Yuzvendra Chahal: ತಂಡದಲ್ಲಿ ಉಳಿಸಿಕೊಳ್ಳುವ ನಂಬಿಕೆ ಕೊಟ್ಟು ಆರ್​ಸಿಬಿ ಮೋಸ ಮಾಡಿತು; ಫ್ರಾಂಚೈಸಿ ವಿರುದ್ಧ ಯುಜ್ವೇಂದ್ರ ಚಹಲ್ ಬೇಸರ-cricket news i got very angry i played for them for 8 years spinner yuzvendra chahal opens up about rcb snub ipl prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  Yuzvendra Chahal: ತಂಡದಲ್ಲಿ ಉಳಿಸಿಕೊಳ್ಳುವ ನಂಬಿಕೆ ಕೊಟ್ಟು ಆರ್​ಸಿಬಿ ಮೋಸ ಮಾಡಿತು; ಫ್ರಾಂಚೈಸಿ ವಿರುದ್ಧ ಯುಜ್ವೇಂದ್ರ ಚಹಲ್ ಬೇಸರ

Yuzvendra Chahal: ತಂಡದಲ್ಲಿ ಉಳಿಸಿಕೊಳ್ಳುವ ನಂಬಿಕೆ ಕೊಟ್ಟು ಆರ್​ಸಿಬಿ ಮೋಸ ಮಾಡಿತು; ಫ್ರಾಂಚೈಸಿ ವಿರುದ್ಧ ಯುಜ್ವೇಂದ್ರ ಚಹಲ್ ಬೇಸರ

Yuzvendra Chahal: 8 ವರ್ಷಗಳ ಕಾಲ ಆಡಿದ್ದ ನನಗೆ ಆರ್​ಸಿಬಿ ತಂಡದಂತೆ ಎಂದೂ ಅನಿಸಿರಲಿಲ್ಲ. ನನ್ನ ಪಾಲಿಗೆ ಒಂದು ಕುಟುಂಬವಾಗಿತ್ತು. ಆದರೆ ತಂಡದಿಂದ ದಿಢೀರ್ ಕೈಬಿಟ್ಟಾಗ ಏನೋ ಕಳೆದುಕೊಂಡಂತೆ ಆಗಿದ್ದೂ ನಿಜ ಎಂದು ಯುಜ್ವೇಂದ್ರ ಚಹಲ್​ ಬೇಸರ ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ವಿರುದ್ಧ ಯುಜ್ವೇಂದ್ರ ಚಹಲ್ ಮತ್ತೆ ಬೇಸರ
ಆರ್​ಸಿಬಿ ವಿರುದ್ಧ ಯುಜ್ವೇಂದ್ರ ಚಹಲ್ ಮತ್ತೆ ಬೇಸರ

ಇಂಡಿಯನ್​ ಪ್ರೀಮಿಯರ್ ಲೀಗ್​​ (IPL) ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದು ಚರಿತ್ರೆ ಸೃಷ್ಟಿಸಿರುವ ರಾಜಸ್ಥಾನ್​ ರಾಯಲ್ಸ್​​ ತಂಡದ (Rajasthan Royals) ಸ್ಪಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal )​, ಇದೀಗ ರಾಯಲ್​ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧ ಮತ್ತೆ ಬೇಸರ ಹೊರ ಹಾಕಿದ್ದಾರೆ. ಆ ತಂಡಕ್ಕಾಗಿ ದುಡಿದು ಅಪಾರ ಕೊಡುಗೆ ನೀಡಿದ ನನಗೆ ಹೀಗೆ ಮಾಡಬಾರದಿತ್ತು ಎಂದು ತಮ್ಮ ಅಸಮಾಧಾನವನ್ನೂ ಹೊರ ಹಾಕಿದ್ದಾರೆ.

ಐಪಿಎಲ್ 2022ರ ಮೆಗಾ ಹರಾಜಿಗೂ ಮುನ್ನ ಘೋಷಿಸಿದ ಉಳಿಸಿಕೊಂಡ ಆಟಗಾರರ ಲೀಸ್ಟ್​​ನಲ್ಲಿ ಚಹಲ್​ ಹೆಸರೇ ಇರಲಿಲ್ಲ. ಇದು ಅಭಿಮಾನಿಗಳು ಸೇರಿದಂತೆ ಸಾಕಷ್ಟು ಮಂದಿಗೆ ಅಚ್ಚರಿ ಮೂಡಿಸಿತ್ತು. ಆತನೇ ಅವರ ಮೊದಲ ಆಯ್ಕೆ ಎಂದೇ ಭಾವಿಸಲಾಗಿತ್ತು. 2014ರಿಂದ 2021ರ ಐಪಿಎಲ್​ವರೆಗೆ ಚಹಲ್ ಆರ್​ಸಿಬಿ ಪ್ರಮುಖ ಬೌಲರ್ ಆಗಿದ್ದರು. ಆದರೆ ಇವರನ್ನು ದಿಢೀರ್ ಆಗಿ ಕೈಬಿಟ್ಟಿತು. ಇದೀಗ ತಮ್ಮ ಫ್ರಾಂಚೈಸಿ ನಡೆದುಕೊಂಡ ರೀತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಚಹಲ್ ಬೇಸರದ ಮಾತು

ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಈ ಬಗ್ಗೆ ತುಟಿ ಬಿಚ್ಚಿದ್ದು, ಆರ್​​ಸಿಬಿಗೆ ಸಂಬಂಧಿಸಿ ಹಲವು ಆಸಕ್ತಿಕರ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ತನ್ನನ್ನು ಹರಾಜಿನಲ್ಲಿ ಮತ್ತೆ ಖರೀದಿಸುವುದಾಗಿ ಭರವಸೆ ನೀಡಿದ್ದಆರ್‌ಸಿಬಿ, ಕೊನೆಯಲ್ಲಿ ಕೈ ಕೊಟ್ಟಿತು. ಆರ್​ಸಿಬಿ ತಂಡದಲ್ಲಿ ನಾನು 8 ವರ್ಷಗಳ ಕಾಲ ಆಡಿದ್ದೇನೆ. ಟೀಮ್​ ಇಂಡಿಯಾ ಕ್ಯಾಪ್​ ಪಡೆಯಲೂ ಆರ್​ಸಿಬಿಯೇ ಕಾರಣ ಎಂದು ಚಹಲ್​ ತಿಳಿಸಿದ್ದಾರೆ.

‘ಕುಟುಂಬವನ್ನೇ ಕಳೆದುಕೊಂಡೆ’

ದಿಢೀರ್ ಆಗಿ ತಂಡದಿಂದ ಕೈಬಿಟ್ಟಿದ್ದರ ಬಗ್ಗೆ ವಿವರಿಸಿದ ಚಹಲ್ ನೋವುಂಟು ವ್ಯಕ್ತಪಡಿಸಿದ್ದಾರೆ. ನನಗೆ ಅದ್ಭುತ ಪ್ರದರ್ಶನ ನೀಡಲು ಆರ್​ಸಿಬಿ ಅವಕಾಶ ನೀಡಿತ್ತು. 8 ವರ್ಷಗಳ ಕಾಲ ಆಡಿದ್ದ ನನಗೆ ಆರ್​ಸಿಬಿ ತಂಡದಂತೆ ಎಂದೂ ಅನಿಸಿರಲಿಲ್ಲ. ನನ್ನ ಪಾಲಿಗೆ ಒಂದು ಕುಟುಂಬವಾಗಿತ್ತು. ಆದರೆ ತಂಡದಿಂದ ದಿಢೀರ್ ಕೈಬಿಟ್ಟಾಗ ಏನೋ ಕಳೆದುಕೊಂಡಂತೆ ಆಗಿದ್ದೂ ನಿಜ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ದೊಡ್ಡ ಮೊತ್ತ ಕೇಳಿರಲಿಲ್ಲ’

ಆರ್​ಸಿಬಿ ಫ್ರಾಂಚೈಸಿಗೆ ನಾನು ದೊಡ್ಡ ಮೊತ್ತದ ಹಣವನ್ನು ಕೇಳಿದೆ ಎಂದು ಸಾಕಷ್ಟು ವದಂತಿಗಳು ಬಂದವು. ಆದರೆ ಇವೆಲ್ಲವೂ ಸತ್ಯಕ್ಕೆ ದೂರವಾದವು. ಅಂತಹದ್ದೇನೂ ನಡೆದೇ ಇಲ್ಲ ಎಂದು ನಾನು ಆ ಸಮಯದಲ್ಲೇ ಸ್ಪಷ್ಟಪಡಿಸಿದ್ದೆ. ನಾನು, ನನ್ನ ಅರ್ಹತೆ ಏನು ಎಂದು ನನಗೆ ತಿಳಿದಿದೆ ಎಂದು ಚಹಾಲ್ ಹೇಳಿದರು.

‘ಯಾವದೇ ಕರೆ ಬರಲಿಲ್ಲ..’

ನನಗೆ ನಿಜವಾಗಿಯೂ ಕೆಟ್ಟ ಭಾವನೆ ಏನೆಂದರೆ ತಂಡದಿಂದ ಯಾವುದೇ ಫೋನ್ ಕರೆ ಬರಲಿಲ್ಲ. ಯಾವುದೇ ಮಾತುಕತೆ ನಡೆಸಲಿಲ್ಲ. ಕನಿಷ್ಠ ಪಕ್ಷ ಮಾತನಾಡಿಸಲೂ ಒಂದು ಕರೆ ಮಾಡಲಿಲ್ಲ. ನಾನು ಆರ್​​ಸಿಬಿಗಾಗು 114 ಪಂದ್ಯಗಳನ್ನು ಆಡಿದ್ದೆ. ಹರಾಜಿನಲ್ಲಿ ಹೇಗಾದರೂ ನಿಮ್ಮನ್ನು ಖರೀದಿಸುತ್ತೇವೆ ಎಂದು ತಂಡದಿಂದ ಡ್ರಾಪ್​ ಮಾಡಿದಾಗ ಭರವಸೆ ನೀಡಿದ್ದರು. ಆದರೆ, ಹರಾಜಿನಲ್ಲಿ ನನಗೆ ಖರೀದಿಗೆ ಮುಂದಾಗದೇ ಇರುವುದು ನನಗೆ ಕೋಪ ಬಂದಿತು ಎಂದು ತಮ್ಮ ಅಸಮಾಧಾನ ಹೊರಹಾಕಿದರು.

‘ಚಿನ್ನಸ್ವಾಮಿ ಈಗಲೂ ಫೇವರಿಟ್​’

ಆರ್​ಸಿಬಿ 8 ವರ್ಷಗಳ ಆರ್​ಸಿಬಿ ಪರ ಆಡಿದ್ದೇನೆ. ಚಿನ್ನಸ್ವಾಮಿ ನನಗೆ ಈಗಲೂ ನೆಚ್ಚಿನ ಮೈದಾನವಾಗಿದೆ. ಈ ವರ್ಷದ ಐಪಿಎಲ್​ನಲ್ಲಿ ಆರ್​ಸಿಬಿ ಎದುರಿನ ಮೊದಲ ಪಂದ್ಯದಲ್ಲಿ, ನಾನು ಆ ತಂಡದ ಕೋಚ್‌ಗಳ ಜೊತೆ ಮಾತನಾಡಿಲ್ಲ. ನಾನು ಯಾರೊಂದಿಗೂ ಮಾತನಾಡಲಿಲ್ಲ. ಹರಾಜು ಬಹಳ ಅನಿರೀಕ್ಷಿತ ಸ್ಥಳವೆಂದು ನಾನು ಅರಿತುಕೊಂಡೆ. ಹಾಗಾಗಿ ಆಗುವುದೆಲ್ಲವೂ ಒಳ್ಳೆಯದ್ದಕ್ಕೆ ಎಂದು ಸಮಾಧಾನ ಮಾಡಿಕೊಂಡೆ. ರಾಜಸ್ಥಾನ್​ ರಾಯಲ್ಸ್​ ತಂಡದಲ್ಲೂ ನಾನು ಕ್ರಿಕೆಟಿಗನಾಗಿ ಬೆಳೆದಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದರು.

ಆರ್​ಸಿಬಿ ಪರ ಚಹಲ್ ಪ್ರದರ್ಶನ

ಆರ್​​ಸಿಬಿ ಪರ 114 ಪಂದ್ಯಗಳನ್ನಾಡಿದ್ದ ಸ್ಪಿನ್ನರ್, 7.58ರ ಎಕಾನಮಿಯಲ್ಲಿ 139 ವಿಕೆಟ್​ ಪಡೆದ್ದರು. ಸದ್ಯ ಕಳೆದ ಎರಡು ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುತ್ತಿರುವ ಚಹಲ್​, ಅದ್ಭುತ ಪ್ರದರ್ಶನ ತೋರಿದ್ದಾರೆ. ಎರಡೂ ಸೀಸನ್​ಗಳಲ್ಲೂ ವಿಕೆಟ್​ ಬೇಟೆಯಾಡಿದ್ದಾರೆ. 2022ರಲ್ಲಿ 27 ವಿಕೆಟ್​ ಪಡೆದಿದ್ದ ಯೂಜಿ, ಈ ವರ್ಷ 21 ಬಲಿ ಪಡೆದಿದ್ದರು. ಒಟ್ಟಾರೆ 145 ಐಪಿಎಲ್​ ಪಂದ್ಯಗಳನ್ನಾಡಿರುವ 187 ವಿಕೆಟ್​ ಕಬಳಿಸಿ ಅಗ್ರಸ್ಥಾನದಲ್ಲಿದ್ದಾರೆ.

mysore-dasara_Entry_Point