ಡೇವಿಸ್ ಕಪ್: ಬರೋಬ್ಬರಿ 60 ವರ್ಷಗಳ ಬಳಿಕ ಪಾಕಿಸ್ತಾನ ಪ್ರಯಾಣಿಸಿದ ಭಾರತ ಟೆನಿಸ್ ತಂಡ, ರೋಚಕ ಟೂರ್ನಿಗೆ ಆತಿಥ್ಯ
ಭಾರತವು 2019ರಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಬಾರಿ ಡೇವಿಸ್ ಕಪ್ ಪಂದ್ಯವನ್ನಾಡಿತ್ತು. ಕಜಕಿಸ್ತಾನದಲ್ಲಿ ನಡೆದ ಪಂದ್ಯದಲ್ಲಿ 4-0 ಅಂತರದಲ್ಲಿ ಜಯ ಸಾಧಿಸಿತ್ತು. 2006ರಲ್ಲಿ ಪಾಕಿಸ್ತಾನ ಕೊನೆಯ ಬಾರಿ ಭಾರತದ ನೆಲದಲ್ಲಿ ಆಡಿತ್ತು.
ಬರೋಬ್ಬರಿ ಆರು ದಶಕಗಳ ನಂತರ ಪಾಕಿಸ್ತಾನವು ತನ್ನ ತವರು ನೆಲದಲ್ಲಿ ಭಾರತ ಟೆನಿಸ್ ತಂಡವನ್ನು (Indian Tennis Team) ಎದುರಿಸಲಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ರೋಚಕ ಟೆನಿಸ್ ಪಂದ್ಯಕ್ಕೆ ಸುದೀರ್ಘ ವರ್ಷಗಳ ಬಳಿಕ ಪಾಕ್ ಆತಿಥ್ಯ ವಹಿಸುತ್ತಿದೆ.
ರಾಜಧಾನಿ ಇಸ್ಲಾಮಾಬಾದ್‌ನ ಪಾಕಿಸ್ತಾನ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಹುಲ್ಲು ಅಂಗಣದಲ್ಲಿ ಗ್ರೂಪ್ 1 ಪ್ಲೇಆಫ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಭದ್ರತಾ ಕಾರಣಗಳಿಂದಾಗಿ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತದೆಯೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
76 ವರ್ಷಗಳ ಹಿಂದೆ ಭಾರತ ಮತ್ತು ಪಾಕಿಸ್ತಾನ ವಿಭಜನೆಗೊಂಡ ನಂತರ, ಕ್ರೀಡಾ ಕ್ಷೇತ್ರಕ್ಕೂ ಅಡ್ಡಿಯಾಯ್ತು. ಉಭಯ ರಾಷ್ಟ್ರಗಳ ನಡುವೆ ರಾಜಕೀಯ ಸಂಬಂಧ ಹದೆಗೆಡುವುದು ಮಾತ್ರವಲ್ಲದೆ, ಕ್ರಿಕೆಟ್, ಹಾಕಿ ಸೇರಿದಂತೆ ಇತರ ಪಂದ್ಯಗಳ ಆತಿಥ್ಯಕ್ಕೂ ಅಡ್ಡಿಯಾಯ್ತು. ಕಾಶ್ಮೀರ ವಿವಾದದ ಬಳಿಕ ಬಹುರಾಷ್ಟ್ರೀಯ ಸ್ಪರ್ಧೆಗಳಲ್ಲಿ ಉಭಯ ರಾಷ್ಟ್ರಗಳಿ ಭಾಗವಹಿಸಿದರೂ, ತಮ್ಮದೇ ನೆಲದಲ್ಲಿ ಮತ್ತೊಂದು ರಾಷ್ಟ್ರದ ಪಂದ್ಯಗಳ ಆತಿಥ್ಯ ಅಪರೂಪವಾಗಿದೆ.
ಇದನ್ನೂ ಓದಿ | ತೆಲುಗು ಟೈಟಾನ್ಸ್ ಮಣಿಸಿ ಅಂಕಪಟ್ಟಿಯಲ್ಲಿ ಟಾಪರ್ ಆದ ಪುಣೇರಿ ಪಲ್ಟನ್; ಪವನ್ ಪಡೆಗೆ ಮತ್ತೊಂದು ಹೀನಾಯ ಸೋಲು
“ಈ ಪಂದ್ಯವು ಪಾಕಿಸ್ತಾನ ಮತ್ತು ಭಾರತದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಆಶಿಸುತ್ತೇವೆ. ಏಕೆಂದರೆ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡವು ನಮ್ಮ ದೇಶದಲ್ಲಿ ಆಡುವುದನ್ನು ನೋಡಲು ನಾನು ಇಷ್ಟಪಡುತ್ತೇನೆ” ಎಂದು ಪಾಕ್ ಆಟಗಾರ ಐಸಾಮ್ ಉಲ್ ಹಕ್ ಖುರೇಷಿ ಸುದ್ದಿಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.
ಭಾರತ ತಂಡದ ವ್ಯವಸ್ಥಾಪಕ ಸುನಿಲ್ ಯಜಮಾನ್ ಮಾತನಾಡಿ, ತಂಡವು ಪಾಕ್‌ನಲ್ಲಿ ಪಂದ್ಯವನ್ನು ಎದುರು ನೋಡುತ್ತಿದೆ. ಇಡೀ ತಂಡವು ಪಾಕಿಸ್ತಾನದಲ್ಲಿರಲು ತುಂಬಾ ಸಂತೋಷ ಮತ್ತು ಉತ್ಸುಕವಾಗಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಅವರು ನನ್ನ ಬಟ್ಟೆ, ಕೂದಲನ್ನು ನೋಡುತ್ತಿದ್ದರು; ಲಿಂಗ ಭೇದ ಕುರಿತು ಚೆಸ್ ಆಟಗಾರ್ತಿ ದಿವ್ಯಾ ದೇಶ್‌ಮುಖ್ ಆರೋಪ
ಭಾರತವು 2019ರಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಬಾರಿ ಡೇವಿಸ್ ಕಪ್ ಪಂದ್ಯವನ್ನಾಡಿತ್ತು. ಕಜಕಿಸ್ತಾನದಲ್ಲಿ ನಡೆದ ಪಂದ್ಯದಲ್ಲಿ 4-0 ಅಂತರದಲ್ಲಿ ಜಯ ಸಾಧಿಸಿತ್ತು. 2006ರಲ್ಲಿ ಪಾಕಿಸ್ತಾನ ಕೊನೆಯ ಬಾರಿ ಭಾರತದ ನೆಲದಲ್ಲಿ ಆಡಿತ್ತು.
ಡಬಲ್ಸ್ ಮತ್ತು ಎರಡು ಸಿಂಗಲ್ಸ್ ಪಂದ್ಯಗಳು ಶನಿವಾರ ಮತ್ತು ಭಾನುವಾರ ನಡೆಯಲಿವೆ. ಒಂದು ವೇಳೆ ಮಳೆಯಾದರೆ, ಸೋಮವಾರ ಮೀಸಲು ದಿನ ನಿಗದಿಪಡಿಸಲಾಗಿದೆ.
ಇದನ್ನೂ ಓದಿ | ಎನ್ಸಿಎ ತಲುಪಿದ ರವೀಂದ್ರ ಜಡೇಜಾ; ಮುಂದಿನ ಪಂದ್ಯಕ್ಕಲ್ಲ, ಉಳಿದ ಟೆಸ್ಟ್ ಸರಣಿಗೂ ಆಲ್ರೌಂಡರ್ ಅನುಮಾನ
(This copy first appeared in Hindustan Times Kannada website. To read more like this please logon to kannada.hindustantime.com )
ವಿಭಾಗ