Sreesanth on Samson: ಅಷ್ಟೊಂದು ಪೊಗರು ಕೆಲಸಕ್ಕೆ ಬಾರದು; ಗವಾಸ್ಕರ್​ ಸಲಹೆ ನಿರ್ಲಕ್ಷಿಸಿದ ಸ್ಯಾಮ್ಸನ್ ವಿರುದ್ಧ ಶ್ರೀಶಾಂತ್ ವಾಗ್ದಾಳಿ-cricket news former pacer s sreesanth lashes out at rr captain sanju samson for ignoring sunil gavaskar s advice prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Sreesanth On Samson: ಅಷ್ಟೊಂದು ಪೊಗರು ಕೆಲಸಕ್ಕೆ ಬಾರದು; ಗವಾಸ್ಕರ್​ ಸಲಹೆ ನಿರ್ಲಕ್ಷಿಸಿದ ಸ್ಯಾಮ್ಸನ್ ವಿರುದ್ಧ ಶ್ರೀಶಾಂತ್ ವಾಗ್ದಾಳಿ

Sreesanth on Samson: ಅಷ್ಟೊಂದು ಪೊಗರು ಕೆಲಸಕ್ಕೆ ಬಾರದು; ಗವಾಸ್ಕರ್​ ಸಲಹೆ ನಿರ್ಲಕ್ಷಿಸಿದ ಸ್ಯಾಮ್ಸನ್ ವಿರುದ್ಧ ಶ್ರೀಶಾಂತ್ ವಾಗ್ದಾಳಿ

ಬ್ಯಾಟಿಂಗ್​ ಕುರಿತಂತೆ ದಿಗ್ಗಜ ಕ್ರಿಕೆಟಿಗ ಸುನಿಲ್​ ಗವಾಸ್ಕರ್ ನೀಡಿದ್ದ ಸಲಹೆಯನ್ನು ನಿರ್ಲಕ್ಷ್ಯಸಿದ ರಾಜಸ್ಥಾನ್​ ರಾಯಲ್ಸ್​ ತಂಡದ ನಾಯಕ ಸಂಜು ಸ್ಯಾಮ್ಸನ್​ ವಿರುದ್ಧ ಭಾರತದ ಮಾಜಿ ವೇಗಿ ಶ್ರೀಶಾಂತ್ ವಾಗ್ದಾಳಿ ನಡೆಸಿದ್ದಾರೆ.

ಸುನಿಲ್ ಗವಾಸ್ಕರ್​ ಸಲಹೆ ನಿರ್ಲಕ್ಷಿಸಿದ ಸಂಜು ಸ್ಯಾಮ್ಸನ್ ವಿರುದ್ಧ ಶ್ರೀಶಾಂತ್ ವಾಗ್ದಾಳಿ
ಸುನಿಲ್ ಗವಾಸ್ಕರ್​ ಸಲಹೆ ನಿರ್ಲಕ್ಷಿಸಿದ ಸಂಜು ಸ್ಯಾಮ್ಸನ್ ವಿರುದ್ಧ ಶ್ರೀಶಾಂತ್ ವಾಗ್ದಾಳಿ

ಕಳೆದ ಆವೃತ್ತಿಯಲ್ಲಿ ರನ್ನರ್​ಅಪ್​ ಆಗಿದ್ದ ರಾಜಸ್ಥಾನ್ ರಾಯಲ್ಸ್ (Rajasthan Royals)​​ ಈ ಬಾರಿ ಲೀಗ್​ ಹಂತದಲ್ಲೇ ಹೊರ ಬಿತ್ತು. ಆರಂಭಿಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ರಾಜಸ್ಥಾನ್​, ದ್ವಿತೀಯಾರ್ಧದಲ್ಲಿ ಅದ್ಭುತ ಪ್ರದರ್ಶನ ನೀಡಲು ವಿಫಲವಾಯಿತು. 14 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 7ರಲ್ಲಿ ಸೋಲು ಕಂಡಿತು. 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಅಭಿಯಾನ ಮುಗಿಸಿತು.

ಈ ಆವೃತ್ತಿಯಲ್ಲಿ ರಾಜಸ್ಥಾನ್ ಪರ ಬ್ಯಾಟಿಂಗ್​​ನಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal)​, ಬೌಲಿಂಗ್​ನಲ್ಲಿ ಯುಜುವೇಂದ್ರ ಚಹಲ್ (Yuzvendra Chahal)​ ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಅದರಲ್ಲೂ ನಾಯಕ ನಾಯಕ ಸಂಜು ಸ್ಯಾಮ್ಸನ್​ (Sanju Samson) ಆಟ ತೀವ್ರ ಕಳಪೆಯಾಗಿತ್ತು. ಇದು ಕೂಡ ಸೋಲಿನ ಪ್ರಮುಖ ಕಾರಣ ಅಂದರೆ ತಪ್ಪಾಗಲ್ಲ. ಮಧ್ಯಮ ಕ್ರಮಾಂಕಕ್ಕೆ ನೆರವಾಗಲೇ ಇಲ್ಲ. ಇದು ಟೀಕೆಗೂ ಗುರಿಯಾಗಿತ್ತು.

16ನೇ ಆವೃತ್ತಿಯ ಐಪಿಎಲ್​​ನ ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ 55, 42 ರನ್​ ಗಳಿಸಿ ಪ್ರಭಾವ ಬೀರಿದ್ದ ಸಂಜು​, ಆ ಬಳಿಕ ಸತತ ಡಕೌಟ್​​ಗೆ ಬಲಿಯಾದರು. ಈ ಸೀಸನ್​​ನಲ್ಲಿ 3 ಹಾಫ್​ ಸೆಂಚುರಿ ಸಿಡಿಸಿದ ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ಸಂಜು, ಕಳೆದ ವರ್ಷಕ್ಕಿಂತ ಉತ್ತಮ ಸರಾಸರಿಯೊಂದಿಗೆ ಅಭಿಮಾನಿಗಳನ್ನು ಮೆಚ್ಚಿಸುವಲ್ಲಿ ವಿಫಲರಾದರು. ಮಾಜಿ ಕ್ರಿಕೆಟಿಗ ಎಸ್​ ಶ್ರೀಶಾಂತ್ (S Sreesanth),​ ಸಂಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸತತ ವಿಕೆಟ್​ ಒಪ್ಪಿಸುತ್ತಿದ್ದಾಗ ಸುನಿಲ್​ ಗವಾಸ್ಕರ್ ನೀಡಿದ್ದ ಸಲಹೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಸಂಜು ಸ್ಯಾಮ್ಸನ್ ವಿರುದ್ಧ ಶ್ರೀಶಾಂತ್ ವಾಗ್ದಾಳಿ ನಡೆಸಿದ್ದಾರೆ. ಸಂಜು ಸ್ಯಾಮ್ಸನ್​ರನ್ನು ನಾನು ತುಂಬಾ ಬೆಂಬಲಿಸುತ್ತೇನೆ. ಏಕೆಂದರೆ ನನ್ನ ನಾಯಕತ್ವದಲ್ಲಿ ಅಂಡರ್​-14 ತಂಡದಲ್ಲಿ ಸಂಜು ಆಡಿದ್ದರು. ಕಳೆದ ನಾಲ್ಕೈದು ವರ್ಷಗಳಿಂದ ಕ್ರಿಕೆಟಿಗನಾಗಿ ಸಂಜು ಆಟವನ್ನು ನೋಡುತ್ತಿದ್ದೇನೆ ಎಂದಿದ್ದಾರೆ.

ಐಪಿಎಲ್‌ನಲ್ಲಿ ಆಡಿದರೆ ಸಾಕಾಗುವುದಿಲ್ಲ, ದೇಶೀಯ ಟೂರ್ನಿಗಳು ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿಯೂ ಚೆನ್ನಾಗಿ ಆಡಬೇಕು ಎಂದು ನಾನು ಹೇಳುತ್ತಿದ್ದೇನೆ. ಸ್ಥಿರ ಪ್ರದರ್ಶನ ನೀಡಿದ್ದರೆ ಇಷ್ಟೊತ್ತಿಗೆ ಟೀಮ್​ ಇಂಡಿಯಾದ ಪ್ರಮುಖ ಆಟಗಾರನಾಗುತ್ತಿದ್ದ. ಸಿಕ್ಕ ಅವಕಾಶಗಳನ್ನು ಪದೆಪದೇ ಕೈಚೆಲ್ಲುತ್ತಿರುವುದೇ ತಂಡದಲ್ಲಿ ಸ್ಥಾನ ಪಡೆಯದಿರಲು ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.

ಸದ್ಯ ಟೀಮ್​ ಇಂಡಿಯಾದಲ್ಲಿ ರಿಷಭ್​ ಪಂತ್​​ ಇಲ್ಲ. ಅವರು ಚೇತರಿಸಿಕೊಂಡು ತಂಡ ಸೇರಲು ಇನ್ನೂ ಬಹಳಷ್ಟು ಸಮಯ ಬೇಕಾಗುತ್ತದೆ. ಈ ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್ ಬರುತ್ತಿದೆ. ವಿಕೆಟ್‌ ಕೀಪರ್ ರಿಷಭ್ ಪಂತ್ ಇನ್ನೂ ಚೇತರಿಸಿಕೊಳ್ಳುತ್ತಿರುವ ಕಾರಣ, ಸ್ಯಾಮ್ಸನ್ ಈ ವರ್ಷ ಶ್ರೇಷ್ಠ ರನ್‌ನೊಂದಿಗೆ ತನ್ನ ಸಾಮರ್ಥ್ಯ ನಿರೂಪಿಸುವ ಅವಕಾಶ ಇತ್ತು. ಆದರೆ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿಲ್ಲ ಎಂದು ಕಿಡಿಕಾರಿದ್ದಾರೆ.

ಸಂಜು ಸ್ಯಾಮ್ಸನ್ ಪಂದ್ಯವೊಂದರಲ್ಲಿ ಡಕೌಟ್​ ಆದ ನಂತರ, ಸುನಿಲ್ ಗವಾಸ್ಕರ್ ಸರ್ ಅವರಿಗೆ (ಸ್ಯಾಮ್ಸನ್​​ಗೆ) ಅಮೂಲ್ಯ ಸಲಹೆ ನೀಡಿದರು. ನೀನು ಕನಿಷ್ಠ 10 ಎಸೆತಗಳನ್ನು ಆಡು. ವಿಕೆಟ್​​ ಅನ್ನು ಅರ್ಥ ಮಾಡಿಕೊಳ್ಳಿ. ನಿಮ್ಮಲ್ಲಿ ಸಾಕಷ್ಟು ಪ್ರತಿಭೆ ಇದೆ ಎಂಬುದು ಎಲ್ಲರಿಗೂ ಗೊತ್ತು. ಮೊದಲ 12 ಎಸೆತಗಳಲ್ಲಿ ಯಾವುದೇ ರನ್ ಗಳಿಸದಿದ್ದರೂ ನೀವು 25 ಎಸೆತಗಳಲ್ಲಿ 50 ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದೀರಿ. ಆದರೆ ಆತುರ ಏಕೆ ಎಂದು ಗವಾಸ್ಕರ್ ಸರ್ ಸಂಜುಗೆ ಸಲಹೆ ಕೊಟ್ಟಿದ್ದರು. ಆದರೆ ಅವರ ಸಲಹೆ ನಿರ್ಲಕ್ಷಿಸಿ ಅವರು ಹೇಳಿದ ರೀತಿ ಆಡುವುದು ನನ್ನ ಸ್ಟೈಲ್​ ಅಲ್ಲ ಎಂದು ಸಂಜು ಹೇಳಿದರು. ಆ ಮಾತುಗಳನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಸ್ಟಾರ್​ಸ್ಪೋರ್ಟ್ಸ್​​ನಲ್ಲಿ ಶ್ರೀಶಾಂತ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟಿಗರಾಗಿ ಬೆಳೆಯಲು ಹಿರಿಯರ ಮಾತಿಗೆ ಬೆಲೆ ನೀಡಿ, ಅವರ ಸಲಹೆಯನ್ನು ದಯಪಾಲಿಸಬೇಕು. ಅವುಗಳನ್ನು ಅನುಸರಿಬೇಕಾ? ಇಲ್ಲವೇ ಎಂಬುದು ಈಗಲ್ಲ. ಕನಿಷ್ಠ ಹೇಳಿದಾಗ ಶ್ರದ್ಧೆಯಿಂದ ಕೇಳಬೇಕು. ಗೌರವಪೂರ್ವಕವಾಗಿ ಸರಿ ಎಂದು ಹೇಳಬೇಕು. ಅದನ್ನು ಬಿಟ್ಟು ಒರಟಾಗಿ ಉತ್ತರಿಸಿದ್ದು ಕೇಳಿ ನಾನು ಬೆಚ್ಚಿಬಿದ್ದೆ. ಅವರ ಮನಸ್ಥಿತಿ ಬದಲಾಗದಿದ್ದರೆ, ಯಶಸ್ಸು ಎಂದೂ ಸಿಗುವುದಿಲ್ಲ. ಪೊಗರು ಇರಬಾರದು ಎಂದು ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಶ್ರೀಶಾಂತ್​ ಸೂಚಿಸಿದ್ದಾರೆ.

mysore-dasara_Entry_Point