Wimbledon Logo: 1 ಲಕ್ಷ ಚದರಡಿ ಮೈದಾನದಲ್ಲಿ ವಿಂಬಲ್ಡನ್ ಲೋಗೋ ರಚಿಸಿದ ಮಹಾರಾಷ್ಟ್ರದ ಕಲಾವಿದರು; ವಿಡಿಯೋ ನೋಡಿ
ಕನ್ನಡ ಸುದ್ದಿ  /  ಕ್ರೀಡೆ  /  Wimbledon Logo: 1 ಲಕ್ಷ ಚದರಡಿ ಮೈದಾನದಲ್ಲಿ ವಿಂಬಲ್ಡನ್ ಲೋಗೋ ರಚಿಸಿದ ಮಹಾರಾಷ್ಟ್ರದ ಕಲಾವಿದರು; ವಿಡಿಯೋ ನೋಡಿ

Wimbledon Logo: 1 ಲಕ್ಷ ಚದರಡಿ ಮೈದಾನದಲ್ಲಿ ವಿಂಬಲ್ಡನ್ ಲೋಗೋ ರಚಿಸಿದ ಮಹಾರಾಷ್ಟ್ರದ ಕಲಾವಿದರು; ವಿಡಿಯೋ ನೋಡಿ

Maharashtra News: ಮಹಾರಾಷ್ಟ್ರದಲ್ಲಿ ಕೃಷಿಭೂಮಿಯಲ್ಲಿ ಕಲಾವಿದರು ಕೈಚಳಕ ತೋರಿದ್ದಾರೆ. ವಿಂಬಲ್ಡನ್‌ನ ದೊಡ್ಡ ಗಾತ್ರದ ಲೋಗೋವನ್ನು ವಿನ್ಯಾಸಗೊಳಿಸುತ್ತಿರುವ ಅದ್ಭುತ ವಿಡಿಯೋ ಇಲ್ಲಿದೆ.

ವಿಂಬಲ್ಡನ್‌ ಲೋಗೋ
ವಿಂಬಲ್ಡನ್‌ ಲೋಗೋ

ಮಹಾರಾಷ್ಟ್ರದ ಕಲಾವಿದರ ಬಳಗವೊಂದು ಕೃಷಿಭೂಮಿಯಲ್ಲಿ ವಿಂಬಲ್ಡನ್‌ ಲೋಗೋ (Wimbledon logo) ಚಿತ್ರ ಬಿಡಿಸಿದ್ದಾರೆ. ವಿಶೇಷವೆಂದರೆ ಈ ವಿಡಿಯೋವನ್ನು ವಿಂಬಲ್ಡನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಮಹಾರಾಷ್ಟ್ರದಲ್ಲಿ ದೊಡ್ಡದಾದ ಕೃಷಿಭೂಮಿಯಲ್ಲಿ ಕಲಾವಿದರು ತಮ್ಮ ಕೈಚಳಕ ತೋರಿದ್ದಾರೆ. ಟ್ರ್ಯಾಕ್ಟರ್‌ ಮತ್ತು ಮಾನವ ಶ್ರಮದೊಂದಿಗೆ ವಿಂಬಲ್ಡನ್ ದೊಡ್ಡ ಗಾತ್ರದ ಲೋಗೋವನ್ನು ವಿನ್ಯಾಸಗೊಳಿಸುತ್ತಿರುವ ಅದ್ಭುತ ವಿಡಿಯೋ ಇಲ್ಲಿದೆ. 1 ಲಕ್ಷ ಚದರ ಅಡಿ ಮೈದಾನದಲ್ಲಿ ವಿಂಬಲ್ಡನ್ ಲೋಗೋ ಮರುಸೃಷ್ಟಿಸಿದ್ದು, ಕಲಾವಿದರ ಗುಂಪು ಇದರ ಹಿಂದೆ ಮಾಡಿದ ಕೆಲಸ ವಿಡಿಯೋದಲ್ಲಿ ತಿಳಿಯುತ್ತಿದೆ. 57 ಸೆಕೆಂಡುಗಳ ವಿಡಿಯೋ ಇದಾಗಿದೆ.

ಗದ್ದೆಯನ್ನು ಟ್ರ್ಯಾಕ್ಟರ್‌ ಮೂಲಕ ಸಮತಟ್ಟುಗೊಳಿಸಿ, ಲೋಗೋದಲ್ಲಿ ಹಸಿರು ಭಾಗವನ್ನು ರಚಿಸಲು ಮಣ್ಣನ್ನು ಅಗೆದು ಬೀಜ ಬಿತ್ತಲಾಗಿದೆ. ಹುಲ್ಲು ಬೆಳೆಯಲು ನಿರಾವರಿ ವ್ಯವಸ್ಥೆ ಕೂಡಾ ಮಾಡಲಾಗಿದೆ. ಈ ವಿಡಿಯೋ ಈಗಾಗಲೇ ಒಂದು ಮಿಲಿಯನ್‌ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

“ಮಹಾರಾಷ್ಟ್ರದ ಹುಲ್ಲು ಕಲಾವಿದರು 100,000 ಚದರ ಅಡಿ ಪ್ರದೇಶದಲ್ಲಿ ವಿಂಬಲ್ಡನ್‌ನ ಅತಿದೊಡ್ಡ ಲೋಗೋವನ್ನು ರಚಿಸಲು ಎರಡು ವಾರಗಳ ಕಾಲ ಕೆಲಸ ಮಾಡಿದ್ದಾರೆ” ಎಂದು ವಿಂಬಲ್ಡನ್‌ ತನ್ನ ವಿಡಿಯೋಗೆ ಕ್ಯಾಪ್ಷನ್ ನೀಡಿದೆ.

ವಾರಾಂತ್ಯದಲ್ಲಿ ವಿಂಬಲ್ಡನ್ ಫೈನಲ್‌ ಪಂದ್ಯಗಳು ನಡೆಯುತ್ತಿವೆ. ಹೀಗಾಗಿ ಪಂದ್ಯಾವಳಿಯು ರೋಚಕ ಘಟ್ಟ ತಲುಪಿದೆ. ಪುರುಷರ ಫೈನಲ್‌ ಪಂದ್ಯಗಳು ಶುಕ್ರವಾರದಂದು ನಡೆಯಲಿವೆ. ಶನಿವಾರದಂದು ಮಹಿಳೆಯರ ಫೈನಲ್‌ ಪಂದ್ಯ ನಡೆಯಲಿವೆ.

ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿಯಾಗಿರುವ ಬಿಸಿಸಿಐಗೆ ಹಣಕಾಸಿನ ಸಮಸ್ಯೆಯಿಲ್ಲ. ಕ್ರಿಕೆಟ್‌ನ ಬ್ರಾಂಡ್‌ ಆಗಿ ಬೆಳೆದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC)ನಿಂದ ಸಿಂಹಪಾಲು ಪಡೆಯುತ್ತಿದೆ. ಐಸಿಸಿಯ ಮಾಧ್ಯಮ ಹಕ್ಕುಗಳ ಆದಾಯದಿಂದ ದೊಡ್ಡ ಪಾಲು ಬಿಸಿಸಿಐಗೆ ಲಭಿಸಿದೆ. 2024-27ರ ಅವಧಿಯಲ್ಲಿ ಒಟ್ಟು ಅಂದಾಜು 3.2 ಶತಕೋಟಿ ಡಾಲರ್‌ನಲ್ಲಿ ಅಂದಾಜು 38.5 ಶೇಕಡಾ ಪಾಲು ಭಾರತಕ್ಕೆ ದಕ್ಕಲಿದೆ. ಈ ಬಗ್ಗೆ ಡರ್ಬನ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯ ಬಳಿಕ ತಿಳಿದುಬಂದಿದೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಮೂರನೇ ಆವೃತ್ತಿಯ ಅದ್ಧೂರಿಯಾಗಿ ಆರಂಭಗೊಂಡಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ನಡುವಿನ ಪ್ರತಿಷ್ಠಿತ ಆ್ಯಷಸ್ (Ashes) ಟೆಸ್ಟ್​ ಸರಣಿಯೊಂದಿಗೆ 3ನೇ ಆವೃತ್ತಿಯ ಡಬ್ಲ್ಯುಟಿಸಿ ಪ್ರಾರಂಭವಾಯಿತು. ಹಾಗೆಯೇ ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವೆಯೂ ಟೆಸ್ಟ್ ಸರಣಿಯೂ ನಡೆಯುತ್ತಿದೆ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.