IPL 2023 Play off: ಐಪಿಎಲ್ ಪ್ಲೇಆಫ್ ಪಂದ್ಯಗಳ ಸ್ಥಳ ಮತ್ತು ದಿನಾಂಕ ಪ್ರಕಟ; ಅಹಮದಾಬಾದ್‌ನಲ್ಲಿ ಫೈನಲ್‌ ಪಂದ್ಯ
ಕನ್ನಡ ಸುದ್ದಿ  /  ಕ್ರೀಡೆ  /  Ipl 2023 Play Off: ಐಪಿಎಲ್ ಪ್ಲೇಆಫ್ ಪಂದ್ಯಗಳ ಸ್ಥಳ ಮತ್ತು ದಿನಾಂಕ ಪ್ರಕಟ; ಅಹಮದಾಬಾದ್‌ನಲ್ಲಿ ಫೈನಲ್‌ ಪಂದ್ಯ

IPL 2023 Play off: ಐಪಿಎಲ್ ಪ್ಲೇಆಫ್ ಪಂದ್ಯಗಳ ಸ್ಥಳ ಮತ್ತು ದಿನಾಂಕ ಪ್ರಕಟ; ಅಹಮದಾಬಾದ್‌ನಲ್ಲಿ ಫೈನಲ್‌ ಪಂದ್ಯ

ಐಪಿಎಲ್ 2023ರ ಆವೃತ್ತಿಯ ಪ್ಲೇಆಫ್ ಮತ್ತು ಫೈನಲ್‌ ಪಂದ್ಯದ ಅಂತಿಮ ವೇಳಾಪಟ್ಟಿ‌ ಬಿಡುಗಡೆಯಾಗಿದೆ. ಪಂದ್ಯಗಳನ್ನು ಆಯೋಜಿಸುವ ಸ್ಥಳ ಮತ್ತು ದಿನಾಂಕಗಳ ವಿವರಗಳನ್ನು ಬಿಸಿಸಿಐ ಪ್ರಕಟಿಸಿದೆ.

ಐಪಿಎಲ್‌ ಟ್ರೋಫಿ
ಐಪಿಎಲ್‌ ಟ್ರೋಫಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂದು (ಶುಕ್ರವಾರ ಏಪ್ರಿಲ್ 21) ಐಪಿಎಲ್ 2023ರ ಆವೃತ್ತಿಯ ಪ್ಲೇಆಫ್ ಮತ್ತು ಫೈನಲ್‌ ಪಂದ್ಯದ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಂದ್ಯಗಳನ್ನು ಆಯೋಜಿಸುವ ಸ್ಥಳ ಮತ್ತು ದಿನಾಂಕಗಳ ವಿವರಗಳನ್ನು ಬಿಸಿಸಿಐ ಪ್ರಕಟಿಸಿದೆ.

ಮೇ 23ರಿಂದ ಪ್ಲೇ ಆಫ್‌ ಪಂದ್ಯಗಳು ನಡೆಯಲಿದ್ದು, ಮೇ 28ರಂದು ಅದ್ಧೂರಿ ಫೈನಲ್ ಪಂದ್ಯ ನಡೆಯಲಿದೆ. ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ತಲಾ ಎರಡೆರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮೇ 23 ಮತ್ತು ಮೇ 24 ರಂದು ಕ್ರಮವಾಗಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯವನ್ನು ಆಯೋಜಿಸಲಾಗಿದೆ. ಇದೇ ವೇಳೆ ಚ ಮೇ 26ರಂದು ಎರಡನೇ ಕ್ವಾಲಿಫೈಯರ್‌ ಪಂದ್ಯ ನಡೆಯಲಿದೆ. ಅಂತಿಮವಾಗಿ ಮೇ 28ರಂದು ಐಪಿಎಲ್ 2023ರ ಫೈನಲ್‌ ಪಂದ್ಯ ನಡೆಯಲಿದೆ.

ಕಳೆದ ಆವೃತ್ತಿಯ ಫೈನಲ್‌ ಪಂದ್ಯ ಕೂಡಾ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿತ್ತು. ಆತಿಥೇಯ ಗುಜರಾತ್‌ ಟೈಟಾನ್ಸ್‌ ಇಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

ಐಪಿಎಲ್ 2023ರ ಪ್ಲೇ ಆಫ್‌ ಪಂದ್ಯಗಳ ವೇಳಾಪಟ್ಟಿ:

ಮೇ 23 - ಕ್ವಾಲಿಫೈಯರ್ 1 (ಚೆನ್ನೈ)

ಮೇ 24 - ಎಲಿಮಿನೇಟರ್ (ಚೆನ್ನೈ)

ಮೇ 26 - ಕ್ವಾಲಿಫೈಯರ್ 2 (ಅಹಮದಾಬಾದ್)

ಮೇ 28 - ಫೈನಲ್ (ಅಹಮದಾಬಾದ್)

ಇದು ಸತತ ಎರಡನೇ ಬಾರಿಗೆ ಗುಜರಾತ್ ಟೈಟಾನ್ಸ್‌ನ ತವರು ಮತ್ತು 132,000 ಸಾಮರ್ಥ್ಯವನ್ನು ಹೊಂದಿರುವ ಅಹಮದಾಬಾದ್ ಕ್ರೀಡಾಂಗಣವು ಐಪಿಎಲ್ ಫೈನಲ್‌ಗೆ ಆತಿಥ್ಯ ವಹಿಸಲಿದೆ. 2022 ರ ಋತುವಿನಲ್ಲಿ, ಅಹಮದಾಬಾದ್ ಮೈದಾನವು ಕ್ವಾಲಿಫೈಯರ್ 2ಕ್ಕೆ ಆತಿಥ್ಯ ವಹಿಸಿತ್ತು. ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪಂದ್ಯ ನಡೆದಿತ್ತು. ಆ ಬಳಿಕ ಮೇ 29ರಂದು ಫೈನಲ್‌ ಪಂದ್ಯವು ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ನಡುವೆ ನಡೆದಿತ್ತು. ಮತ್ತೊಂದೆಡೆ, ಚೆನ್ನೈ ಮೈದಾನವು 2019ರ ಬಳಿಕ ಮೊದಲ ಬಾರಿಗೆ ಐಪಿಎಲ್‌ ಪ್ಲೇಆಫ್ ಪಂದ್ಯವನ್ನು ಆಯೋಜಿಸುತ್ತಿದೆ.

ಲೀಗ್ ಹಂತದ ಮುಗಿದ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳು ಕ್ವಾಲಿಫೈಯರ್ 1ರಲ್ಲಿ ಆಡಲಿವೆ. ಅಲ್ಲಿ ಗೆದ್ದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಸೋತ ತಂಡವು ನಂತರ ಎಲಿಮಿನೇಟರ್ ಪಂದ್ಯದ ವಿಜೇತರ ವಿರುದ್ಧ ಕ್ವಾಲಿಫೈಯರ್ 2ರಲ್ಲಿ ಆಡಲಿದೆ. ಅಂಕಪಟ್ಟಿಯಲ್ಲಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ವಿರುದ್ಧ ಎಲಿಮನೇಟರ್‌ ಪಂದ್ಯದಲ್ಲಿ ಆಡಲಿವೆ.

ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ತಂಡದ ಸದಸ್ಯರು ಇತ್ತೀಚೆಗೆ ಆಘಾತಕಾರಿ ಸನ್ನಿವೇಶ ಎದುರಿಸಿದ್ದರು. ತಂಡದ ಆಟಗಾರರಿಗೆ ಸೇರಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಿಟ್​ ಕಳ್ಳತನವಾಗಿತ್ತು. ಕಿಟ್‌​ನಲ್ಲಿ ಬ್ಯಾಟ್​, ಪ್ಯಾಡ್​ ಸೇರಿದಂತೆ ಇತರೆ ಕೆಲವು ಉಪಕರಣಗಳು ಕಳವಾಗಿವೆ ಎಂದು ವರದಿಯಾಗಿತ್ತು. ಈ ಬಗ್ಗೆ ಡೆಲ್ಲಿ ಫ್ರಾಂಚೈಸಿ ದೂರು ಕೂಡಾ ನೀಡಿತ್ತು. ಸದ್ಯ ತಂಡದ ಆಟಗಾರರು ತುಸು ನಿರಾಳರಾಗಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.