ಕನ್ನಡ ಸುದ್ದಿ  /  Sports  /  Cricket News Miss World Ache Abrahams Meets Shubman Gill Ishan Kishan Yashasvi Jaiswal In Port Of Spain Ind Vs Wi Prs

Ache Abrahams: ಟೆಸ್ಟ್​ ಪಂದ್ಯದ ನಡುವೆ ಟೀಮ್ ಇಂಡಿಯಾದ ಯುವ ಆಟಗಾರರನ್ನು ಭೇಟಿಯಾದ ವಿಶ್ವ ಸುಂದರಿ; ನಮಸ್ತೆ ಭಾರತ ಎಂದ ಆಚೆ ಅಬ್ರಹಾಮ್ಸ್

ಟ್ರಿನಿಡಾಡ್ ಮತ್ತು ಟೊಬಾಗೊ ವಿಶ್ವ ಸುಂದರಿ ಆಚೆ ಅಬ್ರಹಾಮ್ಸ್ ಅವರು (Miss World Ache Abrahams) 2ನೇ ಟೆಸ್ಟ್​ ಪಂದ್ಯದಲ್ಲಿ ಅವಕಾಶ ಪಡೆದಿರುವ ಭಾರತದ ಮೂವರು ಯುವ ಆಟಗಾರರನ್ನು ಭೇಟಿಯಾಗಿದ್ದಾರೆ.

ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಶುಭ್ಮನ್ ಗಿಲ್​ರನ್ನು ಭೇಟಿಯಾದ ವಿಶ್ವ ಸುಂದರಿ ಆಚೆ ಅಬ್ರಹಾಮ್ಸ್
ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಶುಭ್ಮನ್ ಗಿಲ್​ರನ್ನು ಭೇಟಿಯಾದ ವಿಶ್ವ ಸುಂದರಿ ಆಚೆ ಅಬ್ರಹಾಮ್ಸ್ (Ache Abrahams/Instagram)

ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಿನ 2ನೇ ಟೆಸ್ಟ್​ ಪಂದ್ಯವು ಕುತೂಹಲ ಘಟ್ಟದತ್ತ ಸಾಗಿದೆ. 3ನೇ ದಿನದಾಟದಲ್ಲಿ ಎರಡು ಮಳೆ ಸಮಸ್ಯೆ ನೀಡಿತು. 67 ಓವರ್​​ಗಳನ್ನಷ್ಟೇ ಆಡಲು ಸಾಧ್ಯವಾಯಿತು. ವೆಸ್ಟ್ ಇಂಡೀಸ್ 3ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 229 ರನ್​ ಕಲೆ ಹಾಕಿದೆ. ಇದೀಗ 4ನೇ ದಿನವೂ ಅಂತಹದ್ದೇ ಹೋರಾಟದ ಮನೋಭಾವ ತೋರಲು ಸಿದ್ಧವಾಗಿದೆ. ಇದರ ನಡುವೆ ಭಾರತದ ಯುವ ಆಟಗಾರರನ್ನು ವಿಶ್ವಸುಂದರಿ ಭೇಟಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಟ್ರಿನಿಡಾಡ್ ಮತ್ತು ಟೊಬಾಗೊ ವಿಶ್ವ ಸುಂದರಿ ಆಚೆ ಅಬ್ರಹಾಮ್ಸ್ ಅವರು (Miss World Ache Abrahams) 2ನೇ ಟೆಸ್ಟ್​ ಪಂದ್ಯದಲ್ಲಿ ಅವಕಾಶ ಪಡೆದಿರುವ ಭಾರತದ ಮೂವರು ಯುವ ಆಟಗಾರರನ್ನು ಭೇಟಿಯಾಗಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ಪ್ರತಿಭಾವಂತ ಕ್ರಿಕೆಟಿಗರಾದ ಶುಭ್ಮನ್​ ಗಿಲ್ (Shubman Gill), ಇಶಾನ್​ ಕಿಶನ್ (Ishan Kishan), ಯಶಸ್ವಿ ಜೈಸ್ವಾಲ್ (Yashasvi Jaiswal) ಭೇಟಿ ಖುಷಿ ತಂದಿದೆ ಎಂದಿದ್ದಾರೆ.

ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲೇನಿದೆ?

ಆಟಗಾರರನ್ನು ಭೇಟಿಯಾದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಆಚೆ ಆಬ್ರಹಾಮ್ಸ್, ಟೀಮ್ ಇಂಡಿಯಾದ ಶ್ರೇಷ್ಠ ಆಟಗಾರರನ್ನು ಇಲ್ಲಿನ ಸುಂದರ ಟ್ರಿನಿಡಾಡ್ & ಟೊಬಾಗೊದಲ್ಲಿ ಭೇಟಿ ಮಾಡಿದ್ದು ತುಂಬಾ ಸಂತೋಷ ತಂದಿದೆ. ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್​ಗೆ ಟ್ಯಾಗ್​ ಮಾಡಿರುವ ವಿಶ್ವ ಸುಂದರಿ, ಆಟಗಾರರ ಉತ್ಸಾಹದಾಯಕ ನನಗೆ ಸ್ಪೂರ್ತಿ ತಂದಿದೆ. ಮುಂದಿನ ವರ್ಷ ಭಾರತಕ್ಕೆ ಬರುತ್ತಿರುವ ಕುರಿತು ನನ್ನ ಖುಷಿಯನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ ಎಂದು ಪೋಸ್ಟ್​ನಲ್ಲಿ ಬರೆದಿರುವ ಅವರು ಕೊನೆಯಲ್ಲಿ, ನಮಸ್ತೆ ಭಾರತ ಎಂದು ಸೇರಿಸಿದ್ದಾರೆ.

ಡ್ರೆಸ್ಸಿಂಗ್​ ರೂಮ್​ನಲ್ಲಿ ಕಾಣಿಸಿಕೊಂಡ ಅಗರ್ಕರ್​

ಟೀಮ್​ ಇಂಡಿಯಾ ಸೆಲೆಕ್ಷನ್ ಕಮಿಟಿಯ ಅಧ್ಯಕ್ಷರಾಗಿ ನೇಮಕಗೊಂಡ ಅಜಿತ್​​ ಅಗರ್ಕರ್ (Ajit Agarkar), ಭಾರತ-ವೆಸ್ಟ್ ಇಂಡೀಸ್ 2ನೇ ಟೆಸ್ಟ್ ಪಂದ್ಯದ ವೇಳೆ ಡ್ರೆಸ್ಸಿಗ್ ರೂಮ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಏಕದಿನ ವಿಶ್ವಕಪ್ (ODI World Cup 2023)​, ಏಷ್ಯಾಕಪ್​ಗೆ (Asia Cup 2023) ಸಂಬಂಧಿಸಿ ನಾಯಕ ರೋಹಿತ್​ ಶರ್ಮಾ (Rohit Sharma), ಕೋಚ್​ ರಾಹುಲ್ ದ್ರಾವಿಡ್ (Rahul Dravid), ಹಿರಿಯ ಆಟಗಾರ ವಿರಾಟ್​ ಕೊಹ್ಲಿ (Virat Kohli) ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಲವು ಆಟಗಾರರಿಗೆ ಇಂಜುರಿಯಾಗಿದ್ದು, ಚೇತರಿಕೆಯ ಹಂತದಲ್ಲಿದ್ದಾರೆ. ಹಾಗಾಗಿ ಹೇಗೆ ತಂಡ ಕಟ್ಟಬೇಕೆಂಬ ಚರ್ಚೆ ನಡೆದಿದೆ.

ಸೂರ್ಯಕುಮಾರ್​ಗೆ ನಾಯಕತ್ವ?

ಸದ್ಯ ವೆಸ್ಟ್​ ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡ ಆ ಬಳಿಕ 3 ಪಂದ್ಯಗಳ ಟಿ20 ಸರಣಿಗೆ ಐರ್ಲೆಂಡ್ ಪ್ರವಾಸ ಮಾಡಲಿದೆ. ಈ ಸರಣಿಗೆ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತಿಸಿದೆ. ಹಾಗಾಗಿ ಯುವ ಆಟಗಾರರನ್ನು ಈ ಸರಣಿಗೆ ಕಳುಹಿಸಿಕೊಡಲು ಯೋಜನೆ ರೂಪಿಸಿದೆ. ಮೊದಲು ಈ ಪ್ರವಾಸದಲ್ಲಿ ಭಾರತ ತಂಡವನ್ನು ಹಾರ್ದಿಕ್​ ಪಾಂಡ್ಯ (Hardik Pandya) ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರಿಗೂ ವಿಶ್ರಾಂತಿ ನೀಡಲು ಬಿಸಿಸಿಐ ಚಿಂತಿಸಿದೆ. ಪಾಂಡ್ಯ ಬದಲಿಗೆ ಸೂರ್ಯಕುಮಾರ್ (Suryakumar Yadav)​ ತಂಡದ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ.

ಸಂಬಂಧಿತ ಲೇಖನ