ಅವರು ನನ್ನ ಬಟ್ಟೆ, ಕೂದಲನ್ನು ನೋಡುತ್ತಿದ್ದರು; ಲಿಂಗ ಭೇದ ಕುರಿತು ಚೆಸ್ ಆಟಗಾರ್ತಿ ದಿವ್ಯಾ ದೇಶ್‌ಮುಖ್ ಆರೋಪ
Divya Deshmukh: ಆಟಗಾರರನ್ನು ಅವರ ಆಟಕ್ಕಾಗಿ ಶ್ಲಾಘಿಸಿದರೆ, ಆಟಗಾರ್ತಿಯರನ್ನು ಮಾತ್ರ ಅವರ ಆಟ ಅಥವಾ ಸಾಮರ್ಥ್ಯಕ್ಕೆ ಯಾವುದೇ ಸಂಬಂಧವಿಲ್ಲದ ಅನಗತ್ಯ ಅಂಶಗಳಿಂದ ನಿರ್ಣಯಿಸಲಾಗುತ್ತಿದೆ ಎಂದು ಚೆಸ್ ಆಟಗಾರ್ತಿ ದಿವ್ಯಾ ದೇಶ್‌ಮುಖ್ ಆರೋಪಿಸಿದ್ದಾರೆ.
ನೆದರ್ಲ್ಯಾಂಡ್ಸ್‌ನಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿ ನಂತರ, ಭಾರತದ 18 ವರ್ಷದ ಚೆಸ್ ಆಟಗಾರ್ತಿ ದಿವ್ಯಾ ದೇಶ್ಮುಖ್ (Divya Deshmukh) ಅವರು, ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹಸಿರಾಗಿರುವ ಲಿಂಗ ಭೇದ ಹಾಗೂ ಸ್ತ್ರೀದ್ವೇಷದ ಕುರಿತಾಗಿ ಮಾತನಾಡಿದ್ದಾರೆ. ಈ ಕುರಿತಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸುದೀರ್ಘವಾಗಿ ಬರೆದಿರುವ ಅವರು, ಅಂತಾರಾಷ್ಟ್ರೀಯ ಮಾಸ್ಟರ್ ಪಂದ್ಯಾವಳಿಯ ಸಮಯದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿ ಕುರಿತು ಮಾತನಾಡಿದರು.
“ನಾನು ಕೆಲ ಸಮಯದಿಂದ ಇದನ್ನು ಬಹಿರಂಗಪಡಿಸಲು ಬಯಸಿದ್ದೆ. ಆದರೆ ಪಂದ್ಯಾವಳಿ ಮುಗಿಯಲು ಕಾಯುತ್ತಿದ್ದೆ. ಚೆಸ್‌ನಲ್ಲಿ ಮಹಿಳೆಯರನ್ನು ಪ್ರೇಕ್ಷಕರು ಹೇಗೆ ಲಘುವಾಗಿ ಪರಿಗಣಿಸುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ” ಎಂದು ಕಳೆದ ವರ್ಷ ಏಷ್ಯನ್ ಮಹಿಳಾ ಚೆಸ್ ಚಾಂಪಿಯನ್‌ಶಿಪ್ ಗೆದ್ದ ನಾಗ್ಪುರ ಮೂಲದ ಆಟಗಾರ್ತಿ ಹೇಳಿದ್ದಾರೆ.
ಇದನ್ನೂ ಓದಿ | ರೋಹನ್ ಬೋಪಣ್ಣ ಐತಿಹಾಸಿಕ ಸಾಧನೆಗೆ 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ನಡಾಲ್ ವಿಶೇಷ ಶುಭಾಶಯ
“ವೈಯಕ್ತಿಕವಾಗಿ ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಈ ಪಂದ್ಯಾವಳಿ. ಇಲ್ಲಿ ನಾನು ಕೆಲವು ಪಂದ್ಯಗಳನ್ನು ಆಡಿದ್ದೇನೆ. ಆವು ಸಾಕಷ್ಟು ಉತ್ತಮವಾಗಿದೆ ಎಂದು ನಾನು ಭಾವಿಸಿದ್ದೇನೆ. ಅಲ್ಲದೆ ಅದರ ಬಗ್ಗೆ ನನಗೆ ಹೆಮ್ಮೆಇದೆ. ಆದರೆ ಪ್ರೇಕ್ಷಕರು ಮಾತ್ರ ಆಟದ ಬಗ್ಗೆ ತಲೆಕೆಡಿಸಿಕೊಳ್ಳದೆ, ನನ್ನ ಬಟ್ಟೆಗಳು, ಕೂದಲು, ಉಚ್ಚಾರಣೆ ಮತ್ತು ಇತರ ಎಲ್ಲಾ ಅನಗತ್ಯ ಮತ್ತು ಅಪ್ರಸ್ತುತ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿದ್ದರು ಎಂದು ಜನರು ನನಗೆ ಹೇಳಿದರು” ಎಂದು ದಿವ್ಯಾ ಬರೆದುಕೊಂಡಿದ್ದಾರೆ.
ಅನಗತ್ಯ ಅಂಶಗಳಿಂದ ಆಟಗಾರ್ತಿಯರನ್ನು ಅಳೆಯುತ್ತಾರೆ
ಪುರುಷ ಆಟಗಾರರು ಸಂಪೂರ್ಣವಾಗಿ ತಮ್ಮ ಆಟದಿಂದ ಗಮನ ಸೆಳೆಯುತ್ತಿದ್ದರೆ, ಮಹಿಳೆಯರನ್ನು ಮಾತ್ರ ಅವರ ಸಾಮರ್ಥ್ಯದಿಂದ ಅಳೆಯದೆ, ಆಟಕ್ಕೆ ಸಂಬಂಧವೇ ಇಲ್ಲದ ಅಂಶಗಳಿಂದ ನಿರ್ಣಯಿಸಲಾಗುತ್ತದೆ ಎಂದು ಹದಿಹರೆಯದ ಆಟಗಾರ್ತಿ ಹೇಳಿದ್ದಾರೆ.
ಇದನ್ನೂ ಓದಿ | ನಾನು 43ನೇ ಲೆವೆಲ್ನಲ್ಲಿದ್ದೇನೆ, ವಯಸ್ಸು 43 ಅಲ್ಲ; ಆಸ್ಟ್ರೇಲಿಯನ್ ಓಪನ್ ಗೆದ್ದ ಬಳಿಕ ರೋಹನ್ ಬೋಪಣ್ಣ ಹೇಳಿದ್ದಿಷ್ಟು
ಆಟಗಾರ್ತಿಯರನ್ನು ಸಾಮಾನ್ಯವಾಗಿ ಕಡಿಮೆ ಪ್ರಶಂಸಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. “ಪ್ರತಿಯೊಂದು ಅಪ್ರಸ್ತುತ ವಿಷಯಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ ಅಲ್ಲದೆ ದ್ವೇಷಿಸಲಾಗುತ್ತದೆ. ಮಹಿಳೆಯರು ಪ್ರತಿದಿನ ಇದನ್ನು ಎದುರಿಸುತ್ತಾರೆ ಎಂದು ನನಗನಿಸುತ್ತಿದೆ. ನನಗೆ ಇನ್ನೂ ಕೇವಲ 18 ವರ್ಷ. ಅನಗತ್ಯ ವಿಷಯಗಳಿಗಾಗಿ ನಾನು ಕೆಲ ವರ್ಷಗಳಿಂದ ದ್ವೇಷ ಸೇರಿದಂತೆ ಅನೇಕ ತೀರ್ಪುಗಳನ್ನು ಎದುರಿಸಿದ್ದೇನೆ. ಆದರೆ ಮಹಿಳೆಯರಿಗೆ ಸಮಾನ ಗೌರವ ಸಿಗಬೇಕು” ಎಂದು ದಿವ್ಯಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | ಪ್ರೊ ಕಬಡ್ಡಿ: ಹರಿಯಾಣ, ಪಾಟ್ನಾಗೆ ಸುಲಭ ಗೆಲುವು; ಬೆಂಗಳೂರು ಬುಲ್ಸ್ ಪ್ಲೇ ಆಫ್ ಹಾದಿ ಕಠಿಣ
ಚಾಲೆಂಜರ್ಸ್ ವಿಭಾಗದಲ್ಲಿ ದೇಶ್ಮುಖ್ ಅಂತಿಮ ಸುತ್ತಿನಲ್ಲಿ ಲಿಯಾನ್ ಲ್ಯೂಕ್ ಮೆಂಡೊಂಕಾ ವಿರುದ್ಧ 4.5 ಅಂಕಗಳೊಂದಿಗೆ ಸೋತ ನಂತರ 12ನೇ ಸ್ಥಾನ ಪಡೆದರು.
ವಿಭಾಗ