PKL 10: ಸೀಸನ್-10ರ ಪ್ರೊ ಕಬಡ್ಡಿ ಲೀಗ್‌ನ 12 ತಂಡಗಳ ಮುಖ್ಯ ಕೋಚ್ ಯಾರು? ಪಟ್ಟಿ ಇಲ್ಲಿದೆ
Pro Kabaddi League: ಪ್ರೋ ಕಬಡ್ಡಿ ಲೀಗ್‌ನ 10ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಕ್ಷಣಕ್ಷಣವೂ ರೋಚಕತೆ ಹುಟ್ಟಿಸುವ ಕಬಡ್ಡಿಯ ರಸದೌತಣ 3 ತಿಂಗಳವರೆಗೆ ಇರುವುದು ಖಾತ್ರಿ ಆಗಿದೆ. ನಾವೀಗ ಆಯಾ ತಂಡಗಳ ಕೋಚ್ ಯಾರು ಎಂಬುದನ್ನು ತಿಳಿಯೋಣ.
ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ನ (Pro Kabaddi League 2023) 10ನೇ ಸೀಸನ್ ಉದ್ಘಾಟನಾ ಪಂದ್ಯ ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನ ಅರೆನಾದಲ್ಲಿ ಪ್ರಾರಂಭವಾಗಲಿದೆ. ಲೀಗ್ ಪಂದ್ಯಗಳು 2023ರ ಡಿಸೆಂಬರ್ 2ರಿಂದ 2024ರ ಫೆಬ್ರವರಿ 21ರವರೆಗೆ ನಡೆಯಲಿದೆ. ಪ್ಲೇ ಆಫ್ ವೇಳಾಪಟ್ಟಿ ಇನ್ನೂ ಪ್ರಕಟಿಸಬೇಕಿದೆ. ಈ ಆವೃತ್ತಿಯಲ್ಲಿ ತಮ್ಮ ತಂಡಗಳನ್ನು ಮುನ್ನಡೆಸಲು ಸಜ್ಜಾಗಿರುವ ಕೋಚ್ಗಳು ಯಾರು? ಹಾಗೆ ಹೊಸ ತರಬೇತುದಾರರ ಸಂಕ್ಷಿಪ್ತ ನೋಟ ಇಲ್ಲಿದೆ.
1. ಕಾಸಿನಾಥನ್ ಬಾಸ್ಕರನ್ - ಬೆಂಗಾಲ್ ವಾರಿಯರ್ಸ್
ಅಪಾರ ಅನುಭವ ಹೊಂದಿರುವ ಕಾಸಿನಾಥನ್ ಬಾಸ್ಕರನ್ ಅವರು ಉದ್ಘಾಟನಾ ಲೀಗ್ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. 9ನೇ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ಸ್ ಬಾಸ್ಕರನ್ ಮಾರ್ಗದರ್ಶನದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿತ್ತು. ಇದೀಗ 10ನೇ ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಸಜ್ಜಾಗಿದ್ದಾರೆ.
2. ರಣಧೀರ್ ಸಿಂಗ್ ಸೆಹ್ರಾವತ್ - ಬೆಂಗಳೂರು ಬುಲ್ಸ್
ರಣಧೀರ್ ಸಿಂಗ್ ಸೆಹ್ರಾವತ್ ಅವರು ಲೀಗ್‌ನ ಆರಂಭದಿಂದಲೂ ಅದೇ ತಂಡದೊಂದಿಗೆ ಉಳಿದಿರುವ ಏಕೈಕ ತರಬೇತುದಾರು. ಸೀಸನ್ 6 ರಲ್ಲಿ ಬೆಂಗಳೂರು ಬುಲ್ಸ್‌ಗೆ ಗೆಲುವಿಗೆ ಮಾರ್ಗದರ್ಶನ ನೀಡಿದರು. ಈಗ ಮತ್ತೊಮ್ಮೆ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ಸರ್ವಸನ್ನದ್ಧರಾಗಿದ್ದಾರೆ.
3. ರಂಬೀರ್ ಸಿಂಗ್ ಖೋಖರ್ - ದಬಾಂಗ್ ಡೆಲ್ಲಿ ಕೆಸಿ
ಆರ್‌ಎಸ್ ಖೋಖರ್ ಅವರು ದಬಾಂಗ್ ಡೆಲ್ಲಿ ತಂಡಕ್ಕೆ ನೂತನ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ತರಬೇತಿ ಅನುಭವದ ಅಪಾರ ಸಂಪತ್ತನ್ನು ಹೊಂದಿರುವ ಖೋಖರ್, ಡೆಲ್ಲಿ ಹೊಸ ದೃಷ್ಟಿಕೋನ ನೀಡಲು ಸಜ್ಜಾಗಿದ್ದಾರೆ.
4. ರಾಮ್ ಮೆಹರ್ ಸಿಂಗ್ - ಗುಜರಾತ್ ಜೈಂಟ್ಸ್
ಯಶಸ್ವಿ ಕೋಚಿಂಗ್ ಇತಿಹಾಸ ಹೊಂದಿರುವ ರಾಮ್ ಮೆಹರ್ ಸಿಂಗ್, ಗುಜರಾತ್ ಜೈಂಟ್ಸ್ ಪ್ರದರ್ಶನವನ್ನು ಉನ್ನತೀಕರಿಸುವ ಗುರಿಯನ್ನು ಹೊಂದಿದ್ದಾರೆ. ಅವರ ಕಾರ್ಯತಂತ್ರದ ಫಲವಾಗಿ ಪಾಟ್ನಾ ಪೈರೇಟ್ಸ್ ಸೀಸನ್ 5 ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.
5. ಮನ್‌ಪ್ರೀತ್ ಸಿಂಗ್ - ಹರಿಯಾಣ ಸ್ಟೀಲರ್ಸ್
ಆಕ್ರಮಣಕಾರಿ ಕೋಚಿಂಗ್ ಶೈಲಿಗೆ ಹೆಸರುವಾಸಿಯಾಗಿರುವ ಮನ್‌ಪ್ರೀತ್ ಸಿಂಗ್, ಈ ಹಿಂದೆ ಗುಜರಾತ್ ಜೈಂಟ್ಸ್ ತಂಡವನ್ನು ಸತತ ಫೈನಲ್‌ಗೆ ಮುನ್ನಡೆಸಿದ್ದರು. ಅವರ ಮಾರ್ಗದರ್ಶನವು ಹರಿಯಾಣ ಸ್ಟೀಲರ್ಸ್ ಅನ್ನು ಶ್ಲಾಘನೀಯ ಪ್ರದರ್ಶನಗಳಿಗೆ ಪ್ರೇರೇಪಿಸಿದೆ.
6. ಸಂಜೀವ್ ಬಲಿಯಾನ್ - ಜೈಪುರ ಪಿಂಕ್ ಪ್ಯಾಂಥರ್ಸ್
ಯಶಸ್ವಿ ತರಬೇತುದಾರರಾದ ಸಂಜೀವ್ ಬಲಿಯಾನ್ ಅವರು ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಅನ್ನು ಪಿಕೆಎಲ್ ಸೀಸನ್ 10ರಲ್ಲಿ ಮುನ್ನಡೆಸುತ್ತಿದ್ದಾರೆ. ಅವರ ಅನುಭವವೇ ತಂಡದ ಅತಿದೊಡ್ಡ ಬಲವಾಗಿದೆ.
7. ನರೇಂದರ್ ರೆಡು - ಪಾಟ್ನಾ ಪೈರೇಟ್ಸ್
ನರೇಂದರ್ ರೆಡು ಅವರು ಪಾಟ್ನಾ ಪೈರೇಟ್ಸ್‌ನ ಮುಖ್ಯ ಕೋಚ್‌ನ ಪಾತ್ರಕ್ಕೆ ಹೆಜ್ಜೆ ಹಾಕಿದ್ದಾರೆ. ಅವರು ಸರ್ವಿಸಸ್ ಕಬಡ್ಡಿ ತಂಡಕ್ಕೆ ಕೋಚಿಂಗ್ ನೀಡುವ ಮೂಲಕ ಅಪಾರ ಅನುಭವ ಸಂಪಾದಿಸಿದರು. ಹೀಗಾಗಿ ಮೂರು ಬಾರಿಯ ಚಾಂಪಿಯನ್ನರು ಮತ್ತು ಪಾಟ್ನಾ ಮೇಲೆ ಅಪಾರ ನಿರೀಕ್ಷೆಗಳು ಸೃಷ್ಟಿಯಾಗಿವೆ.
8. ಬಿಸಿ ರಮೇಶ್ - ಪುಣೇರಿ ಪಲ್ಟನ್
ಹಿಂದಿನ ಋತುವಿನಲ್ಲಿ ಯಶಸ್ವಿ ಓಟದ ನಂತರ ರಮೇಶ್, ಸೀಸನ್ 10 ರಲ್ಲಿ ಪುಣೇರಿ ಪಲ್ಟನ್ ತಂಡವನ್ನು ಮತ್ತಷ್ಟು ಹೆಚ್ಚಿನ ಎತ್ತರಕ್ಕೆ ಮುನ್ನಡೆಸುವ ಗುರಿಯನ್ನು ಹೊಂದಿದ್ದಾರೆ. ಬೆಂಗಾಲ್ ವಾರಿಯರ್ಸ್ ಮತ್ತು ಬೆಂಗಳೂರು ಬುಲ್ಸ್ ತಂಡಗಳಿಗೂ ಕೋಚ್ ಆಗಿದ್ದರು.
9. ಅಶನ್ ಕುಮಾರ್ - ತಮಿಳು ತಲೈವಾಸ್
ಅಶಾನ್ ಕುಮಾರ್ ತಮಿಳ್ ತಲೈವಾಸ್ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ರಾಷ್ಟ್ರೀಯ ತಂಡಗಳೊಂದಿಗಿನ ಅವರ ಅನುಭವ ಮತ್ತು ತಲೈವಾಸ್‌ನಲ್ಲಿ ಅವರ ಪ್ರಭಾವವು ಸ್ಪರ್ಧಾತ್ಮಕ ಋತುವಿನ ಭರವಸೆ ನೀಡುತ್ತದೆ.
10. ಶ್ರೀನಿವಾಸ್ ರೆಡ್ಡಿ - ತೆಲುಗು ಟೈಟಾನ್ಸ್
ಪಿಕೆಎಲ್‌ನಲ್ಲಿ ಪರಿಚಿತ ಹೆಸರಾಗಿರುವ ಶ್ರೀನಿವಾಸ್ ರೆಡ್ಡಿ ಅವರು ತೆಲುಗು ಟೈಟಾನ್ಸ್ ತಂಡಕ್ಕೆ ತರಬೇತಿ ನೀಡಲು ಸಜ್ಜಾಗಿದ್ದಾರೆ. ಅನುಭವ ಮತ್ತು ಒಳನೋಟಗಳು ಟೈಟಾನ್ಸ್‌ಗೆ ಅಮೂಲ್ಯವಾಗಿದೆ.
11. ಘೋಲಂರೇಜಾ ಮಜಂದರಾಣಿ - ಯು ಮುಂಬಾ
ಯು ಮುಂಬಾ ಮತ್ತು ತೆಲುಗು ಟೈಟಾನ್ಸ್‌ನೊಂದಿಗೆ ತರಬೇತಿ ನೀಡುವ ಪರಾಕ್ರಮಕ್ಕೆ ಹೆಸರುವಾಸಿಯಾದ ಘೋಲಮ್ರೇಜಾ ಮಜಂದರಾಣಿ, ಪಿಕೆಎಲ್ ಸೀಸನ್ 10ರಲ್ಲೂ ಯು ಮುಂಬಾವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದಾರೆ.
12. ಜಸ್ವೀರ್ ಸಿಂಗ್ - ಯುಪಿ ಯೋಧಾಸ್
ಜಸ್ವೀರ್ ಸಿಂಗ್ ಅವರು ಯುಪಿ ಯೋಧಾಸ್ ತಂಡಕ್ಕೆ ಕೋಚ್ ಆಗಿದ್ದಾರೆ. ಆಟಗಾರರನ್ನು ಸದಾ ಪ್ರೋತ್ಸಾಹಿಸುವುದೇ ಅವರ ಪರಮಧ್ಯೇಯ. ಇದೇ ಕಾರಣಕ್ಕೆ ಯುಪಿ ಯೋಧಾಸ್ ಪಿಕೆಎಲ್‌ನಲ್ಲಿ ಅತ್ಯಂತ ಯಶಸ್ವಿ ಎನಿಸಿಕೊಂಡಿದೆ. ವಿಭಿನ್ನ ಕಾರ್ಯತಂತ್ರಗಳ ಮೂಲಕ ಎದುರಾಳಿಗೆ ಸೋಲಿನ ರುಚಿ ತೋರಿಸುತ್ತಾರೆ.