PKL Auction 2023: ಪ್ರೊ ಕಬಡ್ಡಿ ಹರಾಜಿನಲ್ಲಿ ಪವನ್ ಸೆಹ್ರಾವತ್ ದಾಖಲೆ ಮೊತ್ತಕ್ಕೆ ಸೇಲ್; ಮಾರಾಟವಾದ ಆಟಗಾರರ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಕ್ರೀಡೆ  /  Pkl Auction 2023: ಪ್ರೊ ಕಬಡ್ಡಿ ಹರಾಜಿನಲ್ಲಿ ಪವನ್ ಸೆಹ್ರಾವತ್ ದಾಖಲೆ ಮೊತ್ತಕ್ಕೆ ಸೇಲ್; ಮಾರಾಟವಾದ ಆಟಗಾರರ ಪಟ್ಟಿ ಇಲ್ಲಿದೆ

PKL Auction 2023: ಪ್ರೊ ಕಬಡ್ಡಿ ಹರಾಜಿನಲ್ಲಿ ಪವನ್ ಸೆಹ್ರಾವತ್ ದಾಖಲೆ ಮೊತ್ತಕ್ಕೆ ಸೇಲ್; ಮಾರಾಟವಾದ ಆಟಗಾರರ ಪಟ್ಟಿ ಇಲ್ಲಿದೆ

PKL Auction 2023: ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಸೀಸನ್ 10 ರ ಹರಾಜಿನ 1 ನೇ ದಿನದಂದು ಮಾರಾಟವಾದ ಮತ್ತು ಮಾರಾಟವಾಗದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ .

ಪ್ರೊ ಕಬಡ್ಡಿ ಹರಾಜಿನಲ್ಲಿ ಪವನ್ ಸೆಹ್ರಾವತ್ ದಾಖಲೆ ಮೊತ್ತಕ್ಕೆ ಸೇಲ್.
ಪ್ರೊ ಕಬಡ್ಡಿ ಹರಾಜಿನಲ್ಲಿ ಪವನ್ ಸೆಹ್ರಾವತ್ ದಾಖಲೆ ಮೊತ್ತಕ್ಕೆ ಸೇಲ್.

ಮುಂಬೈನಲ್ಲಿ ಎರಡು ದಿನಗಳ ಕಾಲ (ಅಕ್ಟೋಬರ್ 9 ಮತ್ತು ಅಕ್ಟೋಬರ್ 10) ನಡೆಯುವ ಪ್ರೋ ಕಬ್ಬಡಿ ಮೆಗಾ ಹರಾಜಿನಲ್ಲಿ (PKL Auction 2023) ಮೊದಲ ದಿನ ಮುಕ್ತಾಯಗೊಂಡಿದೆ. ಇದೀಗ ಎರಡನೇ ದಿನಕ್ಕೆ ವೇದಿಕೆ ಸಿದ್ಧವಾಗಿದೆ. ನಿರೀಕ್ಷೆಯಲ್ಲಿ ಮೊದಲ ದಿನದಲ್ಲಿ ಪ್ರಮುಖ ಆಟಗಾರರಿಗೆ ಭಾರಿ ಮೊತ್ತವೇ ಸಿಕ್ಕಿದೆ. ಡಿಸೆಂಬರ್​​ 2ರಿಂದ ಪ್ರಾರಂಭವಾಗುವ ಲೀಗ್​​ಗೂ ಯಾವೆಲ್ಲಾ ಆಟಗಾರರಿಗೆ ಎಷ್ಟೆಲ್ಲಾ ಮೊತ್ತ ಸಿಕ್ಕಿದೆ ಎಂಬುದನ್ನು ಈ ಮುಂದೆ ನೋಡೋಣ.

ದಾಖಲೆಯ ಮೊತ್ತಕ್ಕೆ ಸೆಹ್ರಾವತ್ ಸೇಲ್

ಭಾರತದ ಕಬಡ್ಡಿ ತಂಡದ ನಾಯಕ ಪವನ್ ಸೆಹ್ರಾವತ್,​ ಅಕ್ಟೋಬರ್​ 9, ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್ ಮೆಗಾ ಆಕ್ಷನ್​ನಲ್ಲಿ (Pro Kabaddi league) ನೂತನ ದಾಖಲೆ ನಿರ್ಮಿಸಿದ್ದಾರೆ. ಹರಾಜಿನಲ್ಲಿ ಸೀದಾ ಒಂದೂವರೆ ಕೋಟಿಗೆ ಬೆಂಗಳೂರು ಬುಲ್ಸ್​ ಬಿಡ್ ಕರೆಯಿತು. ಅಂತಿಮವಾಗಿ ಬರೋಬ್ಬರಿ 2.60 ಕೋಟಿಗೆ ತೆಲುಗು ಟೈಟಾನ್ಸ್​ ಪಾಲಾಗುವ ಮೂಲಕ 2.35 ಕೋಟಿಗೆ ಸೇಲಾದ ಇರಾನ್​ನ​ ಮೊಹಮದ್ರೆಜಾ ಶಾಡ್ಲೂಯಿ ಅವರ ದಾಖಲೆಯನ್ನು ಮುರಿದಿದ್ದಾರೆ. ಪುಣೇರಿ ಪಲ್ಟನ್ ಶಾಡ್ಲೂಯಿರನ್ನು ಖರೀದಿಸಿದೆ.

ಇರಾನ್​ ಫಝೆಲ್ ಅತ್ರಾಚಲಿ ಅವರನ್ನು 1.60 ಕೋಟಿಗೆ, ಮೊಹಮ್ಮದ್ ನಭಿಭಕ್ಷ್​​ರನ್ನು ಗುಜರಾತ್ ಜೈಂಟ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿತು. ಇಂದು (ಅಕ್ಟೋಬರ್ 10ರ ಮಂಗಳವಾರ) ಹರಾಜು ಮುಂದುವರಿಯಲಿದ್ದು, ಮತ್ತಷ್ಟು ಆಟಗಾರರು ಹರಾಜಿಗೆ ಒಳಗಾಗಲಿದ್ದಾರೆ. ಸೆಹ್ರಾವತ್ ಮತ್ತು ಶಾಡ್ಲೋಯಿ ಅಲ್ಲದೆ, ಮಣಿಂದರ್ ಸಿಂಗ್ ಕೂಡ ದೊಡ್ಡ ಮೊತ್ತಕ್ಕೆ ಸೇಲಾದರು. 2.12 ಕೋಟಿಗೆ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಖರೀದಿಯಾದರು.

ಮೊದಲ ದಿನ ದುಬಾರಿ ಮೊತ್ತಕ್ಕೆ ಸೇಲಾದ ಆಟಗಾರರು

  • ಪವನ್ ಶೆರಾವತ್ – 2.60 ಕೋಟಿ – ತೆಲುಗು ಟೈಟಾನ್ಸ್
  • ಮೊಹಮದ್ರೆಜಾ ಶಾಡ್ಲೋಯಿ – 2.35 ಕೋಟಿ – ಪುಣೇರಿ ಪಲ್ಟನ್
  • ಮಣಿಂದರ್ ಸಿಂಗ್ – 2.12 ಕೋಟಿ – ಬೆಂಗಾಲ್ ವಾರಿಯರ್ಸ್
  • ಫಾಜೆಲ್ ಅತ್ರಾಚಲಿ – 1.60 ಕೋಟಿ – ಗುಜರಾತ್ ಜೈಂಟ್ಸ್
  • ಸಿದ್ದಾರ್ಥ್ ದೇಸಾಯಿ - 1 ಕೋಟಿ - ಹರಿಯಾಣ ಸ್ಟೀಲರ್ಸ್

12 ತಂಡಗಳಿಂದ 84 ಆಟಗಾರರ ಉಳಿಕೆ

ಪ್ರೋ ಕಬ್ಬಡಿ ಹರಾಜಿಗೆ ಮುಂಚಿತವಾಗಿ 12 ತಂಡಗಳು ಸೇರಿ 84 ಆಟಗಾರರನ್ನು ಉಳಿಸಿಕೊಂಡಿವೆ. ಯುಪಿ ಯೋಧಾಸ್​​ನ ಪಿಕೆಎಲ್ ದಂತಕಥೆ ಪರ್ದೀಪ್ ನರ್ವಾಲ್ ಕೆಲವು ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದೆ. ಪುಣೇರಿ ಪಲ್ಟನ್ ತನ್ನ ಸ್ಟಾರ್ ಯುವ ಆಟಗಾರ ಅಸ್ಲಂ ಮುಸ್ತಫಾ ಇನಾಮ್ದಾರ್ ಅವರನ್ನು ತನ್ನಲ್ಲೇ ಇಟ್ಟುಕೊಂಡಿದೆ. ವಿವೋ ಪ್ರೊ ಕಬಡ್ಡಿ ಸೀಸನ್ 9ರಲ್ಲಿ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ವಿಜೇತ ಅರ್ಜುನ್ ದೇಶ್ವಾಲ್​ರನ್ನು ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಹರಾಜಿಗೆ ಕಳುಹಿಸಿಕೊಡಲಿಲ್ಲ.

ಹರಾಜಿನಲ್ಲಿ 500 ಆಟಗಾರರು

ಪವನ್ ಸೆಹ್ರಾವತ್, ಇರಾನಿನ ಫಝೆಲ್ ಅತ್ರಾಚಲಿ ಸೇರಿದಂತೆ 500 ಕ್ಕೂ ಅಧಿಕ ಆಟಗಾರರು ಹರಾಜಿನಲ್ಲಿದ್ದಾರೆ. ಆಟಗಾರರನ್ನು ವಿಭಿನ್ನ ಮೂಲ ಬೆಲೆಗಳೊಂದಿಗೆ 4 ವಿಭಿನ್ನ ವಿಭಾಗಗಳಾಗಿ ವಿಂಗಡಿಸಲಾಗಿದೆ. ಆಟಗಾರರನ್ನು ಪ್ರತಿ ವಿಭಾಗದಲ್ಲಿ ‘ಆಲ್ ರೌಂಡರ್ಸ್’, ‘ಡಿಫೆಂಡರ್ಸ್’ ಮತ್ತು ‘ರೈಡರ್ಸ್’ ಎಂದು ವಿಭಾಗ ಮಾಡಲಾಗಿದೆ. ಎ ವರ್ಗದ ಆಟಗಾರರಿಗೆ 30 ಲಕ್ಷ ರೂಪಾಯಿ ಮೂಲ ಬೆಲೆ, ಬಿ ವರ್ಗದಲ್ಲಿರುವ ಆಟಗಾರರಿಗೆ ಮೂಲ ಬೆಲೆ 20 ಲಕ್ಷ ರೂಪಾಯಿ, ಸಿ ವರ್ಗದ ಆಟಗಾರರಿಗೆ ವರ್ಗ 13 ಲಕ್ಷ ರೂಪಾಯಿ, ಡಿ ವರ್ಗದ ಆಟಗಾರರಿಗೆ 9 ಲಕ್ಷ ರೂಪಾಯಿ ಮೂಲ ಬೆಲೆ ಇತ್ತು.

ಮಾರಾಟವಾದ ಪ್ರಮುಖ ಆಟಗಾರರು

ಎ ವರ್ಗದ ಆಟಗಾರರು

  • ಮೊಹಮದ್ರೆಜಾ ಶಾಡ್ಲೋಯಿ- 2.35 ಕೋಟಿ - ಪುಣೇರಿ ಪಲ್ಟನ್
  • ಫಾಜೆಲ್ ಅತ್ರಾಚಲಿ - 1.60 ಕೋಟಿ - ಗುಜರಾತ್ ಜೈಂಟ್ಸ್
  • ರೋಹಿತ್ ಗುಲಿಯಾ - 58.50 ಲಕ್ಷ - ಗುಜರಾತ್ ಜೈಂಟ್ಸ್
  • ವಿಜಯ್ ಮಲಿಕ್ - 85 ಲಕ್ಷ - ಯುಪಿ ಯೋಧಾಸ್
  • ಮಣಿಂದರ್ ಸಿಂಗ್ - 2.12 ಕೋಟಿ - ಬೆಂಗಾಲ್ ವಾರಿಯರ್ಸ್ (ಅಂತಿಮ ಬಿಡ್ ಪಂದ್ಯ)
  • ಮಂಜೀತ್ - 92 ಲಕ್ಷ - ಪಾಟ್ನಾ ಪೈರೇಟ್ಸ್

ಬಿ ವರ್ಗದ ಆಟಗಾರರು

  • ಮೊಹಮ್ಮದ್ ಎಸ್ಮಾಯಿಲ್ ನಬಿಬಕ್ಷ್ - 22 ಲಕ್ಷ - ಗುಜರಾತ್ ಜೈಂಟ್ಸ್
  • ಅರ್ಕಾಮ್ ಶೇಖ್ - 20.25 ಲಕ್ಷ - ಗುಜರಾತ್ ಜೈಂಟ್ಸ್
  • ನಿತಿನ್ ರಾವಲ್ - 30 ಲಕ್ಷ - ಬೆಂಗಾಲ್ ವಾರಿಯರ್ಸ್
  • ಗಿರೀಶ್ ಎರ್ನಾಕ್ - 20 ಲಕ್ಷ - ಯು ಮುಂಬಾ
  • ಮಹೇಂದರ್ ಸಿಂಗ್ - 40.25 ಲಕ್ಷ - ಯು ಮುಂಬೈ
  • ಶುಭಂ ಶಿಂಧೆ - 32.25 ಲಕ್ಷ - ಬೆಂಗಾಲ್ ವಾರಿಯರ್ಸ್ (ಎಫ್‌ಬಿಎಂ)
  • ಸೋಂಬಿರ್ - 26.25 - ಗುಜರಾತ್ ಜೈಂಟ್ಸ್
  • ವಿಶಾಲ್ - 20 ಲಕ್ಷ - ಬೆಂಗಳೂರು ಬುಲ್ಸ್
  • ಸುನಿಲ್ - 20 ಲಕ್ಷ - ದಬಾಂಗ್ ಡೆಲ್ಲಿ
  • ಶ್ರೀಕಾಂತ್ ಜಾಧವ್ - 35.25 ಲಕ್ಷ - ಬೆಂಗಾಲ್ ವಾರಿಯರ್ಸ್ (ಎಫ್‌ಬಿಎಂ)
  • ಅಶು ಮಲಿಕ್ - 96.25 ಲಕ್ಷ - ದಬಾಂಗ್ ದೆಹಲಿ (ಎಫ್‌ಬಿಎಂ)
  • ಗುಮನ್ ಸಿಂಗ್ - 85 ಲಕ್ಷ - ಯು ಮುಂಬೈ
  • ಮೀಟೂ - 93 ಲಕ್ಷ - ದಬಾಂಗ್ ಡೆಲ್ಲಿ
  • ಪವನ್ ಸೆಹ್ರಾವತ್ - 2.60 ಕೋಟಿ -ತೆಲುಗು ಟೈಟಾನ್ಸ್
  • ವಿಕಾಸ್ ಖಂಡೋಲಾ - 55.25 ಲಕ್ಷ - ಬೆಂಗಳೂರು ಬುಲ್ಸ್​
  • ಸಿದ್ದಾರ್ಥ್ ದೇಸಾಯಿ - 1 ಕೋಟಿ - ಹರಿಯಾಣ ಸ್ಟೀಲರ್ಸ್
  • ಚಂದ್ರನ್ ರಂಜಿತ್ - 62 ಲಕ್ಷ - ಹರಿಯಾಣ ಸ್ಟೀಲರ್ಸ್

ಮಾರಾಟವಾಗದ ಪ್ರಮುಖ ಆಟಗಾರರು

  • ಸಂದೀಪ್ ನರ್ವಾಲ್
  • ದೀಪಕ್ ನಿವಾಸ್ ಹೂಡಾ
  • ಸಚಿನ್ ನರ್ವಾಲ್
  • ಆಶೀಶ್
  • ಗುರುದೀಪ್
  • ಅಜಿಂಕ್ಯ ಕಪ್ರೆ
  • ವಿಶಾಲ್ ಭಾರದ್ವಾಜ್

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.