ನೀರಜ್ ಚೋಪ್ರಾ, ಪಿವಿ ಸಿಂಧು; ಪದಕ ಭರವಸೆ ಹುಟ್ಟಿಸಿರುವ ತಾರಾ ಕ್ರೀಡಾಪಟುಗಳ ತರಬೇತಿಗೆ ಕೋಟಿ ಕೋಟಿ ಖರ್ಚು!
ಕನ್ನಡ ಸುದ್ದಿ  /  ಕ್ರೀಡೆ  /  ನೀರಜ್ ಚೋಪ್ರಾ, ಪಿವಿ ಸಿಂಧು; ಪದಕ ಭರವಸೆ ಹುಟ್ಟಿಸಿರುವ ತಾರಾ ಕ್ರೀಡಾಪಟುಗಳ ತರಬೇತಿಗೆ ಕೋಟಿ ಕೋಟಿ ಖರ್ಚು!

ನೀರಜ್ ಚೋಪ್ರಾ, ಪಿವಿ ಸಿಂಧು; ಪದಕ ಭರವಸೆ ಹುಟ್ಟಿಸಿರುವ ತಾರಾ ಕ್ರೀಡಾಪಟುಗಳ ತರಬೇತಿಗೆ ಕೋಟಿ ಕೋಟಿ ಖರ್ಚು!

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕದ ಭರವಸೆ ಹುಟ್ಟು ಹಾಕಿರುವ ಭಾರತದ ತಾರಾ ಕ್ರೀಡಾಪಟುಗಳ ತರಬೇತಿಗೆ ಕ್ರೀಡಾ ಸಚಿವಾಲಯ ಕೋಟಿ ಕೋಟಿ ಖರ್ಚು ಮಾಡಿದೆ. ಯಾರಿಗೆಷ್ಟು ಖರ್ಚಾಗಿದೆ? ಇಲ್ಲಿದೆ ವಿವರ.

ನೀರಜ್ ಚೋಪ್ರಾ, ಪಿವಿ ಸಿಂಧು; ಪದಕ ಭರವಸೆ ಹುಟ್ಟಿಸಿರುವ ತಾರಾ ಕ್ರೀಡಾಪಟುಗಳ ತರಬೇತಿಗೆ ಕೋಟಿ ಕೋಟಿ ಖರ್ಚು
ನೀರಜ್ ಚೋಪ್ರಾ, ಪಿವಿ ಸಿಂಧು; ಪದಕ ಭರವಸೆ ಹುಟ್ಟಿಸಿರುವ ತಾರಾ ಕ್ರೀಡಾಪಟುಗಳ ತರಬೇತಿಗೆ ಕೋಟಿ ಕೋಟಿ ಖರ್ಚು

ನೀರಜ್ ಚೋಪ್ರಾ, ಪಿವಿ ಸಿಂಧು ಸೇರಿದಂತೆ ಉನ್ನತ ಮಟ್ಟದ ತಾರಾ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಸಚಿವಾಲಯವೇ ಸ್ಪಾನ್ಸರ್​ ಮಾಡಿದೆ. ಬಹುರಾಷ್ಟ್ರೀಯ ವೇದಿಕೆಯಲ್ಲಿ ಪದಕ ಬೇಟೆಯಾಡಲು ಮತ್ತು ರಾಷ್ಟ್ರಕ್ಕೆ ವೈಭವ ತರಲೆಂದು ಭರ್ಜರಿ ತಯಾರಿ ನಡೆಸಲು ಬೇಕಾದ ವೆಚ್ಚವನ್ನು ಕ್ರೀಡಾ ಸಚಿವಾಲಯವೇ ಭರಿಸಿದೆ. ಪದಕದ ಭರವಸೆ ನೀಡಿರುವ ಕ್ರೀಡಾಪಟುಗಳಿಗೆ ವಿದೇಶದಲ್ಲಿ ತರಬೇತಿ ಮತ್ತು ಸಿದ್ಧತೆಗಾಗಿ ಸಾಕಷ್ಟು ಮೊತ್ತವನ್ನು ಖರ್ಚು ಮಾಡಿದೆ.

ಅಧಿಕೃತ ಉದ್ಘಾಟನೆಗೂ ಮುನ್ನವೇ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಸ್ಪರ್ಧೆಗಳು ಶುರುವಾಗಿವೆ. ಜಾಗತಿಕ ಕ್ರೀಡಾ ಹಬ್ಬದಲ್ಲಿ ಒಟ್ಟು 16 ಕ್ರೀಡೆಗಳಲ್ಲಿ ಭಾರತದ 117 ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಪ್ಯಾರಿಸ್ 2024 ರ ಒಲಿಂಪಿಕ್ಸ್‌ಗೂ ಮುನ್ನ ಕ್ರೀಡಾ ಸಚಿವಾಲಯದಿಂದ ಧನಸಹಾಯ ಪಡೆದ ಭಾರತದ ಅಗ್ರಗಣ್ಯ ಕ್ರೀಡಾಪಟುಗಳು, ಅವರ ತರಬೇತಿಗೆ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ ಮತ್ತು ಪ್ಯಾರಿಸ್ 2024 ರ ಒಲಿಂಪಿಕ್ಸ್‌ಗೆ ಮುಂಚಿತವಾಗಿ ಕ್ರೀಡಾಪಟುಗಳು ಎಲ್ಲಿ ತರಬೇತಿ ಪಡೆದರು ಎಂಬುದರ ಆಳವಾದ ನೋಟ ಇಲ್ಲಿದೆ.

ಭಾರತೀಯ ಪುರುಷರ ಹಾಕಿ ತಂಡ

ತರಬೇತಿ ಸ್ಥಳ: ಸಾಯ್ ಎನ್​ಸಿಒಇ, ಬೆಂಗಳೂರು

ಒಟ್ಟು ಮೊತ್ತ: 41.81 ಕೋಟಿ ರೂಪಾಯಿ

ನೀರಜ್ ಚೋಪ್ರಾ

ತರಬೇತಿ ಸ್ಥಳ: ನೇತಾಜಿ ಸುಭಾಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ, ಪಟಿಯಾಲ/ಯೂರೋಪ್

ಒಟ್ಟು ಮೊತ್ತ: 5.72 ಕೋಟಿ ರೂಪಾಯಿ

ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ

ತರಬೇತಿ ಸ್ಥಳ: ಪುಲ್ಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ, ಹೈದರಾಬಾದ್

ಒಟ್ಟು ಮೊತ್ತ: 5.62 ಕೋಟಿ ರೂಪಾಯಿ

ಪಿವಿ ಸಿಂಧು

ತರಬೇತಿ ಸ್ಥಳ: ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ, ಬೆಂಗಳೂರು

ಒಟ್ಟು ಮೊತ್ತ: 3.13 ಕೋಟಿ ರೂಪಾಯಿ

ಎಸ್ ಮೀರಾಬಾಯಿ ಚಾನು

ತರಬೇತಿ ಸ್ಥಳ: ನೇತಾಜಿ ಸುಭಾಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ, ಪಟಿಯಾಲ

ಒಟ್ಟು ಮೊತ್ತ: 2.74 ಕೋಟಿ ರೂ

ಅನೀಶ್ ಭನ್ವಾಲಾ

ತರಬೇತಿ ಸ್ಥಳ: ಸಾಯ್ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್, ನವದೆಹಲಿ

ಒಟ್ಟು ಮೊತ್ತ: 2.41 ಕೋಟಿ ರೂ

ಮನು ಭಾಕರ್

ತರಬೇತಿ ಸ್ಥಳ: ಸಾಯ್ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್, ನವದೆಹಲಿ

ಒಟ್ಟು ಮೊತ್ತ: 1.68 ಕೋಟಿ ರೂ

ಸಿಫ್ಟ್​ ಕೌರ್ ಸಾಮ್ರಾ

ತರಬೇತಿ ಸ್ಥಳ: ಸಾಯ್ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್, ನವದೆಹಲಿ

ಒಟ್ಟು ಮೊತ್ತ: 1.63 ಕೋಟಿ ರೂ

ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್

ತರಬೇತಿ ಸ್ಥಳ: ಎಂಪಿ ಶೂಟಿಂಗ್ ಅಕಾಡೆಮಿ, ಭೋಪಾಲ್

ಒಟ್ಟು ಮೊತ್ತ: 1.56 ಕೋಟಿ ರೂ

ರೋಹನ್ ಬೋಪಣ್ಣ

ತರಬೇತಿ ಸ್ಥಳ: ಬೆಂಗಳೂರು, ಕರ್ನಾಟಕ

ಒಟ್ಟು ಮೊತ್ತ: 1.56 ಕೋಟಿ ರೂ

ಎಲವೆನಿಲ್ ವಲರಿವನ್

ತರಬೇತಿ ಸ್ಥಳ: ಗನ್ ಫಾರ್ ಗ್ಲೋರಿ, ಚೆನ್ನೈ

ಒಟ್ಟು ಮೊತ್ತ: 1.32 ಕೋಟಿ ರೂ

ಮನಿಕಾ ಬಾತ್ರಾ

ತರಬೇತಿ ಸ್ಥಳ: ಖಾಸಗಿ ಅಕಾಡೆಮಿ, ಮುಂಬೈ, ಮತ್ತು AVSC ಟೇಬಲ್ ಟೆನಿಸ್ ಅಕಾಡೆಮಿ, ಹೈದರಾಬಾದ್

ಒಟ್ಟು ಮೊತ್ತ: 1.30 ಕೋಟಿ ರೂ

ಶರತ್ ಕಮಲ್

ತರಬೇತಿ ಸ್ಥಳ: SDAT AKG ಟೇಬಲ್ ಟೆನ್ನಿಸ್ ಅಭಿವೃದ್ಧಿ ಕೇಂದ್ರ, ಚೆನ್ನೈ

ಒಟ್ಟು ಮೊತ್ತ: 1.14 ಕೋಟಿ ರೂ

ಧೀರಜ್ ಬೊಮ್ಮದೇವರ

ತರಬೇತಿ ಸ್ಥಳ: ಸಾಯ್ ಸೋನೆಪತ್

ಒಟ್ಟು ಮೊತ್ತ: 1.07 ಕೋಟಿ ರೂ

ವಿಷ್ಣು ಸರವಣನ್

ತರಬೇತಿ ಸ್ಥಳ: ಆರ್ಮಿ ಯಾಚಿಂಗ್ ನೋಡ್, ಮುಂಬೈ | ರಾಯಲ್ ವೇಲೆನ್ಸಿಯಾ ಯಾಚ್ ಕ್ಲಬ್, ಯುರೋಪ್

ಒಟ್ಟು ಮೊತ್ತ: 99.33 ಲಕ್ಷ ರೂ

ನಿಖತ್ ಜರೀನ್

ತರಬೇತಿ ಸ್ಥಳ: ನೇತಾಜಿ ಸುಭಾಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ, ಪಟಿಯಾಲ

ಒಟ್ಟು ಮೊತ್ತ: 91.71 ಲಕ್ಷ ರೂ

ಲವ್ಲಿನಾ ಬೊರೊಗೊಹೈನ್

ತರಬೇತಿ ಸ್ಥಳ: ನೇತಾಜಿ ಸುಭಾಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ, ಪಟಿಯಾಲ

ಒಟ್ಟು ಮೊತ್ತ: 81.76 ಲಕ್ಷ ರೂ

ವಿನೇಶ್ ಫೋಗಟ್

ತರಬೇತಿ ಸ್ಥಳ: ಪ್ರತಾಪ್ ಶಾಲೆ, ಖಾರ್ಖೋಡಾ, ಹರಿಯಾಣ

ಒಟ್ಟು ಮೊತ್ತ: 70.45 ಲಕ್ಷ ರೂ

ಆಂಟಿಮ್ ಉದಾ

ತರಬೇತಿ ಸ್ಥಳ: ಸಾಯ್ ಎಸ್​ಟಿಸಿ, ಹಿಸಾರ್, ಹರಿಯಾಣ

ಒಟ್ಟು ಮೊತ್ತ: 66.55 ಲಕ್ಷ ರೂ

ನಿಶಾಂತ್ ದೇವ್

ತರಬೇತಿ ಸ್ಥಳ: ನೇತಾಜಿ ಸುಭಾಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ, ಪಟಿಯಾಲ

ಒಟ್ಟು ಮೊತ್ತ: 65.86 ಲಕ್ಷ ರೂ

ಅದಿತಿ ಅಶೋಕ್

ತರಬೇತಿ ಸ್ಥಳ: ಬೆಂಗಳೂರು

ಒಟ್ಟು ಮೊತ್ತ: 63.21 ಲಕ್ಷ ರೂ

ಅಮನ್ ಸೆಹ್ರಾವತ್

ತರಬೇತಿ ಸ್ಥಳ: ಛತ್ರಸಾಲ್ ಸ್ಟೇಡಿಯಂ, ದೆಹಲಿ

ಒಟ್ಟು ಮೊತ್ತ: 56.50 ಲಕ್ಷ ರೂ

ದೀಪಿಕಾ ಕುಮಾರಿ

ತರಬೇತಿ ಸ್ಥಳ: ಸಾಯ್ ಸೋನೆಪತ್

ಒಟ್ಟು ಮೊತ್ತ: 39.92 ಲಕ್ಷ ರೂ

ರೀತಿಕಾ ಹೂಡಾ

ತರಬೇತಿ ಸ್ಥಳ: ಛೋಟು ರಾಮ್ ಸ್ಟೇಡಿಯಂ, ರೋಹ್ಟಕ್, ಹರಿಯಾಣ

ಒಟ್ಟು ಮೊತ್ತ: 38.05 ಲಕ್ಷ ರೂ

ಶುಭಂಕರ್ ಶರ್ಮಾ

ತರಬೇತಿ ಸ್ಥಳ: ಚಂಡೀಗಢ

ಒಟ್ಟು ಮೊತ್ತ: 37 ಲಕ್ಷ ರೂ

ದಿಂಡಿ ದೇಸಿಂಗು

ತರಬೇತಿ ಸ್ಥಳ: ಬೆಂಗಳೂರು

ಒಟ್ಟು ಮೊತ್ತ: 10.87 ಲಕ್ಷ ರೂ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.