Ind vs Nep: ನೇಪಾಳ ವಿರುದ್ಧ ಗೆದ್ದು ಸೆಮಿಫೈನಲ್​​ ಪ್ರವೇಶಿಸಿದ ಭಾರತ; ಪಂದ್ಯದ ನಡುವೆ ಬಡಿದಾಡಿಕೊಂಡ ಉಭಯ ತಂಡಗಳ ಆಟಗಾರರು, ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರೀಡೆ  /  Ind Vs Nep: ನೇಪಾಳ ವಿರುದ್ಧ ಗೆದ್ದು ಸೆಮಿಫೈನಲ್​​ ಪ್ರವೇಶಿಸಿದ ಭಾರತ; ಪಂದ್ಯದ ನಡುವೆ ಬಡಿದಾಡಿಕೊಂಡ ಉಭಯ ತಂಡಗಳ ಆಟಗಾರರು, ವಿಡಿಯೋ ವೈರಲ್

Ind vs Nep: ನೇಪಾಳ ವಿರುದ್ಧ ಗೆದ್ದು ಸೆಮಿಫೈನಲ್​​ ಪ್ರವೇಶಿಸಿದ ಭಾರತ; ಪಂದ್ಯದ ನಡುವೆ ಬಡಿದಾಡಿಕೊಂಡ ಉಭಯ ತಂಡಗಳ ಆಟಗಾರರು, ವಿಡಿಯೋ ವೈರಲ್

Ind vs Nep: ನೇಪಾಳ ವಿರುದ್ಧ ಗೆದ್ದು ಭಾರತ ಸೆಮಿಫೈನಲ್​​ ಪ್ರವೇಶಿಸಿದೆ. ಆದರೆ ಈ ಪಂದ್ಯದ ನಡುವೆ ಉಭಯ ತಂಡಗಳ ಆಟಗಾರರು ಬಡಿದಾಡಿಕೊಂಡಿದ್ದಾರೆ. ಅದರ ವಿಡಿಯೋ ಈಗ ವೈರಲ್ ಆಗುತ್ತಿದೆ.

ಪಂದ್ಯದ ನಡುವೆ ಬಡಿದಾಡಿಕೊಂಡ ಉಭಯ ತಂಡಗಳ ಆಟಗಾರರು, ವಿಡಿಯೋ ವೈರಲ್
ಪಂದ್ಯದ ನಡುವೆ ಬಡಿದಾಡಿಕೊಂಡ ಉಭಯ ತಂಡಗಳ ಆಟಗಾರರು, ವಿಡಿಯೋ ವೈರಲ್

ಸ್ಯಾಫ್​ ಫುಟ್ಬಾಲ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡವು ಎರಡನೇ ಪಂದ್ಯದಲ್ಲೂ ಗೆದ್ದು ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಜೂನ್ 21ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ತಂಡವು, ನೇಪಾಳ ವಿರುದ್ಧ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿ, ಮತ್ತೊಂದು ಅಮೋಘ ಗೆಲುವು ಸಾಧಿಸಿತು.

ಜೂನ್ 24ರಂದು ಶನಿವಾರ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ 'ಎ' ಗುಂಪಿನ ಎರಡನೇ ಪಂದ್ಯದಲ್ಲಿ ನೇಪಾಳ ಎದುರು 2-0 ಗೋಲುಗಳ ಅಂತರದಿಂದ ಭಾರತ ಜಯಿಸಿ ಸೆಮೀಸ್​ಗೆ ಪ್ರವೇಶಿಸಿತು. ಮತ್ತೊಂದೆಡೆ ನೇಪಾಳ ತಾನಾಡಿದ 2ನೇ ಪಂದ್ಯದಲ್ಲೂ ಸೋಲು ಕಂಡು ಸೆಮೀಸ್​ನಿಂದ ಹೊರ ಬಿತ್ತು.

ಮೊದಲ ಪಂದ್ಯದಲ್ಲಿ ಕುವೈತ್​ ವಿರುದ್ಧ ಪರಾಭವಗೊಂಡಿದ್ದ ನೇಪಾಳ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಔಪಚಾರಿಕ ಪಂದ್ಯವನ್ನು ಆಡಲಿದೆ. ಪಾಕಿಸ್ತಾನದ ವಿರುದ್ಧದಂತೆ ಸುಲಭ ಗೆಲುವು ಸಿಗದಿದ್ದರೂ, ಪಂದ್ಯದುದ್ದಕ್ಕೂ ಭಾರತ ಹೋರಾಟ ನಡೆಸಿದ್ದು ಅದ್ಭುತವಾಗಿತ್ತು. ನೆರೆದಿದ್ದ ಅಭಿಮಾನಿಗಳನ್ನು ಮನರಂಜನೆ ನೀಡಿತು.

ಭಾರತ ತಂಡದ ನಾಯಕ ಸುನಿಲ್​ ಛೆಟ್ರಿ ಅವರು ಮತ್ತೊಮ್ಮೆ ತಮ್ಮ ಕಾಲ್ಚಳಕ ತೋರಿಸಿದರು. ಕಂಠೀರವ ಸ್ಟೇಡಿಯಂನಲ್ಲಿ ನೆರೆದಿದ್ದ ಫುಟ್ಬಾಲ್ ಪ್ರೇಮಿಗಳು ರಂಜಿಸಿದರು. ಪಂದ್ಯ ಆರಂಭದ ನಂತರ ನೇಪಾಳ ಅದ್ಭುತ ಪ್ರದರ್ಶನ ತೋರಿತು. ಇದರಿಂದ ಭಾರತದ ಆಟವನ್ನು ನಿಯಂತ್ರಿಸಿತು.

91ನೇ ಗೋಲು ಗಳಿಸಿದ ಛೆಟ್ರಿ

ಇಷ್ಟಾದರೂ ಗೋಲು ಗಳಿಸುವ ಅವಕಾಶವನ್ನು ನೇಪಾಳ ಕಳೆದುಕೊಂಡಿತು. ಹೀಗಾಗಿ ಮೊದಲ ಅರ್ಧದ ಆಟವು ಗೋಲು ಕಾಣದೆ ಅಂತ್ಯ ಕಂಡಿತು. ಬಳಿಕ ಶುರುವಾದ 2ನೇ ಹಂತದಲ್ಲಿ ಭಾರತ ತಂಡವು ಅಗ್ರೆಸ್ಸಿವ್ ಆಟಕ್ಕೆ ಮುಂದಾಯಿತು. ಪರಿಣಾಮ 61ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಭಾರತದ ಪರ 91 ಗೋಲು ಗಳಿಸಿದರು.

ಬಳಿಕ ಭಾರತವು ಮತ್ತೊಂದು ಗೋಲು ಹಾಕಿತು. 70ನೇ ನಿಮಿಷದಲ್ಲಿ ಸಹಲ್‌ ಸಮದ್‌ ಕೌಂಟರ್‌ ಅಟ್ಯಾಕ್‌ ಚೆಂಡನ್ನು ಮಹೇಶ್‌ ಸಿಂಗ್‌ ಗೋಲು ಪೆಟ್ಟಿಗೆಗೆ ಸೇರಿಸಿದರು. ಇದರೊಂದಿಗೆ ಭಾರತಕ್ಕೆ ಗೆಲುವು ಆಯಿತು. ವಿಶೇಷ ಅಂದರೆ ಸ್ಯಾಫ್‌ ಚಾಂಪಿಯನ್​​​ಶಿಪ್​ನ ಎಲ್ಲಾ 14 ಆವೃತ್ತಿಗಳಲ್ಲೂ ಭಾರತ ಸೆಮೀಸ್‌ ಪ್ರವೇಶಿಸಿದ ಸಾಧನೆ ಮಾಡಿದೆ.

ಗಲಾಟೆ ಮಾಡಿಕೊಂಡ ಆಟಗಾರರು

ಇನ್ನು ಪಾಕಿಸ್ತಾನ ಪಂದ್ಯದಲ್ಲಿ ನಡೆದ ಘಟನೆಯಂತೆ ಈ ಪಂದ್ಯದಲ್ಲೂ ಆಟಗಾರರ ನಡುವೆ ಕಾದಾಟ ನಡೆಯಿತು. ಪಂದ್ಯದ 64ನೇ ನಿಮಿಷದಲ್ಲಿ ಭಾರತದ ರಾಹುಲ್​ ಭೇಕೆ ಮತ್ತು ನೇಪಾಳದ ಬಿಮಲ್ ಘರ್ತಿ ಮಗರ್​ ಅವರು ಹೆಡರ್ ಮಾಡಲು ಹೋದಾಗ ಇಬ್ಬರು ವಾಗ್ದಾಳಿ ನಡೆಸಿದರು.

ಭಾರತದ ಆಟಗಾರ, ಮಗರ್​ ಮೇಲೆ ಆರೋಪಿಸಿದರು. ಬಳಿಕ ಉಭಯ ತಂಡಗಳ ಆಟಗಾರರ ನಡುವೆ ಜಗಳ ಶುರುವಾಯಿತು. ಹಾಗೆಯೇ ಬಡಿದಾಡಿಕೊಂಡರು. ಭಾರತೀಯ ಆಟಗಾರರ ಈ ನಡೆಗೆ ಭಾರೀ ಟೀಕೆ ವ್ಯಕ್ತವಾಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಉಭಯ ತಂಡಗಳ ಆಟಗಾರರ ನಡುವೆ ಜಗಳ ನಡೆದಿತ್ತು.

ಕ್ರೀಡೆಗೆ ಸಂಬಂಧಿಸಿದ ಸುದ್ದಿ

1983 World Cup: ಮೊದಲ ವಿಶ್ವಕಪ್ ಗೆದ್ದು ಇಂದಿಗೆ 40 ವರ್ಷ; ಲತಾ ಮಂಗೇಶ್ಕರ್ ಕಾರ್ಯಕ್ರಮ ಆಯೋಜಿಸಿ ಆಟಗಾರರಿಗೆ ಬಹುಮಾನ ಕೊಟ್ಟಿದ್ದ ಬಿಸಿಸಿಐ

ಜೂನ್ 25, 1983.. ಈ ದಿನವನ್ನು ಭಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಯಾರು ಮರೆಯಲು ಸಾಧ್ಯ ಹೇಳಿ. ಕ್ರಿಕೆಟ್​​​ ಜನಕರ ನಾಡಲ್ಲೇ ಭಾರತ ತೊಡೆ ತಟ್ಟಿ ನಿಂತು ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿದ ದಿನ ಇಂದು. ಸ್ಮರಣೀಯ, ಅಮೋಘ, ಅದ್ವಿತೀಯ. ಭಾರತೀಯ ಕ್ರಿಕೆಟ್‌ನಲ್ಲಿ ಇಂದು ವಿಶೇಷ ದಿನ. ಭಾರತದಲ್ಲಿ ಕ್ರಿಕೆಟ್ ಇರುವವರೆಗೂ ಆ ದಿನವನ್ನ ಎಂದೂ ಮರೆಯುವುದಿಲ್ಲ. 40 ವರ್ಷಗಳ ಹಿಂದೆ ಇದೇ ದಿನ, ಭಾರತ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಿತ್ತು. ಈ ಕುರಿತು ಸಂಪೂರ್ಣ ಸುದ್ದಿಗಾಗಿ ಈ ಲಿಂಕ್​ ಮೇಲೆ ಕ್ಲಿಕ್ ಮಾಡಿ.

 

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.