿಯೋ ನೋಡಿ
Ishan Kishan: ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್‌ಮ್ಯಾನ್ ಸೂಟ್‌ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಐಪಿಎಲ್ 2024ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪ್ರದರ್ಶನ ನಿರಾಶಾದಾಯಕವಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಮುಂಬೈ ತಂಡ ಸತತ 3 ಪಂದ್ಯಗಳಲ್ಲಿ ಸೋತಿದೆ. ಇದರಿಂದ ಅಭಿಮಾನಿಗಳು ತೀವ್ರ ಕೋಪಗೊಂಡಿದ್ದಾರೆ. ಇದೇ ವೇಳೆ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ (Ishan Kishan) ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್‌ಮ್ಯಾನ್ ಸೂಟ್‌ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಇಶಾನ್ ಕಿಶನ್ ಇದೇ ಡ್ರೆಸ್ ಧರಿಸಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಡ್ರೆಸ್ ಕೋಡ್ ನೋಡಿದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದರು. ಆದರೆ, ಇದಕ್ಕೆ ವಿಶೇಷ ಕಾರಣ ಇದೆ. ಕಿಶನ್ ಈ ಡ್ರೆಸ್ ಕೋಡ್ ಧರಿಸಲು ಕಾರಣ ಏನೆಂದು ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದೆ. ಟೀಮ್ ಮೀಟಿಂಗ್ಗೆ ತಡವಾಗಿ ಬಂದ ಕಾರಣ ಈ ಶಿಕ್ಷೆ ವಿಧಿಸಲಾಗಿದೆ. ಹೀಗಾಗಿ ಸೂಪರ್‌ಮ್ಯಾನ್ ಸೂಟ್ ನೀಡಲಾಯಿತು. ಈ ಬಗ್ಗೆ ಎಂಐ ಫ್ರಾಂಚೈಸಿ ಟ್ವಿಟರ್ನಲ್ಲಿ ಮಾಹಿತಿ ನೀಡಿದೆ.
ಟೀಮ್ ಮೀಟಿಂಗ್ಗೆ ಬಾರದ ಇಶಾನ್
ಕಿಶನ್ ಮಾತ್ರವಲ್ಲದೆ, ತಂಡದ ಇತರ ಮೂವರು ಆಟಗಾರರಿಗೂ ಇದೇ ರೀತಿಯ ಶಿಕ್ಷೆ ವಿಧಿಸಲಾಗಿದೆ. ಮುಂಬೈ ಫ್ರಾಂಚೈಸಿಯು ಸ್ಪಿನ್ನರ್‌ಗಳಾದ ಕುಮಾರ್ ಕಾರ್ತಿಕೇಯ, ಶಮ್ಸ್ ಮುಲಾನಿ ಮತ್ತು ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರಾಗೆ ಸೂಪರ್‌ಮ್ಯಾನ್ ಡ್ರೆಸ್ ಕೋಡ್ ಶಿಕ್ಷೆ ವಿಧಿಸಿದೆ. ನಾಲ್ವರು ಸೂಪರ್ಮ್ಯಾನ್ನಂತೆ ಡ್ರೆಸ್ ಹಾಕಿಕೊಂಡು ಹೋಟೆಲ್ ಕೊಠಡಿಯಿಂದ ಹೊರಬಂದಿದ್ದಾರೆ. 3 ಪಂದ್ಯಗಳಿಂದ ಕಳಪೆ ಪ್ರದರ್ಶನ ನೀಡಿರುವ ಇಶಾನ್, ಕೇವಲ 50 ರನ್ ಗಳಿಸಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ನೆಹಾಲ್ ವದೇರಾ ಕೂಡ ಮೀಟಿಂಗ್ಗೆ ತಡವಾಗಿ ಆಗಮಿಸಿದರು. ಹಾಗಾಗಿ, ಅವರಿಗೆ ಪ್ಯಾಡ್‌ಗಳಲ್ಲಿ ವಿಮಾನ ನಿಲ್ದಾಣದ ಸುತ್ತಲೂ ನಡೆಯಲು ಶಿಕ್ಷೆ ವಿಧಿಸಲಾಯಿತು. ತನ್ನ ಮುಂದಿನ ಪಂದ್ಯದಲ್ಲಿ ಏಪ್ರಿಲ್ 7ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಲು ಸಿದ್ಧವಾಗಿದೆ ಮುಂಬೈ ಫ್ರಾಂಚೈಸಿ.
ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ನಮನ್ ಧೀರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಶಮ್ಸ್ ಮುಲ್ಲಾನಿ, ಜೆರಾಲ್ಡ್ ಕೊಯೆಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ಕ್ವೆನಾ ಮಫಾಕಾ, ಮೊಹಮ್ಮದ್ ನಬಿ, ಸೂರ್ಯಕುಮಾರ್ ಯಾದವ್, ಗೋಪಾಲ್, ಲ್ಯೂಕ್ ವುಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ನೆಹಾಲ್ ವಧೇರಾ, ಕುಮಾರ್ ಕಾರ್ತಿಕೇಯ, ಶಿವಾಲಿಕ್ ಶರ್ಮಾ, ಅನ್ಶುಲ್ ಕಾಂಬೋಜ್, ಆಕಾಶ್ ಮಧ್ವಾಲ್, ನುವಾನ್ ತುಷಾರ, ಡೆವಾಲ್ಡ್ ಬ್ರೆವಿಸ್.
ಕ್ರ.ಸಂ | ತಂಡ | ಪಂದ್ಯ | ಗೆಲುವು | ಸೋಲು | ಅಂಕ | NRR |
---|---|---|---|---|---|---|
1 | ರಾಜಸ್ಥಾನ್ ರಾಯಲ್ಸ್ | 3 | 3 | 0 | 6 | +1.249 |
1 | ಕೋಲ್ಕತ್ತಾ ನೈಟ್ ರೈಡರ್ಸ್ | 2 | 2 | 0 | 4 | +1.047 |
2 | ಚೆನ್ನೈ ಸೂಪರ್ ಕಿಂಗ್ಸ್ | 3 | 2 | 1 | 4 | +0.976 |
4 | ಲಕ್ನೋ ಸೂಪರ್ ಜೈಂಟ್ಸ್ | 3 | 2 | 1 | 4 | +0.483 |
5 | ಗುಜರಾತ್ ಟೈಟಾನ್ಸ್ | 3 | 2 | 1 | 4 | -0.738 |
6 | ಸನ್ರೈಸರ್ಸ್ ಹೈದರಾಬಾದ್ | 3 | 1 | 2 | 2 | +0.204 |
7 | ಡೆಲ್ಲಿ ಕ್ಯಾಪಿಟಲ್ಸ್ | 3 | 1 | 2 | 2 | -0.016 |
8 | ಪಂಜಾಬ್ ಕಿಂಗ್ಸ್ | 3 | 1 | 2 | 2 | -0.337 |
9 | ಆರ್ಸಿಬಿ | 4 | 1 | 3 | 2 | -0.876 |
10 | ಮುಂಬೈ ಇಂಡಿಯನ್ಸ್ | 3 | 0 | 3 | 0 | -1.423 |