Davanagere News: ವಿಶೇಷ ಒಲಿಂಪಿಕ್ಸ್ ಸೈಕ್ಲಿಂಗ್‌ನಲ್ಲಿ ಚಿನ್ನ ಗೆದ್ದ ದಾವಣಗೆರೆಯ ಸುಶ್ರುತ್; ವಿಶೇಷ ವಿದ್ಯಾರ್ಥಿ ಸಾಧನೆಗೆ ಮೆಚ್ಚುಗೆ
ದಾವಣಗೆರೆಯ ಮಂಜುನಾಥ್ ಹಾಗೂ ಮಮತ ದಂಪತಿಯ ಪುತ್ರ ಎಂಎಸ್ ಸುಶ್ರುತ್ ವಿಶೇಷ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದಾನೆ.
ದಾವಣಗೆರೆ: ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ಇತ್ತೀಚೆಗೆ ನಡೆದ ಇಂಟರ್ನ್ಯಾಷನಲ್ ಸ್ಪೆಷಲ್ ಒಲಿಂಪಿಕ್ಸ್ ಸಮ್ಮರ್ ವರ್ಲ್ಡ್ ಗೇಮ್ಸ್ 2023ರಲ್ಲಿ (Special Olympics World Games Berlin 2023) ಸೈಕ್ಲಿಂಗ್ ಸ್ಪರ್ಧೆಯಲ್ಲಿ ದಾವಣಗೆರೆಯ ಸಂವೇದ ತರಬೇತಿ ಹಾಗೂ ಸಂಶೋಧನಾ ಕೇಂದ್ರದ ವಿಶೇಷ ವಿದ್ಯಾರ್ಥಿ ಎಂಎಸ್ ಸುಶ್ರುತ್ ಚಿನ್ನದ ಪದಕಗೆದ್ದಿದ್ದಾರೆ. ಆ ಮೂಲಕ ಕರ್ನಾಟಕ ರಾಜ್ಯ ಮಾತ್ರವಲ್ಲದೆ ದೇಶಕ್ಕೆ ಕೀರ್ತಿ ತಂದಿದ್ದಾನೆ.
ದಾವಣಗೆರೆಯ ಮಂಜುನಾಥ್ ಹಾಗೂ ಮಮತ ದಂಪತಿಯ ಪುತ್ರ 17 ವರ್ಷದ ಎಂಎಸ್ ಸುಶ್ರುತ್, ಕಳೆದ 2013ರಿಂದ ಸಂವೇದ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಸುಶ್ರುತ್ ಹೆಚ್ಚಿನ ಕ್ಷಮತೆ ಹೊಂದಿರುವ ಕಾರಣ ಶಾಲೆಯ ದೈಹಿಕ ಶಿಕ್ಷಕ ದಾದಾಪೀರ್, ಬಾಲಕನಿಗೆ ಸೈಕ್ಲಿಂಗ್ ತರಬೇತಿ ನೀಡಿದರು. ತರಬೇತಿ ಪಡೆದ ನಂತರ ಸುಶ್ರುತ್ 2021ರಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪೆಷಲ್ ಒಲಂಪಿಕ್ಸ್ ಸೈಕ್ಲಿಂಗ್ ವಿಭಾಗದಲ್ಲಿ ಭಾಗವಹಿಸಿ 5 ಕಿಮೀ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದ.
ಸುಶ್ರುತ್ ವಿಶೇಷ ಬಾಲಕನಾಗಿದ್ದರೂ ದೈಹಿಕ ಮತ್ತು ಮಾನಸಿಕ ಅಂಗವೈಕಲ್ಯವನ್ನು ಮೆಟ್ಟಿ ನಿಲ್ಲುವ ಚಾಣಾಕ್ಷ ಬಾಲಕನೆಂದು ಗಮನಿಸಿದ್ದ ತರಬೇತಿ ಕೇಂದ್ರದ ಕೋಚ್ ದಾದಾಪೀರ್, ವಿಶೇಷ ಗಮನಹರಿಸಿ ಸುಶ್ರುತ್‌ಗೆ ಸೈಕ್ಲಿಂಗ್‌ನಲ್ಲಿ ತರಬೇತಿ ನೀಡಿದ್ದರು. ಅದರಂತೆಯೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡು ಪದಕ ತನ್ನದಾಗಿಸಿಕೊಂಡಿದ್ದ.
ಈಗ ಜರ್ಮನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ವಿಶೇಷ ಒಲಿಂಪಿಕ್ಸ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾನೆ. ಕರ್ನಾಟಕದ ಹೆಡ್ ಕೋಚ್ ಆಗಿ ದಾದಾಪೀರ್ ಭಾಗವಹಿಸಿದ್ದರು. ಸುಶ್ರುತ್ ಸಾಧನೆ ಹಿನ್ನೆಲೆಯಲ್ಲಿ ವಿವಿಧೆಡೆ ಅಭಿನಂದನಾ ಕಾರ್ತಕ್ರಮ ನಡೆಸಲಾಗುತ್ತಿದೆ.
ಸುಶ್ರುತ್ ಕುರಿತು ಮಾತನಾಡಿದ ತರಬೇತುದಾರ ದಾದಾಪೀರ್, ಸುಶ್ರುತ್ ಶಾಲೆ ಸೇರಿದ ಹೊಸದರಲ್ಲಿ ಸೈಕಲ್ ತುಳಿಯಲು ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ತರಬೇತಿ ಪಡೆದ ನಂತರ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಅಲ್ಲಿ ಆಯ್ಕೆ ಆಗಲಿಲ್ಲ. ಮುಂದೆ ಹೆಚ್ಚಿನ ತರಬೇತಿಯೊಂದಿಗೆ ತಯಾರಾದ ಸುಶ್ರುತ್ ರಾಜ್ಯ, ರಾಷ್ಟ್ರ ಹಾಗೂ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ತೋರಿದ್ದಾನೆ ಎಂದು ಖುಷಿಯಿಂದ ಮಾತನಾಡಿದ್ದಾರೆ.
Davanagere News: ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್‌ಗೆ ಯುವತಿಯಿಂದ ಅಶ್ಲೀಲ ವಿಡಿಯೋ ಕಾಲ್; ದೂರು ದಾಖಲು
ದಾವಣಗೆರೆಯ (Davanagere) ಸಂಸದ ಡಾ.ಜಿಎಂ ಸಿದ್ದೇಶ್ವರ್ (GM Siddeshwara) ಅವರಿಗೆ ಅಪರಿಚಿತ ಯುವತಿಯೊಬ್ಬಳು ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿದ್ದಾಳೆ. ಕಾಲ್‌ನಲ್ಲಿ ಅಶ್ಲೀಲವಾಗಿ ವರ್ತಿಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಿರುವ ಬಗ್ಗೆ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Davanagere News: ದಾವಣಗೆರೆಯಲ್ಲಿ ಉಲ್ಬಣಿಸುತ್ತಿದೆ ಮದ್ರಾಸ್ ಐ; ಸೋಂಕಿನ ಲಕ್ಷಣ, ಚಿಕಿತ್ಸಾ ಪರಿಹಾರ, ಮುಂಜಾಗ್ರತಾ ಕ್ರಮ ಏನೇನು
ಮಧ್ಯಕರ್ನಾಟಕದ ದಾವಣಗೆರೆ (Davanagere) ಯಲ್ಲಿ ಕಣ್ಣಿನ ಸೋಂಕಾಗಿರುವ ‘ಮದ್ರಾಸ್ ಐ’ (Madras Eye) ಉಲ್ಬಣವಾಗುತ್ತಿದ್ದು, ಮಕ್ಕಳಲ್ಲಿ ಅತೀ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಪೋಷಕರು ಆತಂಕಕ್ಕೀಡಾಗಿದ್ದಾರೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಂಜಕ್ವಿಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ ಕಣ್ಣು ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮವುಂಟು ಮಾಡುತ್ತವೆ. ಮದ್ರಾಸ್ ಐ ಈಗ ಮಳೆಗಾಲದಲ್ಲಿ ಹೆಚ್ಚಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಸಿದರೆ ಅಧಿಕವಾಗಿ ಈ ವರ್ಷ ಕಾಣಿಸಿಕೊಂಡಿದೆ. ಸುಮಾರು 3ಸಾವಿರಕ್ಕೂ ಅಧಿಕ ಜನರು ಮದ್ರಾಸ್ ಐ ಸೋಂಕಿಗೆ ಸಿಲುಕಿದ್ದು, ಅದರಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ