ಪ್ಯಾರಿಸ್ ಒಲಿಂಪಿಕ್ಸ್​ ಆಡುವ ರಾಜ್ಯವಾರು ಕ್ರೀಡಾಪಟುಗಳ ಪಟ್ಟಿ: ಹರಿಯಾಣ-ಪಂಜಾಬ್​ಗೆ ಸಿಂಹಪಾಲು, ಕರ್ನಾಟಕದಿಂದ ಎಷ್ಟು?
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್​ ಆಡುವ ರಾಜ್ಯವಾರು ಕ್ರೀಡಾಪಟುಗಳ ಪಟ್ಟಿ: ಹರಿಯಾಣ-ಪಂಜಾಬ್​ಗೆ ಸಿಂಹಪಾಲು, ಕರ್ನಾಟಕದಿಂದ ಎಷ್ಟು?

ಪ್ಯಾರಿಸ್ ಒಲಿಂಪಿಕ್ಸ್​ ಆಡುವ ರಾಜ್ಯವಾರು ಕ್ರೀಡಾಪಟುಗಳ ಪಟ್ಟಿ: ಹರಿಯಾಣ-ಪಂಜಾಬ್​ಗೆ ಸಿಂಹಪಾಲು, ಕರ್ನಾಟಕದಿಂದ ಎಷ್ಟು?

Paris Olympics 2024: ಪ್ಯಾರಿಸ್‌ ಒಲಿಂಪಿಕ್ಸ್​​ಗೆ ಪ್ರಕಟಗೊಂಡ ಪಟ್ಟಿಯಲ್ಲಿ ಭಾರತೀಯ ಕ್ರೀಡಾಪಟುಗಳ ಪೈಕಿ ರಾಜ್ಯವಾರು ಎಷ್ಟು, ಯಾರೆಲ್ಲಾ ಅವಕಾಶ ಪಡೆದಿದ್ದಾರೆ ಎಂಬುದರ ವಿವರ ಇಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್​ ಆಡುವ ರಾಜ್ಯವಾರು ಕ್ರೀಡಾಪಟುಗಳ ಪಟ್ಟಿ: ಹರಿಯಾಣ-ಪಂಜಾಬ್​ಗೆ ಸಿಂಹಪಾಲು, ಕರ್ನಾಟಕದಿಂದ ಎಷ್ಟು?
ಪ್ಯಾರಿಸ್ ಒಲಿಂಪಿಕ್ಸ್​ ಆಡುವ ರಾಜ್ಯವಾರು ಕ್ರೀಡಾಪಟುಗಳ ಪಟ್ಟಿ: ಹರಿಯಾಣ-ಪಂಜಾಬ್​ಗೆ ಸಿಂಹಪಾಲು, ಕರ್ನಾಟಕದಿಂದ ಎಷ್ಟು?

ಜುಲೈ 26ರಿಂದ ಪ್ರಾರಂಭವಾಗುವ 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ 117 ಸದಸ್ಯರ ಪೈಕಿ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳು ಸಿಂಹಪಾಲು ಪಡೆದಿವೆ. ಉತ್ತರ ಭಾರತದ ಈ ಎರಡು ರಾಜ್ಯಗಳು ಒಟ್ಟು 42 ಸ್ಫರ್ಧಿಗಳನ್ನು ಕಳುಹಿಸಿಕೊಡುತ್ತಿವೆ. ಈ ಪೈಕಿ ಪಂಜಾಬ್​ 18 (ಹಾಕಿ ಆಟಗಾರರೇ ಹತ್ತು ಮಂದಿ), ಹರಿಯಾಣ 24 ಕ್ರೀಡಾಪಟುಗಳನ್ನು ಕಳುಹಿಸುತ್ತಿದೆ. ಶಟ್ಲರ್ ತನಿಶಾ ಕ್ರಾಸ್ಟೊ ಅವರು ದೇಶದ ಹೊರಗೆ ಜನಿಸಿದ ಏಕೈಕ ಭಾರತೀಯ ಕ್ರೀಡಾಪಟು ಆಗಿದ್ದಾರೆ. ಈ ಬ್ಯಾಡ್ಮಿಂಟನ್ ತಾರೆ ಜನಿಸಿದ್ದು ದುಬೈನಲ್ಲಿ.

ಅಥ್ಲೆಟಿಕ್ಸ್‌ನಲ್ಲಿ 29 ಕ್ರೀಡಾಪಟುಗಳು ಆಯ್ಕೆ ಆಗಿದ್ದಾರೆ. ಈ ಪೈಕಿ ತಮಿಳುನಾಡು (6), ಉತ್ತರ ಪ್ರದೇಶ (4) ಮತ್ತು ಕೇರಳ (4) ಪ್ರಾಬಲ್ಯ ಹೊಂದಿವೆ. 117 ಕ್ರೀಡಾಪಟುಗಳಲ್ಲಿ 70 ಪುರುಷ, 47 ಮಹಿಳಾ ಅಥ್ಲೀಟ್‌ಗಳಿದ್ದಾರೆ. 16 ಕ್ರೀಡಾವಿಭಾಗಗಳಲ್ಲಿ ಭಾಗವಹಿಸುವ ಭಾರತದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ದೇಶದ ತ್ರಿವರ್ಣ ಧ್ವಜ ಹಾರಿಸಲು ಸಜ್ಜಾಗಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್​​ಗೆ ಪ್ರಕಟಗೊಂಡ ಪಟ್ಟಿಯಲ್ಲಿ ರಾಜ್ಯವಾರು ಎಷ್ಟು, ಯಾರೆಲ್ಲಾ ಅವಕಾಶ ಪಡೆದಿದ್ದಾರೆ ಎಂಬುದರ ವಿವರ ಇಲ್ಲಿದೆ.

ಹರಿಯಾಣ

ಭಜನ್ ಕೌರ್ (ಬಿಲ್ಲುಗಾರಿಕೆ), ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ಕಿರಣ್ ಪಹಲ್ (ಅಥ್ಲೆಟಿಕ್ಸ್), ಅಮಿತ್ ಪಂಗಲ್ (ಬಾಕ್ಸಿಂಗ್), ನಿಶಾಂತ್ ದೇವ್ (ಬಾಕ್ಸಿಂಗ್), ಪ್ರೀತಿ ಪವಾರ್ (ಬಾಕ್ಸಿಂಗ್), ಜಾಸ್ಮಿನ್ ಲಂಬೋರಿಯಾ (ಬಾಕ್ಸಿಂಗ್), ದೀಕ್ಷಾ ದಾಗರ್ (ಗಾಲ್ಫ್), ಬಲರಾಜ್ ಪನ್ವಾರ್ (ರೋಯಿಂಗ್), ಸರಬ್ಜೋತ್ ಸಿಂಗ್ (ಶೂಟಿಂಗ್), ಅನೀಶ್ ಭನ್ವಾಲಾ (ಶೂಟಿಂಗ್), ರಮಿತಾ ಜಿಂದಾಲ್ (ಶೂಟಿಂಗ್), ಮನು ಭಾಕರ್ (ಶೂಟಿಂಗ್), ರೈಜಾ ಧಿಲ್ಲೋನ್ (ಶೂಟಿಂಗ್), ಸುಮಿತ್ ನಾಗಲ್ (ಟೆನಿಸ್), ಅಮನ್ ಸೆಹ್ರಾವತ್ (ಕುಸ್ತಿ), ವಿನೇಶ್ ಫೋಗಟ್ (ಕುಸ್ತಿ), ಆಂಟಿಮ್ ಪಂಗಲ್ (ಕುಸ್ತಿ), ಅಂಶು ಮಲಿಕ್ (ಕುಸ್ತಿ), ನಿಶಾ ದಹಿಯಾ (ಕುಸ್ತಿ), ರೀತಿಕಾ ಹೂಡಾ (ಕುಸ್ತಿ), ಸುಮಿತ್ (ಹಾಕಿ), ಸಂಜಯ್ (ಹಾಕಿ), ಅಭಿಷೇಕ್ (ಹಾಕಿ),

ಪಂಜಾಬ್

ತಜಿಂದರ್ಪಾಲ್ ಸಿಂಗ್ ತೂರ್ (ಅಥ್ಲೆಟಿಕ್ಸ್), ಅಕ್ಷದೀಪ್ ಸಿಂಗ್ (ಅಥ್ಲೆಟಿಕ್ಸ್), ಗಗನ್ಜೀತ್ ಭುಲ್ಲರ್ (ಗಾಲ್ಫ್), ಅರ್ಜುನ್ ಬಾಬುತಾ (ಶೂಟಿಂಗ್), ಸಂದೀಪ್ ಸಿಂಗ್ (ಶೂಟಿಂಗ್), ಅರ್ಜುನ್ ಚೀಮಾ (ಶೂಟಿಂಗ್), ವಿಜಯವೀರ್ ಸಿಧು (ಶೂಟಿಂಗ್), ಸಿಫ್ಟ್ ಕೌರ್ ಸಮ್ರಾ (ಶೂಟಿಂಗ್), ಜರ್ಮನ್‌ಪ್ರೀತ್ ಸಿಂಗ್ (ಹಾಕಿ), ಹರ್ಮನ್‌ಪ್ರೀತ್ ಸಿಂಗ್ (ಹಾಕಿ), ಶಂಶೇರ್ ಸಿಂಗ್ (ಹಾಕಿ), ಮನ್‌ಪ್ರೀತ್ ಸಿಂಗ್ (ಹಾಕಿ), ಹಾರ್ದಿಕ್ ಸಿಂಗ್ (ಹಾಕಿ), ಸುಖಜೀತ್ ಸಿಂಗ್ (ಹಾಕಿ), ಮನ್ದೀಪ್ ಸಿಂಗ್ (ಹಾಕಿ), ಗುರ್ಜಂತ್ ಸಿಂಗ್ (ಹಾಕಿ), ಜುಗರಾಜ್ ಸಿಂಗ್ (ಹಾಕಿ), ಕ್ರಿಶನ್ ಬಹದ್ದೂರ್ ಪಾಠಕ್ (ಹಾಕಿ).

ತಮಿಳುನಾಡು

ಜೆಸ್ವಿನ್ ಆಲ್ಡ್ರಿನ್ (ಅಥ್ಲೆಟಿಕ್ಸ್), ಪ್ರವೀಲ್ ಚಿತ್ರವೆಲ್ (ಅಥ್ಲೆಟಿಕ್ಸ್), ಸಂತೋಷ್ ತಮಿಳರಸನ್ (ಅಥ್ಲೆಟಿಕ್ಸ್), ರಾಜೇಶ್ ರಮೇಶ್ (ಅಥ್ಲೆಟಿಕ್ಸ್), ಸುಭಾ ವೆಂಕಟೇಶನ್ (ಅಥ್ಲೆಟಿಕ್ಸ್), ವಿತ್ಯ ರಾಮರಾಜ್ (ಅಥ್ಲೆಟಿಕ್ಸ್), ವಿಷ್ಣು ಸರವಣನ್ (ಸೀಲಿಂಗ್​), ನೇತ್ರ ಕುಮನನ್ (ಸೀಲಿಂಗ್​), ಪೃಥ್ವಿರಾಜ್ ತೊಂಡೈಮಾನ್ (ಶೂಟಿಂಗ್), ಎಲವೆನಿಲ್ ವಲರಿವನ್ (ಶೂಟಿಂಗ್), ಶರತ್ ಕಮಲ್ (ಟೇಬಲ್ ಟೆನಿಸ್), ಸತ್ಯನ್ ಜಿ (ಟೇಬಲ್ ಟೆನಿಸ್), ಶ್ರೀರಾಮ್ ಬಾಲಾಜಿ (ಟೆನಿಸ್).

ಉತ್ತರ ಪ್ರದೇಶ

ವಿಕಾಸ್ ಸಿಂಗ್ (ಅಥ್ಲೆಟಿಕ್ಸ್), ಪಾರುಲ್ ಚೌಧರಿ (ಅಥ್ಲೆಟಿಕ್ಸ್), ಅನ್ನು ರಾಣಿ (ಅಥ್ಲೆಟಿಕ್ಸ್), ಪ್ರಿಯಾಂಕಾ ಗೋಸ್ವಾಮಿ (ಅಥ್ಲೆಟಿಕ್ಸ್), ಶುಭಂಕರ್ ಶರ್ಮಾ (ಗಾಲ್ಫ್), ರಿದಮ್ ಸಾಂಗ್ವಾನ್ (ಶೂಟಿಂಗ್), ರಾಜ್‌ಕುಮಾರ್ ಪಾಲ್ (ಹಾಕಿ), ಲಲಿತ್ ಕುಮಾರ್ ಉಪಾಧ್ಯಾಯ (ಹಾಕಿ).

ಕರ್ನಾಟಕ

ಪೂವಮ್ಮ ಎಂಆರ್ (ಅಥ್ಲೆಟಿಕ್ಸ್), ಅಶ್ವಿನಿ ಪೊನ್ನಪ್ಪ (ಬ್ಯಾಡ್ಮಿಂಟನ್), ಅದಿತಿ ಅಶೋಕ್ (ಗಾಲ್ಫ್), ಶ್ರೀಹರಿ ನಟರಾಜ್ (ಈಜು), ಧಿನಿಧಿ ದೇಸಿಂಗು (ಈಜು), ಅರ್ಚನಾ ಕಾಮತ್ (ಟೇಬಲ್ ಟೆನಿಸ್), ರೋಹನ್ ಬೋಪಣ್ಣ (ಟೆನಿಸ್), ನಿಶಾಂತ್ ದೇವ್ (ಬಾಕ್ಸರ್‌), ಮಿಜೋ ಚಾಕೋ ಕುರಿಯನ್‌ (ಅಥ್ಲೆಟಿಕ್ಸ್).

ಕೇರಳ

ಅಬ್ದುಲ್ಲಾ ಅಬೂಬಕರ್ (ಅಥ್ಲೆಟಿಕ್ಸ್), ಮುಹಮ್ಮದ್ ಅನಸ್ (ಅಥ್ಲೆಟಿಕ್ಸ್), ಮುಹಮ್ಮದ್ ಅಜ್ಮಲ್ (ಅಥ್ಲೆಟಿಕ್ಸ್), ಮಿಜೋ ಚಾಕೊ ಕುರಿಯನ್ (ಅಥ್ಲೆಟಿಕ್ಸ್), ಪಿಆರ್​ ಶ್ರೀಜೇಶ್ (ಹಾಕಿ).

ಮಹಾರಾಷ್ಟ್ರ

ಅವಿನಾಶ್ ಸೇಬಲ್ (ಸ್ಟೀಪಲ್‌ಚೇಸ್), ಪ್ರವೀಣ್ ಜಾಧವ್ (ಆರ್ಚರಿ), ಸರ್ವೇಶ್ ಕುಶಾರೆ (ಹೈಜಂಪ್), ಚಿರಾಗ್ ಶೆಟ್ಟಿ (ಬ್ಯಾಡ್ಮಿಂಟನ್-ಪುರುಷರ ಡಬಲ್ಸ್), ಸ್ವಪ್ನಿಲ್ ಕೌಸಲೆ (ಸೈಲಿಂಗ್), ಸರ್ವೇಶ್ ಕುಶ್ರೆ (ಅಥ್ಲೆಟಿಕ್ಸ್)

ದೆಹಲಿ

ಅಮೋಜ್ ಜಾಕೋಬ್ (ಅಥ್ಲೆಟಿಕ್ಸ್), ಎಚ್ಎಸ್ ಪ್ರಣಯ್ (ಬ್ಯಾಡ್ಮಿಂಟನ್), ತುಲಿಕಾ ಮಾನ್ (ಜೂಡೋ), ರಾಜೇಶ್ವರಿ ಕುಮಾರಿ (ಶೂಟಿಂಗ್), ಮನಿಕಾ ಬಾತ್ರಾ (ಟೇಬಲ್ ಟೆನಿಸ್).

ಆಂಧ್ರಪ್ರದೇಶ

ಧೀರಜ್ ಬೊಮ್ಮದೇವರ (ಆರ್ಚರಿ), ಜ್ಯೋತಿ ಯರ್ರಾಜಿ (ಅಥ್ಲೆಟಿಕ್ಸ್), ಜ್ಯೋತಿಕಾ ಶ್ರೀ ದಂಡಿ (ಅಥ್ಲೆಟಿಕ್ಸ್), ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ (ಬ್ಯಾಡ್ಮಿಂಟನ್)

ತೆಲಂಗಾಣ

ಪಿವಿ ಸಿಂಧು (ಬ್ಯಾಡ್ಮಿಂಟನ್), ನಿಖತ್ ಜರೀನ್ (ಬಾಕ್ಸಿಂಗ್), ಇಶಾ ಸಿಂಗ್ (ಶೂಟಿಂಗ್), ಶ್ರೀಜಾ ಅಕುಲಾ (ಟೇಬಲ್ ಟೆನಿಸ್)

ಉತ್ತರಾಖಂಡ

ಪರಮ್​ಜೀತ್​ ಬಿಷ್ತ್ (ಅಥ್ಲೆಟಿಕ್ಸ್), ಅಂಕಿತಾ ಧ್ಯಾನಿ (ಅಥ್ಲೆಟಿಕ್ಸ್), ಸೂರಜ್ ಪನ್ವಾರ್ (ಅಥ್ಲೆಟಿಕ್ಸ್), ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್).

ಪಶ್ಚಿಮ ಬಂಗಾಳ

ಅಂಕಿತಾ ಭಕತ್ (ಆರ್ಚರಿ), ಅನುಷ್ ಅಗರ್ವಾಲಾ (ಈಕ್ವೆಸ್ಟ್ರಿಯನ್), ಅಹಿಕಾ ಮುಖರ್ಜಿ (ಟೇಬಲ್ ಟೆನಿಸ್).

ಒಡಿಶಾ

ಕಿಶೋರ್ ಜೆನಾ (ಅಥ್ಲೆಟಿಕ್ಸ್), ಅಮಿತ್ ರೋಹಿದಾಸ್ (ಹಾಕಿ)

ಮಧ್ಯಪ್ರದೇಶ

ಪ್ರಾಚಿ (ಅಥ್ಲೆಟಿಕ್ಸ್), ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್), ವಿವೇಕ್ ಸಾಗರ್ ಪ್ರಸಾದ್ (ಹಾಕಿ)

ಮಣಿಪುರ

ಮೀರಾಬಾಯಿ ಚಾನು (ವೇಟ್‌ಲಿಫ್ಟಿಂಗ್), ನೀಲಕಂಠ ಶರ್ಮಾ (ಹಾಕಿ)

ರಾಜಸ್ಥಾನ

ಅನಂತಜಿತ್ ಸಿಂಗ್ ನರುಕಾ (ಶೂಟಿಂಗ್), ಮಹೇಶ್ವರಿ ಚೌಹಾಣ್ (ಶೂಟಿಂಗ್)

ಗುಜರಾತ್

ಹರ್ಮೀತ್ ದೇಸಾಯಿ (ಟೇಬಲ್ ಟೆನಿಸ್), ಮಾನವ್ ಥಕ್ಕರ್ (ಟೇಬಲ್ ಟೆನಿಸ್)

ಸಿಕ್ಕಿಂ - ತರುಣದೀಪ್ ರೈ (ಆರ್ಚರಿ)

ಜಾರ್ಖಂಡ್ - ದೀಪಿಕಾ ಕುಮಾರಿ (ಆರ್ಚರಿ)

ಅಸ್ಸಾಂ - ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್)

ಬಿಹಾರ - ಶ್ರೇಯಸಿ ಸಿಂಗ್ (ಶೂಟಿಂಗ್)

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.